For Quick Alerts
  ALLOW NOTIFICATIONS  
  For Daily Alerts

  ನಟ ಸೃಜನ್ ಲೋಕೇಶ್-ವಿಜಯಲಕ್ಷ್ಮಿ ಮದುವೆ ಮುರಿದು ಬೀಳಲು 'ಇದೇ' ಅಸಲಿ ಕಾರಣ.!

  By Harshitha
  |
  ಸೃಜನ್ ಬಗ್ಗೆ ವಿಜಯಲಕ್ಷ್ಮಿ ಹೇಳಿದ್ದೇನು ? | FIlmibeat Kannada

  ಕಿರುತೆರೆ ನಟಿ ಗ್ರೀಷ್ಮಾ ರವರನ್ನ ಮದುವೆ ಆಗಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸುಖ ಸಂಸಾರ ನಡೆಸುತ್ತಿದ್ದಾರೆ. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ಹೋದರೆ ನಟಿ ವಿಜಯಲಕ್ಷ್ಮಿ ರವರನ್ನ ನಟ ಸೃಜನ್ ಲೋಕೇಶ್ ಮದುವೆ ಆಗಬೇಕಿತ್ತು.

  ನಟ ಲೋಕೇಶ್-ಗಿರಿಜಾ ಲೋಕೇಶ್ ಪುತ್ರ ಸೃಜನ್ ಹಾಗೂ ನಟಿ ವಿಜಯಲಕ್ಷ್ಮಿ ದಂಪತಿಗಳಾಗಬೇಕಿತ್ತು. ಮೂರು ವರ್ಷಗಳ ಕಾಲ ಸೃಜನ್ ಲೋಕೇಶ್ ಹಾಗೂ ವಿಜಯಲಕ್ಷ್ಮಿ ಪ್ರೀತಿಸಿದ್ದರು. ಇಬ್ಬರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

  ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ಇಬ್ಬರ ಮಧ್ಯೆ ಬಿರುಕು ಮೂಡಿತು. ಮದುವೆ ಮುರಿದು ಬಿತ್ತು. ಅಸಲಿಗೆ, ಸೃಜನ್-ವಿಜಯಲಕ್ಷ್ಮಿ ಮದುವೆ ಮುರಿದು ಬೀಳಲು ಕಾರಣ ಏನು.?

  ಈ ಪ್ರಶ್ನೆಗೆ ಸುವರ್ಣ ನ್ಯೂಸ್ 24*7 ವಾಹಿನಿಯಲ್ಲಿ ನಟಿ ವಿಜಯಲಕ್ಷ್ಮಿ ಉತ್ತರಿಸಿದ್ದಾರೆ. ಮುಂದೆ ಓದಿರಿ...

  [ಕೃಪೆ: ಸುವರ್ಣ ನ್ಯೂಸ್ 24*7]

  ಸೃಜನ್-ವಿಜಯಲಕ್ಷ್ಮಿ ಮದುವೆ ಮುರಿದು ಬೀಳಲು ಕಾರಣ ಏನು.?

  ಸೃಜನ್-ವಿಜಯಲಕ್ಷ್ಮಿ ಮದುವೆ ಮುರಿದು ಬೀಳಲು ಕಾರಣ ಏನು.?

  ''ಸೃಜನ್ ಲೋಕೇಶ್ ಅವರ ಜೊತೆಗೆ ಎಂಗೇಜ್ ಮೆಂಟ್ ವರೆಗೂ ಬಂತು. ಕೊನೆಗೆ ಸ್ವಲ್ಪ ಮನಸ್ತಾಪ ಆಯ್ತು. ವಿವಾದಗಳು ನನ್ನ ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿತು'' - ನಟಿ ವಿಜಯಲಕ್ಷ್ಮಿ

  ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ನಿಜ.! ಕಹಿ ಅಧ್ಯಾಯ ಇಲ್ಲಿದೆ..ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದು ನಿಜ.! ಕಹಿ ಅಧ್ಯಾಯ ಇಲ್ಲಿದೆ..

  ಪ್ರೀತಿಸುವವರಿಗೆ ನಂಬಿಕೆ ಇತ್ತು

  ಪ್ರೀತಿಸುವವರಿಗೆ ನಂಬಿಕೆ ಇತ್ತು

  ''ಪ್ರೀತಿಸುವವರು ನನ್ನ ಮೇಲೆ ನಂಬಿಕೆ ಇಟ್ಟಿದ್ದರೂ, ಸುತ್ತ-ಮುತ್ತ ಇದ್ದವರು ಮನೆಗೆ ತೆಗೆದುಕೊಳ್ಳುವುದೋ, ಬೇಡ್ವೋ ಅಂತ ಯೋಚನೆ ಮಾಡಿದರು'' - ನಟ ವಿಜಯಲಕ್ಷ್ಮಿ

  ವಿಜಯಲಕ್ಷ್ಮಿಗೆ 'ಚಪ್ಪಲಿ' ವಿಜಿ ಅಂದಿದ್ಯಾರು.? ವರ್ಷಗಳ ಬಳಿಕ ವಿವಾದದ ಸತ್ಯ ಅನಾವರಣ..ವಿಜಯಲಕ್ಷ್ಮಿಗೆ 'ಚಪ್ಪಲಿ' ವಿಜಿ ಅಂದಿದ್ಯಾರು.? ವರ್ಷಗಳ ಬಳಿಕ ವಿವಾದದ ಸತ್ಯ ಅನಾವರಣ..

