ಶಿವಣ್ಣ-ವಿಷ್ಣುದಾದಾ ಹೆಸರಿಗೆ ಕೆಸರು ಎರಚುತ್ತಿರುವ ಅಂಧಾಭಿಮಾನಿಗಳು: ಇದ್ದಕ್ಕಿದ್ದಂತೆ ಏನಾಯ್ತು?

By ಫಿಲ್ಮಿಬೀಟ್ ಡೆಸ್ಕ್

ಸೋಶಿಯಲ್ ಮೀಡಿಯಾ ಬಂದ್ಮೇಲೆ ಸೂಪರ್‌ಸ್ಟಾರ್ ಅಭಿಮಾನಿಗಳು ಅರ್ಭಟ ಕೆಲವೊಮ್ಮೆ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ. ತಮ್ಮ ನಟನನ್ನು ಹೊಗಳುವ ಭರಾಟೆಯಲ್ಲಿ ಮತ್ತೊಬ್ಬ ನಟನನ್ನು ಕಾಳೆದು ಬಿಡುತ್ತಾರೆ. ಇದನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ಅಭಿಮಾನಿಗಳು ಕಿತ್ತಾಡುವುದಕ್ಕೆ ಶುರು ಮಾಡುತ್ತಾರೆ. ಇಂತಹ ಸಾಕಷ್ಟು ಘಟನೆಗಳು ಈ ಹಿಂದೆ ಅದೆಷ್ಟೋ ನಡೆದು ಹೋಗಿದೆ. ಮತ್ತೆ ಕೆಲವು ನಡೆಯುತ್ತಲೇ ಇವೆ.

ಈಗ ಇದ್ದಕ್ಕಿದ್ದಂತೆ ಇಬ್ಬರು ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಮೈಕ್ರೋ ಬ್ಲಾಗ್‌ ಎಕ್ಸ್ ಖಾತೆಯಲ್ಲಿ ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ಎಕ್ಸ್ ಖಾತೆಯಲ್ಲಿ ಕಿತ್ತಾಡುತ್ತಿರೋರು ಸಾಹಸ ಸಿಂಹ ವಿಷ್ಣುವರ್ಧನ್ ಫ್ಯಾನ್ಸ್. ಇನ್ನೊಂದು ಕಡೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಫ್ಯಾನ್ಸ್. ಇಬ್ಬರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸುಖಾಸುಮ್ಮನೆ ಕಿತ್ತಾಡುವುದಕ್ಕೆ ಶುರು ಮಾಡಿದ್ದಾರೆ.

Why are Shivrajkumar and Vishnuvardhan fans fighting on Twitter

ಶಿವಣ್ಣ ಹಾಗೂ ವಿಷ್ಣುದಾದ ಅಭಿಮಾನಿಗಳು ಹೀಗೆ ಕಿತ್ತಾಡುವುದಕ್ಕೆ ಕಾರಣ ಏನು? ಅಸಲಿಗೆ ಈ ಎಕ್ಸ್ ವಾರ್ ಶುರುವಾಗಿದ್ದು ಎಲ್ಲಿಂದ? ಇಬ್ಬರ ಅಭಿಮಾನಿಗಳು ಟ್ವಿಟರ್ ವಾರ್ ಈಗ ಯಾವ ಹಂತದಲ್ಲಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ..

ಒಬ್ಬ ತನ್ನ ಎಕ್ಸ್ ಖಾತೆಯಲ್ಲಿ "ವಿಷ್ಣುದಾದಗಿಂತ ಹೆಚ್ಚು ಸಕ್ಸಸ್ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟ ಶಿವಣ್ಣ" ಎಂದು ಬರೆದು ಪೋಸ್ಟ್ ಮಾಡಿದ್ದ. ಈ ಪೋಸ್ಟ್ ನೋಡುತ್ತಿದ್ದಂತೆ ವಿಷ್ಣುದಾದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ತಮ್ಮ ನೆಚ್ಚಿನ ನಟ ಸಾಹಸ ಸಿಂಹ ವಿಷ್ಣುದಾದ ಬಗ್ಗೆ ಪೋಸ್ಟ್ ಮಾಡುತ್ತಿರುವವರ ವಿರುದ್ಧ ಕಿಡಿಕಾರುತ್ತಿದ್ದಾರೆ. ಇತ್ತ ಶಿವಣ್ಣ ಅಭಿಮಾನಿಗಳು ತಿರುಗಿಬೀಳುವುದಕ್ಕೆ ಶುರು ಮಾಡಿದ್ದಾರೆ. ಅಸಲಿಗೆ ಎಕ್ಸ್ ಖಾತೆಯಲ್ಲಿ ಇಬ್ಬರು ಅಭಿಮಾನಿಗಳ ಮಧ್ಯೆ ನಡೆಯುತ್ತಿರೋದೇನು?

