Exclusive: 'ಬೈರತಿ ರಣಗಲ್' ಹೀರೊಯಿನ್ ಯಾರು? ಶೂಟಿಂಗ್ ಯಾವಾಗ?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಬೈರತಿ ರಣಗಲ್' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲೇ ಈ ಸಿನಿಮಾ ನಿರ್ಮಾಣ ಆಗಲಿದೆ. 'ಮಫ್ತಿ' ಪ್ರೀಕ್ವೆಲ್ ಇದಾಗಿದ್ದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಮೂಡಿ ಬರಲಿದೆ. ಬಹಳ ಹಿಂದೆಯೇ ನರ್ತನ್ ಈ ಕತೆ ಸಿದ್ಧಪಡಿಸಿದ್ದರು. ಇದೀಗ ಸಿನಿಮಾ ಚಿತ್ರೀಕರಣಕ್ಕೆ ತಯಾರಿ ಭರದಿಂದ ಸಾಗ್ತಿದೆ.

5 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ಶಿವಣ್ಣ ಮಾಡಿದ್ದ ಬೈರತಿ ರಣಗಲ್ ಪಾತ್ರ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಖುದ್ದು ಶಿವಣ್ಣನಿಗೂ ಆ ಪಾತ್ರ ಅಷ್ಟರಮಟ್ಟಿಗೆ ಸದ್ದು ಮಾಡುತ್ತೆ ಎನ್ನುವ ಅಂದಾಜು ಇರಲಿಲ್ಲ. ಬರೀ ಕನ್ನಡ ಪ್ರೇಕ್ಷಕರು ಮಾತ್ರವಲ್ಲ, ಪರಭಾಷಾ ಪ್ರೇಕ್ಷಕರು ಕೂಡ ಸಿನಿಮಾ ನೋಡಿ ಬಹುಪರಾಕ್ ಎಂದಿದ್ದರು. ಇತ್ತೀಚೆಗೆ ತಮಿಳಿಗೂ ಸಿನಿಮಾ ರೀಮೆಕ್ ಆಗಿತ್ತು.

Who will play the female lead opposite Shivarajkumar in Mufti prequel Bhairathi Ranagal

ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ 'ಬೈರತಿ ರಣಗಲ್' ಸಿನಿಮಾ ಘೋಷಣೆಯಾಗಿತ್ತು. ಶಿವಣ್ಣ ಐದಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ 'ಬೈರತಿ ರಣಗಲ್' ಆಗಿ ಕಾಣಿಸಿಕೊಳ್ಳಲು ಬಿಡುವು ಮಾಡಿಕೊಳ್ಳುತ್ತಿದ್ದಾರೆ. ಒಂದ್ಕಡೆ ರಾಮ್‌ಚರಣ್ ಜೊತೆಗಿನ ಚಿತ್ರಕ್ಕಾಗಿ ತಯಾರಿ ನಡೆಸಿರುವ ನರ್ತನ್ 'ಬೈರತಿ ರಣಗಲ್'ನ ಹಿಂದಿನ ಕತೆ ಹೇಳಲು ಉತ್ಸುಕರಾಗಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳೇ ಶೂಟಿಂಗ್ ಶುರುವಾಗಬೇಕಿತ್ತು. ಎಲೆಕ್ಷನ್ ಭರಾಟೆ ನಡುವೆ ಕೊಂಚ ತಡವಾಗುತ್ತಿದೆ.

