'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?
Recommended Video
ಕಳೆದ ಶನಿವಾರ ಕನ್ನಡದ ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಸುದ್ದಿಗೋಷ್ಠಿ ಇತ್ತು. ತುಂಬಾ ಕುತೂಹಲಗಳ ನಂತರ ನಿರ್ಮಾಪಕ ಮುನಿರತ್ನ ಪ್ರೆಸ್ ಮೀಟ್ ಕರೆದಿದ್ದರು. ಮಂಡ್ಯ ಚುನಾವಣೆ ನಡೆದ ಬಳಿಕ ಈ ಪ್ರೆಸ್ ಮೀಟ್ ಇದ್ದಿದ್ದು ಸಹಜವಾಗಿ ಕುತೂಹಲ ಹುಟ್ಟುಹಾಕಿತ್ತು.
ಯಾಕಂದ್ರೆ, ಮಂಡ್ಯ ಅಖಾಡದಲ್ಲಿ ಎದುರಾಳಿಗಳಾಗಿ ತೊಡೆತಟ್ಟಿದ್ದ ದರ್ಶನ್ದ ಮತ್ತು ನಿಖಿಲ್ ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ, ಈ ಸುದ್ದಿಗೋಷ್ಠಿಗೆ ಇಬ್ಬರು ಬರ್ತಾರೆ, ಒಟ್ಟಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು.
ಕುರುಕ್ಷೇತ್ರ ಬಿಡುಗಡೆ ದಿನಾಂಕ ಹೇಳ್ತಾರೆ ಅನ್ನೋದಕ್ಕಿಂತ ಇಬರಿಬ್ಬರು ಮುಖಾಮುಖಿ ಆಗ್ತಾರೆ ಎನ್ನುವುದೇ ಮುಖ್ಯವಾಗಿತ್ತು. ಆದ್ರೆ, ಅಂತಿಮವಾಗಿ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದು ಮುನಿರತ್ನ, ನಿರ್ದೇಶಕ ನಾಗಣ್ಣ, ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ ಲಹರಿ ವೇಲು. ಹಾಗಿದ್ರೆ, ಸ್ಟಾರ್ ನಟರು ಯಾಕೆ ಬಂದಿಲ್ಲ? ಮುಂದೆ ಓದಿ.....

ಈ ಸುದ್ದಿಗೋಷ್ಠಿಗೆ ಕಲಾವಿದರ ಅಗತ್ಯವಿಲ್ಲ
ದರ್ಶನ್, ಅರ್ಜುನ್ ಸರ್ಜಾ, ಸೋನು ಸೂದ್, ಶಶಿ ಕುಮಾರ್, ನಿಖಿಲ್ ಕುಮಾರ್, ಸ್ನೇಹಾ, ಮೇಘನಾ ರಾಜ್, ಡ್ಯಾನಿಶ್, ರವಿಶಂಕರ್ ಅಂತಹ ಸ್ಟಾರ್ ನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆದ್ರೆ, ಯಾರೊಬ್ಬರು ಈ ಪ್ರೆಸ್ ಮೀಟ್ ನಲ್ಲಿ ಭಾಗವಹಿಸಿಲ್ಲ. ಯಾಕೆ ಬಂದಿಲ್ಲ ಅಂತ ಕೇಳಿದ್ರೆ 'ಇದು ಬಿಡುಗಡೆ ದಿನಾಂಕ ಹೇಳಬೇಕೆಂದುಕೊಂಡ ಸುದ್ದಿಗೋಷ್ಠಿ, ಈಗ ಕಲಾವಿದರು ಬೇಡ. ನಿರ್ಮಾಪಕ' ಸಾಕು ಎಂದು ಮುನಿರತ್ನ ಸಮರ್ಥನೆ ಮಾಡಿಕೊಂಡರು.

ಆಡಿಯೋ ರಿಲೀಸ್ ಗೆ ಬರ್ತಾರೆ
''ರಿಲೀಸ್ ದಿನಾಂಕ ಘೋಷಿಸುವುದು ನಿರ್ಮಾಪಕನ ಕೆಲಸ. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಎಲ್ಲ ಕಲಾವಿದರು ಬರ್ತಾರೆ. ಅಂಬರೀಶ್ ಒಬ್ಬರು ಮಾತ್ರ ಇರಲ್ಲ. ಅಲ್ಲಿ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಅವರೆ ಉತ್ತರ ಕೊಡ್ತಾರೆ' ಎಂದು ನಿರ್ಮಾಪಕ ಮುನಿರತ್ನ ತಿಳಿಸಿದರು.

ಮೊದಲೇ ನಿರ್ಧಾರವಾಗಿತ್ತು
ಯಾವ ಕಾರ್ಯಕ್ರಮಕ್ಕೆ ಕಲಾವಿದರು ಬರಬೇಕು, ಯಾವುದಕ್ಕೆ ಬೇಡ ಎಂಬುದರ ಬಗ್ಗೆ ಈಗಾಗಲೇ ಮುನಿರತ್ನ, ನಿರ್ದೇಶಕ ನಾಗಣ್ಣ, ಹರಿಕೃಷ್ಣ ನಿರ್ಧರಿಸಿದ್ದಾರಂತೆ. ಅದರಂತೆ ಎಲ್ಲವೂ ನಡೆಯಲಿದೆ ಎಂದು ಮುಂದಿನ ಪ್ರಚಾರ ಕೆಲಸಗಳ ಬಗ್ಗೆ ಹೇಳಿಕೊಂಡರು.

ಆಡಿಯೋ ರಿಲೀಸ್ ಯಾವಾಗ?
ಆಗಸ್ಟ್ 9 ನೇ ತಾರೀಖು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಕುರುಕ್ಷೇತ್ರ ಸಿನಿಮಾ ಬರ್ತಿದೆ. ಅದಕ್ಕೂ ಒಂದು ತಿಂಗಳ ಮುಂಚೆ ಜುಲೈ ಮೊದಲ ವಾರದಲ್ಲಿ ಧ್ವನಿ ಸುರಳಿ ಬಿಡುಗಡೆ ಮಾಡುವ ಸಮಾರಂಭ ಏರ್ಪಡಿಸಲು ಚಿಂತಿಸಿದ್ದಾರಂತೆ.


Click it and Unblock the Notifications











