For Quick Alerts
  ALLOW NOTIFICATIONS  
  For Daily Alerts

  ನಟಿ ರಮ್ಯಾ ಇನ್ನೂ ಯಾಕೆ ಮದುವೆ ಆಗಿಲ್ಲ: ನಿಜ ಕಾರಣ ಹೇಳಿಕೊಂಡ ಮೋಹಕತಾರೆ!

  |

  ನಟಿ ಮೋಹಕ ತಾರೆ ರಮ್ಯಾ ಇತ್ತೀಚೆಗೆ ಸಿನಿಮಾ ರಂಗದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟು ದಿನ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಇದೀಗ ಸಿನಿಮಾ ವಿಚಾರಕ್ಕೆ ಸಂಬಂಧಪಟ್ಟ ವಿಷಯಗಳ ಮೂಲಕ ಸುದ್ದಿ ಆಗುತ್ತಾ ಇದ್ದಾರೆ. ಒಂದಷ್ಟು ಸಿನಿಮಾ ವಿಚಾರಗಳಿಗೆ ರಮ್ಯಾ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ.

  ಅಷ್ಟೇ ಅಲ್ಲ ಜೊತೆಗೆ ಒಂದಷ್ಟು ಕನ್ನಡ ಸಿನಿಮಾಗಳ ಪೋಸ್ಟರ್, ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ರಮ್ಯಾ ಆ ಚಿತ್ರಗಳಿಗೆ ಸಾಥ್ ನೀಡುತ್ತಲಿರುತ್ತಾರೆ. ಇನ್ನೂ ಇತ್ತೀಚೆಗೆ ರಮ್ಯಾ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್‌ಗೆ ಭೇಟಿ ಕೊಟ್ಟು ಸುದ್ದಿಯಾಗಿದ್ದರು.

  ಕೆಲ ದಿನ ತಾಳ್ಮೆ ಇಂದಿರಿ: ಕಮ್‌ ಬ್ಯಾಕ್‌ ಬಗ್ಗೆ ರಮ್ಯಾ ಮಾತುಕೆಲ ದಿನ ತಾಳ್ಮೆ ಇಂದಿರಿ: ಕಮ್‌ ಬ್ಯಾಕ್‌ ಬಗ್ಗೆ ರಮ್ಯಾ ಮಾತು

  ಇದರ ನಡುವೆ ಹೆಚ್ಚು ಸದ್ದು ಮಾಡಿದ ಸುದ್ದಿ ಅಂದರೆ ರಮ್ಯಾ ಕಮ್ ಬ್ಯಾಕ್ ಯಾವಾಗ ಎನ್ನುವುದು. ಆದರೆ ಇದೀಗ ರಮ್ಯಾ ತಮ್ಮ ಮದುವೆ ಬಗ್ಗೆ ಮತ್ತು ಇನ್ನು ಮದುವೆ ಯಾಕಾಗಿಲ್ಲ ಎನ್ನುವುದರ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಈಗ ರಮ್ಯಾ ಮದುವೆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ

  ಮದುವೆ ಯಾಕಾಗಿಲ್ಲ ಎಂದು ಹೇಳಿದ ರಮ್ಯಾ!

  ಮದುವೆ ಯಾಕಾಗಿಲ್ಲ ಎಂದು ಹೇಳಿದ ರಮ್ಯಾ!

  ನಟಿ ರಮ್ಯಾಗೆ ಎದುರಾಗುವ ಪ್ರಶ್ನೆ ಇದು. ಸಿನಿಮಾರಂಗದಿಂದ ರಮ್ಯಾ ದುರಾದ ಬಳಿಕ, ರಮ್ಯಾ ಮದುವೆ ಆಗ್ತಾರೆ ಎನ್ನಲಾಗಿತ್ತು. ಬಳಿಕ ರಾಜಕೀಯ ಬಿಟ್ಟಾಗಲೂ ರಮ್ಯಾ ಮದುವೆ ತಯಾರಿಯಾರಿಯಲ್ಲಿ ಇದ್ದಾರೆ ಎನ್ನಲಾಗಿತ್ತು. ಇನ್ನು ಇತ್ತೀಚೆಗೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದು, ಅವರಿಗೆ ಮದುವೆ ಯಾವಾಗ? ಇನ್ನೂ ಯಾಕೆ ಮದುವೆ ಆಗಿಲ್ಲ ಎನ್ನುವ ಬಗ್ಗೆಯೇ ಪ್ರಶ್ನೆಗಳು ಎದುರಾಗುತ್ತಾ ಇರುತ್ತವೆ. ಇದಕ್ಕೆ ಈಗ ರಮ್ಯಾ ಉತ್ತರ ಕೊಟ್ಟಿದ್ದಾರೆ.

  ನನ್ನ ಸೋಲ್‌ಮೇಟ್ ಸತ್ತಿರ ಬಹುದು!

