ದರ್ಶನ್ ವಿರುದ್ಧ ನಡೆಯಿತೇ ಹುನ್ನಾರ: ಅಪ್ಪು ಅಭಿಮಾನಿಗಳನ್ನು ಎತ್ತಿಕಟ್ಟಲಾಯ್ತಾ?

ನಟ ದರ್ಶನ್ ತಮ್ಮ ಮುಂದಿನ ಸಿನಿಮಾ ಕ್ರಾಂತಿ ಮೂಲಕ ಸದ್ದು ಮಾಡಲು ಸಜ್ಜಾಗಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರಕ್ಕೆ ನಟ ದರ್ಶನ್ ಅಭಿಮಾನಿಗಳು ಇಳಿದು ಬಿಟ್ಟಿದ್ದಾರೆ. ದರ್ಶನ್ ಸಿನಿಮಾಗಳು ಬಂದರೆ ಅಭಿಮಾನಿಗಳು ಹೊತ್ತು ಮೆರೆಸುತ್ತಾರೆ.

ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಅಭಿಮಾನಿಗಳ ಬಗ್ಗೆ, ತಮ್ಮ ಮುಂದಿನ ಸಿನಿಮಾ 'ಕ್ರಾಂತಿ' ಬಗ್ಗೆ ಮಾತನಡಿದ್ದಾರೆ ನಟ ದರ್ಶನ್. ಈ ಸಂದರ್ಶನದಲ್ಲಿ ನಟ ದರ್ಶನ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ.

ದರ್ಶನ್ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಹೀಗೆ ಪುನೀತ್ ರಾಜ್‌ಕುಮಾರ್ ಹೆಸರು ಪ್ರಸ್ತಾಪ ಮಾಡಿರುವುದು ಅಪ್ಪು ಅಭಿಮಾನಿಗಳು ಕೋಪಕ್ಕೆ ಕಾರಣವಾಗಿದೆ. ಅಪ್ಪು ಅಭಿಮಾನಿಗಳು ಅಪ್ಪುಗೆ ಕೊಟ್ಟ, ಗೌರವ ಮತ್ತು ದೊಡ್ಮನೆಯ ಮೇಲೆ ದರ್ಶನ್ ತನಗೆ ಇರುವ ಗೌರದ ಬಗ್ಗೆಯೂ ಮಾತನಾಡಿದ್ದಾರೆ...

ಪುನೀತ್ ಬಗ್ಗೆ ದರ್ಶನ್ ಮಾತು!

ಪುನೀತ್ ಬಗ್ಗೆ ದರ್ಶನ್ ಮಾತು!

ಹೀಗೆ ಸಂದರ್ಶನದಲ್ಲಿ ತಮ್ಮ ಅಭಿಮಾನಿಗಳ ಬಗ್ಗೆ ಮಾತನಾಡುತ್ತಾ, ದರ್ಶನ್ ಪುನೀತ್ ರಾಜ್‌ಕುಮರ್ ಅಭಿಮಾನಿಗಳ ಬಗ್ಗೆಯೂ ಮಾತನಾಡಿದ್ದಾರೆ. "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ, ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು. ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಆದ್ರೆ ನಾನು ಬದುಕಿದ್ದಾಗಲೇ ಫ್ಯಾನ್ಸ್‌ಗಳು ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು". ಎಂದು ದರ್ಶನ್ ಹೇಳಿದ್ದಾರೆ. ಇಲ್ಲಿ ಅಭಿಮಾನಿಗಳ ಶಕ್ತಿ ಎಂಥದ್ದು ಎನ್ನುವುದರ ಬಗ್ಗೆ ದರ್ಶನ್ ಮಾತನಾಡಿದ್ದಾರೆ.

ದೊಡ್ಮನೆ ಬಗ್ಗೆ ಮಾತನಾಡಿದ ದರ್ಶನ್!

ದೊಡ್ಮನೆ ಬಗ್ಗೆ ಮಾತನಾಡಿದ ದರ್ಶನ್!

