ಅಶ್ವಿನಿ ಮೇಡಂ ವಿರುದ್ಧ ಅವರ ಕಡೆಯವರು ಕೊಳಕು ಮಾತನಾಡಿದಾಗ ದರ್ಶನ್ ಯಾಕೆ ಮಾತಾಡಿಲ್ಲ- ಸುಷ್ಮಾ ವೀರ್..!

By ಫಿಲ್ಮಿಬೀಟ್ ಡೆಸ್ಕ್

ಹೆಚ್ಚೇನು ಇಲ್ಲ.. ಕೆಲ ದಿನದ ಹಿಂದೆ ಅವನ್ಯಾರೋ ಗುರುತು ಪರಿಚಯ ಇರದ ಗಜಪಡೆ ಎಂಬ ವ್ಯಕ್ತಿ, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಕೆಟ್ಟಾ ಕೊಳಕಾಗಿ ನಿಂದಿಸಿದ್ದ. ಮಾತನಾಡಬಾರದ ಮಾತುಗಳನ್ನಾಡಿ ಕನ್ನಡಿಗರನ್ನು ಕೆರಳಿಸಿದ್ದ. ಆ ವ್ಯಕ್ತಿ ಆ ನಂತರ ಏನಾದ ಅನ್ನುವುದು ಬೇರೆ ವಿಚಾರವಾದರೂ, ಇಡೀ ಕರುನಾಡು ಆ ಅನಾಮಧೇಯ ವ್ಯಕ್ತಿಯನ್ನು ಸದ್ಯಕ್ಕೆ ಮಾಡಬಾರದ್ದನ್ನ ಮಾಡಿ ಜೈಲು ಪಾಲಾದ ದರ್ಶನ್ ಅವರ ಅಭಿಮಾನಿಯೇ ಎಂದು ಪರಿಗಣಿಸಿತ್ತು. ನಿಮ್ಮ ಭಕ್ತರಿಗೆ ಕರೆದು ಬುದ್ದಿ ಹೇಳಿ ಎಂಬ ಮಾತನ್ನೂ ಹೇಳಿತ್ತು.

ಆದರೆ, ಕರೆದು ಬುದ್ದಿ ಹೇಳುವುದು ಇರಲಿ, ತಮ್ಮ ಅಭಿಮಾನಿಯ ಈ ಕೀಳು ಮಟ್ಟದ ಅಭಿರುಚಿಯ ಬಗ್ಗೆ ದರ್ಶನ್ ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಇಂಥ ದರ್ಶನ್ ಬಗ್ಗೆ ಗುಬ್ಬಿ ವೀರಣ್ಣ ಮರಿ ಮೊಮ್ಮಗಳು, ಗಾಯಕಿ-ನಟಿ ಬಿ. ಜಯಶ್ರೀ ಪುತ್ರಿ ಸುಷ್ಮಾ ವೀರ್ ಬಗ್ಗೆ ಮಾತನಾಡಿದ್ದಾರೆ.

why-darshan-was-silent-when-his-fan-posted-against-ashwini-puneeth-rajkumar-asks-sushma-veer

ಹೌದು. ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿರುವ ಸುಷ್ಮಾ ವೀರ್, ನಮಗೆ ದೇವರ ಮಗ ದರ್ಶನ್ ಬೇಕು ಹೊರತು ಡೆವಿಲ್ ದರ್ಶನ್ ಬೇಡ ಅಂದಿದ್ದಾರೆ. ಇನ್ನೂ ರೇಣುಕಾ ಸ್ವಾಮಿ ಮಾಡಿದ್ದು ನಿಜಕ್ಕೂ ತಪ್ಪು, ಆದರೆ..ಅವರಲ್ಲಿ ಕೆಲವರು ಅಶ್ವಿನಿ ಮೇಡಂ ಬಗ್ಗೆ ಕಮೆಂಟ್ ಮಾಡಿದ್ರಲ್ಲ ಅದು ಸರೀನಾ ಎಂಬ ಪ್ರಶ್ನೆಯನ್ನು ಸುಷ್ಮಾ ವೀರ್ ಕೇಳಿದ್ದಾರೆ. ಬೇರೆಯವರ ಮನೆ ಹೆಣ್ಣು ಮಕ್ಕಳು, ಹೆಣ್ಣು ಮಕ್ಕಳು ಅಲ್ಲ.. ನಿಮ್ಮ ಮನೆ ಹೆಣ್ಣು ಮಕ್ಕಳು ಮಾತ್ರ ಹೆಣ್ಣು ಮಕ್ಕಳು ಎಂದು ನಿಮಗೆ ಯಾಕೆ ಅನಸುತ್ತೆ ಎಂದು ಕಿಡಿಯನ್ನೂ ಕಾರಿದ್ದಾರೆ. ಇಷ್ಟೇ ಅಲ್ಲ ಅವನ್ಯಾವ್ನೋ ಕಮೆಂಟ್ ಮಾಡಿದಾಗ ಅವರು ಕಂಡೋರ ಮನೆ ಹೆಣ್ಣು ಮಕ್ಕಳು ಅಂತ ನಿಮಗೆ ಅನಿಸಲಿಲ್ಲವಾ ಎಂಬ ಪ್ರಶ್ನೆಯನ್ನೂ ಕೇಳಿರುವ ಸುಷ್ಮಾ ವೀರ್ , ಸಮಸ್ಯೆಯನ್ನು ಹೇಗೆ ಸಂಭಾಳಿಸ್ತೀರಾ ಅನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತೆ ಎಂದಿದ್ದಾರೆ.