  ಇನ್ನು ಮದುವೆ ಯಾಕಾಗಿಲ್ಲ ಎನ್ನುವ ಪ್ರಶ್ನೆಯನ್ನು ಪೋಸ್ಟ್ ಬರೆದುಕೊಂಡು ನಟಿ ರಮ್ಯಾ, "ಬಹುಶಃ ನನ್ನ ಸೋಲ್‌ಮೇಟ್ ಸತ್ತು ಹೋಗಿರ ಬಹುದು" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಇದೇ ಲಿರಿಕ್ಸ್ ಹೊಂದಿರುವ, ಇಮ್ನೋಟ್‌ಶೇನ್ ಹಾಡಿರುವ ಆಲ್‌ಬಮ್ ಹಾಡನ್ನು ಹಾಡಿದ್ದಾರೆ ರಮ್ಯಾ. ಈ ಹಾಡಿನಲ್ಲಿ ಬರುವ ಸಾಲುಗಳು ಹೀಗಿವೆ. " ಬಹುಶಃ ನನ್ನ ಸೋಲ್‌ಮೇಟ್ ಸತ್ತಿರ ಬಹುದು ನನಗೆ ಗೊತ್ತಿಲ್ಲ... ಬಹುಶಃ ನನಗೆ ಅಂತ ಯಾವುದೇ ಸೋಲ್‌(ಆತ್ಮ) ಇಲ್ಲ... ನಿನ್ನನ್ನು ಕಳೆದ ರಾತ್ರಿ ಟ್ರೈನ್‌ನಲ್ಲಿ ನೋಡಿಯೂ ನಾನು ಹಾಗೆ ಹೋಗಿರಬಹುದು." ಎನ್ನುವ ಸಾಲುಗಳನ್ನು ಹಾಡಿದ್ದಾರೆ ರಮ್ಯಾ.

  ಬಾಳ ಸಂಗಾತಿ ಬಗ್ಗೆ ಪೋಸ್ಟ್ ಹಾಕಿದ್ದ ರಮ್ಯಾ!

  ಬಾಳ ಸಂಗಾತಿ ಬಗ್ಗೆ ಪೋಸ್ಟ್ ಹಾಕಿದ್ದ ರಮ್ಯಾ!

  ನಟಿ ರಮ್ಯಾ ಈ ಹಿಂದೆ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಬಾಳಸಂಗಾತಿ ಅಥವಾ ಜೀವನದ ಜೊತೆಗಾರರು ಹೇಗೆ ಇರಬೇಕು ಎನ್ನುವುದನ್ನು ಹೇಳಿಕೊಂಡಿದ್ದರು. "ಕೇವಲ ದೋಷ ರಹಿತ ಭಾವನಾತ್ಮಕ ಪ್ರಬುದ್ಧತೆಯನ್ನು ಹೊಂದಿರುವ ಸಂಗಾತಿಯನ್ನು ಹುಡುಕುವುದಲ್ಲ. ಬದ್ಧತೆಯನ್ನು ಹೊಂದಿರುವ ಸಂಗಾತಿಯನ್ನು ಹುಡುಕ ಬೇಕು. ಕೇವಲ ಸಂಬಂಧಕ್ಕೆ ಮಾತ್ರವಲ್ಲ, ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಬದ್ಧತೆಯಿಂದಾಗಿ ಅವರು ಉತ್ತಮವಾಗಿ ಪ್ರೀತಿಸಬಹುದು, ಸ್ಪಷ್ಟತೆಯನ್ನು ನೋಡಬಹುದು ಮತ್ತು ಹೆಚ್ಚಿನ ಉಪಸ್ಥಿತಿಯನ್ನು ಹೊಂದಬಹುದು." ಎಂದು ರಮ್ಯಾ ಅವರ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

  ರಮ್ಯಾ ಕಮ್‌ ಬ್ಯಾಕ್ ಬಗ್ಗೆ ಚರ್ಚೆ!

  ರಮ್ಯಾ ಕಮ್‌ ಬ್ಯಾಕ್ ಬಗ್ಗೆ ಚರ್ಚೆ!

  ನಟಿ ರಮ್ಯಾ ಸಿನಿಮಾರಂಗಕ್ಕೆ ವಾಪಸ್ ಬರುವ ಬಗ್ಗೆ ಸಾಕಷ್ಟು ಕುತೂಹಲಗಳು, ನಿರೀಕ್ಷೆಗಳು ಮನೆಮಾಡಿದ್ದವು. ರಮ್ಯಾ ಕಮ್‌ ಬ್ಯಾಕ್‌ ಬಗ್ಗೆ ಇದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ಹತ್ತಿರ ಬಂದಿದೆ. ಸದ್ಯ ಹಲವು ಉತ್ತಮ ಸಿನಿಮಾ ಕಥೆಗಳನ್ನ ಕೇಳುತ್ತಿದ್ದಾರಂತೆ. ಇತ್ತೀಚೆಗೆ ರಮ್ಯಾ, ರಾಜ್ ಬಿ ಶೆಟ್ಟಿ ಜೊತೆಗೆ ಸಿನಿಮಾ ಮಾಡುತ್ತಾರೆ ಎನ್ನುವ ಗಾಳಿಸುದ್ದಿಯೂ ಹರಿದಾಡಿತ್ತು. ಆದರೆ ಯಾವುದು ಕೂಡ ಅಧಿಕೃತವಾಗಿಲ್ಲ.

  Recommended Video

  Vijay Deverakonda | ಆಗಸ್ಟ್‌ 25ಕ್ಕೆ ಚಿಂದಿ ಉಡಾಯಿಸೊಣ ಎಂದ ವಿಜಯ್ ದೇವರಕೊಂಡ | Filmibeat Kannada
  English summary
  Why Actress Ramya Not Married, Ramya Reveals Real Reason For Not getting Married,
  Saturday, August 20, 2022, 15:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X