»   » ಕುಚಿಕು ಗೆಳೆಯನ ಟೈಟಲ್ ಲಾಂಚ್ ಗೆ ದರ್ಶನ್ ಯಾಕೆ ಬರಲಿಲ್ಲ

ಕುಚಿಕು ಗೆಳೆಯನ ಟೈಟಲ್ ಲಾಂಚ್ ಗೆ ದರ್ಶನ್ ಯಾಕೆ ಬರಲಿಲ್ಲ

Posted By:
Subscribe to Filmibeat Kannada

'ಜೋಗಿ' ಪ್ರೇಮ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ಸ್ಟಾರ್ ನಟರ ಬಿಗ್ ಬಜೆಟ್ ನ 'ಕಲಿ' ಸಿನಿಮಾ ಅದ್ಧೂರಿಯಾಗಿಯೇ ಶುರುವಾಗಿದೆ. ಆದರೆ ಚಿತ್ರದ ಟೈಟಲ್ ಲಾಂಚ್ ನ ಅದ್ಭುತ ಸಮಾರಂಭದಲ್ಲಿ ಒಬ್ಬರ ಗೈರು ಹಾಜರಿ ಮಾತ್ರ ಎದ್ದು ಕಾಣುತ್ತಿತ್ತು.

ಯಾರದ್ದಪ್ಪಾ ಗೈರು ಹಾಜರಿ ಅನ್ಕೊಂಡ್ರಾ?, ಅವರೇ ನಮ್ಮ ಕಿಚ್ಚ ಅವರ ಕುಚಿಕು ಗೆಳೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದು. ಹೌದು ಮೊನ್ನೆ (ಡಿಸೆಂಬರ್ 13) ಲಲಿತ್ ಅಶೋಕ್ ಹೊಟೆಲ್ ನಲ್ಲಿ ನಡೆದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರ ಹೊಸ ಚಿತ್ರ 'ಕಲಿ' ಟೈಟಲ್ ಲಾಂಚ್ ನ ಅದ್ದೂರಿ ಸಮಾರಂಭಕ್ಕೆ ಬಾಕ್ಸಾಫೀಸ್ ಸುಲ್ತಾನ ಗೈರು ಹಾಜರಾಗಿದ್ದರು.[ಚಂದನವನದಲ್ಲಿ ಕ್ರೇಜ್ ಹುಟ್ಟಿಸಲಿರುವ ಶಿವಣ್ಣ-ದೀಪಣ್ಣ 'ಕಲಿ']

Why Darshan was didnt attend Sudeep's 'Kali' title launch function.

ಅಷ್ಟಕ್ಕೂ ದರ್ಶನ್ ಅವರು ತಮ್ಮ ಆತ್ಮೀಯ ಗೆಳೆಯನ ಬಿಗ್ ಪ್ರಾಜೆಕ್ಟ್ ನ ಟೈಟಲ್ ಲಾಂಚ್ ಮಾಡುವ ದಿನ ಯಾಕೆ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ ಅಂತ ಎಲ್ಲರಿಗೂ ಕಾಡುವ ಪ್ರಶ್ನೆ.

ಅಂದಹಾಗೆ ಇದಕ್ಕೆ ಕಾರಣ ಹುಡುಕುತ್ತಾ ಹೋದರೆ, ಸಿಗುವ ಕಾರಣ ಇಷ್ಟೆ. ದರ್ಶನ್ ಯಾಕೆ ಬರಲಿಲ್ಲಾ ಅಂದರೆ ಅವರು 'ಜಗ್ಗುದಾದ' ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಅಷ್ಟೆ. ಬಿಟ್ಟರೆ ಅಂತಹ ವಿಶೇಷ ಏನು ಇಲ್ಲ.['ಕಲಿ'ಯಲ್ಲಿ ಕಿಚ್ಚ-ಶಿವಣ್ಣ ಜೊತೆ ಕಮಲ್ ಹಾಸನ್ ನಟಿಸ್ತಾರಾ?]

Why Darshan was didnt attend Sudeep's 'Kali' title launch function.

ಅದ್ರಲ್ಲೂ ಸ್ಯಾಂಡಲ್ ವುಡ್ ನ ಕುಚಿಕು ಗೆಳೆಯರು ಅಂತಾನೇ ಫೇಮಸ್ ಆಗಿದ್ದವರು, ಎಲ್ಲಿ ಹೋದ್ರು ಇಬ್ಬರೂ ಒಟ್ಟಿಗೆ ಓಡಾಡುತ್ತಿದ್ದವರು, ತಮ್ಮ ಗೆಳೆಯನ ಮುಖ್ಯವಾದ ಸಮಾರಂಭಕ್ಕೆ ಬರದೇ ಇರ್ತಾರ ಅಲ್ವಾ?, ನೀವೇ ಹೇಳಿ. ಬಂದೇ ಬರುತ್ತಿದ್ದರು ಅಲ್ವಾ. ಒಟ್ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ದರ್ಶನ್ ಅವರಿಗೆ ಬರಲಾಗಲಿಲ್ಲ.

ಈಗಾಗಲೇ ದರ್ಶನ್ ಅವರಿಗೆ ಸ್ವಲ್ಪ ಪೆಟ್ಟಾಗಿ, ಗಾಯ ಆಗಿದ್ದರಿಂದ 'ಜಗ್ಗುದಾದ' ಶೂಟಿಂಗ್ ಕೊಂಚ ಡಿಲೇ ಆಗಿತ್ತು ಹಾಗಾಗಿ ಮತ್ತೆ ಡಿಲೇ ಆಗೋದು ಬೇಡ ಅಂತ ದರ್ಶನ್ ಅವರು ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

English summary
Why Challenging star Darshan was did not attend Shivanna and Sudeep's 'Kali' title launch function. Here is the reason check out.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada