For Quick Alerts
  ALLOW NOTIFICATIONS  
  For Daily Alerts

  ದರ್ಶನ್ 55ನೇ ಚಿತ್ರಕ್ಕೆ ಫೈಟ್: ಒಂದೇ ಹೆಸರಿನಲ್ಲಿ ಇಬ್ಬರು ನಿರ್ಮಾಪಕರು ಜಾಹೀರಾತು

  |
  Yajamana Movie: ಒಂದೇ ಹೆಸರಿನಲ್ಲಿ ಇಬ್ಬರು ನಿರ್ಮಾಪಕರು ಜಾಹೀರಾತು | FILMIBEAT KANNDA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಳೆದ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್ 51 ಚಿತ್ರದ ವಿಷ್ಯದಲ್ಲಿ ಗೊಂದಲ ಆಗಿತ್ತು. ಇದೀಗ, ಈ ವರ್ಷವೂ ಅದೇ ರೀತಿ ಗೊಂದಲಕ್ಕೆ ನಿರ್ಮಾಪಕರು ಕಾರಣವಾಗಿದ್ದಾರೆ.

  ಡಿ ಬಾಸ್ ಬರ್ತಡೇ ಪ್ರಯುಕ್ತ ದರ್ಶನ್ ಅಭಿನಯಿಸಲಿರುವ ಹೊಸ ಚಿತ್ರಗಳು ಪೋಸ್ಟರ್ ರಿಲೀಸ್ ಮಾಡಿ ವಿಶ್ ಮಾಡಿದ್ದರು. ಆದ್ರೆ, 55ನೇ ಚಿತ್ರಕ್ಕೆ ಸಂಬಂಧಪಟ್ಟಂತೆ ಇಬ್ಬರು ನಿರ್ಮಾಪಕರ ನಡುವೆ ಕನ್ ಫ್ಯೂಶನ್ ಉಂಟಾಗಿದೆ. ಒಂದೇ ಹೆಸರಿನಲ್ಲಿ ಇಬ್ಬರು ನಿರ್ಮಾಪಕರು ಸಿನಿಮಾ ಅನೌನ್ಸ್ ಮಾಡಿದ್ದಾರೆ.

  ಮೆಜೆಸ್ಟಿಕ್ ನಲ್ಲಿ 'ಯಜಮಾನ' ಚಿತ್ರಕ್ಕೆ ಮುಖ್ಯ ಚಿತ್ರಮಂದಿರ ಯಾವುದು?

  ಹೌದು, ಯಜಮಾನ 50ನೇ ಸಿನಿಮಾ. 51ನೇ ಚಿತ್ರ ಕುರುಕ್ಷೇತ್ರ, 52ನೇ ಚಿತ್ರ ಒಡೆಯ, 53ನೇ ಚಿತ್ರ ರಾಬರ್ಟ್, 54ನೇ ಚಿತ್ರ ಗಂಡುಗಲಿ ಮದಕರಿ ನಾಯಕ, 55ನೇ ಚಿತ್ರಕ್ಕೆ ಇಬ್ಬರು ನಿರ್ಮಾಪಕರು ನಡುವೆ ಫೈಟ್ ಎದುರಾಗಿದೆ? ಹಾಗಿದ್ರೆ, D55 ಯಾರಿಗೆ? ಯಾವ ನಿರ್ಮಾಪಕರ ನಡುವೆ ಫೈಟ್ ಎದುರಾಗಿದೆ.? ಮುಂದೆ ಓದಿ.....

  ಮೆಜೆಸ್ಟಿಕ್ ನಿರ್ಮಾಪಕನ 55 ಆಗುತ್ತಾ?

  ಮೆಜೆಸ್ಟಿಕ್ ನಿರ್ಮಾಪಕನ 55 ಆಗುತ್ತಾ?

  ದರ್ಶನ್ ಜೊತೆ ಮೆಜಿಸ್ಟಿಕ್, ಧರ್ಮ ಚಿತ್ರಗಳನ್ನ ನಿರ್ಮಾಣ ಮಾಡಿದ್ದ ಎಂ ಜೆ ರಾಮಮೂರ್ತಿ ಈಗ ಮತ್ತೊಮ್ಮೆ ಡಿ ಬಾಸ್ ಜೊತೆ ಸಿನಿಮಾ ಮಾಡ್ತಿದ್ದಾರೆ. ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ D55ನೇ ಚಿತ್ರ ಎಂದು ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ.