ದರ್ಶನ್ ವಿರುದ್ಧ ಮಾತನಾಡಿದರೆ ಅವರ ಕಡೆಯವರು ಬಂದು ಕೆಟ್ಟ ಕಮೆಂಟ್ ಮಾಡ್ತಾರಲ್ಲ, ಯಾಕೆ ಅವರು ಹೆಣ್ಮಕ್ಕಳು ಅಲ್ಲವಾ ಎಂಬ ಪ್ರಶ್ನೆಯನ್ನೂ ಕೂಡ ಕೇಳಿರುವ ಸುಷ್ಮಾ ವೀರ್, ದರ್ಶನ್ ವಿರುದ್ಧ ಗೌಡ್ತಿಯರು ನಡೆಸಿದ್ದ ಪ್ರತಿಭಟನೆಯನ್ನೂ ನೆನಪಿಸಿಕೊಂಡಿದ್ದಾರೆ. ಅವತ್ತು ದರ್ಶನ್ ವಿರುದ್ಧ ಧಿಕ್ಕಾರದ ಕೂಗು ಕೂಗಿ ಅವರೆಲ್ಲ ಮನೆಗೆ ತೆರಳುವಷ್ಟರಲ್ಲಿ ಆ ಗೌಡ್ತಿಯರಲ್ಲಿ ಅನೇಕರಿಗೆ ಅವರ ಕಡೆಯವರು ಕೊಳಕು ಸಂದೇಶಗಳನ್ನು ಕಳಿಸಿದ್ದರು, ಇದರಿಂದ ಮನನೊಂದು ಸಹವಾಸವೇ ಬೇಡ ಎಂದು ಅನೇಕರು ತಮ್ಮ ಫೇಸ್ ಬುಕ್ ಪ್ರೊಪೈಲ್‌ನ್ನೇ ಕ್ಲೋಸ್ ಮಾಡಿದರು, ಯಾಕೆ ಅವರು ಹೆಣ್ಣು ಮಕ್ಕಳು ಅಲ್ವಾ ಎಂಬ ಪ್ರಶ್ನೆಯನ್ನೂ ಸುಷ್ಮಾ ವೀರ್ ಕೇಳಿದ್ದಾರೆ.

why-darshan-was-silent-when-his-fan-posted-against-ashwini-puneeth-rajkumar-asks-sushma-veer

ಒಟ್ನಲ್ಲಿ ರೇಣುಕಾ ಸ್ವಾಮಿ ಅವರಿಂದನೇ ತಪ್ಪಾಗಿದೆ. ಹಾಗಂಥ.. ಈ ತರಹದ ಶಿಕ್ಷೆಗೆ ಆತ ಅರ್ಹನಾಗಿರಲಿಲ್ಲ ಅಂದಿದ್ದಾರೆ. ಶಿಕ್ಷೆ ಕೊಡಲು ಪೊಲೀಸ್ ಇಲಾಖೆ ಇದೆ. ಕಾನೂನು ಇದೆ. ಆದರೆ ದರ್ಶನ್ ಗೆ ಅದ್ಯಾಕೇ ಅರ್ಥವಾಗಲಿಲ್ಲ ಎಂದಿದ್ದಾರೆ. ಅಕ್ಕ-ಪಕ್ಕದವರಿಂದನೇ ದರ್ಶನ್ ಇವತ್ತು ಈ ಸ್ಥಿತಿಯಲ್ಲಿದ್ದಾರೆ ಎಂದಿದ್ದಾರೆ. ತಪ್ಪು ಯಾರೇ ಮಾಡಿರಲಿ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X