'ಯುವರತ್ನ' ಅಪ್ಪುಗೆ ಜೋಡಿಯಾಗ್ತಾರೆ ಸ್ಟಾರ್ ನಾಯಕಿ.!

Recommended Video

ಪುನೀತ್ ರಾಜ್ ಕುಮಾರ್ ರ ಯುವರತ್ನ ಸಿನಿಮಾಗೆ ಸ್ಟಾರ್ ನಾಯಕಿ | FILMIBEAT KANNADA

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರ್ತಿರುವ ಹೊಸ ಚಿತ್ರಕ್ಕೆ 'ಯುವರತ್ನ' ಎಂದು ಶೀರ್ಷಿಕೆ ಅಂತಿಮವಾಗಿದೆ. ಕನ್ನ ರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಟೈಟಲ್ ಅನಾವರಣ ಮಾಡಲಾಯಿತು.

ಸುಮಾರು 16 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ. ಇದೊಂದು ಯೂತ್ ಸ್ಟೋರಿಯಾಗಿರುವುದರಿಂದ ಈ ಚಿತ್ರಕ್ಕೆ 'ಯುವರತ್ನ' ಎಂದು ಹೆಸರಿಡಲಾಗಿದೆ.

ಪುನೀತ್ ಅವರ 'ಯುವರತ್ನ' ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂಬ ಕುತೂಹಲ ಕಾಡುತ್ತಿದೆ. ಈ ಬಗ್ಗೆ ನಿರ್ದೇಶಕರನ್ನ ಕೇಳಿದಾಗ, ಸದ್ಯಕ್ಕೆ ನಾಯಕಿ ಫೈನಲ್ ಆಗಿಲ್ಲ. ಆದ್ರೆ, ದೊಡ್ಡ ನಟಿಯೊಬ್ಬರನ್ನ ಆಯ್ಕೆ ಮಾಡುವ ಯೋಚನೆ ಇದೆ ಎಂದಿದ್ದಾರೆ.

Who will play female lead role in yuvarathna movie

ಇನ್ನು ಕನ್ನಡದ ನಟಿಯೇ ಇರ್ತಾರಾ ಅಥವಾ ಪರಭಾಷೆಯ ನಟಿ ಬರ್ತಾರಾ ಎಂದು ಕೇಳಿದ್ದಕ್ಕೆ 'ಕನ್ನಡದವರು ಆಗಿರ್ತಾರೋ ಗೊತ್ತಿಲ್ಲ, ಬಟ್, ಸಿನಿಮಾದಲ್ಲಿ ಕನ್ನಡದವರ ರೀತಿ ಕಾಣಿಸಿಕೊಳ್ತಾರೆ' ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟರು.

'ಯುವರತ್ನ' ಚಿತ್ರಕ್ಕೆ ಸೌತ್ ಇಂಡಿಯಾದ ಸ್ಟಾರ್ ನಟಿಯರೊಬ್ಬರನ್ನ ಕರೆತರುವ ಪ್ರಯತ್ನ ಮಾಡಲಾಗುತ್ತಿದೆಯಂತೆ. ಆದ್ರೆ, ಯಾರು ಎಂಬುದು ಸದ್ಯಕ್ಕೆ ಗೌಪ್ಯವಾಗಿದೆ. 'ರಾಜಕುಮಾರ' ಚಿತ್ರದಂತೆ ಇಲ್ಲಿಯೂ ದೊಡ್ಡ ಕಲಾವಿದರ ದಂಡು ಇರಲಿದೆ ಎಂದು ಸುಳಿವು ನೀಡಿದ ಸಂತೋಷ್ ಆನಂದ್ ರಾಮ್ ನಾಯಕಿ ಸುಳಿವು ನೀಡಿಲ್ಲ.

ಇನ್ನುಳಿದಂತೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ಡಿಸೆಂಬರ್ ಎರಡನೇ ವಾರದಲ್ಲಿ ಯುವರತ್ನ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆಯಂತೆ.

More from Filmibeat

English summary
Who will play female lead role opposite puneeth rajkumar in yuvaratna movie. the movie directed by santhosh ananddram.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X