'ಜಯಲಲಿತಾ' ಬಯೋಪಿಕ್ ನಲ್ಲಿ ಯಾರಾಗಾಲಿದ್ದಾರೆ 'ಅಮ್ಮ'.?

By Bharath Kumar

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕುರಿತು ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಗಳು ವರದಿಯಾಗಿತ್ತು. ಇದೀಗ, ಅಧಿಕೃತವಾಗಿ ಜಯಲಲಿತಾ ಜೀವನಾಧರಿತ ಚಿತ್ರಕ್ಕೆ ಚಾಲನೆ ನೀಡಲಾಗಿದೆ.

ಈಗ ಕಾಡುತ್ತಿರುವ ಪ್ರಶ್ನೆ ಒಂದೇ. ಬಯೋಪಿಕ್ ಚಿತ್ರದಲ್ಲಿ ಜಯಲಲಿತಾ ಅವರ ಪಾತ್ರವನ್ನ ಯಾರು ನಿಭಾಯಿಸಲಿದ್ದಾರೆ ಎನ್ನುವುದು. ಆಯ್ಕೆಗಳು ಹೆಚ್ಚಿವೆ. ಈ ಪಾತ್ರ ಯಾರು ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬುದು ದೊಡ್ಡ ಚರ್ಚೆಯಾಗುತ್ತಿದೆ. ದಕ್ಷಿಣ ಭಾರತದ ಖ್ಯಾತ ಯುವ ನಟಿಯರ ಕಡೆ ಒಲವು ಹೆಚ್ಚಿದೆ. ಇವರ ನಡುವೆ ಬಾಲಿವುಡ್ ನಟಿಯೊಬ್ಬರು ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಆದ್ರೆ, ಯಾರ ಪಾಲಿಗೆ ಈ ಅವಕಾಶ ಸಿಗುತ್ತೋ ಗೊತ್ತಿಲ್ಲ. ಸಿನಿಮಾ ಜಯಲಲಿತಾ ಅವರ ಹುಟ್ಟುಹಬ್ಬದ ದಿನ ಸೆಟ್ಟೇರಲಿದ್ದು, ಅದೇ ದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಅನಾವರಣವಾಗಲಿದೆ. ಎನ್.ಟಿ.ಆರ್ ಬಯೋಪಿಕ್ ನಿರ್ಮಾಣ ಮಾಡುತ್ತಿರುವ ಹೈದ್ರಾಬಾದ್ ಮೂಲದ ವಿಬ್ರಿ ನಿರ್ಮಾಣ ಸಂಸ್ಥೆ ಈ ಚಿತ್ರಕ್ಕೆ ಕೈಹಾಕಿದೆ. ಹಾಗಿದ್ರೆ,

ಯಾರೆಲ್ಲಾ ನಟಿಯರು ಅಮ್ಮನ ಪಾತ್ರಕ್ಕಾಗಿ ರೇಸ್ ನಲ್ಲಿದ್ದಾರೆ ಎಂದು ಮುಂದೆ ನೋಡಿ......

ಕೀರ್ತಿ ಸುರೇಶ್

ಕೀರ್ತಿ ಸುರೇಶ್

ಲೆಜೆಂಡ್ ನಟಿ 'ಸಾವಿತ್ರಿ' ಅವರ ಬಯೋಪಿಕ್ ನಲ್ಲಿ ನಟಿಸಿ ಇಡೀ ದೇಶದ ಗಮನ ಸೆಳೆದ ನಟಿ ಕೀರ್ತಿ ಸುರೇಶ್ ಅವರು ಜಯಲಲಿತಾ ಅವರ ಪಾತ್ರವನ್ನ ಕೂಡ ಚೆನ್ನಾಗಿ ನಿಭಾಯಿಸಬಲ್ಲರು ಎಂದು ಹೇಳಲಾಗುತ್ತಿದೆ. 'ಮಹಾನಟಿ' ಸಿನಿಮಾ ಸಕ್ಸಸ್ ನಿಂದ ಕೀರ್ತಿ ಸುರೇಶ್ ಅವರ ಹೆಸರು ಹೆಚ್ಚು ಚಾಲ್ತಿಯಲ್ಲಿದೆ.

ನಯನತಾರ

ನಯನತಾರ

ಜಯಲಲಿತಾ ಬಯೋಪಿಕ್ ಸಿನಿಮಾ ಬರುತ್ತೆ ಎಂದು ಘೋಷಿಸಿದ ನಂತರ ಟ್ವಿಟ್ಟರ್ ನಲ್ಲಿ ಯಾರು ಆ ಪಾತ್ರ ಮಾಡಬಹುದು ಎಂದು ಚರ್ಚೆಯಾಗುತ್ತಿದೆ. ಹೀಗೆ ಚರ್ಚೆಯಾಗುತ್ತಿರುವ ಹೆಸರುಗಳಲ್ಲಿ ನಯನತಾರ ಹೆಸರು ಕೂಡ ಇದೆ. ನಯನತಾರ ಯಾವ ಬಯೋಪಿಕ್ ಸಿನಿಮಾನೂ ಮಾಡಿಲ್ಲ. ಆದ್ರೆ, ತಮ್ಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಹೀಗಾಗಿ, ಕೆಲವು ಅಭಿಮಾನಿಗಳು ನಯನತಾರ ಅವರನ್ನ ಅಮ್ಮನಾಗಿ ನೋಡಲು ಬಯಸುತ್ತಿದ್ದಾರೆ.

ತ್ರಿಷಾ ಸೂಕ್ತ ಆಯ್ಕೆ

ತ್ರಿಷಾ ಸೂಕ್ತ ಆಯ್ಕೆ

ನಯನತಾರ, ಕೀರ್ತಿ ಸುರೇಶ್ ಅವರಂತೆ ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಅವರ ಹೆಸರು ಹೆಚ್ಚು ಸದ್ದು ಮಾಡುತ್ತಿದೆ. ತ್ರಿಷಾ ಅವರು ಜಯಯಲಿತಾ ಅವರನ್ನ ತುಂಬಾ ಹತ್ತಿರದಿಂದ ಬಲ್ಲರು. ಹೀಗಾಗಿ, ಇದು ಒಂದು ಆಯ್ಕೆಯಾಗಿದೆ.

ವಿದ್ಯಾ ಬಾಲನ್

ವಿದ್ಯಾ ಬಾಲನ್

ಇನ್ನು ದಕ್ಷಿಣ ಭಾರತದ ಈ ನಟಿಯರನ್ನ ಬಿಟ್ಟರೇ ಬಾಲಿವುಡ್ ನಿಂದ ಕೇಳಿ ಬರುತ್ತಿರುವ ದೊಡ್ಡ ಹೆಸರು ವಿದ್ಯಾ ಬಾಲನ್. 'ಡರ್ಟಿ ಪಿಕ್ಚರ್' ಸಿನಿಮಾದಲ್ಲಿ ಸಿಲ್ಕ್ ಸ್ಮಿತಾ ಅವರ ನೈಜ ಪಾತ್ರಕ್ಕೆ ಜೀವ ತುಂಬಿದ ವಿದ್ಯಾ ಬಾಲನ್ ತಮಿಳುನಾಡಿನ ಅಮ್ಮನಾಗಲು ಸೂಕ್ತವೆನ್ನಲಾಗುತ್ತಿದೆ.

More from Filmibeat

English summary
Hyderabad based production house Vibri Media announced on August 15 that a biopic on the late Tamil Nadu Chief Minister J Jayalalithaa would soon be produced by them. They also announced that the film would be released to coincide with Jayalalithaa’s birth anniversary, February 24, next year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X