'ಶ್ರೀಮನ್ನಾರಾಯಣ' ಹಿಟ್ ಆಗಲೇಬೇಕು: ಸಕ್ಸಸ್ ಆದ್ರೆ ಏನೆಲ್ಲಾ ಆಗಬಹುದು?

ರಕ್ಷಿತ್ ಶೆಟ್ಟಿ ನಟಿಸಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಇದೇ ಶುಕ್ರವಾರ (ಡಿಸೆಂಬರ್ 27) ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ನಾರಾಯಣನ ಎಂಟ್ರಿ ಆಗುತ್ತಿದೆ.

ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಬಳಿಕ ಕನ್ನಡದ ಮತ್ತೊಂದು ಮೆಗಾಸಿನಿಮಾ ಹೊರರಾಜ್ಯಗಳಲ್ಲೂ ಅಬ್ಬರಿಸಲು ಸಜ್ಜಾಗಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ರಕ್ಷಿತ್ ಶೆಟ್ಟಿ ಪಾಲಿಗೆ ಎಷ್ಟು ಪ್ರಮುಖವಾಗಿದ್ಯೋ ಕನ್ನಡ ಇಂಡಸ್ಟ್ರಿಗೂ ಅಷ್ಟೇ ಮುಖ್ಯವಾಗಿದೆ.

ಈ ಸಿನಿಮಾ ಹಿಟ್ ಆಗಲೇಬೇಕು ಎನ್ನುತ್ತಿದೆ ಸ್ಯಾಂಡಲ್ವುಡ್. ಏಕೆ ಈ ಸಕ್ಸಸ್ ಬೇಕು ಎಂದು ನೋಡುವುದಾದರೇ ಪ್ರಮುಖವಾಗಿ ಐದು ಅಂಶಗಳು ಕಣ್ಣಮುಂದೆ ಬರ್ತಿದೆ. ಏನದು? ಮುಂದೆ ಓದಿ....

ಮೂರು ವರ್ಷದ ನಂತರ

ಮೂರು ವರ್ಷದ ನಂತರ

2016ರ ಡಿಸೆಂಬರ್ ನಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಬಂದಿತ್ತು. ಆ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿಯ ಯಾವ ಚಿತ್ರವೂ ಬಂದಿಲ್ಲ. ಸುಮಾರು 3 ವರ್ಷದ ಬಳಿಕ ರಕ್ಷಿತ್ ತೆರೆಮೇಲೆ ಬರ್ತಿದ್ದಾರೆ. ದೊಡ್ಡ ಗ್ಯಾಪ್ ಬಳಿಕ ಬರುತ್ತಿರುವುದರಿಂದ ಸಕ್ಸಸ್ ಬೇಕೇ ಬೇಕು. ಟೈಂ ತಗೊಂಡ್ರು ಒಳ್ಳೆಯ ಸಿನಿಮಾ ಕೊಡ್ತಾರೆ ಎಂಬ ನಂಬಿಕೆ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ.

ಪ್ರತಿಷ್ಠೆಯ ಸಿನಿಮಾ

ಪ್ರತಿಷ್ಠೆಯ ಸಿನಿಮಾ

ಈ ಮೂರು ವರ್ಷದ ಅಂತರದಲ್ಲಿ ಹಲವು ಹೊಸ ಪ್ರತಿಭೆಗಳು ಗೆಲುವಿನ ಸಿಹಿ ಕಂಡಿದ್ದಾರೆ. ಕಿರಿಕ್ ಪಾರ್ಟಿಯಲ್ಲಿ ಒಟ್ಟಿಗೆ ನಟಿಸಿದ್ದ ಕಲಾವಿದರು, ಇಂದು ಸ್ಟಾರ್ ಗಳಾಗಿ ಮಿಂಚುತ್ತಿದ್ದಾರೆ. ಹಾಗಾಗಿ, ರಕ್ಷಿತ್ ಶೆಟ್ಟಿಗೆ ಇದು ಪ್ರತಿಷ್ಠೆ ಆಗಿದೆ. ಈ ಸಿನಿಮಾವನ್ನು ಗೆಲ್ಲಿಸಿ ಇಂಡಸ್ಟ್ರಿಯಲ್ಲಿ ನಿಲ್ಲಿಸಬೇಕಿದೆ.

