twitter
    For Quick Alerts
    ALLOW NOTIFICATIONS  
    For Daily Alerts

    'ನಮ್ಮ ಪ್ರೀತಿಯ ರಾಮು' ಬಳಿಕ ದರ್ಶನ್ ಏಕೆ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲೇ ಇಲ್ಲ?

    |

    Recommended Video

    Kurukshetra Movie: ನಮ್ಮ ಪ್ರೀತಿಯ ರಾಮು' ಬಳಿಕ ದರ್ಶನ್ ಏಕೆ ಪ್ರಯೋಗಾತ್ಮಕ ಚಿತ್ರಗಳನ್ನು ಮಾಡಲೇ ಇಲ್ಲ?

    ಪ್ರತಿಯೊಬ್ಬ ನಟನಿಗೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡುವ ಆಸೆ ಇರುತ್ತದೆ. ಕೆಲವು ಬಾರಿ ಅದರ ಪ್ರಯತ್ನಗಳೂ ನಡೆಯುತ್ತದೆ. ಆದರೆ, ಅಂತಹ ಸಿನಿಮಾಗಳ ಫಲಿತಾಂಶ, ಮುಂದೆ ಆ ನಟ ಆ ರೀತಿಯ ಸಿನಿಮಾಗಳ ಬಗ್ಗೆ ಯೋಚನೆ ಮಾಡದೆ ಇರುವ ಹಾಗೆ ಮಾಡಿ ಬಿಡುತ್ತದೆ.

    ನಟ ದರ್ಶನ್ ತಮ್ಮ ಕೆರಿಯರ್ ನಲ್ಲಿ ಮಾಡಿದ ಪ್ರಯೋಗಾತ್ಮಕ ಚಿತ್ರ 'ನಮ್ಮ ಪ್ರೀತಿಯ ರಾಮು'. ತಮ್ಮ ಸ್ಟಾರ್ ಪಟ್ಟ, ಆಕ್ಷನ್, ಡ್ಯಾನ್ಸ್ ಎಲ್ಲವನ್ನು ಬಿಟ್ಟು, ಒಬ್ಬ ಅಂಧನ ಪಾತ್ರದಲ್ಲಿ ದರ್ಶನ್ ಇಲ್ಲಿ ಕಾಣಿಸಿಕೊಂಡಿದ್ದರು. ಈ ಸವಾಲಿನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಆದರೆ, ಆ ಸಿನಿಮಾ ಮಾತ್ರ ಗೆಲ್ಲಲಿಲ್ಲ.

    ಸುದೀಪ್ ಬಗ್ಗೆ ಕೇಳಿದ್ದಕ್ಕೆ ಫುಲ್ ಗರಂ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದೀಪ್ ಬಗ್ಗೆ ಕೇಳಿದ್ದಕ್ಕೆ ಫುಲ್ ಗರಂ ಆದ ಚಾಲೆಂಜಿಂಗ್ ಸ್ಟಾರ್ ದರ್ಶನ್

    ಅಂದಹಾಗೆ, 'ನಮ್ಮ ಪ್ರೀತಿಯ ರಾಮು' ಚಿತ್ರ 2003ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾ ಬಂದು ಇಷ್ಟು ವರ್ಷಗಳ ಬಳಿಕ ದರ್ಶನ್ ಅದರ ಬಗ್ಗೆ ಮಾತನಾಡಿದ್ದಾರೆ.

    'ಕುರುಕ್ಷೇತ್ರ' ಪ್ರೆಸ್ ಮೀಟ್ ನಲ್ಲಿ ಪ್ರಶ್ನೆ

    'ಕುರುಕ್ಷೇತ್ರ' ಪ್ರೆಸ್ ಮೀಟ್ ನಲ್ಲಿ ಪ್ರಶ್ನೆ

    ಇತ್ತೀಚಿಗಷ್ಟೆ 'ಕುರುಕ್ಷೇತ್ರ' ಚಿತ್ರದ ಸುದ್ದಿಗೋಷಿಯಲ್ಲಿ ದರ್ಶನ್ 'ನಮ್ಮ ಪ್ರೀತಿಯ ರಾಮು' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. 'ನಮ್ಮ ಪ್ರೀತಿಯ ರಾಮು' ಸಿನಿಮಾದ ಸೋಲಿಗೆ ನಿಜವಾದ ಕಾರಣ ಏನು ?, ಆ ಚಿತ್ರದ ನಂತರ ಅಂತಹ ಪ್ರಯೋಗಾತ್ಮಕ ಸಿನಿಮಾಗಳನ್ನು ಏಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ದರ್ಶನ್ ಉತ್ತರ ನೀಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು

