For Quick Alerts
  ALLOW NOTIFICATIONS  
  For Daily Alerts

  ಈ ಐವರನ್ನ ಹಿಂದಿಕ್ಕಿ ಸೈಮಾ ಪ್ರಶಸ್ತಿ ಮುಡಿಗೇರಿಸಿಕೊಳ್ತಾರಾ ಶ್ರೀನಿಧಿ ಶೆಟ್ಟಿ.!

  |

  2019ನೇ ಸಾಲಿನ ಸೈಮಾ ಪ್ರಶಸ್ತಿ ಭಾರಿ ಕುತೂಹಲ ಹುಟ್ಟಿಸಿದೆ. ಅತ್ಯುತ್ತಮ ಸಿನಿಮಾ, ನಟ, ನಟಿ, ನಿರ್ದೇಶಕ ಹೀಗೆ ಹಲವು ವಿಭಾಗದಲ್ಲಿ ಕೆಜಿಎಫ್, ಟಗರು, ಅಯೋಗ್ಯ ಚಿತ್ರಗಳು ಪೈಪೋಟಿ ನಡೆಸುತ್ತಿದೆ.

  ಇದೀಗ, ಅತ್ಯುತ್ತಮ ನವ ನಟಿ ವಿಭಾಗದಲ್ಲಿ ಯಾರಿಗೆ ಪ್ರಶಸ್ತಿ ಒಲಿಯಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಯಾಕಂದ್ರೆ, ಈ ವಿಭಾಗದಲ್ಲಿ ವಿನ್ನರ್ ಯಾರಾಗಾಬಹುದು ಎಂದು ನಿರ್ಧರಿಸುವುದು ಸ್ವಲ್ಪ ಕಷ್ಟ ಆಗಬಹುದು.

  ಸೈಮಾ ಪ್ರಶಸ್ತಿಗಾಗಿ ಯಶ್ 'ಕೆಜಿಎಫ್' ಶಿವಣ್ಣನ 'ಟಗರು' ನಡುವೆ ಹಣಾಹಣಿಸೈಮಾ ಪ್ರಶಸ್ತಿಗಾಗಿ ಯಶ್ 'ಕೆಜಿಎಫ್' ಶಿವಣ್ಣನ 'ಟಗರು' ನಡುವೆ ಹಣಾಹಣಿ

  ನಿರೀಕ್ಷೆಯಂತೆ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಅತ್ಯುತ್ತಮ ನವನಟಿ ವಿಭಾಗದಲ್ಲಿ ಫೇವರೆಟ್ ಎನ್ನಲಾಗುತ್ತಿದೆ. ಆದರೆ, ಶ್ರೀನಿಧಿ ಶೆಟ್ಟಿಗೆ ಇದು ಸುಲಭವಲ್ಲ. ಯಾಕಂದ್ರೆ, ಶ್ರೀನಿಧಿ ಶೆಟ್ಟಿ ಜೊತೆ ರೇಸ್ ನಲ್ಲಿ ಇನ್ನು ಐದು ಜನ ಪ್ರತಿಭಾನ್ವಿತ ಹೊಸ ನಟಿಯರಿದ್ದಾರೆ.

  ಯಾವ ನಟನಿಗೆ ಒಲಿಯಲಿದೆ 'ಸೈಮಾ ಅತ್ಯುತ್ತಮ ವಿಲನ್' ಪಟ್ಟ? ಯಾವ ನಟನಿಗೆ ಒಲಿಯಲಿದೆ 'ಸೈಮಾ ಅತ್ಯುತ್ತಮ ವಿಲನ್' ಪಟ್ಟ?

  ಆ ಕರಾಳ ರಾತ್ರಿ ಚಿತ್ರಕ್ಕಾಗಿ ಅನುಮಪಾ ಗೌಡ, ಪ್ರೇಮ ಬರಹ ಚಿತ್ರಕ್ಕಾಗಿ ಐಶ್ವರ್ಯ ಅರ್ಜುನ್, ಅಮ್ಮ ಐ ಲವ್ ಯೂ ಚಿತ್ರಕ್ಕಾಗಿ ನಿಶ್ವಿಕಾ ನಾಯ್ಡು, ಅಭಿಸಾರಿಕೆ ಚಿತ್ರಕ್ಕಾಗಿ ಸೋನಾಲ್, ಶತಾಯ ಗತಾಯ ಚಿತ್ರಕ್ಕಾಗಿ ಸೋನಿಕಾ ಗೌಡ ನಾಮಿನೇಟ್ ಆಗಿದ್ದಾರೆ.

  ಹೀಗಾಗಿ, ನವನಟಿ ವಿಭಾಗದಲ್ಲಿ ಕಾಂಪಿಟೇಶನ್ ಹೆಚ್ಚಾಗಿದೆ. 2018 ವರ್ಷದಲ್ಲಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ಆರು ನಟಿಯರ ಪೈಕಿ ಯಾರಿಗೆ ಸೈಮಾ ಪ್ರಶಸ್ತಿ ಹುಡುಕಿಕೊಂಡು ಬರುತ್ತೆ ಎಂಬುದು ಕಾದುನೋಡಬೇಕಿದೆ.

  English summary
  Who will win siima best debutant actress 2019. srinidhi shetty, anupama gowda, aishwarya arjun, Nishvika Naidu, Sonal Monteiro, Sonika Gowda is nominate in list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X