For Quick Alerts
  ALLOW NOTIFICATIONS  
  For Daily Alerts

  ಸುದೀಪ್‌ ಪರವಾಗಿ ಒಂದಾಯ್ತು ಇಡೀ ಸೌತ್ ಇಂಡಿಯಾ!

  |

  ಸದ್ಯ ಚಿತ್ರರಂಗದಲ್ಲಿ ಹಿಂದಿ ಭಾಷೆಯ ವಿಚಾರವಗಿ ದೊಡ್ಡ ಬಿರುಗಾಳಿ ಎದ್ದಿದೆ. ಕನ್ನಡದ ನಟ ಕಿಚ್ಚ ಸುದೀಪ್ ಮತ್ತು ಹಿಂದಿಯ ಅಜಯ್ ದೇವಗನ್ ನಡುವೆ ಶುರುವಾದ ವಾಗ್ವಾದ ಈಗ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಇದಕ್ಕೆ ಕಾರಣ 'ಹಿಂದಿ ರಾಷ್ಟ್ರೀಯ ಭಾಷೆಯಾಗಿ ಉಳಿದಿಲ್ಲ' ಎಂಬ ಕಿಚ್ಚನ ಹೇಳಿಕೆ.

  ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಸುದೀಪ್ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವಗನ್ ತಿರುಗೇಟು ನೀಡಿದ್ದರು. ಇಬ್ಬರೂ ಟ್ವೀಟ್ ಮೂಲಕವೇ ಈ ವಿಚಾರದಲ್ಲಿ ವಾಗ್ವಾದಕ್ಕೆ ಇಳಿದಿದ್ದರು. ಕಿಚ್ಚನಿಗೆ ಟಾಂಗ್ ಕೊಟ್ಟ ಅಜಯ್ ದೇವಗನ್ ಟ್ವಿಟ್ ಮಾಡಿ "ಹಿಂದಿ ರಾಷ್ಟ್ರೀಯ ಭಾಷೆ ಆಗಿತ್ತು. ಈಗಲೂ ಆಗಿದೆ. ಮುಂದೆನೂ ಇರುತ್ತೆ" ಎಂದು ಹೇಳಿದ್ದರು.

  ಪರಭಾಷೆಯಿಂದಲೂ ವ್ಯಕ್ತವಾಯ್ತು ನಟ ಸುದೀಪ್‌ಗೆ ಬೆಂಬಲಪರಭಾಷೆಯಿಂದಲೂ ವ್ಯಕ್ತವಾಯ್ತು ನಟ ಸುದೀಪ್‌ಗೆ ಬೆಂಬಲ

  Recommended Video

  ರಾಷ್ಟ್ರ ಭಾಷೆ ಹಿಂದಿ ಅಂತ ಎಲ್ಲಿದೆ ? | Sudeep | Sathish Ninasam | Ajay Devgn

  ಅಜಯ್ ದೇವಗನ್ ನೀಡಿದ ಈ ಹೇಳಿಕೆ ಯಾರಿಗೂ ಸಹಿಸಲು ಸಾಧ್ಯವಾಗಿಲ್ಲ. ಕನ್ನಡಿಗರಿಗೆ ಮಾತ್ರ ಅಲ್ಲ. ಇಡೀ ದಕ್ಷಿಣ ಭಾರತೀಯರನ್ನು ಅಜಯ್ ದೇವಗನ್ ಈ ಹೇಳಿಕೆ ಕೆರಳಿಸಿದೆ. ಕನ್ನಡಿಗರು, ಕನ್ನಡದ ಚಿತ್ರರಂಗದವರು ಮಾತ್ರ ಅಲ್ಲದೆ ಸುದೀಪ್ ಪರ ದಕ್ಷಿಣ ಭಾರತೀಯರೇ ನಿಂತು ಬಿಟ್ಟಿದ್ದಾರೆ.

  'ಪೂಲ್ ಔರ್ ಕಾಂಟೆ' ನೆನಪಿಸಿ ಅಜಯ್‌ಗೆ ಬುದ್ಧಿ ಹೇಳಿದ ಎಚ್‌ಡಿ ಕುಮಾರಸ್ವಾಮಿ'ಪೂಲ್ ಔರ್ ಕಾಂಟೆ' ನೆನಪಿಸಿ ಅಜಯ್‌ಗೆ ಬುದ್ಧಿ ಹೇಳಿದ ಎಚ್‌ಡಿ ಕುಮಾರಸ್ವಾಮಿ

  ಸುದೀಪ್ ಗೆ ಜೈ ಎನ್ನುತ್ತಿರೋ ತಮಿಳು, ತೆಲುಗು ಫ್ಯಾನ್ಸ್!

  ಸುದೀಪ್ ಗೆ ಜೈ ಎನ್ನುತ್ತಿರೋ ತಮಿಳು, ತೆಲುಗು ಫ್ಯಾನ್ಸ್!

  ನಟ ಸುದೀಪ್ ಮತ್ತು ಅಜಯ್ ದೇವಗನ್ ಹಿಂದಿ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಈ ಟ್ವಿಟ್ಟರ್ ವಾರ್‌ನಲ್ಲಿ ಸುದೀಪ್ ಪರವಾಗಿ ಇಡೀ ಸೌತ್ ಚಿತ್ರರಂಗ ಒಂದಾಗಿದೆ. ಸೌತ್‌ನಲ್ಲೂ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲವೂ ಇದೆ. ಆದರೆ ಈ ವಿಚಾರದಲ್ಲಿ ಮಾತ್ರ ಎಲ್ಲವನ್ನು ಬದಿಗಿಟ್ಟು ಒಂದೇ ರೀತಿಯ ಧ್ವನಿ ಎತ್ತಿದ್ದಾರೆ. ಸುದೀಪ್ ಪರವಾಗಿ ನಿಂತಿದ್ದಾರೆ. ತೆಲುಗು ನಟ ಮಹೇಶ್ ಬಾಬು ಅಭಿಮಾನಿಗಳು ಕಿಚ್ಚನಿಗೆ ಜೈ ಎನ್ನುತ್ತಿದ್ದಾರೆ.

