'ಮಾಂಸಾಹಾರಿ' ಆಗಿದ್ದ ಜಗ್ಗೇಶ್ ಇದ್ದಕ್ಕಿದ್ದಂತೆ ಸಸ್ಯಾಹಾರಿ ಆಗಿದ್ದು 'ಇದೇ' ಕಾರಣಕ್ಕೆ.!
Recommended Video

ಗ್ರಿಲ್ಡ್ ಚಿಕನ್.. ತಂದೂರಿ ಚಿಕನ್.. ಕಾಲು ಸೂಪ್.. ಮಟನ್ ಸಾಂಬಾರ್.. ಮಟನ್ ಬಿರಿಯಾನಿ.. ಹೀಗೆ ನಾನ್ ವೆಜ್ ಖಾದ್ಯಗಳ ಹೆಸರು ಹೇಳಿದರೆ ಸಾಕು ಅನೇಕರ ಬಾಯಲ್ಲಿ ನೀರೂರುತ್ತೆ.
ಒಂದ್ಕಾಲದಲ್ಲಿ ಮಾಂಸಾಹಾರಿ ಆಗಿದ್ದ ನಟ ಜಗ್ಗೇಶ್ ಇದೀಗ ಸಸ್ಯಾಹಾರಿ ಆಗಿ ಬದಲಾಗಿದ್ದಾರೆ. 'ಬದಲಾವಣೆ ಜಗದ ನಿಯಮ' ಅನ್ನೋದು ಸಹಜ. ಆದ್ರೆ, ಆಹಾರ ಪದ್ಧತಿಯಲ್ಲಿ ಬದಲಾವಣೆ ತರಲು ನಟ ಜಗ್ಗೇಶ್ ಮನಸ್ಸು ಮಾಡಿದ್ದು ಯಾಕೆ ಗೊತ್ತಾ.?

ಒಂದು ಕುರಿಯನ್ನು ಕಡಿಯಲು ಕಟುಕ ಅಣಿಯಾದಾಗ ಮತ್ತೊಂದು ಕುರಿ ರೋಧಿಸುತ್ತಿದ್ದನ್ನ ನೋಡಿ ಸ್ವತಃ ಕಣ್ಣೀರಿಟ್ಟಿದ್ದ ನಟ ಜಗ್ಗೇಶ್ ಮಾಂಸಾಹಾರವನ್ನ ತ್ಯಜಿಸಿದರಂತೆ. ಹಾಗೆಂದು ಸ್ವತಃ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
''ನಾನು ಸಸ್ಯಾಹಾರಿ ಆಗಿದ್ದು ಯಾಕೆ ಅಂದ್ರೆ, ಊರ ಹಬ್ಬಕ್ಕೆ ಕುರಿ ಕಡಿಯಲು ಕಟುಕ ಅಣಿಯಾದಾಗ ಮತ್ತೊಂದು ಕುರಿ ರೋಧಿಸುತ್ತಿದ್ದನ್ನು ನೋಡಿ ನಾನು ಅತ್ತುಬಿಟ್ಟೆ. ಕಟುಕನಿಗೆ ತಲೆ ಕೊಟ್ಟಿದ್ದು ಮಗ, ರೋಧಿಸುತ್ತಿದ್ದದ್ದು ಅಮ್ಮ. ಪ್ರಾಣಿಗಳಲ್ಲೂ ಭಾವನಾತ್ಮಕ ಸಂಬಂಧ ಇರುತ್ತದೆ. ಹೀಗಾಗಿ 4 ಗಂಟೆಗೆ ಮಲವಾಗುವ ಊಟಕ್ಕೆ ಯಾಕೆ ಬೇಕು ಭಾವನೆ ಕೊಂದ ಊಟ.?! ದಯೆಯೇ ಧರ್ಮದ ಮೂಲ'' ಎಂದು ಟ್ವೀಟ್ ಮಾಡಿದ್ದಾರೆ ನಟ ಜಗ್ಗೇಶ್.
ಪ್ರಾಣಿ ಪ್ರಿಯರು, 'ಪ್ರಾಣಿ ಹಿಂಸೆ ಮಹಾ ಪಾಪ' ಎನ್ನುವುದನ್ನ ನಂಬಿರುವವರು ಜಗ್ಗೇಶ್ ಮಾಡಿರುವ ಈ ಟ್ವೀಟ್ ಗೆ ಜೈಕಾರ ಹಾಕುತ್ತಿದ್ದಾರೆ. ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...


Click it and Unblock the Notifications











