Ananth Nag in KGF 2: 'ಕೆಜಿಎಫ್ 2' ನಲ್ಲಿ ಅನಂತ್‌ನಾಗ್ ಏಕಿಲ್ಲ? ಯಶ್, ಪ್ರಶಾಂತ್ ನೀಲ್ ಕೊಟ್ಟರು ಉತ್ತರ

'ಕೆಜಿಎಫ್' ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಅಭಿಮಾನಿಗಳು ಸಿನಿಮಾ ನೋಡಲು ಕಾತರರಾಗಿದ್ದಾರೆ. ಈಗಾಗಲೇ ಮೊದಲ ದಿನದ ಟಿಕೆಟ್‌ಗಳು ಬಹುತೇಕ ಸೋಲ್ಡ್ ಔಟ್ ಆಗಿವೆ.

'ಕೆಜಿಎಫ್; ಚಾಪ್ಟರ್ 1' ಮಾಡಿದ ಮೋಡಿಯಿಂದಲೇ 'ಕೆಜಿಎಫ್ 2' ಸಿನಿಮಾಕ್ಕೆ ಇಷ್ಟು ದೊಡ್ಡ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಮೊದಲ ಸಿನಿಮಾ ಎಬ್ಬಿಸಿದ್ದ ಕುತೂಹಲದ ಕಾರಣದಿಂದಲೇ ಇಂದು ದೇಶದಾದ್ಯಂತ 'ಕೆಜಿಎಫ್ 2'ಗಾಗಿ ಜನ ಕಾಯುತ್ತಿದ್ದಾರೆ.

'ಕೆಜಿಎಫ್: ಚಾಪ್ಟರ್ 1'ನ ಕತೆ, ಪಾತ್ರಗಳು ಮಾಡಿದ್ದ ಮೋಡಿ ಜನರ ಸ್ಮೃತಿಯಲ್ಲಿ ಇಂದಿಗೂ ಇದೆ. ಸಿನಿಮಾದಲ್ಲಿ ನಾಯಕ ರಾಕಿಭಾಯ್‌ಗೆ ಅನಂತ್‌ನಾಗ್ ಕೊಡುವ ಬಿಲ್ಡಪ್, ಪಾತ್ರ ಪರಿಚಯವನ್ನು ಅಭಿಮಾನಿಗಳು ಮರೆಯುವಂತಿಲ್ಲ. ದೊಡ್ಡ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಸಲು ಒಬ್ಬ ದೊಡ್ಡ ನಟನೆ ಆಗಬೇಕು ಎಂಬ ಕಾರಣಕ್ಕೆ ಅನಂತ್‌ನಾಗ್ ಅವರನ್ನು ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದರು. ಆದರೆ 'ಕೆಜಿಎಫ್ 2' ಸಿನಿಮಾದಲ್ಲಿ ಅನಂತ್‌ನಾಗ್ ನಟಿಸುತ್ತಿಲ್ಲ. ಇದು ಹಲವರಲ್ಲಿ ಪ್ರಶ್ನೆ ಎಬ್ಬಿಸಿದೆ. ಈ ಬಗ್ಗೆ ಈಗ ನಟ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿದ್ದಾರೆ.

ಅನಂತ್‌ನಾಗ್ ಇಲ್ಲದಿರುವ ಬಗ್ಗೆ ಯಶ್ ಹೇಳಿದ್ದೇನು?

ಅನಂತ್‌ನಾಗ್ ಇಲ್ಲದಿರುವ ಬಗ್ಗೆ ಯಶ್ ಹೇಳಿದ್ದೇನು?

ಇದೇ ಪ್ರಶ್ನೆಗೆ ಬೇರೆ ಸಂದರ್ಶನವೊಂದರಲ್ಲಿ ಉತ್ತರಿಸಿರುವ ನಟ ಯಶ್ ಸಹ ಇದೇ ಮಾದರಿಯ ಉತ್ತರ ನೀಡಿದ್ದಾರೆ, ''ಅನಂತ್ ನಾಗ್, ಅದ್ಭುತವಾದ ನಟರು. ನಾನು ಧಾರಾವಾಹಿಯಲ್ಲಿ ನಟಿಸುವಾಗಲಿಂದಲೂ ಅವರೊಟ್ಟಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ನನ್ನ ಬಗ್ಗೆಯೂ ಅವರಿಗೆ ವಿಶೇಷ ಪ್ರೀತಿ. ನನಗಾಗಿ ಅವರು ಕೆಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಕೆಜಿಎಫ್: ಚಾಪ್ಟರ್ 1' ಯಶಸ್ವಿಯಾಗಲು ಅವರ ಯೋಗದಾನ ದೊಡ್ಡದಿದೆ. ಆದರೆ 'ಕೆಜಿಎಫ್ 2' ನಲ್ಲಿ ನಟಿಸದೇ ಇರುವುದು ಅವರ ವೈಯಕ್ತಿಕ ಆಯ್ಕೆ. ಅವರು ನಟಿಸದೇ ಇರಲು ಸ್ಪಷ್ಟ ಕಾರಣ ಸಹ ನನಗೆ ಗೊತ್ತಿಲ್ಲ'' ಎಂದಿದ್ದಾರೆ.

