For Quick Alerts
  ALLOW NOTIFICATIONS  
  For Daily Alerts

  ಅತ್ಯಂತ ಭಾವುಕ ಜೀವಿ ನಟ ದರ್ಶನ್: ಸಾಹಿತಿ ಕೆ.ಕಲ್ಯಾಣ್!

  |

  ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪುನೀತ್ ನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಸಿನಿಮಾ ರಂಗದ ಗಣ್ಯರು ಭಾಗಿಯಾಗಿದ್ದರು. ನಟ ದರ್ಶನ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

  ಆದರೆ ದರ್ಶನ್ ಕಾರ್ಯಕ್ರಮಕ್ಕೆ ಆಗಮಿಸುವಾಗ ಪೊಲೀಸರು ಅವರನ್ನು ಪ್ರಶ್ನಿಸಿದದ್ದರು. ಪಾಸ್ ವಿಚಾರವಾಗಿ ದರ್ಶನ್ ಪೊಲೀಸರ ಜೊತೆಗೆ ಮಾತನಾಡಿದ ವಿಡಿಯೋ ಮತ್ತು ಸುದ್ದಿ ವೈರಲ್ ಆಗಿದೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ವೇದಿಕೆ ಮೇಲೆ ಆಡಿದ ಮಾತುಗಳು ಹೆಚ್ಚು ಗಮನ ಸೆಳೆದಿದೆ.

  ಪುನೀತ್ ರಾಜಕುಮಾರ್ ಬಗ್ಗೆ ನಟ ದರ್ಶನ್ ಮಾತನಾಡುವುದಕ್ಕೆ ಮೊದಲು ಜೀವನದ ಕುರಿತಾದ ಒಂದು ಹಾಡನ್ನು ಹಾಡಿದ್ದಾರೆ. ಕಾಣದ ಕೈಯಲ್ಲಿ ಬೊಂಬೆಯು ನೀನು ಎನ್ನುವ ಹಾಡನ್ನು ಹಾಡುವುದರ ಮೂಲಕ ನಟ ದರ್ಶನ್ ವೇದಿಕೆ ಮೇಲೆ ಮಾತು ಆರಂಭಿಸಿದರು.

  ಕಾಣದ ಕೈಯಲ್ಲಿ ಬೊಂಬೆಯು ನೀನು ಎಂದ್ದೇಕೆ ನಟ ದರ್ಶನ್!

  ಕಾಣದ ಕೈಯಲ್ಲಿ ಬೊಂಬೆಯು ನೀನು ಎಂದ್ದೇಕೆ ನಟ ದರ್ಶನ್!

  ಕಾಣದ ಕೈಯಲ್ಲಿ ಬೊಂಬೆಯು ನೀನು. ಎನ್ನುವ ಈ ಹಾಡಿನ ನಾಲ್ಕು ಸಾಲುಗಳನ್ನು ಹಾಡಿದ ಬಳಿಕ ನಟ ದರ್ಶನ್ ಪುನೀತ್ ಅವರ ಕುರಿತಾಗಿ ಮಾತನಾಡಿದರು. ಆದರೆ ದರ್ಶನ್ ಇದೇ ಹಾಡಿನ್ನು ಯಾಕೆ ಹಾಡಿದರು ಅಂತ ನೋಡಿದರೆ, ಪ್ರಸ್ತುತ ಸಂದರ್ಭಕ್ಕೆ ಈ ಹಾಡು ಅತಿ ಸೂಕ್ತ ಎನಿಸುತ್ತದೆ. ಮನುಷ್ಯ ಅಂದುಕೊಳ್ಳುವುದೇ ಒಂದು ಆದರೆ ನಡೆಯುವುದೇ ಮತ್ತೊಂದು ಎನ್ನುವ ಅರ್ಥ ಈ ಹಾಡಿನಲ್ಲಿ ಅಡಗಿದೆ.