  ಅವತ್ತೇ ಮಾತನಾಡಬೇಕಿತ್ತು.!

  ಅವತ್ತೇ ಮಾತನಾಡಬೇಕಿತ್ತು.!

  ''ವಿವಾದಗಳು ಆದಾಗ, ನಾನು ಅವತ್ತೇ ಮಾತನಾಡಿ ಎಲ್ಲದಕ್ಕೂ ಸ್ಪಷ್ಟನೆ ಕೊಡಬೇಕಿತ್ತು. ಆದ್ರೆ, ನಾನು ಸುಮ್ಮನೆ ಇದ್ದು ಬಿಟ್ಟೆ. ಅದು ನನ್ನ ವೈಯುಕ್ತಿಕ ಜೀವನದ ಮೇಲೆಯೂ ಪರಿಣಾಮ ಬೀರಿತು'' - ನಟಿ ವಿಜಯಲಕ್ಷ್ಮಿ

  ವಿಜಯಲಕ್ಷ್ಮಿ ಕುಟುಂಬಕ್ಕೆ ನಟಿ ಜಯಪ್ರದ ಸಹೋದರ ಕೊಟ್ಟ ಯಮಯಾತನೆ ಅಷ್ಟಿಷ್ಟಲ್ಲ.!ವಿಜಯಲಕ್ಷ್ಮಿ ಕುಟುಂಬಕ್ಕೆ ನಟಿ ಜಯಪ್ರದ ಸಹೋದರ ಕೊಟ್ಟ ಯಮಯಾತನೆ ಅಷ್ಟಿಷ್ಟಲ್ಲ.!

  ಸೃಜನ್ ಬಗ್ಗೆ ಬೇಸರ ಇಲ್ಲ

  ಸೃಜನ್ ಬಗ್ಗೆ ಬೇಸರ ಇಲ್ಲ

  ''ಸೃಜನ್ ಬಗ್ಗೆ ಬೇಸರ ಇಲ್ಲ. ಒಳ್ಳೆಯ ರೀತಿಯಲ್ಲೇ ಬೇರೆ ಆದ್ವಿ. ಈ ಸಮಯದಲ್ಲಿ ಅವರನ್ನ ಎಳೆದು ತರುವುದು ತಪ್ಪು. ಅವರಿಗೆ ಮದುವೆ ಆಗಿದೆ. ಅವರು ಚೆನ್ನಾಗಿರಲಿ'' ಎಂದು ನಟಿ ವಿಜಯಲಕ್ಷ್ಮಿ ಹಾರೈಸಿದರು.

  ಯಾರೂ genuine ಆಗಿ ಇರಲಿಲ್ಲ

  ಯಾರೂ genuine ಆಗಿ ಇರಲಿಲ್ಲ

  ''ಬೇಕಾದಷ್ಟು ಮದುವೆ ಪ್ರಪೋಸಲ್ ಬಂದಿತ್ತು. ಆದ್ರೆ, ಸೃಜನ್ ಬಿಟ್ಟರೆ ಇನ್ಯಾರೂ genuine ಆಗಿ ಇರಲಿಲ್ಲ. ಕೆಲವರಿಗೆ ಕಮಿಟ್ಮೆಂಟ್ ಇಷ್ಟ ಇರಲಿಲ್ಲ. ಬಳಿಕ ಜಾತಿ ಅಂತ ಶುರು ಆಯ್ತು. ಇಷ್ಟೆಲ್ಲ ಆಗಿದ್ದಕ್ಕೆ, ಮದುವೆ ಆಗಲು ಮನಸ್ಸು ಮಾಡಲಿಲ್ಲ'' - ನಟಿ ವಿಜಯಲಕ್ಷ್ಮಿ

  ಮೊದಲು ಅಕ್ಕನ ಸಂಸಾರ ಸರಿ ಆಗಬೇಕು

  ಮೊದಲು ಅಕ್ಕನ ಸಂಸಾರ ಸರಿ ಆಗಬೇಕು

  ''ನಾನು ಯಾವತ್ತೂ ತಪ್ಪು ದಾರಿ ಹಿಡಿದಿಲ್ಲ. ನಾನು ಇಲ್ಲಿಯವರೆಗೂ ಮದುವೆ ಕೂಡ ಮಾಡಿಕೊಂಡಿಲ್ಲ. ಯಾಕೆ ಅಂದ್ರೆ, ನನ್ನ ಕಣ್ಣ ಮುಂದೆಯೇ ಅಕ್ಕನ ಜೀವನ ಹಾಳಾಗಿರುವಾಗ, ನಾನು ಯಾರನ್ನೋ ಮದುವೆ ಆಗಿ ಹೇಗೆ ಖುಷಿಯಾಗಿರಲಿ.? ನನ್ನ ಅಕ್ಕನ ಜೀವನ ಸರಿಯಾಗುವವರೆಗೂ ನಾನು ನನ್ನ ಜೀವನದಲ್ಲಿ ಯಾರನ್ನೂ ಕರೆದುಕೊಂಡು ಬರಲ್ಲ'' - ನಟಿ ವಿಜಯಲಕ್ಷ್ಮಿ

  English summary
  Why did Kannada Actress Vijayalakshmi-Srujan Lokesh broke up after 3 years of dating.? Read the article to know more...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X