ಹೊಂಬಾಳೆ ಬಳಿಕ ರಾಜ್‌ ಬಿ ಶೆಟ್ಟಿ ಅವರನ್ನು ಅನ್‌ಫಾಲೋ ಮಾಡಿದ್ರಾ ರಿಷಬ್ ಶೆಟ್ಟಿ?

ಮೊದಲೆಲ್ಲಾ ಇಬ್ಬರು ವ್ಯಕ್ತಿಗಳ ನಡುವಿನ ಮನಸ್ತಾಪ, ಮಾತು ಬಿಡುವ ವಿಚಾರಗಳು ಎಲ್ಲರಿಗೂ ಅಷ್ಟು ಸುಲಭವಾಗಿ ಗೊತ್ತಾಗುತ್ತಿರಲಿಲ್ಲ. ಅದಕ್ಕೆ ಬಹಳ ಸಮಯ ಬೇಕಾಗುತ್ತಿತ್ತು. ಆದರೆ ಈ ಸೋಶಿಯಲ್ ಮೀಡಿಯಾದಲ್ಲಿ ಯಾವುದೋ ರೀತಿಯಲ್ಲಿ ಇಂತಹ ವಿಚಾರಗಳು ಬಹಿರಂಗವಾಗುತ್ತದೆ. '45' ಚಿತ್ರದಲ್ಲಿ ನಟಿಸಿದ್ದ ರಾಜ್ ಬಿ ಶೆಟ್ಟಿ ಹೆಸರು ರಿಷಬ್ ಶೆಟ್ಟಿ ತೆಗೆದುಕೊಂಡಿಲ್ಲ. ಹಾಗಾಗಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಗುಲ್ಲಾಗಿತ್ತು.

ರಿಷಬ್ ಶೆಟ್ಟಿ ಜೊತೆ ಯಾವುದೇ ಮನಸ್ತಾಪ ಇಲ್ಲ ಎಂದು ರಾಜ್. ಶೆಟ್ಟಿ ಹೇಳಿದ್ದಾರೆ. ಆದರೂ ಇಂತಾದೊಂದ ಊಹಾಪೋಹ ಅಭಿಮಾನಿಗಳಲ್ಲಿದೆ. ಅದಕ್ಕೆ ಇಂಬು ನೀಡುವಂತೆ ಇನ್‌ಸ್ಟಾಗ್ರಾಮ್‌ನಲ್ಲಿ ರಾಜ್ ಬಿ ಶೆಟ್ಟಿ ಅವರನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದಾರೆ ಎನ್ನಲಾಗ್ತಿದೆ. ಅಥವಾ ಮೊದಲಿನಿಂದ ಅವರನ್ನು ಫಾಲೋ ಮಾಡುತ್ತಿರಲಿಲ್ವಾ? ಎನ್ನುವ ಅನುಮಾನ ಮೂಡಿದೆ.

Why Did Rishabh Shetty Unfollow Raj B Shetty in Instagram Fans Speculate

ರಾಜ್‌ ಬಿ ಶೆಟ್ಟಿ ಮಾತ್ರ ಈ ಕ್ಷಣಕ್ಕೂ ಇನ್‌ಸ್ಟಾಗ್ರಾಮ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಫಿಲ್ಮ್ಸ್ ಅಕೌಂಟ್‌ಗಳನ್ನು ಫಾಲೋ ಮಾಡುತ್ತಿದ್ದಾರೆ. ಸ್ಟಾರ್ ನಟ, ನಟಿಯರ ಸ್ನೇಹ, ಭಿನ್ನಾಭಿಪ್ರಾಯ ಹೊಸದೇನು ಅಲ್ಲ. ಆತ್ಮೀಯ ಸ್ನೇಹಿತರಾಗಿದ್ದ ದರ್ಶನ್ ಹಾಗೂ ಸುದೀಪ್ ಬಳಿಕ ದೂರಾಗಿದ್ದು ಗೊತ್ತೇಯಿದೆ. "ನಾವಿಬ್ಬರೂ ಇನ್ಮುಂದೆ ಸ್ನೇಹಿತರಲ್ಲ" ಎಂದು ಟ್ವಿಟ್ಟರ್‌ನಲ್ಲಿ ದರ್ಶನ್ ಘೋಷಿಸುವ ಮಟ್ಟಕ್ಕೆ ಇಬ್ಬರ ನಡುವಿನ ಸ್ನೇಹ ಹಳಸಿತ್ತು.

ರಿಷಬ್ ಹಾಗೂ ರಾಜ್ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಊಪಾಪೋಹ ಬಹಳ ದಿನಗಳಿಂದ ಶುರುವಾಗಿದೆ. ಈ ಬಗ್ಗೆ ರಾಜ್ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ. ಆದರೆ ರಿಷಬ್ ಶೆಟ್ಟಿ ಮಾತ್ರ ಮೌನ ವಹಿಸಿದ್ದಾರೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಹಾಗೂ ರಿಷಬ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಅದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಈ ಬಗ್ಗೆ ಕೂಡ ರಿಷಬ್ ಇನ್ನು ಪ್ರತಿಕ್ರಿಯಿಸುವ ಗೋಜಿಗೆ ಹೋಗಿಲ್ಲ.