  ಈ ಹಾಡು ನಟ ದರ್ಶನ್ ಅವರೇ ಅಭಿನಯಿಸಿರುವ ಸರದಾರ ಸಿನಿಮಾದ ಹಾಡು. ಸಿನಿಮಾದಲ್ಲಿ ಕೂಡ ನಟ ದರ್ಶನ್ ಅವರು ಅಂದುಕೊಳ್ಳದೇ ಇರುವುದು ನಡೆದು ಹೋದ ಸಂದರ್ಭದಲ್ಲಿ ಮೂಡಿ ಬರುವ ಹಾಡಿದು.

  ಹಾಡಿನ ಬಗ್ಗೆ ಸಾಹಿತಿ ಕೆ ಕಲ್ಯಾಣ್ ಹೇಳುವುದೇನು?

  ಹಾಡಿನ ಬಗ್ಗೆ ಸಾಹಿತಿ ಕೆ ಕಲ್ಯಾಣ್ ಹೇಳುವುದೇನು?

  ಈ ಹಾಡಿಗೆ ಸಾಹಿತಿ ಕೆ ಕಲ್ಯಾಣ್ ಸಾಹಿತ್ಯವನ್ನು ಬರೆದಿದ್ದಾರೆ. ಈ ಸಾಹಿತ್ಯದ ಕುರಿತು ಮಾತನಾಡಿರುವ ಕೆ ಕಲ್ಯಾಣ್‌ ಅವರು "ಇದು ಬದುಕಿನ ಕುರಿತಾದ ಹಾಡು" ಎಂದಿದ್ದಾರೆ. ಅಂದರೆ ನಾಳೆಯ ಬಗ್ಗೆ ಇರುವ ನಮ್ಮ ಲೆಕ್ಕಾಚಾರವೇ ಬೇರೆ ಆದರೆ ನಡೆಯುವುದೇ ಬೇರೆ ಏನು ಎನ್ನುವ ಅರ್ಥ ಈ ಹಾಡಿನಲ್ಲಿ ಅಡಗಿದೆ. ಈ ಹಾಡನ್ನು ಪ್ರಮುಖವಾಗಿ ಸರದಾರ ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಬರೆಯಲಾಗಿದೆ.

  ಆದರೆ ಸಹಜವಾಗಿ ಈ ಹಾಡು ಬದುಕಿನ ಹತ್ತು ಹಲವು ಸನ್ನಿವೇಶಗಳಿಗೆ ಸೂಕ್ತವಾಗಿದೆ. ಇನ್ನು ಇದೇ ಹಾಡನ್ನು ಪುನೀತ್ ರವರು ಇಲ್ಲ ಎನ್ನುವುದನ್ನು ನೆನಪಿಸಿ ಕೊಂಡು ಹಾಡುವ ಹಾಗಾಗಿದೆ ಎನ್ನುವುದು ದುಖಃದ ವಿಚಾರ ಎಂದಿದ್ದಾರೆ ಕೆ ಕಲ್ಯಾಣ್.

  ನಟ ದರ್ಶನ್ ಅವರು ಅತಿಯಾಗಿ ಮೆಚ್ಚದ್ದ್ ಹಾಡು ಇದು!

  ನಟ ದರ್ಶನ್ ಅವರು ಅತಿಯಾಗಿ ಮೆಚ್ಚದ್ದ್ ಹಾಡು ಇದು!