    ನಿರ್ಮಾಪಕರಿಂದ ಸಮಸ್ಯೆ ಆಗಿತ್ತು

    ನಿರ್ಮಾಪಕರಿಂದ ಸಮಸ್ಯೆ ಆಗಿತ್ತು

    'ನಮ್ಮ ಪ್ರೀತಿಯ ರಾಮು' ಸಿನಿಮಾ ಸೋಲಿಗೆ ಕಾರಣ ಜನರು ಎಂದು ಅನೇಕರು ತಿಳಿದಿದ್ದಾರೆ. ಮಾಸ್ ಮಹಾರಾಜ ದರ್ಶನ್ ರನ್ನು ಜನ ಈ ರೀತಿಯ ಪಾತ್ರಗಳಲ್ಲಿ ನೋಡಲು ಇಷ್ಟ ಪಡುವುದಿಲ್ಲ ಎನ್ನುವುದು ಇನ್ನು ಕೆಲವರ ಅಭಿಪ್ರಾಯ. ಆದರೆ, ದರ್ಶನ್ ಹೇಳುವ ಪ್ರಕಾರ 'ನಮ್ಮ ಪ್ರೀತಿಯ ರಾಮು' ಸಿನಿಮಾಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತಂತೆ. ಆದರೆ, ನಿರ್ಮಾಪಕರ ಸಮಸ್ಯೆಯಿಂದ ಈ ಸಿನಿಮಾ ಜನರಿಗೆ ತಲುಪಲಿಲ್ಲ. ಬಿ ಪಿ ರಾಮೇ ಗೌಡ ಮತ್ತು ಜಿ ನಂದಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು.

    ಆ ರೀತಿಯ ಕಥೆಗಳು ಬರಲಿಲ್ಲ

    ಆ ರೀತಿಯ ಕಥೆಗಳು ಬರಲಿಲ್ಲ

    'ನಮ್ಮ ಪ್ರೀತಿಯ ರಾಮು' ಸಿನಿಮಾದ ಸೋಲಿನ ನಂತರ ದರ್ಶನ್ ಗೆ ಆ ರೀತಿಯ ಕಥೆಗಳು ಬರಲಿಲ್ಲವಂತೆ. ಹಾಗಾಗಿ ತಮಗೆ ಬರುತ್ತಿದ್ದ ಮಾಸ್ ಸಿನಿಮಾಗಳನ್ನೆ ದರ್ಶನ್ ಹೆಚ್ಚು ಮಾಡಿದ್ದಾರೆ. ಹೀಗಿದ್ದರೂ, ''ಮುಂದೆ ಬೇರೆ ಬೇರೆ ರೀತಿಯ ಪ್ರಯೋಗಾತ್ಮಕ ಪಾತ್ರಗಳು ಬಂದರೆ ಖಂಡಿತ ಮಾಡುತ್ತೇನೆ. ಒಳ್ಳೆಯ ಸಿನಿಮಾಗಳನ್ನು ಮಾಡುವ ಆಸೆ ಖಂಡಿತ ಇದೆ.'' ಎಂದರು ದರ್ಶನ್.

    ಟ್ರೋಲಿಗರಿಗೆ ಆಹಾರವಾಯ್ತು ಚಾಲೆಂಜಿಂಗ್ ಸ್ಟಾರ್ ಎಡವಟ್ಟಿನ ಹೇಳಿಕೆ ಟ್ರೋಲಿಗರಿಗೆ ಆಹಾರವಾಯ್ತು ಚಾಲೆಂಜಿಂಗ್ ಸ್ಟಾರ್ ಎಡವಟ್ಟಿನ ಹೇಳಿಕೆ

    ರಂಗಭೂಮಿ ಅನುಭವ ಇರುವ ದರ್ಶನ್

    ರಂಗಭೂಮಿ ಅನುಭವ ಇರುವ ದರ್ಶನ್

    ದರ್ಶನ್ ಒಂದು ಕಡೆ ಮಾಸ್ ಸಿನಿಮಾಗಳಿಗೆ ಅಂಟಿಕೊಂಡಿದ್ದಾರೆ ನಿಜ. ಆದರೆ, ಆಗಾಗ ಅವರ ಪಾತ್ರದ ಶೈಲಿ ಬದಲಾಗುತ್ತದೆ. 'ನಮ್ಮ ಪ್ರೀತಿಯ ರಾಮು', 'ಅನಾಥರು', 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಹಾಗೂ 'ಕುರುಕ್ಷೇತ್ರ' ಚಿತ್ರಗಳ ಅವರ ಪಾತ್ರಗಳು ದರ್ಶನ್ ನಟನ ಸಾಮರ್ಥ್ಯವನ್ನು ತೋರುತ್ತದೆ. ಅಲ್ಲದೆ, ರಂಗಭೂಮಿ ಅನುಭವ ಹೊಂದಿರುವ ದರ್ಶನ್ ಬೇರೆ ಬೇರೆ ರೀತಿಯ ಪಾತ್ರವನ್ನು ನಿರ್ವಹಿಸುವ ಶಕ್ತಿ ಹೊಂದಿದ್ದಾರೆ.

    English summary
    Why Darshan will not tried experimental roles after 'Namma Preethiya Ramu' movie.
    Monday, August 5, 2019, 10:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X