ಆಂಜನೇಯನ ಅವತಾರದಲ್ಲಿ ದರ್ಶನ್, ಹೆಸರು ಮಾತ್ರ ರಾಬರ್ಟ್: ಕಾರಣವೇನು?
ದರ್ಶನ್ ಅಭಿಮಾನಯದ ರಾಬರ್ಟ್ ಸಿನಿಮಾ ರಾಜ್ಯದ ಬಹು ನಿರೀಕ್ಷಿತ ಸಿನಿಮಾ. ಕೊರೊನಾ ಭಿತಿಯ ನಡುವೆಯೂ ಏಪ್ರಿಲ್ 9 ಕ್ಕೆ ಚಿತ್ರವನ್ನು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಹೇಳುತ್ತಿದೆ.
ಈಗಾಗಲೇ ಟ್ರೇಲರ್ ಮತ್ತು ಎರಡು ಹಾಡುಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿರುವ ರಾಬರ್ಟ್, ನಿರೀಕ್ಷೆಗಳನ್ನು ಹೆಚ್ಚಿಸುತ್ತಲೇ ಸಾಗಿದೆ.
ದರ್ಶನ್ ನಾಯಕರಾಗಿರುವ ರಾಬರ್ಟ್ ನಲ್ಲಿ ವಿನೋದ್ ಪ್ರಭಾಕರ್ ಸಹ ಜೊತೆಯಾಗಿದ್ದಾರೆ. ಚಿತ್ರವು ಹಲವು ಕಾರಣಕ್ಕೆ ಮುಖ್ಯವಾಗಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸಿನಿಮಾ ಬಗ್ಗೆ ಕೆಲವು ಕುತೂಹಲಗಳು ಸಹ ಎದ್ದಿದ್ದು, ಪೋಸ್ಟರ್‌ಗಳಲ್ಲಿ ಆಂಜನೇಯನ ವೇಷದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ ಹಾಗಿದ್ದಮೇಲೆ ರಾಬರ್ಟ್ ಎನ್ನುವ ಹೆಸರೇಕೆ? ಎಂಬುದು ಬಹು ದೊಡ್ಡ ಪ್ರಶ್ನೆಯಾಗಿದೆ.

ಆಂಜನೇಯನ ವೇಷದಲ್ಲಿ ದರ್ಶನ್
ಚಿತ್ರತಂಡ ಬಿಡುಗಡೆ ಮಾಡಿದ್ದ ಪೋಸ್ಟರ್‌ಗಳಲ್ಲಿ ದರ್ಶನ್ ಅವರು ಆಂಜನೇಯನ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇನ್ನು ಕೆಲವು ಪೋಸ್ಟರ್‌ಗಳಲ್ಲಿ ಶಿಲುಬೆಯನ್ನು ಕತ್ತಿಗೆ ಹಾಕಿಕೊಂಡ, ಕೈಯಲ್ಲಿ ಗನ್ನು ಹಿಡಿದು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಅವರನ್ನು ಭಿನ್ನವಾಗಿ ತೋರಿಸುವ ಪ್ರಯತ್ನ
ಈ ಬಗ್ಗೆ ಚಿತ್ರದ ನಿರ್ಮಾಪಕರು ಉತ್ತರ ನೀಡಿದ್ದಾರೆ. ಜನರಿಗೆ ಒಂದೇ ಥರ ನೋಡಿ ಬೇಸರವಾಗಿದೆ. ಸಾಮಾನ್ಯ ರೀತಿ ಬಿಟ್ಟು, ಹೊಸ ಬಗೆಯಲ್ಲಿ ಪ್ರಯತ್ನ ಮಾಡಲಾಗಿದೆ, ಹಾಗಾಗಿ ಪೋಸ್ಟರ್‌ಗಳಲ್ಲಿ ಕೆಲವು ಬದಲಾವಣೆಗಳು ಆಗಿವೆ ಎಂದಿದ್ದಾರೆ.

''ಒಂದಕ್ಕೊಂದು ಸಂಬಂಧ ಇದ್ದೇ ಇದೆ''
ಹಾಗೆಂದ ಮಾತ್ರಕ್ಕೆ ದರ್ಶನ್ ಅವರನ್ನು ಭಿನ್ನವಾಗಿ ತೋರಿಸಲೆಂದು ಸಂಬಂಧವಿಲ್ಲದ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿಲ್ಲ. ಈವರೆಗೆ ಬಿಡುಗಡೆ ಆಗಿರುವ ಪೋಸ್ಟರ್, ಮೋಶನ್ ಪೋಸ್ಟರ್, ಟ್ರೇಲರ್, ಹಾಡು ಎಲ್ಲದಕ್ಕೂ ಒಂದಕ್ಕೊಂದು ಸಂಬಂಧವಿದೆ ಎನ್ನುತ್ತಾರೆ ನಿರ್ಮಾಪಕರು.

''ಸಿನಿಮಾ ನೋಡಿದರೆ ವಿಷಯ ಗೊತ್ತಾಗಲಿದೆ''
ಆದರೆ ಅಭಿಮಾನಿಗಳು ದರ್ಶನ್ ಅವರನ್ನು ಹೇಗೆ ನೋಡಬೇಕು ಎಂದುಕೊಂಡಿದ್ದಾರೆಯೋ ಹಾಗೆಯೇ ಸಿನಿಮಾದಲ್ಲಿ ಇರಲಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ. ಸಿನಿಮಾ ನೋಡುವಾಗ ರಾಬರ್ಟ್ ಯಾರು, ಆಂಜನೇಯ ಯಾರು, ಆಂಜನೇಯನ ವೇಷವನ್ನು ದರ್ಶನ್ ಏಕೆ ಹಾಕಿದ್ದಾರೆ ಎಲ್ಲ ವಿಷಯ ಗೊತ್ತಾಗಲಿದೆ. ಇದು ಸಸ್ಪೆನ್ಸ್ ಎಂದಿದ್ದಾರೆ ನಿರ್ಮಾಪಕ.


Click it and Unblock the Notifications