ನಾಯಕಿಗಾಗಿ ಹುಡಕಾಟ

'ಮಫ್ತಿ' ಚಿತ್ರದಲ್ಲಿ ಮಾಫಿಯಾ ಡಾನ್ 'ಬೈರತಿ ರಣಗಲ್' ಅವತಾರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ರಾಕ್ಷಸನಂತಹ ಆತ ಪಾತ್ರ ಕುತೂಹಲ ಕೆರಳಿಸಿತ್ತು. ಆದರೆ ಆತ ನಿಜಕ್ಕೂ ಅಷ್ಟು ಕ್ರೂರಿ ಆಗಿದ್ದು ಯಾಕೆ? ಆತನ ಹಿನ್ನೆಲೆ ಏನು ಎನ್ನುವ ಕಥೆ ಈ ಭಾಗದಲ್ಲಿ ರಿವೀಲ್ ಆಗಲಿದೆ. ಸದ್ಯ ಚಿತ್ರತಂಡ ನಾಯಕಿಯ ಹುಡುಕಾಟ ನಡೆಸುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ನಾಯಕಿ ಸಿಕ್ಕಿದ ಕೂಡಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ. 'ಬೈರತಿ ರಣಗಲ್' ಜೋಡಿ ಯಾರಾಗ್ತಾರೆ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.

Who will play the female lead opposite Shivarajkumar in Mufti prequel Bhairathi Ranagal

ಜೂನ್ 16ರಿಂದ ಚಿತ್ರೀಕರಣ

ನಾಯಕಿಯ ಹುಡುಕಾಟ ನಡೆಸುತ್ತಿರುವ ಚಿತ್ರತಂಡ ಮತ್ತೊಂದು ಕಡೆ ಚಿತ್ರೀಕರಣಕ್ಕೆ ಬೇಕಾದ ತಯಾರಿ ಆರಂಭಿಸಿದೆ. ಜೂನ್ 16ರಿಂದ ಶೂಟಿಂಗ್ ಶುರುವಾಗುವ ಸಾಧ್ಯತೆಯಿದೆ ಎಂದು ನರ್ತನ್ ಮಾಹಿತಿ ನೀಡಿದ್ದಾರೆ. 'ಮಫ್ತಿ' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಲಿದೆ. 'ವೇದ' ಸಿನಿಮಾ ಗೆದ್ದಿರುವ ಗೀತಾ ಶಿವರಾಜ್‌ಕುಮಾರ್ 'ಬೈರತಿ ರಣಗಲ್' ಚಿತ್ರಕ್ಕೂ ಬಂಡವಾಳ ಹೂಡುತ್ತಿದ್ದಾರೆ.

ಸದ್ಯ ಸೆಂಚುರಿ ಸ್ಟಾರ್ 'ಘೋಸ್ಟ್' ಚಿತ್ರದಲ್ಲಿ ನಟಿಸ್ತಿದ್ದಾರೆ. ಯೋಗರಾಜ್ ಭಟ್ಟರ 'ಕರಟಕ ದಮನಕ' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಇದೆಲ್ಲದರ ನಡುವೆ ಉಪೇಂದ್ರ, ರಾಜ್‌ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ '45' ಸಿನಿಮಾ ಶುರುವಾಗ್ತಿದೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಸಾರಥ್ಯ ವಹಿಸಿಕೊಂಡಿದ್ದಾರೆ. ನಿರ್ದೇಶಕರಾಗಿ ಇದು ಅವರ ಚೊಚ್ಚಲ ಸಿನಿಮಾ.

Who will play the female lead opposite Shivarajkumar in Mufti prequel Bhairathi Ranagal

ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್

'ಮಫ್ತಿ' ಸಿನಿಮಾ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ 'ಬೈರತಿ ರಣಗಲ್' ಚಿತ್ರವನ್ನು 5 ಭಾಷೆಗಳಲ್ಲಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಶಿವಣ್ಣನ ಸಿನಿಮಾಗಳು ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲು ಆರಂಭಿಸಿದೆ. ತಮಿಳು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಇನ್ನು 'ಮಫ್ತಿ' ಚಿತ್ರವನ್ನು ಯೂಟ್ಯೂಬ್‌ನಲ್ಲಿ ನೋಡಿ ಪರಭಾಷಿಕರು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಪ್ರೀಕ್ವೆಲ್‌ ಅನ್ನು 5 ಭಾಷೆಗಳಲ್ಲಿ ತೆರೆಗೆ ತರುವ ಲೆಕ್ಕಾಚಾರ ಶುರುವಾಗಿದೆ.

More from Filmibeat

English summary
Who will play the female lead opposite Shivarajkumar in Mufti prequel Bhairathi Ranagal. team is planning to start the shoot from June 16th. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X