For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಆದ್ಮೇಲೆ ಮುಂದೇನು? ಯಶ್‌ಗೆ ನಿರ್ಮಾಪಕ ಯಾರು?

  |

  ಕೆಜಿಎಫ್ ಚಿತ್ರದ ಬಳಿಕ ಯಶ್ ಇಮೇಜ್ ಬದಲಾಗಿದೆ. ನ್ಯಾಷನಲ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಚಾಪ್ಟರ್ 2 ಸಿನಿಮಾದ ಬಿಡುಗಡೆಯಾಗಿ ಕಾಯುತ್ತಿರುವ ಯಶ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಇದುವರೆಗೂ ಯಾವುದೇ ಸುಳಿವು ನೀಡಿಲ್ಲ. ಕೆಜಿಎಫ್ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲ ತಂತ್ರಜ್ಞರು, ಕಲಾವಿದರು ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ.

  ಮಫ್ತಿ ಖ್ಯಾತಿಯ ನರ್ತನ್ ಜೊತೆ ಯಶ್ ಮುಂದಿನ ಸಿನಿಮಾ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ ರೀತಿಯಲ್ಲಿ ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತದೆ ಎಂದು ಸುದ್ದಿ ಇದೆ. ಆದರೆ, ಯಶ್ ಮುಂದಿನ ಚಿತ್ರಕ್ಕೆ ಯಾರು ಬಂಡವಾಳ ಹಾಕಲಿದ್ದಾರೆ ಎನ್ನುವುದು ಅಷ್ಟೇ ಕುತೂಹಲ ಹೆಚ್ಚಿಸಿದೆ. ಮುಂದೆ ಓದಿ...

  ಕೆಜಿಎಫ್ ಆದ್ಮೇಲೆ ಯಶ್ ಮುಂದಿನ ಸಿನಿಮಾ ಯಾವುದು? ಡೈರೆಕ್ಟರ್ ಅವರೇನಾ?

  ಹೊಂಬಾಳೆ ನಿರ್ಮಾಣ ಮಾಡುವುದೇ?

  ಹೊಂಬಾಳೆ ನಿರ್ಮಾಣ ಮಾಡುವುದೇ?

  ಕೆಜಿಎಫ್ ಚಾಪ್ಟರ್-2 ಬಳಿಕ ಯಶ್ ಜೊತೆ ಹೊಂಬಾಳೆ ಸಿನಿಮಾ ಮಾಡುವುದು ಸದ್ಯಕ್ಕೆ ಅನುಮಾನ. ಏಕಂದ್ರೆ, ಪುನೀತ್ ರಾಜ್ ಕುಮಾರ್-ಸಂತೋಷ್ ಆನಂದ್ ರಾಮ್ ಜೊತೆ ಹೊಸ ಪ್ರಾಜೆಕ್ಟ್ ಹಾಗೂ ಪ್ರಭಾಸ್ ಜೊತೆ ಸಲಾರ್ ಚಿತ್ರ ನಿರ್ಮಿಸುತ್ತಿದ್ದಾರೆ. ಈ ಎರಡು ಸಿನಿಮಾ ಮುಗಿಯವರೆಗೂ ಮತ್ತೊಂದು ದೊಡ್ಡ ಚಿತ್ರಕ್ಕೆ ಕೈ ಹಾಕಲ್ಲ ಎನ್ನಲಾಗಿದೆ.

  ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್

  ಸಲಾರ್ ಚಿತ್ರದಲ್ಲಿ ಪ್ರಶಾಂತ್ ನೀಲ್

  ಕೆಜಿಎಫ್, ಕೆಜಿಎಫ್ ಚಾಪ್ಟರ್ 2 ಮುಗಿಸಿರುವ ನಿರ್ದೇಶಕ ಪ್ರಶಾಂತ್ ನೀಲ್ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಆರಂಭಿಸಿದರು. ಇದಾದ ಬಳಿಕವೂ ತೆಲುಗಿನ ಸ್ಟಾರ್ ಜೊತೆ ಸಿನಿಮಾ ಮಾಡುವ ಕುರಿತು ಮಾತುಕತೆ ಆಗುತ್ತಿದೆಯಂತೆ. ಯಶ್ ಜೊತೆ ಪ್ರಶಾಂತ್ ನೀಲ್ ಸಿನಿಮಾ ಮಾಡುವ ಲಕ್ಷಣಗಳು ಸದ್ಯಕ್ಕಿಲ್ಲ.

  ಪರಭಾಷೆಯಲ್ಲಿ ಯಶ್‌ಗೆ ಬೇಡಿಕೆ?

  ಪರಭಾಷೆಯಲ್ಲಿ ಯಶ್‌ಗೆ ಬೇಡಿಕೆ?

  ಕೆಜಿಎಫ್ ಆದ್ಮೇಲೆ ಯಶ್ ಜೊತೆ ಸಿನಿಮಾ ಮಾಡಬಹುದು ಎಂದು ಪರಭಾಷೆ ನಿರ್ದೇಶಕರು ಮತ್ತು ನಿರ್ಮಾಪಕರು ಮುಂದಾಗಿದ್ದರು. ಬಾಲಿವುಡ್, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಇಂತಹದೊಂದು ಟಾಕ್ ಇದೆ ಎಂದು ಹೇಳಲಾಗುತ್ತಿತ್ತು. ಒಂದು ವೇಳೆ ಕೆಜಿಎಫ್ ಚಾಪ್ಟರ್ 2 ಆದ್ಮೇಲೆ ಬೇರೆ ಭಾಷೆಯ ಪ್ರೊಡಕ್ಷನ್ ಸಂಸ್ಥೆಯ ಜೊತೆ ಸಿನಿಮಾ ಮಾಡಬಹುದೇ ಎಂಬ ಪ್ರಶ್ನೆಯೂ ಇದೆ.

  ಕೆಜಿಎಫ್ 2 ನಲ್ಲಿ ಅನಂತನಾಗ್ ಹಾಗೂ ಪ್ರಕಾಶ್ ರೈ ಪಾತ್ರಕ್ಕಿರುವ ವ್ಯತ್ಯಾಸ ಏನು? | Filmibeat Kannada
  ಮೈ ನೇಮ್ ಈಸ್ ಕಿರಾತಕ?

  ಮೈ ನೇಮ್ ಈಸ್ ಕಿರಾತಕ?

  ಯಶ್ ಜೊತೆ ಹಲವು ಸಿನಿಮಾಗಳನ್ನು ಮಾಡಿರುವ ಜಯಣ್ಣ-ಬೋಗೇಂದ್ರ ಜೊತೆ ಸಿನಿಮಾ ಆರಂಭಿಸಬಹುದೇ. ಕೆಜಿಎಫ್ ಚಾಪ್ಟರ್ 1 ಆದ್ಮೇಲೆ ಮೈ ನೇಮ್ ಈಸ್ ಕಿರಾತಕ ಎಂಬ ಚಿತ್ರ ಶುರು ಮಾಡಿದ್ದರು. ಈ ಚಿತ್ರಕ್ಕೆ ಜಯಣ್ಣ ಬಂಡವಾಳ ಹಾಕಿದ್ದರು. ಈ ಕಮಿಟ್‌ಮೆಂಟ್ ಮತ್ತೆ ಮುಂದುವರಿಯುವ ಸಾಧ್ಯತೆ ಇದೆ. ಆದರೆ, ಅದೇ ಚಿತ್ರ ಆಗುತ್ತಾ ಅಥವಾ ಹೊಸ ಸಿನಿಮಾ ಆಗುತ್ತಾ ಕಾದುನೋಡಬೇಕಿದೆ.

  English summary
  After KGF Chapter 2, who will produce Rocking star yash's next project?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X