'ಬ್ಯಾಂಗಲೂರ್' ಬೇಡ ಎಂದ ರಶ್ಮಿಕಾ ಮಂದಣ್ಣ; ವಿಡಿಯೋ ಫುಲ್ ವೈರಲ್

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್ ಬಿಟ್ಟು ಟಾಲಿವುಡ್‌ನಲ್ಲಿ ಸೆಟ್ಲ್ ಆಗಿಬಿಟ್ಟಿದ್ದಾರೆ. ಆಗಾಗ್ಗೆ ಬಾಲಿವುಡ್‌ಗೂ ಹೋಗಿ ಬರುತ್ತಾರೆ. ಮತ್ತೆ ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೇಶ ವಿದೇಶಗಳಲ್ಲಿ ರಶ್ಮಿಕಾ ಮಂದಣ್ಣ ಕ್ರೇಜ್ ಜೋರಾಗಿದೆ.

'ಪೊಗರು' ಬಳಿಕ ರಶ್ಮಿಕಾ ಮಂದಣ್ಣ ಯಾವುದೇ ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳಲಿಲ್ಲ. ಬರೀ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ತಂಡದ ಜೊತೆ ರೋಶ್ ಕೈ ಜೋಡಿಸಿದ್ದಾರೆ. ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ಪ್ರೋಮೊದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದೊಂದು ವಾರದಿಂದ ಅರ್ಥ ಆಯ್ತಾ? ಎಂದು ಆರ್‌ಸಿಬಿ ಚಮಕ್ ಕೊಡುತ್ತಾ ಬರ್ತಿದೆ.

Why actress Rashmika Mandanna erased Bangalore on the mirror

ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್, ಡ್ಯಾನಿಶ್ ಸೇಠ್, ಶಿವರಾಜ್‌ಕುಮಾರ್ ಬಳಿಕ ಕಿಚ್ಚ ಸುದೀಪ್ ಕೂಡ ಇದೇ ಪ್ರಶ್ನೆ ಹಿಡಿದು ಬಂದಿದ್ದರು. ಈಗಾಗಲೇ ಅಭಿಮಾನಿಗಳಿಗೆ ಉತ್ತರ ಸಿಕ್ಕಾಗಿದೆ. ಆದರೂ ಕೂಡ ಆರ್‌ಸಿಬಿ ತಂಡ ಕುತೂಹಲವನ್ನು ಮುಂದೂಡುತ್ತಾ ಹೊಸ ಹೊಸ ಪ್ರೋಮೊಗಳನ್ನು ಬಿಡುಗಡೆ ಮಾಡುತ್ತಿದೆ. ಹೊಚ್ಚ ಹೊಸ ಪ್ರೋಮೊದಲ್ಲಿ ಅದೇ ಪ್ರತಿ ಹಿಡಿದು ರಶ್ಮಿಕಾ ಮಂದಣ್ಣ ಬಂದಿದ್ದಾರೆ.

Royal Challengers Bangalore ಎನ್ನುವ ಹೆಸರಿನಲ್ಲಿ ಬೆಂಗಳೂರು ಪದದ ಇಂಗ್ಲೀಷ್ ಅಕ್ಷರಗಳನ್ನು, ಉಚ್ಛಾರಣೆ ಬದಲಿಸಿದೆ Bengaluru ಎಂದು ಮಾಡಲಾಗುತ್ತಿದೆ. ನಾಳೆ (ಮಾರ್ಚ್‌ 19) ನಡೆಯುವ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಇದು ಅಧಿಕೃತವಾಗುತ್ತಿದೆ. ಈ ಬಗ್ಗೆ ಸುಳಿವು ನೀಡಲು, ಕ್ರಿಯೆಟ್ ಪ್ರೇಮಿಗಳ ಗಮನ ಸೆಳೆಯಲು ಈ ಸ್ಪೆಷಲ್ ಪ್ರೋಮೊಗಳನ್ನು ಹರಿಬಿಡಲಾಗುತ್ತಿದೆ. ಆರ್‌ಸಿಬಿ ಐಡಿಯಾ ವರ್ಕ್ ಆಗಿದೆ.

ರಶ್ಮಿಕಾ ಮಂದಣ್ಣ ಕ್ಯಾರವಾನ್‌ನಲ್ಲಿರುವ ಕನ್ನಡಿಯಲ್ಲಿ Royal Challengers Bangalore ಎಂದು ಬರೆದಿತ್ತು. ಕ್ಯಾರವಾನ್‌ ಒಳ ಬಂದ ಆಕೆ ಅದನ್ನು ನೋಡಿ Bangalore ಎನ್ನುವುದನ್ನು ಅಳಿಸಿ ಅರ್ಥ ಆಯ್ತಾ? ಎಂದು ಕೇಳಿದ್ದಾರೆ. ಹೀಗೆ ಬಹಳ ಸಿಂಪಲ್ ಆಗಿರುವ ಪ್ರೋಮೊ ಗಮನ ಸೆಳೆಯುತ್ತಿದೆ. ರಶ್ಮಿಕಾ ಅಭಿಮಾನಿಗಳಿಗೆ ಪ್ರೋಮೊ ಬಹಳ ಇಷ್ಟವಾಗಿದೆ.

ಇನ್ನು ರಶ್ಮಿಕಾ ಮಂದಣ್ಣ ತಮ್ಮ ಹೇಳಿಕೆಗಳಿಗೆ ಕನ್ನಡಿಗರ ಕೆಂಗಣ್ಣಿಗೆ ಗುರಿ ಆಗಿದ್ದರು. ಆಕೆಯ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ರಶ್ಮಿಕಾರನ್ನು ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡಿಬಿಡಬೇಕು ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಕೆಲ ಪೋಸ್ಟ್‌ಗಳು ವೈರಲ್ ಆಗಿತ್ತು. ಬಹಳ ದಿನಗಳ ನಂತರ ರಶ್ಮಿಕಾ ಬೆಂಗಳೂರು, ಅದರಲ್ಲೂ ಆರ್‌ಸಿಬಿ ಬಗ್ಗೆ ಮಾತನಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಂದಕ್ಕಿಂತ ಒಂದು ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಸ್ಟಾರ್ ನಟರ ಸಿನಿಮಾಗಳು ಮಾತ್ರವಲ್ಲದೇ ಮಹಿಳಾ ಪ್ರಧಾನ ಸಿನಿಮಾಗಳು ಆಕೆಯ ಕೈಯಲ್ಲಿವೆ.

Why actress Rashmika Mandanna erased Bangalore on the mirror

ಅಲ್ಲು ಅರ್ಜುನ್ ಜೋಡಿಯಾಗಿ 'ಪುಷ್ಪ'-2 ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಈಗಾಗಲೇ ಪ್ರೀಕ್ವೆಲ್ ಹಿಟ್ ಆಗಿ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಮತ್ತೊಮ್ಮೆ ಶ್ರೀವಲ್ಲಿಯಾಗಿ ಅಭಿಮಾನಿಗಳ ರಂಜಿಸಲು ಸಿದ್ಧರಾಗುತ್ತಿದ್ದಾರೆ. ರೈನ್‌ಬೋ ಹಾಗೂ 'ದಿ ಗರ್ಲ್‌ ಫ್ರೆಂಡ್' ಎನ್ನುವ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು ಧನುಷ್ ಜೋಡಿಯಾಗಿ 'ಕುಬೇರ' ಎನ್ನುವ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

More from Filmibeat

English summary
Rashmika Mandanna's RCB Unbox promo video goes viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X