  ಇನ್ನು ಈ ಹಾಡಿಗೆ ಮೊದಲು ಬರೆದಂತಹ ಸಾಲುಗಳು ಬೇರೆ ಎನ್ನುವುದನ್ನು ಕೆ. ಕಲ್ಯಾಣ್ ಹೇಳಿಕೊಂಡಿದ್ದಾರೆ. " ವಿಧಿಯ ಆಟಕೆ ಕೊನೆ ಎಲ್ಲಿದೆ.. ಬಿರುಗಾಳಿಗೆ ಮನೆ ಎಲ್ಲಿದೆ. ಎನ್ನುವ ಸಾಲುಗಳನ್ನ ಮೊದಲು ಬರೆದಿದ್ದೆ. ನಂತರ ಕಾಣದ ಕೈಯಲ್ಲಿ ಬೊಂಬೆಯು ನೀನು ಎನ್ನುವಂತಹ ಸಾಲುಗಳನ್ನು ಜೋಡಿಸಿದ್ದೇನೆ. ಚಿತ್ರಕ್ಕಾಗಿ ಈ ಹಾಡು ಬರೆದ ಸಂದರ್ಭದಲ್ಲಿ ನಟ ದರ್ಶನ್ ಅವರು ನನ್ನ ಜೊತೆಗ ಮಾತನಾಡಿದ್ದರು. ನಟ ದರ್ಶನ್‌ ಭಾವುಕ ಜೀವಿ. ಹಾಗಾಘಿ ಅವರ ಮನಸ್ಸಿಗೆ ಈ ಹಾಡು ಮುಟ್ಟಿತ್ತು. ಹಾಡಿನ ಬಗ್ಗೆ ಅವರು ನನ್ನ ಜೊತೆ ಮಾತು ಆಡಿದ್ದರು. ಅವರಿಗೆ ಈ ಹಾಡು ಅಂದೇ ಇಷ್ಟವಾಗಿತ್ತು". ಎನ್ನುತ್ತಾರೆ ಕಲ್ಯಾಣ್.

  ಮಡುಗಟ್ಟಿರುವ ಭಾವನೆಗಳನ್ನು ಕೆರಳಿಸಿದ ಹಾಡು!

  ಸಾಹಿತ್ಯ ಅಂತ ಬಂದಾಗ ಕೆ ಕಲ್ಯಾಣ್ ಅವರು ಮಾಸ್ಟರ್‌ ಅಂತಲೇ ಹೇಳ ಬಹುದು. ಸನ್ನಿವೇಶಕ್ಕೆ ತಕ್ಕಂತಹ ಸಾಹಿತ್ಯವನ್ನು ಬರೆಯುವುದರಲ್ಲಿ ಕೆ.ಕಲ್ಯಾಣ್ ನಿಸ್ಸೀಮರು. ಅವರು ಬರೆದಿರುವ ಎಷ್ಟೋ ಹಾಡಿನ ಸಾಹಿತ್ಯ ಚಿತ್ರದ ಸನ್ನಿವೇಶಗಳಿಗೆ ಮಾತ್ರವಲ್ಲ, ಸಾಮಾನ್ಯರ ಬದುಕಿಗೆ ಒಗ್ಗಿ ಬಿಟ್ಟಿವೆ. ಅದರಲ್ಲೂ ಇಂತಹ ಹಾಡುಗಳು ಮಡುಗಟ್ಟಿರುವ ಭಾವನೆಗಳನ್ನು ಕೆರಳಿಸಿ ಬಿಡುತ್ತವೆ.

  ಈ ಹಾಡು ಕೂಡ ಪುನೀತ್ ರಾಜಕುಮಾರ್ ಅವರ ಬಗ್ಗೆ ಎಲ್ಲರ ಮನಸಲ್ಲಿ ಮಡುಗಟ್ಟಿದ ದುಖಃವನ್ನು ಹೊರ ತಂದಿದೆ. ಹಾಗಾಗಿ ನಟ ದರ್ಶನ್ ಕೂಡ ಅದೇ ದುಖಃದಲ್ಲಿ ಈ ಹಾಡನ್ನು ವೇದಿಕೆ ಮೇಲೆ ಹಾಡಿದ್ದಾರೆ.

  ಅಪ್ಪು ಅವರನ್ನು ನೆನೆದು ಯಾವುದು ನಮ್ಮ ಕೈಯಲ್ಲಿ ಇರುವುದಿಲ್ಲ, ಎಲ್ಲವನ್ನು ಕಾಲವೇ ನಿರ್ಧರಿಸುತ್ತದೆ ಎಂದಿದ್ದಾರೆ ನಟ ದರ್ಶನ್.

  English summary
  Know More About The Song Which Challenging Star Darshan Was Sing At Puneeth Namana Programme

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X