ಪ್ರಶಾಂತ್ ನೀಲ್ ನೀಡಿದರು ಉತ್ತರ

ಪ್ರಶಾಂತ್ ನೀಲ್ ನೀಡಿದರು ಉತ್ತರ

'ಕೆಜಿಎಫ್ 2' ಸಿನಿಮಾದ ಪ್ರಚಾರಾರ್ಥ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ''ಕೆಜಿಎಫ್ 2' ಸಿನಿಮಾದಲ್ಲಿ ನಟಿಸಬಾರದು ಎಂಬುದು ಅನಂತ್‌ ನಾಗ್ ಅವರ ವೈಯಕ್ತಿಕ ನಿರ್ಧಾರವಾಗಿತ್ತು. ನಾವು ಅವರ ನಿರ್ಧಾರಕ್ಕೆ ಗೌರವ ಕೊಟ್ಟು ಸುಮ್ಮನಾದೆವು'' ಎಂದಷ್ಟೆ ಹೇಳಿದ್ದಾರೆ. ಆದರೆ ತಾವು 'ಕೆಜಿಎಫ್ 2' ಸಿನಿಮಾದಲ್ಲಿ ನಟಿಸುವಂತೆ ಮನವಿ ಮಾಡಿದ್ದೆವು ಎಂದು ನೀಲ್ ಹೇಳಿದ್ದಾರೆ.

ಅನಂತ್‌ನಾಗ್ ಬದಲಿಗೆ ಪ್ರಕಾಶ್ ರೈ

ಅನಂತ್‌ನಾಗ್ ಬದಲಿಗೆ ಪ್ರಕಾಶ್ ರೈ

'ಕೆಜಿಎಫ್; ಚಾಪ್ಟರ್ 1' ಸಿನಿಮಾದಲ್ಲಿ ಅನಂತ್ ನಾಗ್ ನಿರ್ವಹಿಸಿದ್ದ ಪಾತ್ರಕ್ಕೆ ಬದಲಾಗಿ 'ಕೆಜಿಎಫ್ 2' ಸಿನಿಮಾದಲ್ಲಿ ಪ್ರಕಾಶ್ ರೈ ನಟಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಶಾಂತ್ ನೀಲ್, ''ಅನಂತ್ ನಾಗ್ ಪಾತ್ರದ ಬದಲಿಗೆ ನೀವು ನಟಿಸುತ್ತಿದ್ದೀರಿ ಎಂದು ಮೊದಲೇ ನಾನು ಪ್ರಕಾಶ್ ರೈ ಅವರಿಗೆ ಹೇಳಿದೆ. ಅವರು ಖುಷಿಯಿಂದಲೇ ಸಿನಿಮಾ ಒಪ್ಪಿಕೊಂಡರು. ಸಿನಿಮಾದ, ಕತೆ, ಸಂಭಾಷಣೆ ಕೇಳಿದ ಮೇಲಂತೂ ಅವರು ಬಹಳ ಥ್ರಿಲ್ ಆದರು. ಅವರೊಬ್ಬ ಅದ್ಭುತವಾದ ವ್ಯಕ್ತಿ. ಈ ಸಿನಿಮಾಕ್ಕಾಗಿ ಅವರು ಮಾಡಿರುವ ಅದ್ಭುತ ಕಾರ್ಯಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ'' ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಅನಂತ್‌ನಾಗ್ ನಟಿಸಿಲ್ಲ ಏಕೆ?

ಅನಂತ್‌ನಾಗ್ ನಟಿಸಿಲ್ಲ ಏಕೆ?

'ಕೆಜಿಎಫ್; ಚಾಪ್ಟರ್ 1' ಸಿನಿಮಾ ಬಿಡುಗಡೆ ಆದಾಗ ಅನಂತ್‌ ನಾಗ್ ಪಾತ್ರ ಬಹಳ ಹಿಟ್ ಆಗಿತ್ತು. ಆನಂದ್ ಇಂಗಳಗಿ ಎಂಬ ಪಾತ್ರದಲ್ಲಿ ಅವರು ನಟಿಸಿದ್ದರು. ಅನಂತ್ ನಾಗ್ ಪಾತ್ರ ಅದೆಷ್ಟು ಹಿಟ್ ಆಗಿತ್ತೆಂದರೆ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳ ಮೇಲಾಗಿದ್ದು, ಈಗಲೂ ಅವರ ಪಾತ್ರದ, ಸಂಭಾಷಣೆಯ ಮೀಮ್‌ಗಳು ಹರಿದಾಡುತ್ತಿರುತ್ತವೆ. ಕೆಲವು ಮೂಲಗಳ ಪ್ರಕಾರ ಸಂಭಾವನೆ ವಿಷಯಕ್ಕೆ ಅನಂತ್‌ ನಾಗ್ 'ಕೆಜಿಎಫ್ 2' ಸಿನಿಮಾದಿಂದ ದೂರ ಉಳಿದರು ಎನ್ನಲಾಗುತ್ತದೆ. ಈ ಬಗ್ಗೆ ಈ ವರೆಗೆ ಅನಂತ್‌ ನಾಗ್ ಆಗಲಿ, ಪ್ರಶಾಂತ್ ನೀಲ್ ಅಥವಾ 'ಕೆಜಿಎಫ್' ಚಿತ್ರಸರಣಿಯ ತಂಡದವರಾಗಲಿ ಮಾಹಿತಿ ನೀಡಿಲ್ಲ.

More from Filmibeat

English summary
Why Ananth Nag not acted in KGF 2. In KGF Chapter 01 he played on of the main character of Anand Ingalagi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X