For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ 2 ನೋಡಿದ ಶೇ.20ರಷ್ಟು ಜನ ಬಂದ್ರೂ ಲವ್ 360 ಗೆಲ್ಲುತ್ತೆ'- ಶಶಾಂಕ್!

  |

  2022 ಕನ್ನಡ ಚಿತ್ರರಂಗಕ್ಕೆ ಸುವರ್ಣ ಕಾಲ. ಈ ಮಾತನ್ನು ಇಡೀ ದೇಶವೇ ಒಪ್ಪಿಕೊಂಡಿದೆ. ಒಂದರ ಹಿಂದೊಂದು ಸಿನಿಮಾಗಳು ಗೆದ್ದಿವೆ. ಅದೂ ಕರ್ನಾಟಕದಲ್ಲಿ ಅಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಧೂಳೆಬ್ಬಿಸಿದೆ. ಈ ಕಾರಣಕ್ಕೆ ಕನ್ನಡ ಸಿನಿಮಾಗಳ ಕ್ರೇಜ್ ಹೆಚ್ಚಾಗುತ್ತಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ.

  'ಕೆಜಿಎಫ್ 2', '777 ಚಾರ್ಲಿ', 'ಜೇಮ್ಸ್', 'ವಿಕ್ರಾಂತ್ ರೋಣ', ಅಂತಹ ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಅಬ್ಬರಿಸಿವೆ. ಅದೇ ಇನ್ನೊಂದು ಕಡೆ 'ಲವ್‌ ಮಾಕ್ಟೇಲ್ 2' ಹಾಗೂ 'ಗಾಳಿಪಟ 2' ಅಂತಹ ಸೀಕ್ವೆಲ್ ಸಿನಿಮಾಗಳು ಗೆದ್ದಿವೆ. ಇದು ಮೇಲ್ನೋಟಕ್ಕೆ ಪಾಸಿಟಿವ್ ಅಂತ ಅನಿಸಿದೆ. ಆದರೆ, ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರು ಕ್ಯಾರೇ ಅನ್ನುತ್ತಿಲ್ಲ ಅನ್ನೋದು ಮಾತು ಕೇಳಿ ಬರ್ತಿದೆ. ಇದು ಆತಂಕನೋ.. ಇಲ್ಲ ವಾಸ್ತವನೋ? ಅನ್ನೋ ಪ್ರಶ್ನೆ ಅಂತೂ ಎದುರಾಗಿದೆ.

  'ಲವ್ 360' ಚಿತ್ರ ನೋಡಿ ಎಂದು ಕೈಮುಗಿದು ಕೇಳಿಕೊಂಡ ನಿರ್ದೇಶಕ ಶಶಾಂಕ್!'ಲವ್ 360' ಚಿತ್ರ ನೋಡಿ ಎಂದು ಕೈಮುಗಿದು ಕೇಳಿಕೊಂಡ ನಿರ್ದೇಶಕ ಶಶಾಂಕ್!

  ಇಂತಹದ್ದೊಂದು ಪ್ರಶ್ನೆ ಉದ್ಬವಿಸೋಕೆ ಕಾರಣ 'ಲವ್ 360' ಅನ್ನೋ ಹೊಸಬರ ಸಿನಿಮಾ. ನಾಲ್ಕು ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ ಈ ಚಿತ್ರಕ್ಕೆ ಸಿನಿಮಾ ಪಂಡಿತರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಒಳ್ಳೆ ಸಿನಿಮಾ ಅಂತ ಸಾಬೀತಾಗಿದ್ದರೂ, ಯಾಕೆ ಜನರು ಸಿನಿಮಾ ನೋಡುತ್ತಿಲ್ಲ? ಜನರಿಗೆ ಮಾಸ್ ಸಿನಿಮಾಗಳೇ ಬೇಕೆ? ಸೂಪರ್‌ಸ್ಟಾರ್‌ಗಳನ್ನು ಮಾತ್ರ ನೋಡ್ತಾರಾ? ಹೀಗೆ ಮುಂದುವರೆದರೆ ಮುಂದೇನು ಗತಿ? ಅನ್ನೋ ಆತಂಕ ಸಿನಿಮಾ ಮಂದಿಯಲ್ಲಿ ಉದ್ಬವ ಆಗಿರೋದಂತೂ ಪಕ್ಕಾ.

   ಹೊಸಬರ ಸಿನಿಮಾ ನೋಡ್ತಿಲ್ವಾ?

  ಹೊಸಬರ ಸಿನಿಮಾ ನೋಡ್ತಿಲ್ವಾ?