  ಜೂ.ಎನ್‌ಟಿಆರ್ ಫ್ಯಾನ್ಸ್ ಕಿಚ್ಚನಿಗೆ ಬೆಂಬಲ!

  ಜೂ.ಎನ್‌ಟಿಆರ್ ಫ್ಯಾನ್ಸ್ ಕಿಚ್ಚನಿಗೆ ಬೆಂಬಲ!

  ಇನ್ನು ಸುದೀಪ್‌ಗೆ ತೆಲುಗು ಮತ್ತು ತಮಿಳಿನ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಬೆಂಬಲ ಸೂಚಿಸುತ್ತಿದ್ದಾರೆ. ತಮಿಳು ನಟ ವಿಜಯ್ ಮತ್ತು ಜೂ.ಎನ್‌ಟಿಆರ್ ಫ್ಯಾನ್ ಪೇಜ್‌ನಿಂದ ಕಿಚ್ಚನಿಗೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗಿದೆ. ಈ ಮೂಲಕ ಸೌತ್ ಇಂಡಿಯಾದ ಬಹುತೇಕ ಮಂದಿ ಒಂದಾಗಿ ಮುಂದೆ ಬಂದಿದ್ದಾರೆ ಎನ್ನುವುದು ಸ್ಪಷ್ಟ ಆಗುತ್ತದೆ.

  ಕಿಚ್ಚನ ಬೆನ್ನಿಗೆ ಕನ್ನಡ ಚಿತ್ರರಂಗ!

  ಕಿಚ್ಚನ ಬೆನ್ನಿಗೆ ಕನ್ನಡ ಚಿತ್ರರಂಗ!

  ಇನ್ನು ನಟ ಸುದೀಪ್ ಮತ್ತು ಅಜಯ್ ದೇವಗನ್ ಮಧ್ಯೆ ಈ ರೀತಿ ಟ್ವೀಟ್‌ಗಳು ಬರುತ್ತಲೆ, ಕನ್ನಡದ ಬಹುತೇಕ ಸ್ಟಾರ್‌ಗಳು ಕಿಚ್ಚನ ಪರವಾಗಿ ಬ್ಯಾಟ್ ಬೀಸಿದ್ದಾರೆ. ನಟಿ ರಮ್ಯಾ ಸುದೀಪ್ ಮಾತು ಸರಿ ಎಂದರೆ, ನಟ ನೀನಾಸಂ ಸತೀಶ್, ಅಜಯ್ ದೇವಗನ್ ವಿರುದ್ಧ ಗುಡುಗಿದ್ದಾರೆ. ಹೀಗೆ ಆಶಿಕಾ ರಂಗನಾಥ್, ಮಂಸೋರೆ, ಶ್ರೀನಗರ ಕಿಟ್ಟಿ, ರಾಮ್ ಗೋಪಲ್ ವರ್ಮಾ ಸೇರಿದಂತೆ ಹಲವು ತಾರೆಯರು ಸುದೀಪ್ ಪರವಾಗಿ ನಿಂತಿದ್ದಾರೆ.

  ಸೌತ್ ಚಿತ್ರಗಳಿಗೆ ಬೆದರಿತಾ ಬಾಲಿವುಡ್?

  ಸೌತ್ ಚಿತ್ರಗಳಿಗೆ ಬೆದರಿತಾ ಬಾಲಿವುಡ್?

  ಇನ್ನು ಬಾಲಿವುಡ್ ಮಂದಿಯ ಈ ನಡೆ ನೋಡ್ತಾ ಇದ್ದರೆ. ಸೌತ್ ಚಿತ್ರಗಳ ಹಾವಳಿಗೆ ಹೆದರಿ ಬಿಟ್ಟಿದ್ದಾರಾ ಎನ್ನುವ ಶಂಕೆ ಮೂಡುತ್ತದೆ. RRR, ಪುಷ್ಪ, ಕೆಜಿಎಫ್ 2 ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮಾಡಿದ ಗಳಿಕೆ ಕಂಡು ಬಾಲಿವುಡ್ ನಲುಗಿ ಹೋದಂತೆ ಇದೆ. ಈ ರೀತಿಯ ನಡೆಯನ್ನು ತೋರುತ್ತಿದ್ದಾರೆ, ಇನ್ನು ಮುಂದೆ ಹಲವು ಸೌತ್ ಚಿತ್ರಗಳು ರಿಲೀಸ್‌ಗೆ ರೆಡಿ ಇವೆ. ಹಾಗಾಗಿ ಬಾಲಿವುಡ್ ಮಂದಿ ಹೀಗೆಲ್ಲಾ ಖ್ಯಾತೆ ತೆಗೆಯುತ್ತಿದ್ದಾರೆ ಎಂದು ಟ್ರೋಲ್ ಮಾಡಲಾಗುತ್ತಿದೆ.

  English summary
  Whole South India United Now To Stand With Sudeep Statement On Hindi, Mahesh Babu, Jr NTR Fans Support To Sudeep
  Thursday, April 28, 2022, 11:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X