"ಇವರಿನ್ನೂ ಹುಟ್ಟೇ ಇರಲಿಲ್ಲ"

"ಇತ್ತೀಚೆಗಿನ ದಿನಗಳಲ್ಲಿ ವಿಷ್ಣುವರ್ಧನ್, ರವಿಚಂದ್ರನ್, ಹಂಸಲೇಖ ಇವರ ಕೊಡುಗೆಗಳೇನು ಅನ್ನೋದೇ ಗೊತ್ತಿರದ ಕೆಲವು ಸ್ಟುಪಿಡ್, ಚೈಲ್ಡಿಶ್, ಜ್ಞಾನವೇ ಇಲ್ಲ ವೇಸ್ಟ್ ಫಾಲೋವರ್ಸ್ ಅವರನ್ನು ಟ್ರೋಲ್ ಮಾಡುವುದಕ್ಕೆ ಎಳೆದು ತರುತ್ತಿದ್ದಾರೆ. ಜವಾಬ್ದಾರಿ ಹಾಗೂ ಗೌರವ ಇಲ್ಲದವರು. ಇವರು ಇದ್ದ ಸಮಯದಲ್ಲಿ ಅವರಿನ್ನೂ ಹುಟ್ಟಿರಲಿಲ್ಲ ಅಥವಾ ಇನ್ನೂ ಮಕ್ಕಳಾಗಿದ್ದರು" ಎಂದು ಒಬ್ಬರು ಬರೆದುಕೊಂಡಿದ್ದಾರೆ.

"ಇಂತಹ ಆಟಗಳೇ ಆಡ್ಕೊಂಡು ಬಂದಾಯ್ತು"

"ಕಾಲ‌ ಕಾಲಾದಿಂದನು ಇಂತಹ ಆಟಗಳೇ ಆಡ್ಕೊಂಡು ಬಂದಾಯ್ತು. ಇದ್ರಿಂದ ಸಿಂಪತಿ ಬೆಳಿತೇ ಹೊರತು. ನೀವುಗಳಂತೂ ಬೆಳೆಯಲಿಲ್ಲ. ಇಲ್ಲ ಸಾರಿ, ಹೀಗಂತ ಹೇಳಿಕೊಂಡೆ ಬೆಳೆದು ಬಿಟ್ರಿ. ಅಪ್ಪನ ಹತ್ರ ಹೋಗೋದಿರ್ಲಿ. ಮಗನ್ ಹತ್ರ ಹೋಗೊಕು ಆಗಲ್ಲ. ನೆನಪಿಟ್ಕೋಳಿ" ಎಂದು ಶಿವಣ್ಣ ಅಭಿಮಾನಿಯೊಬ್ಬರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

"ವಿಷ್ಣುದಾದ ಕ್ರೇಜ್"

"ಶಿವಣ್ಣನ ಬಗ್ಗೆ ದ್ವೇಷವಿಲ್ಲ. ಆದರೆ, ವಿಷ್ಣುದಾದಗೆ ಅವರದ್ದೇ ಆದ ಪರಂಪರೆಯಿದೆ. ದಾದಾ ಕ್ರೇಜ್, ಫ್ಯಾನ್ ಬೇಸ್ ಮತ್ತು ಸ್ಟಾರ್‌ಢಮ್ ಅದು ಬೇರೆನೇ. ಶಿವಣ್ಣ ಅದರ ಹತ್ತಿರನೂ ಬರುವುದಕ್ಕೂ ಸಾಧ್ಯವಿಲ್ಲ. ವಿಷ್ಣುದಾದ ಕನ್ನಡ ಚಿತ್ರರಂಗದ ಅತ್ಯಂತ ಅಂಡರ್‌ ರೇಟೆಡ್ ದಂತಕಥೆ. ಈ ನಟ ಎಂತಹದ್ದೇ ಪಾತ್ರಗಳನ್ನು ಆರಾಮಾಗಿ ತರಬಹುದು" ಎಂದು ಹೇಳಿಕೊಂಡಿದ್ದಾರೆ.

"ರಜಿನಿಯನ್ನೇ ಹಿಂದಿಕ್ಕಿದರು"

"ಶಿವಣ್ಣ ಹಾಗೂ ವಿಷ್ಣು ಇಬ್ಬರೂ ರಜಿನಿ ಸಿನಿಮಾದಲ್ಲಿ ನಟಿಸಿದ್ದಾರೆ. ಒಂದೇ ಒಂದು ನಡಿಗೆಯಲ್ಲಿ ಶಿವಣ್ಣ ಸೂಪರ್‌ಸ್ಟಾರ್ ರಜಿನಿಕಾಂತ್‌ರನ್ನೇ ಹಿಂದಿಕ್ಕಿದ್ದರು. ಎಲ್ಲರೂ ಆರಾಮಾಗಿ ಬಂದು ಇಲ್ಲೇನು ಮಾಡುವುದಕ್ಕೆ ಆಗುವುದಿಲ್ಲ." ಎಂದು ಶಿವಣ್ಣ ಅಭಿಮಾನಿಗಳು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
Shivarajkumar and Vishnuvardhan Twitter War
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X