Why Did Rishabh Shetty Unfollow Raj B Shetty in Instagram Fans Speculate

'ಕಾಂತಾರ-1' ಚಿತ್ರದ ಸಂಭಾವನೆ ವಿಚಾರಕ್ಕೆ ಹೊಂಬಾಳೆ ಫಿಲ್ಮ್ಸ್ ಜೊತೆ ರಿಷನ್ ಶೆಟ್ಟಿ ಭಿನ್ನಾಭಿಪ್ರಾಯ ಮೂಡಿದೆ, ಬೇರೆ ಬ್ಯಾನರ್‌ಗಳಲ್ಲಿ ರಿಷಬ್ ಕೆಲಸ ಮಾಡುತ್ತಿರುವುದು ಹೊಂಬಾಳೆ ಅಸಮಾಧಾನಕ್ಕೆ ಕಾರಣ ಅಂತೆಲ್ಲಾ ಗುಸುಗುಸು ಜೋರಾಗಿದೆ. ಆದರೆ ಯಾರೊಬ್ಬರೂ ಇದಕ್ಕೆ ಸ್ಪಷ್ಟನೆ ಕೊಟ್ಟಿಲ್ಲ. ಅದೆಲ್ಲಾ ಏನೇ ಇದ್ದರೂ ರಾಜ್ ಬಿ ಶೆಟ್ಟಿ ಅವರನ್ನು ರಿಷಬ್ ಶೆಟ್ಟಿ ಅನ್‌ಫಾಲೋ ಮಾಡಿದ್ದು ಯಾಕೆ? ಎನ್ನುವ ಪ್ರಶ್ನೆಗೆ ಅಭಿಮಾನಿಗಳನ್ನು ಕಾಡುತ್ತಿದೆ.

ಕನ್ನಡ ಚಿತ್ರರಂಗದ 'RRR'(ರಿಷಬ್, ರಕ್ಷಿತ್, ರಾಜ್) ಎಂದು ಅಭಿಮಾನಿಗಳು ಕರೆಯುತ್ತಾರೆ. ಶೆಟ್ಟಿ ಗ್ಯಾಂಗ್ ಎಂದು ಮೂದಲಿಸುವವರು ಇದ್ದಾರೆ. ಆದರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ತಮ್ಮ ಕೆಲಸಗಳ ಮೂಲಕವೇ ಮೂವರು ಉತ್ತರ ಕೊಡುತ್ತಾ ಬರ್ತಿದ್ದಾರೆ. ಇಬ್ಬರ ನಡುವೆ ಬಹಳ ಆತ್ಮೀಯ ಒಡನಾಟ ಇತ್ತು. ಒಬ್ಬರ ಚಿತ್ರಕ್ಕೆ ಮತ್ತೊಬ್ಬರು ಬೆಂಬಲವಾಗಿ ನಿಲ್ಲುತ್ತಾ ಬಂದಿದ್ದಾರೆ. 'ಕಾಂತಾರ' ಚಿತ್ರಕ್ಕಾಗಿ ಕೂಡ ರಾಜ್ ಬಿ. ಶೆಟ್ಟಿ ಕೆಲಸ ಮಾಡಿದ್ದರ. ಕೋಲ ಸನ್ನಿವೇಶಗಳ ಕೊರಿಯೋಗ್ರಫಿ ಮಾಡಿದ್ದರು. ಆದರೆ ಪಾರ್ಟ್-1 ಚಿತ್ರಕ್ಕೆ ಕೆಲಸ ಮಾಡಲಿಲ್ಲ.

'45' ಚಿತ್ರಕ್ಕೆ ವಿಶ್ ಮಾಡುವ ವೇಳೆ ರಿಷಬ್ ಶೆಟ್ಟಿ ನಿಮ್ಮ ಹೆಸರು ತೆಗೆದುಕೊಳ್ಳಲಿಲ್ಲ ಎನ್ನುವ ಪ್ರಶ್ನೆಗೆ ಈಗಾಗಲೇ ರಾಜ್ ಉತ್ತರಿಸಿದ್ದಾರೆ. "ಇದು ಶಿವಣ್ಣ ಹಾಗೂ ಉಪೇಂದ್ರ ಅವರ ಸಿನಿಮಾ. ಇದರಲ್ಲಿ ನಾನು ಒಂದು ಪಾತ್ರ ಮಾಡಿದ್ದೀನಿ ಅಷ್ಟೆ. ಕೆಲವೊಮ್ಮೆ ಫ್ಲೋನಲ್ಲಿ ಮಾತಾಡಬೇಕಾದರೆ, ಹೆಸರು ನೆನಪಿಗೆ ಬಾರದೆ ಇರಬಹುದು ಅಷ್ಟೇ. ಅಥವಾ ಫ್ಲೋನಲ್ಲಿ ಮಿಸ್ ಆಗಿರಬಹುದು. "ನನಗಂತೂ ಏನೂ ಮನಸ್ತಾಪವಿಲ್ಲ. ನಾನು ಎಲ್ಲೂ ಹೆಸರು ಮಿಸ್ ಮಾಡಲಿಲ್ಲ. ಉದ್ದೇಶಪೂರ್ವಕವಾಗಿ ಮಿಸ್ ಮಾಡಿದ್ದಾರೆ ಅಂತ ಅನಿಸುವುದಿಲ್ಲ. ಯಾವುದೇ ಫ್ಲೋನಲ್ಲಿ ಮಿಸ್ ಮಾಡಿರಬಹುದು. ಇದನ್ನು ಬಿಡಬಹುದು ಅಂತ ಅನಿಸುತ್ತೆ. ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದು ಬೇಡ. ಅದು ಚುಚ್ಚಬೇಕು ಅಂತ ಹೀಗೆ ಮಾಡ್ತಾರೆ ಅಂದುಕೊಂಡರೆ, ಅದು ಯಾಕೆ ಮಾಡುತ್ತಾರೆ. ಅದು ನನಗೆ ತಾಗುವುದೂ ಇಲ್ಲ" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X