'ಟಗರು' ತಮಿಳು ರೀಮೇಕ್ ಗಾಗಿ ಇಬ್ಬರು ಸ್ಟಾರ್ ನಟರ ನಡುವೆ ಪೈಪೋಟಿ.!
Recommended Video

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಟಗರು' ರೀಮೇಕ್ ಬಗ್ಗೆ ಇತ್ತೀಚಿಗಷ್ಟೆ ಸುದ್ದಿ ನೀಡಿದ್ವಿ. ತಮಿಳು ನಿರ್ದೇಶಕ ಮುತ್ತಯ್ಯ 'ಟಗರು' ಚಿತ್ರದ ತಮಿಳು ರೀಮೇಕ್ ಹಕ್ಕು ಖರೀದಿಸಿದ್ದರು.
'ಟಗರು' ತಮಿಳಿಗೆ ಹೋಗಿದ್ದಕ್ಕೆ ಕನ್ನಡ ಕಲಾಭಿಮಾನಿಗಳು ಖುಷಿಯಾಗಿರುವುದಂತೂ ಸುಳ್ಳಲ್ಲ. ಪರಭಾಷೆಯ ಹಿಟ್ ಸಿನಿಮಾಗಳನ್ನ ಕನ್ನಡದಲ್ಲಿ ರೀಮೇಕ್ ಮಾಡುವ ಸಂಸ್ಕೃತಿಯ ಮಧ್ಯೆ ನಮ್ಮ ಸಿನಿಮಾ ಆ ಕಡೆ ಹೋಗುವುದು ನಿಜಕ್ಕೂ ಸಾಧನೆಯೇ. ಹೀಗಾಗಿ, ಸಹಜವಾಗಿ ತಮಿಳಿನ ಟಗರಿನಲ್ಲಿ ಯಾರು ಅಭಿನಯಿಸಬಹುದು ಎಂಬ ಕುತೂಹಲ ಕಾಡುತ್ತೆ.
ಸದ್ಯದ ಮಾಹಿತಿ ಪ್ರಕಾರ ಇಬ್ಬರು ಸ್ಟಾರ್ ನಟರ ಹೆಸರು ಈ ಚಿತ್ರದಲ್ಲಿ ಕೇಳಿಬರುತ್ತಿದೆ. ಇವರಿಬ್ಬರು ತಮಿಳು ಟಾಪ್ ನಟರು. ಇವರು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತೆ. ಆದ್ರೆ, ಇವರಿಬ್ಬರಲ್ಲಿ ಯಾರಿಗೆ ಅಂತಿಮ ಅವಕಾಶ ಸಿಗುತ್ತೆ ಎಂಬುದು ಪ್ರಶ್ನೆಯಾಗಿದೆ. ಅಷ್ಟಕ್ಕೂ, ಅವರಿಬ್ಬರು ಯಾರು.? ಮುಂದೆ ಓದಿ....

ಟಗರು ಆಗ್ತಾರಾ ಕಾರ್ತಿ.?
ಶಿವಣ್ಣ ಮಾಡಿದ್ದ ಸೂಪರ್ ಕಾಪ್ ಪಾತ್ರದಲ್ಲಿ ತಮಿಳು ನಟ ಕಾರ್ತಿ ನಟಿಸಿದ್ರೆ ಉತ್ತಮವಾಗಿರುತ್ತೆ ಎಂಬ ಮಾತು ಕಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ಇದು ನಿರ್ದೇಶಕರ ಗಮನದಲ್ಲೂ ಇದೆ. ಆದ್ರೆ, ಇನ್ನೂ ಅಂತಿಮ ನಿರ್ಧಾರವಾಗದೇ ಇರುವುದು ಗೊಂದಲಕ್ಕೆ ಕಾರಣವಾಗಿದೆ.

ಮುತ್ತಯ್ಯನಿಗೆ ಕಾರ್ತಿ ಅಚ್ಚುಮೆಚ್ಚು
'ಟಗರು' ಚಿತ್ರದ ರೀಮೇಕ್ ಹಕ್ಕು ಖರೀದಿಸಿರುವ ತಮಿಳು ನಿರ್ದೇಶಕ ಮುತ್ತಯ್ಯ ಅವರಿಗೆ ನಟ ಕಾರ್ತಿ ಆಪ್ತ ಮತ್ತು ಅಚ್ಚುಮೆಚ್ಚು. 2015ರಲ್ಲಿ ಕಾರ್ತಿ ನಟಿಸಿದ್ದ 'ಕೊಂಬನ್' ಸಿನಿಮಾವನ್ನ ಇದೇ ಮುತ್ತಯ್ಯ ನಿರ್ದೇಶನ ಮಾಡಿದ್ದರು. ಸಿನಿಮಾ ಹಿಟ್ ಆಗಿತ್ತು. ಅಲ್ಲಿಂದ 'ಕೊಂಬನ್' ನಿರ್ದೇಶಕ ಮುತ್ತಯ್ಯ ಅಂತಾನೇ ಫೇಮಸ್ ಆಗಿದ್ದಾರೆ.