  ಪ್ರೇಕ್ಷಕರು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾತ್ರ ನೋಡ್ತಿದ್ದಾರಾ? ಸ್ಟಾರ್ ಸಿನಿಮಾಗಳನ್ನು ನೋಡೋಕಷ್ಟೇ ಇಷ್ಟ ಪಡ್ತಿದ್ದಾರಾ? ಇಂತಹದ್ದೊಂದು ಚರ್ಚೆ ಸ್ಯಾಂಡಲ್‌ವುಡ್‌ನಲ್ಲೀಗ ಆರಂಭವಾಗಿದೆ. ಜನರು ಹೊಸಬರ ಸಿನಿಮಾ ನೋಡಲು ಥಿಯೇಟರ್‌ಗೆ ಬರುತ್ತಿಲ್ಲ ಅನ್ನೋ ಆತಂಕ ಸಿನಿಮಾ ಮಂದಿಯಲ್ಲಿ ಶುರುವಾಗಿದೆ. ಇನ್ಮುಂದೆ ಪ್ಯಾನ್ ಇಂಡಿಯಾ ಸಿನಿಮಾನೇ ಮಾಡ್ಬೇಕಾ? ಸ್ಟಾರ್‌ಗಳಿಗೆ ಮಾತ್ರ ಸಿನಿಮಾ ಮಾಡಿದ್ರೆ ಜನ ನೋಡ್ತಾರಾ? ಅನ್ನೋ ಗೊಂದಲಕ್ಕೆ ಬಿದ್ದಿದ್ದಾರೆ. ನಿನ್ನೆ (ಆಗಸ್ಟ್ 21) ರಂದು 'ಲವ್‌ 360' ನಿರ್ದೇಶಕ ಶಶಾಂಕ್ ವಿಡಿಯೋ ಮಾಡಿದ ಬಳಿಕ ಈ ಪ್ರಶ್ನೆ ಉದ್ಭವ ಆಗಿದೆ. "ಜನರು ಹೊಸಬರ ಸಿನಿಮಾ ನೋಡೋಕೆ ಥಿಯೇಟರ್‌ಗೆ ಬರ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದರು. ಇದೇ ವಿಡಿಯೋ ಚರ್ಚೆಯನ್ನು ಹುಟ್ಟಾಕಿತ್ತು. ಅಸಲಿಗೆ ಇದಕ್ಕೆ ಕಾರಣವೇನು ಅನ್ನೋದು ಶಶಾಂಕ್‌ಗೆ ಗೊತ್ತಿಲ್ಲ.

   ಗೊತ್ತಿದ್ದೂ ತೆಗೆದುಕೊಂಡ ರಿಸ್ಕ್

  ಗೊತ್ತಿದ್ದೂ ತೆಗೆದುಕೊಂಡ ರಿಸ್ಕ್

  ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷ ಆದ ಬೆಳವಣಿಗೆ ನೋಡ್ತಿದ್ರೆ, ಇನ್ಮುಂದೆ ಹೊಸಬರ ಸಿನಿಮಾಗಳು ಥಿಯೇಟರ್‌ಗೆ ಜನರನ್ನು ಕರೆತರೋಕೆ ಪರದಾಡಬೇಕಾಗುತ್ತೆ. ಈ ಮಧ್ಯೆ ಕೇವಲ ಓಟಿಟಿಗಷ್ಟೇ ಸೀಮಿತಾ ಆಗುತ್ತಾ? ಅನ್ನೋ ಆತಂಕ ಕೂಡ ಇದೆ. ಈ ವೇಳೆ 'ಲವ್ 360' ಸಿನಿಮಾ ನೋಡೋಕೆ ಯಾಕೆ ಬರ್ತಿಲ್ಲ ಅನ್ನೋ ಬಗ್ಗೆ ಶಶಾಂಕ್ ಹೀಗಂತಾರೆ. "ಜನರು ಸಿನಿಮಾ ನೋಡುವುದಕ್ಕೆ ಯಾಕೆ ಬರ್ತಿಲ್ಲ ಅನ್ನೋದು ನನಗೂ ಗೊತ್ತಿಲ್ಲ. ಆದರೆ, ಹೊಸಬರ ಸಿನಿಮಾ ಕ್ಲಿಕ್ ಆಗುವುದಕ್ಕೆ ಸಮಯ ಹಿಡಿಯುತ್ತೆ ಅನ್ನೋದು ಮೊದಲೇ ಗೊತ್ತಿತ್ತು. ಇದೊಂತರ ಕ್ಯಾಲ್ಕುಲೇಟಿವ್ ರಿಸ್ಕ್. ಇಂತಹದ್ದೊಂದು ರಿಸ್ಕ್ ಇರುತ್ತೆ ಅನ್ನೋದು ಗಮನದಲ್ಲಿಟ್ಟುಕೊಂಡೇ ಸಿನಿಮಾ ಮಾಡಿದ್ವಿ. ಮೊದಲನೇ ದಿನ ಜನ ಬರಲ್ಲ. ಎರಡನೇ ದಿನದಿಂದ ಪಿಕಪ್ ಆಗುತ್ತೆ ಅಂದ್ಕೊಂಡಿದ್ವಿ. ನಮ್ಮ ನಿರೀಕ್ಷೆ ಸುಳ್ಳಾಯಿತು." ಎಂದು ಫಿಲ್ಮಿ ಬೀಟ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

   ಶೇ.20ರಷ್ಟು ಜನ ಬಂದ್ರೂ ಸಾಕು!