ಇಂಡಸ್ಟ್ರಿಗೆ ಮತ್ತೊಂದು ಗರಿ

ಇಂಡಸ್ಟ್ರಿಗೆ ಮತ್ತೊಂದು ಗರಿ

ಕೆಜಿಎಫ್, ಕುರುಕ್ಷೇತ್ರ, ಪೈಲ್ವಾನ್ ಸಿನಿಮಾಗಳು ಪರಭಾಷಿಗರು ನಮ್ಮ ಇಂಡಸ್ಟ್ರಿ ಕಡೆ ನೋಡುವಂತೆ ಮಾಡಿದೆ. ಹಾಗಾಗಿ, ಅವನೇ ಶ್ರೀಮನ್ನಾರಾಯಣ ಸಿನಿಮಾದ ಮೇಲೂ ನಿರೀಕ್ಷೆ ಹೆಚ್ಚಿದೆ. ಪಂಚಭಾಷೆಯಲ್ಲೂ ಸಿನಿಮಾ ಗೆಲ್ಲುವ ಭರವಸೆಯಲ್ಲಿದೆ. ಈ ಮೂಲಕ ಬೇರೆ ಭಾಷೆಯರ ಗಮನ ಕನ್ನಡದ ಕಡೆ ಸೆಳೆಯಬಹುದು. ಕನ್ನಡ ಇಂಡಸ್ಟ್ರಿಯಲ್ಲಿ ಕ್ವಾಲಿಟಿ ಸಿನಿಮಾಗಳು ಬರ್ತಿದೆ ಎಂಬ ಟಾಕ್ ಮುಂದುವರಿಯುತ್ತೆ. ಸ್ಯಾಂಡಲ್ವುಡ್ ಇಂಡಸ್ಟ್ರಿಯ ಹಿರಿಮೆ ಹೆಚ್ಚಾಗಬಹುದು.

ನ್ಯಾಷನಲ್ ಸ್ಟಾರ್ ಆಗುವ ಅವಕಾಶ

ನ್ಯಾಷನಲ್ ಸ್ಟಾರ್ ಆಗುವ ಅವಕಾಶ

ರಕ್ಷಿತ್ ಶೆಟ್ಟಿಗೆ ಇದು ಒಳ್ಳೆಯ ಅವಕಾಶ. ಕನ್ನಡದಲ್ಲಿ ಸಕ್ಸಸ್ ಕಂಡಿರುವ ನಟ ಈಗ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಬಹುದು. ಯಶ್, ದರ್ಶನ್, ಸುದೀಪ್ ಅವರಂತೆ ರಕ್ಷಿತ್ ಶೆಟ್ಟಿ ಕೂಡ ರಾಷ್ಟ್ರ ಮಟ್ಟದಲ್ಲಿ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳಬಹುದು. ಇದು ವೈಯಕ್ತಿಕವಾಗಿ ಮತ್ತು ಇಂಡಸ್ಟ್ರಿ ಪರವಾಗಿಯೂ ಸಹಕಾರಿಯಾಗಲಿದೆ. ಒಂದೇ ಸಿನಿಮಾದ ಮೂಲಕ ಇಷ್ಟು ದೊಡ್ಡ ಖ್ಯಾತಿ ಪಡೆದುಕೊಳ್ಳುವ ಸುವರ್ಣಾವಕಾಶ.

ರಕ್ಷಿತ್ ಶೆಟ್ಟಿಗೆ ಆಫರ್

ರಕ್ಷಿತ್ ಶೆಟ್ಟಿಗೆ ಆಫರ್

ಅವನೇ ಶ್ರೀಮನ್ನಾರಾಯಣ ಸಿನಿಮಾ ಸಕ್ಸಸ್ ಬಳಿಕ ರಕ್ಷಿತ್ ಶೆಟ್ಟಿಗೆ ಬೇರೆ ಭಾಷೆಯಿಂದ ಆಫರ್ ಹೆಚ್ಚಾಗಬಹುದು. ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸುವಂತೆ ಬೇಡಿಕೆ ಬರಬಹುದು. ಅಥವಾ ಕನ್ನಡ ಸಿನಿಮಾಗಳನ್ನು ಎಲ್ಲಾ ಭಾಷೆಯಲ್ಲಿ ಬಿಡುಗಡೆ ಎಂದು ಒತ್ತಾಯ ಬರಬಹುದು. ಹೇಗೆ ನೋಡಿದ್ರು ಈ ಸಿನಿಮಾ ರಕ್ಷಿತ್ ಶೆಟ್ಟಿ ಬಹಳ ಮುಖ್ಯವಾಗಿದೆ.

More from Filmibeat

English summary
Why Avane Srimannarayana very important for Rakshit Shetty?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X