ಸಂದರ್ಶನದ ಮುಂದುವರೆದ ಭಾಗದಲ್ಲಿ 'ಕ್ರಾಂತಿ' ಸಿನಿಮಾ ರಿಲೀಸ್ ಬಗ್ಗೆ ಮಾತನಾಡಿದ ದರ್ಶನ್ ಶೂಟಿಂಗ್ ತಡವಾಗಲು ಕಾರಣ ಏನು ಎಂದು ವಿವರಿಸಿದ್ದಾರೆ. "ಆಕ್ಚ್ಯೂಲಿ 'ಕ್ರಾಂತಿ' ಸಿನಿಮಾ ರಿಲೀಸ್ ಆಗಿಬಿಡಬೇಕಾಗಿತ್ತು. ಸೆಟ್ ಹಾಕಿದಾಗ ಮಳೆ ಬಂತು. ಆಮೇಲೆ ಪುನೀತ್ ಅವರದ್ದು ಹಂಗಾಯ್ತು. ಪುನೀತ್‌ ಅವರದ್ದು ಆ ಥರ ಆದಾಗ ನಾನು ಒಬ್ಬ ಕಲಾವಿದ. ಅವರ ಜೊತೆ ತುಂಬಾ ಒಡನಾಟ ಇಟ್ಟುಕೊಂಡಿದ್ವಿ. ದೊಡ್ಮನೆಯಿಂದ ನಾವೆಲ್ಲಾ ಬಂದವರು. ಹಂಗೆ ಆದ ತಕ್ಷಣ 11 ದಿನ ಮಾಡೋದು ಬೇಡ ಕಣಯ್ಯಾ. ನಮಗೂ ಸೂತಕ ಅದು ಎಂದು ನಾನೇ ಶೂಟಿಂಗ್ ನಿಲ್ಲಿಸಿಬಿಟ್ಟೆ'' ಎಂದಿದ್ದಾರೆ.

ಇದು ಹುನ್ನಾರ ಎನ್ನುತ್ತಿರೋ ಫ್ಯಾನ್ಸ್!

ಇದು ಹುನ್ನಾರ ಎನ್ನುತ್ತಿರೋ ಫ್ಯಾನ್ಸ್!

ಇನ್ನು ಅಪ್ಪು ಅಭಿಮಾನಿಗಳು ದರ್ಶನ್ ಹೇಳಿಕೆಯ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದಾರೆ. ದರ್ಶನ್‌ಗೆ ಕ್ಷಮೆ ಕೇಳುವಂತೆ ಹೇಳುತ್ತಿದ್ದಾರೆ. ಆದರೆ ಇತ್ತ ದರ್ಶನ್ ಫ್ಯಾನ್ಸ್ ಇದು ಬೇಕಂತಲೇ ಮಾಡುತ್ತಿರುವ ಹುನ್ನಾರ ಎನ್ನುತ್ತಿದ್ದಾರೆ. ಪುನೀತ್ ಅವರ ಅಭಿಮಾನಿಗಳನ್ನು ಕೆಲವು ಕಿಡಿಗೇಡಿಗಳು ಬೇಕಂತಲೇ ಎತ್ತುಕಟ್ಟಿದ್ದಾರೆ. ವಿಡೀಯೋವನ್ನು ಪೂರ್ತಿ ನೋಡದೇ, ಸಣ್ಣದೊಂದು ಬಿಟ್ ಹಾಕಿ ಹೀಗೆ ವೈರತ್ವ ಬೆಳೆಸುತ್ತಿದ್ದಾರೆ ಎನ್ನುತ್ತಿದ್ದಾರೆ.

ಕ್ರಾಂತಿ ಸಿನಿಮಾಗೆ ಎಫೆಕ್ಟ್?

ಕ್ರಾಂತಿ ಸಿನಿಮಾಗೆ ಎಫೆಕ್ಟ್?

ಇನ್ನು ಕ್ರಾಂತಿ ಸಿನಿಮಾವನ್ನು ಹಲವೆಡೆ ಬ್ಯಾನ್ ಮಾಡುತ್ತೇವೆ ಎಂದು ಪುನೀತ್ ಅಭಿಮಾನಿಗಳು ಹೇಳುತ್ತಿದ್ದಾರೆ. ಹಾಗಾಗಿ ಇದು ಕ್ರಾಂತಿ ಚಿತ್ರದ ಮೇಲೆ ಪರಿಣಾಮ ಬೀರಬಹದು. ಇದು ಕ್ರಾಂತಿ ಚಿತ್ರಕ್ಕೆ ತೊಂದರೆ ಕೊಡಲು ಮತ್ತು ದರ್ಶನ್ ವಿರುದ್ಧ ಅಪ್ಪು ಅಭಿಮಾನಿಗಳನ್ನು ಎತ್ತಿಕಟ್ಟಲು ಈ ರೀತಿಯ ಹುನ್ನಾರ ಮಾಡಲಾಗಿದೆ ಎಂದು ದರ್ಶನ್

ಅಭಿಮಾನಿಗಳು ವಿಡಿಯೋಗಳನ್ನು ಮಾಡಿ ಬಿಡುತ್ತಿದ್ದಾರೆ.

More from Filmibeat

English summary
Why Darshan Targeted For His Comment On Puneeth Rajkumar Death, Is It Effect For Kranti Movie, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X