  'ಯಜಮಾನ'ನ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ, ಯಾರ್ಯಾರ ವಿಶ್ ಹೇಗಿತ್ತು?

  'D55' ಹೆಸರಿನಲ್ಲೇ ಬಂತು ಇನ್ನೊಂದು ಸಿನಿಮಾ

  'D55' ಹೆಸರಿನಲ್ಲೇ ಬಂತು ಇನ್ನೊಂದು ಸಿನಿಮಾ

  ಮೆಜಿಸ್ಟಿಕ್ ನಿರ್ಮಾಪಕ ಎಂ ಜೆ ರಾಮಮೂರ್ತಿ D55 ಸಿನಿಮಾ ಅನೌನ್ಸ್ ಮಾಡಿದ್ರೆ, ಮತ್ತೊಂದೆಡೆ ತಾರಕ್ ಸಿನಿಮಾ ಮಾಡಿದ್ದ ಪ್ರಕಾಶ್ ಜಯರಾಂ ಕೂಡ D55 ಹೆಸರಿನಲ್ಲಿ ಪೋಸ್ಟರ್ ರಿಲೀಸ್ ಮಾಡಿ ದರ್ಶನ್ ಗೆ ವಿಶ್ ಮಾಡಿದ್ದಾರೆ. ಈ ಚಿತ್ರವನ್ನ ದುಷ್ಯಂತ್ ನಿರ್ಮಾಣ ಮಾಡಲಿದ್ದಾರೆ.

  ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ?

  ಕಳೆದ ವರ್ಷ D51, ಈ ವರ್ಷ D55

  ಕಳೆದ ವರ್ಷ D51, ಈ ವರ್ಷ D55

  ಕಳೆದ ವರ್ಷ ಸಂದೇಶ ನಾಗರಾಜ್ ಮತ್ತು ಶೈಲಜಾ ನಾಗ್ ನಡುವೆ 51ನೇ ಚಿತ್ರಕ್ಕೆ ಗೊಂದಲವಾಗಿತ್ತು. ನಂತರ ಯಜಮಾನ ಫಸ್ಟ್, ಒಡೆಯ ಆಮೇಲೆ ನಿರ್ಧಾರವಾಯ್ತು. ಈಗ D55 ವಿಷ್ಯದಲ್ಲೂ ಅದೇ ಆಗಿದೆ. ಎರಡು ಚಿತ್ರಗಳು ಒಂದೇ ಹೆಸರಿನಲ್ಲಿ ಜಾಹೀರಾತು ನೀಡಿದ್ದಾರೆ. ಈ ಗೊಂದಲಕ್ಕೆ ಸ್ವತಃ ನಿರ್ಮಾಪಕರೇ ಅಥವಾ ದರ್ಶನ್ ಅವರೇ ಸ್ಪಷ್ಟನೆ ನೀಡಬೇಕು.

  ದರ್ಶನ್ 'ಗಂಡುಗಲಿ ಮದಕರಿ ನಾಯಕ' ಚಿತ್ರದ ಫಸ್ಟ್ ಲುಕ್ ಬಹಿರಂಗ

  ಈ ವರ್ಷ ದರ್ಶನ್ 3 ಸಿನಿಮಾ ಬಿಡುಗಡೆ

  ಈ ವರ್ಷ ದರ್ಶನ್ 3 ಸಿನಿಮಾ ಬಿಡುಗಡೆ

  ಅಂದ್ಹಾಗೆ, ಈ ವರ್ಷ ದರ್ಶನ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಲಿದೆ. ಮಾರ್ಚ್ 1ಕ್ಕೆ ಯಜಮಾನ, ಏಪ್ರಿಲ್ 5ಕ್ಕೆ ಕುರುಕ್ಷೇತ್ರ ನಂತರ ಒಡೆಯ ಚಿತ್ರಗಳು ಈ ವರ್ಷ ಬರಲಿದೆ. ರಾಬರ್ಟ್, ಮದಕರಿ ನಾಯಕ ಶೂಟಿಂಗ್ ಶುರುವಾಗಲಿದೆ. ಈ ಮಧ್ಯೆ D55 ಮತ್ತು D56 ಘೋಷಣೆಯಾಗಿದೆ.

  English summary
  Big Confusion about darshan 51st movie: Who will produce the D 51st Movie. Producer mj ram murthy and prakash jayaram both are release the poster of d 51.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X