ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ನಿಜ.! ಕಹಿ ಅಧ್ಯಾಯ ಇಲ್ಲಿದೆ...

By Harshitha

Recommended Video

ಯಾವ ಕಾರಣಕ್ಕೆ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳೋ ನಿರ್ಧಾರ ತೆಗೆದುಕೊಂಡಿದ್ದರು..? | Oneindia Kannada

90 ರ ದಶಕದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ವಿಜಯಲಕ್ಷ್ಮಿ ಅವರಿಗೆ ಅದ್ಯಾರ ಕೆಟ್ಟ ದೃಷ್ಟಿ ತಾಕಿತೋ, ಏನೋ... ಸಹಜ ಸುಂದರಿ ಆಗಿದ್ದ ಆಕೆಯ ಬಾಳಲ್ಲಿ ಕಾರ್ಮೋಡ ಆವರಿಸಿತು.

ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ, ಬೇಡದ ವಿವಾದಗಳಿಗೆ ಸಿಲುಕಿದ ನಟಿ ವಿಜಯಲಕ್ಷ್ಮಿ ಕನ್ನಡ ಚಿತ್ರರಂಗದಿಂದ ದೂರ ಸರಿಯುವಂತಾಯಿತು. ತಮಿಳು ಚಿತ್ರರಂಗದ ಕಡೆ ಮುಖ ಮಾಡಿದ್ಮೇಲೂ, ನಟಿ ವಿಜಯಲಕ್ಷ್ಮಿ ಹಾದಿ ಹೂವಿನ ಹಾಸಿಗೆ ಆಗಿರಲಿಲ್ಲ. ಕ್ಷಣ ಕ್ಷಣಕ್ಕೂ ಅವಮಾನ ಎದುರಿಸಿದ ವಿಜಯಲಕ್ಷ್ಮಿ ವೈಯುಕ್ತಿಕ ಜೀವನದಲ್ಲಿಯೂ ನೆಮ್ಮದಿ ಇರಲಿಲ್ಲ.

ಒಂದ್ಕಡೆ ಅಕ್ಕನ ಸಂಸಾರದಲ್ಲಿ ಬಿರುಗಾಳಿ, ಇನ್ನೊಂದ್ಕಡೆ ತಂದೆಯ ಸಾವು, ಮತ್ತೊಂದೆಡೆ ಮದುವೆ ಆಗಲು ಬಯಸಿದ್ದ ಸಹಾಯಕ ನಿರ್ದೇಶಕನಿಂದ ಕಿರುಕುಳ.. ಇವುಗಳ ಮಧ್ಯೆ ಅವಕಾಶಗಳ ಕೊರತೆ.. ಈ ಎಲ್ಲದರಿಂದ ಬೇಸೆತ್ತ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಆ ಕಹಿ ಅಧ್ಯಾಯವನ್ನ ಇತ್ತೀಚೆಗಷ್ಟೇ ಸುವರ್ಣ ನ್ಯೂಸ್ 24*7 ಕಾರ್ಯಕ್ರಮದಲ್ಲಿ ನಟಿ ವಿಜಯಲಕ್ಷ್ಮಿ ಬಿಚ್ಚಿಟ್ಟರು. ಮುಂದೆ ಓದಿರಿ...

[ಕೃಪೆ: ಸುವರ್ಣ ನ್ಯೂಸ್ 24*7]

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟಿ

ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟಿ

''ನನ್ನ ತಂದೆ ತೀರಿಕೊಂಡು 16 ದಿನ ಆದ್ಮೇಲೆ 'ಬಂಗಾರದ ಬೇಟೆ' ಶೂಟಿಂಗ್ ಶುರು ಮಾಡಿದ್ವಿ. 'ಬಂಗಾರದ ಬೇಟೆ' ಮೊದಲ ದಿನ ಶೂಟಿಂಗ್ ನಲ್ಲಿ ನನ್ನ ಮುಖದಲ್ಲಿ ನಗು ಅನ್ನೋದು ಇರಲೇ ಇಲ್ಲ'' - ನಟಿ ವಿಜಯಲಕ್ಷ್ಮಿ

ಯಾವುದೂ ಸರಿ ಇರಲಿಲ್ಲ.!

ಯಾವುದೂ ಸರಿ ಇರಲಿಲ್ಲ.!

''ನನಗೆ ಆ ಸಮಯದಲ್ಲಿ ಯಾವುದೂ ಸರಿ ಹೋಗುತ್ತಿರಲಿಲ್ಲ. ತಂದೆ ತೀರಿಕೊಂಡ್ಮೇಲೆ, ಮಾನಸಿಕ ಖಿನ್ನತೆಗೆ ಒಳಗಾದೆ. ಒತ್ತಡ ಜಾಸ್ತಿ ಆಯ್ತು. ಹೀಗಾಗಿ ಆತ್ಮಹತ್ಯೆ ಪ್ರಯತ್ನ ಮಾಡಿದೆ. ಆದ್ರೆ, ಇನ್ಮುಂದೆ ಯಾವತ್ತೂ ಹಾಗೆ ಮಾಡಲ್ಲ'' - ನಟಿ ವಿಜಯಲಕ್ಷ್ಮಿ

ನನ್ನ ಜೀವನದ ದಾರಿ ಕಷ್ಟಕರ

ನನ್ನ ಜೀವನದ ದಾರಿ ಕಷ್ಟಕರ

''ನಟಿಯರಿಗೆ ಯಾವುದೇ ಕಷ್ಟ ಇರಲ್ಲ, ಅವರದ್ದೆಲ್ಲ ಕೇಕ್ ವಾಕ್ ಅಂತ ಎಲ್ಲರೂ ಅಂದುಕೊಳ್ಳುತ್ತಾರೆ. ಆದ್ರೆ, 'ನಾಗಮಂಡಲ' ಚಿತ್ರದಲ್ಲಿ ಕೆಲಸ ಮಾಡಿದ್ಮೇಲೆ, ನನ್ನ ಜೀವನದ ದಾರಿ ಇವತ್ತಿನವರೆಗೂ ತುಂಬಾ ಕಷ್ಟಕರವಾಗಿದೆ'' - ನಟಿ ವಿಜಯಲಕ್ಷ್ಮಿ

ಕಣ್ಣೀರ ಕಥೆ

ಕಣ್ಣೀರ ಕಥೆ

''ವಿಜಯಲಕ್ಷ್ಮಿಗೆ ಕೋಪ ಬರುತ್ತೆ, ಅವರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಅಂತ ಎಲ್ಲರೂ ಮಾತನಾಡಿಕೊಳ್ತಾರೆ. ಆದ್ರೆ, ಇಪ್ಪತ್ತು ವರ್ಷದಿಂದ ನಾನು ಕಣ್ಣೀರು ಹಾಕಿದ್ದೇನೆ. ಅದು ಯಾರಿಗೂ ಗೊತ್ತಿಲ್ಲ'' - ನಟಿ ವಿಜಯಲಕ್ಷ್ಮಿ

More from Filmibeat

English summary
Why did Kannada Actress Vijayalakshmi attempt to commit suicide.? Read the article to know the answer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X