ಹೊಸ ಟಗರು ವಿಜಯ್.?
ಸದ್ಯ ತಮಿಳು ಇಂಡಸ್ಟ್ರಿಯಲ್ಲಿ ಹೊಸ ಸೂಪರ್ ಸ್ಟಾರ್ ಆಗಿ ಅಬ್ಬರಿಸುತ್ತಿರುವ ವಿಜಯ್ ಸೇತುಪತಿಯ ಹೆಸರು ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಭಿಮಾನಿಗಳ ಪ್ರಕಾರ ವಿಜಯ್ ಸೇತುಪತಿ 'ಟಗರು' ಚಿತ್ರದ ಮೇನ್ ಲೀಡ್ ಮಾಡಬಹುದು ಎಂದು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸದ್ಯ ಮಾಸ್ ಇಮೇಜ್ ನಿಂದ ವಿಜಯ್ ಸೇತುಪತಿ ಉಳಿದ ಸ್ಟಾರ್ ಗಳನ್ನ ಹಿಂದಿಕ್ಕಿದ್ದಾರೆ.

ಶಿವಣ್ಣನಂತೆ ಧನಂಜಯ್ ಮುಖ್ಯ.?
ಟಗರು ಚಿತ್ರದಲ್ಲಿ ಶಿವರಾಜ್ ಕುಮಾರ್ ಪಾತ್ರಕ್ಕೆ ಮಾತ್ರ ಪೈಪೋಟಿ ಅಲ್ಲ. ಧನಂಜಯ್ ಮಾಡಿದ್ದ ಡಾಲಿ ಕ್ಯಾರೆಕ್ಟರ್ ಗೂ ಹೆಚ್ಚು ಬೇಡಿಕೆ ಇದೆ. ಇನ್ನೊಂದು ಮೂಲದ ಪ್ರಕಾರ ಕಾರ್ತಿ ಮತ್ತು ವಿಜಯ್ ಸೇತುಪರಿ ಇಬ್ಬರು ಟಗರು ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆ. ಒಬ್ಬರ ಪೊಲೀಸ್ ಆಗಿ ಮತ್ತೊಬ್ಬರು ವಿಲನ್ ಆಗಿ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಇದು ಕೂಡ ಅಚ್ಚರಿ ನೀಡಬಹುದು.

ಮುತ್ತಯ್ಯನ ಮುಂದಿನ ಸಿನಿಮಾದಲ್ಲಿ ಶಿವಣ್ಣ.!
ಇನ್ನು ಟಗರು ಸಿನಿಮಾದ ರೀಮೇಕ್ ಹಕ್ಕು ಖರೀದಿಸಿರುವ ಮುತ್ತಯ್ಯ, ಕನ್ನಡ ನಟ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಹಾಗಂತ ಟಗರು ತಮಿಳು ರೀಮೇಕ್ ನಲ್ಲಿ ಶಿವಣ್ಣ ನಟಿಸುತ್ತಿಲ್ಲ. ಸೆಂಚುರಿ ಸ್ಟಾರ್ ಶಿವಣ್ಣ ಅಭಿನಯಿಸಲಿರುವ ಚಿತ್ರಕ್ಕೆ ಮುತ್ತಯ್ಯ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರವನ್ನ ತೆಲುಗಿನಲ್ಲಿ ವಿಜಯ ದೇವರಕೊಂಡ ಅಭಿನಯದ 'ನೋಟಾ' ಚಿತ್ರದ ನಿರ್ಮಾಪಕ ಜ್ಞಾನವೇಲ್ ನಿರ್ಮಾಣ ಮಾಡಲಿದ್ದಾರೆ.

ಟಗರು ಸಿನಿಮಾದ ಬಗ್ಗೆ....
ಫೆಬ್ರವರಿ 23 ರಂದು ತೆರೆಕಂಡಿದ್ದ 'ಟಗರು' ಶತದಿನ ಆಚರಿಸಿಕೊಂಡಿತ್ತು. ಶಿವರಾಜ್ ಕುಮಾರ್, ವಸಿಷ್ಠ ಸಿಂಹ, ಧನಂಜಯ್, ಮಾನ್ವಿತಾ ಹರೀಶ್, ಭಾವನಾ, ದೇವರಾಜ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಬಿಸಿನೆಸ್ ಮಾಡಿತ್ತು. ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು ದುನಿಯಾ ಸೂರಿ. ಚರಣ್ ರಾಜ್ ಸಂಗೀತ ಧೂಳೆಬ್ಬಿಸಿತ್ತು.


Click it and Unblock the Notifications