  ಶೇ.20ರಷ್ಟು ಜನ ಬಂದ್ರೂ ಸಾಕು!

  " ಗಾಳಿಪಟ 2 ಸಿನಿಮಾ ರಿಲೀಸ್ ಆದಾಗಲೇ ಸಿನಿಮಾ ರಿಲೀಸ್ ಮಾಡಿದ್ದೀರಾ? ಅದಕ್ಕೆ ಜನರು ಬರ್ತಿಲ್ಲಾ ಅಂತಿದ್ದಾರೆ. ನಾನು ಈ ಮಾತನ್ನು ಒಪ್ಪುವುದಿಲ್ಲ. ಒಂದು ವಾರ ಗ್ಯಾಪ್ ಕೊಟ್ಟು ಸಿನಿಮಾ ರಿಲೀಸ್ ಮಾಡಿದ್ದೇವೆ. ಗಾಳಿಪಟ 2 ನೋಡಿದವರಲ್ಲಿ 20 ಪರ್ಸೆಂಟ್ ಮಂದಿ ಸಿನಿಮಾ ನೋಡಿದರೂ, ನಾವು ಗೆಲ್ಲುತ್ತೇವೆ. ರೆಗ್ಯೂಲರ್ ಸಿನಿಮಾ ನೋಡುವವರು ಬಂದು ನೋಡಿದ್ರೂ ಸಾಕು. ಆದರೆ, ಅದೂ ಆಗುತ್ತಿಲ್ಲ. ಒಳ್ಳೆ ಸಿನಿಮಾ ಅಂತ ಸರ್ಟಿಫಿಕೇಟ್ ಸಿಕ್ಕರೂ ನೋಡುತ್ತಿಲ್ಲ. ಹೀಗಾಗಿ ಯಾಕೆ ಹೀಗಾಯ್ತು ಅನ್ನೋ ಗೊಂದಲವಂತೂ ಇದೆ." ಎನ್ನುತ್ತಾರೆ ಶಶಾಂಕ್.

   ಮುಂದೇನು ಕಥೆ?

  ಮುಂದೇನು ಕಥೆ?

  ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿದೆ. ಆದರೆ, ವರ್ಷಕ್ಕೆ ಕೇವಲ ಸೂಪರ್‌ಸ್ಟಾರ್‌ಗಳಿಗೆ ಅಂತ ಎಷ್ಟು ಸಿನಿಮಾ ಮಾಡಬಹುದು? ಕೆಲವೇ ಕೆಲವು ಸ್ಟಾರ್ ನಟರು ವರ್ಷಕ್ಕೆ ಸಿನಿಮಾ ಮಾಡಿದ್ರೂ, ಸಿನಿಮಾಗಳ ಸಂಖ್ಯೆ ಇಪ್ಪತ್ತೂ ದಾಟಲ್ಲ. ಹೀಗಾಗಿ ಹೊಸಬರು ನಟಿಸಿದ ಒಳ್ಳೆ ಸಿನಿಮಾ ರಿಲೀಸ್ ಆದರೆ, ಅದಕ್ಕೆ ಪ್ರೋತ್ಸಾಹ ಸಿಗಲೇಬೇಕು. ಇಡಿ ಚಿತ್ರರಂಗ ಹಾಗೂ ಪ್ರೇಕ್ಷಕರು ಜೊತೆ ನಿಲ್ಲಲೇ ಬೇಕು. ಇಲ್ಲದೆ ಹೋದರೆ, ಹೊಸಬರು ಚಿತ್ರರಂಗಕ್ಕೆ ಬರಲ್ಲ. ಹೊಸಬರ ಸಿನಿಮಾಗಳು ಸೆಟ್ಟೇರಲ್ಲ.

  Recommended Video

  Biggboss OTT | ಸೇಫ್ ಗೇಮ್ ಆಡುವರ ಪೈಕಿ ಚೈತ್ರಾ ಉದಯ್ ಕೂಡ ಇದ್ದಾರೆ | Filmibeat Kannada
  English summary
  Why Audience Not Watching Love 360 Instead Of Good Reviews, Know More.
  Monday, August 22, 2022, 17:35
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X