'ವೃತ್ರ' ಚಿತ್ರದಿಂದ ನಟಿ ರಶ್ಮಿಕಾ ಮಂದಣ್ಣ ಹೊರಬರಲು ಅಸಲಿ ಕಾರಣವೇನು.?

Recommended Video

ಹೇಗಿದೆ ನೋಡಿ ರಶ್ಮಿಕಾ ಹೊಸ ಸಿನಿಮಾ ಲುಕ್..!! | Filmibeat Kannada

ಇತ್ತೀಚಿಗಂತೂ ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಬೇಡದ ವಿಚಾರಗಳಿಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ. 'ಗೀತ ಗೋವಿಂದಂ' ಚಿತ್ರದ ಲಿಪ್ ಲಾಕ್ ಸೀನ್ ಲೀಕ್ ಆದ್ಮೇಲಂತೂ ರಶ್ಮಿಕಾ ಮಂದಣ್ಣ ಬಗ್ಗೆ ದಿನಕ್ಕೊಂದು ಗಾಸಿಪ್ ಕೇಳಿಬರಲಾರಂಭಿಸಿತು.

ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಬ್ರೇಕಪ್ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿರಿಂದ ದೂರವಾದ ಬಳಿಕ ರಕ್ಷಿತ್ ಕ್ಯಾಂಪ್ ನವರೇ ಅದ ಗೌತಮ್ ಅಯ್ಯರ್ ನಿರ್ದೇಶನದ 'ವೃತ್ರ' ಚಿತ್ರದಿಂದ ರಶ್ಮಿಕಾ ಮಂದಣ್ಣ ಹೊರಬಂದಿದ್ದಾರೆ ಎಂಬ ಗುಸುಗುಸು ಹಬ್ಬಿತ್ತು.

'ವೃತ್ರ' ಚಿತ್ರವನ್ನ ರಶ್ಮಿಕಾ ಇಷ್ಟ ಪಟ್ಟು ಒಪ್ಪಿಕೊಂಡಿದ್ದರು. ಆದ್ರೆ, ಇದಕ್ಕಿದ್ದಂತೆ ಈ ಚಿತ್ರತಂಡದಿಂದ ರಶ್ಮಿಕಾ ಹೊರಗೆ ಬರಲು ಕಾರಣವೇನು.? ಎಂಬ ಡೌಟ್ ಎಲ್ಲರನ್ನೂ ಕಾಡುತ್ತಿರುವುದು ಸಹಜ. ಈ ನಡುವೆ ತೆಲುಗು ಸಿನಿಮಾಗಳಲ್ಲಿ ಬಿಜಿಯಿರುವ ಕಾರಣಕ್ಕೆ 'ವೃತ್ರ' ಚಿತ್ರದಿಂದ ರಶ್ಮಿಕಾ ಹೊರಗೆ ಬಂದಿದ್ದಾರೆ ಎನ್ನಲಾಗಿತ್ತು. ಆದ್ರೆ, ಅಸಲಿ ಕಾರಣ ಬೇರೆಯೇ ಇದೆ. ಮುಂದೆ ಓದಿರಿ....

ರಶ್ಮಿಕಾ ಕೊಡುವ ಕಾರಣ ಇದು.!

ರಶ್ಮಿಕಾ ಕೊಡುವ ಕಾರಣ ಇದು.!

''ವೃತ್ರ ಮಹಿಳಾ ಪ್ರಧಾನ ಸಿನಿಮಾ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸುವ ಮಟ್ಟಕ್ಕೆ ನಾನಿನ್ನೂ ಬೆಳೆದಿಲ್ಲ. ನನ್ನಿಂದ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ತೊಂದರೆ ಆಗಬಾರದು. ಹೀಗಾಗಿ ಚಿತ್ರದಿಂದ ಹೊರಗೆ ಬಂದಿದ್ದೇನೆ'' ಎಂದು ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ.

ಮುಂಚೆ ಗೊತ್ತಿರಲಿಲ್ಲವೇ.?

ಮುಂಚೆ ಗೊತ್ತಿರಲಿಲ್ಲವೇ.?

'ವೃತ್ರ' ಮಹಿಳಾ ಪ್ರಧಾನ ಸಿನಿಮಾ ಅನ್ನೋದು ಕಥೆ ಕೇಳಿದಾಗಲೇ ರಶ್ಮಿಕಾ ಮಂದಣ್ಣಗೆ ಗೊತ್ತಿರಲಿಲ್ಲವೇ.? ಚಿತ್ರದ ಫೋಟೋಶೂಟ್ ನಲ್ಲಿ ಖುಷಿಯಿಂದಲೇ ರಶ್ಮಿಕಾ ಪಾಲ್ಗೊಂಡಿದ್ದರು. ಇನ್ನೇನು ಶೂಟಿಂಗ್ ಶುರುವಾಗಬೇಕಿದ್ದಾಗ, ಚಿತ್ರದಿಂದ ಆಕೆ ಹಿಂದಕ್ಕೆ ಸರಿದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.!

ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ.!

ರಶ್ಮಿಕಾ ಮಂದಣ್ಣ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಟ್ರೋಲ್ ಗಳು ಜಾಸ್ತಿ ಆಗಿವೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರೂ, ಅದರ ಬಗ್ಗೆ ರಶ್ಮಿಕಾ ಮಂದಣ್ಣ ತಲೆ ಕೆಡಿಸಿಕೊಳ್ಳುತ್ತಿಲ್ಲ.

ತೆಲುಗಿನಲ್ಲಿ ರಶ್ಮಿಕಾ ಬಿಜಿ

ತೆಲುಗಿನಲ್ಲಿ ರಶ್ಮಿಕಾ ಬಿಜಿ

ರಶ್ಮಿಕಾ ಅಭಿನಯದ ತೆಲುಗು ಸಿನಿಮಾ 'ದೇವದಾಸ್' ಬಿಡುಗಡೆಗೆ ಸಿದ್ಧವಾಗಿದೆ. 'ಡಿಯರ್ ಕಾಮ್ರೇಡ್' ಸೇರಿದಂತೆ ಇನ್ನೆರಡು ತೆಲುಗು ಚಿತ್ರಗಳಿಗೆ ರಶ್ಮಿಕಾ ಮಂದಣ್ಣ ಸಹಿ ಹಾಕಿದ್ದಾರೆ. ಹೀಗಾಗಿ ಮುಂದಿನ ವರ್ಷದವರೆಗೂ ಟಾಲಿವುಡ್ ನಲ್ಲಿಯೇ ರಶ್ಮಿಕಾ ಬಿಜಿ.

More from Filmibeat

English summary
Why did Kannada Actress Rashmika Mandanna come out of Kannada Movie Vrithra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X