ಹಠಕ್ಕೆ ಬಿದ್ದ ನಟ ಯಶ್: ದಿಢೀರ್ ಅಂತ ಪೆಂಟ್ ಹೌಸ್ ಖರೀದಿಸಿದ ರಹಸ್ಯ ಬಯಲು.!

By Harshitha

Recommended Video

ಮನೆ ಬಾಡಿಗೆಗೆ ಕೊಡಲ್ಲ ಅಂದವರಿಗೆ ಥ್ಯಾಂಕ್ಸ್ ಹೇಳಿದ ಯಶ್| Filmibeat Kannada

ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಜೊತೆ ಮದುವೆ ಆದ್ಮೇಲೆ, ಬೇರೆ ಮನೆ ಮಾಡಲು ರಾಕಿಂಗ್ ಸ್ಟಾರ್ ಯಶ್ ಮನಸ್ಸು ಮಾಡಿದರು. ಗಲ್ಫ್ ಕೋರ್ಸ್ ಬಳಿ ಯಶ್ ದಂಪತಿ ಒಂದು ಪೆಂಟ್ ಹೌಸ್ ಖರೀದಿಸಿದರು. ಸದ್ಯಕ್ಕೆ ಇಂಟೀರಿಯರ್ ಡಿಸೈನಿಂಗ್ ಕೆಲಸ ನಡೆಯುತ್ತಿದ್ದು, ಅದು ಮುಗಿದ ಬಳಿಕ ಯಶ್ ಹಾಗೂ ರಾಧಿಕಾ ಅಪಾರ್ಟ್ಮೆಂಟ್ ಒಂದರ ಟಾಪ್ ಫ್ಲೋರ್ ನಲ್ಲಿರುವ ಮನೆಗೆ ಕಾಲಿಡಲಿದ್ದಾರೆ.

ಅಷ್ಟಕ್ಕೂ, ಬೇರೆ ಮನೆ ಮಾಡುವ ಯೋಚನೆ ಯಶ್ ಗೆ ಬಂದಿದ್ದು ಯಾಕೆ.? ದಿಢೀರ್ ಅಂತ ನಟ ಯಶ್ ಪೆಂಟ್ ಹೌಸ್ ಖರೀದಿ ಮಾಡಿದ್ದು ಯಾಕೆ.? ಎಂಬ ಪ್ರಶ್ನೆಗಳು ಉದ್ಭವ ಆಗಬಹುದು. ಇದಕ್ಕೆ ಯಶ್ ಉತ್ತರ ಕೊಟ್ಟಿದ್ದಾರೆ.

ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದ ಯಶ್, ಪೆಂಟ್ ಹೌಸ್ ಖರೀದಿ ಮಾಡಿದ್ದು ಹಠಕ್ಕಾಗಿ ಅನ್ನೋದು ನಿಮಗೆ ನೆನಪಿರಲಿ.!

ಕರ್ನಾಟಕದಲ್ಲಿ ಯಶ್ 'ರಾಕಿಂಗ್ ಸ್ಟಾರ್'. ಯಶ್ ರನ್ನ ಪ್ರೀತಿಸುವ ಲೆಕ್ಕವಿಲ್ಲದಷ್ಟು ಅಭಿಮಾನಿಗಳು ಇಲ್ಲಿದ್ದಾರೆ. ಸಮಾಜಮುಖಿ ಕೆಲಸ ಮಾಡಿರುವ ಯಶ್ ಗೆ ಎಷ್ಟೋ ಜನ ಹ್ಯಾಟ್ಸ್ ಆಫ್ ಹೇಳಿದ್ದಾರೆ. ಹೀಗಿದ್ದರೂ, ಯಶ್ ಗೆ 'ಬಾಡಿಗೆ ಮನೆ ಕೊಡಲ್ಲ' ಅಂತ ಯಾರೋ ಒಬ್ಬರು ಹೇಳಿದ್ದರಂತೆ. ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿದ ಯಶ್ ಮೂರೇ ತಿಂಗಳಲ್ಲಿ ಪೆಂಟ್ ಹೌಸ್ ಖರೀದಿ ಮಾಡಿ ತೋರಿಸಿದ್ದಾರೆ.

ಅಸಲಿಗೆ, ನಾವ್ ಹೇಳ್ತಿರೋದು ಯಶ್ ರವರ ಬನಶಂಕರಿ ಬಾಡಿಗೆ ಮನೆ ವಿವಾದದ ಕಥೆಯಲ್ಲ. ತಾಜ್ ವೆಸ್ಟ್ ಎಂಡ್ ಸುತ್ತ ಮುತ್ತ ನಡೆದ ಘಟನೆ ಬಗ್ಗೆ.! ಏನಿದು ಹೊಸ ಮ್ಯಾಟರ್ ಅಂತ ಕಣ್ಣು ಬಾಯಿ ಬಿಡ್ತಿದ್ರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಬಾಡಿಗೆ ಮನೆ ಹುಡುಕುತ್ತಿದ್ದ ಯಶ್.!

ಬಾಡಿಗೆ ಮನೆ ಹುಡುಕುತ್ತಿದ್ದ ಯಶ್.!

ನಟಿ ರಾಧಿಕಾ ಪಂಡಿತ್ ರನ್ನ ಮದುವೆ ಆದ್ಮೇಲೆ, ತಾಜ್ ವೆಸ್ಟ್ ಎಂಡ್ ಸುತ್ತ ಮುತ್ತ ಒಂದು ಬಾಡಿಗೆ ಮನೆಗಾಗಿ ಯಶ್ ಹುಡುಕಾಟ ನಡೆಸುತ್ತಿದ್ದರು. ಒಂದು ಮನೆ ಇಷ್ಟ ಆಗಿ, ಅದಕ್ಕೆ ಇನ್ನೇನು ಅಡ್ವಾನ್ಸ್ ಕೊಡಬೇಕು ಅಂತಿರೋವಾಗಲೇ, ಅದಾಗಲೇ ಯಶ್ ರವರ ಬನಶಂಕರಿ ಬಾಡಿಗೆ ಮನೆಯ ವಿವಾದ ಅರಿತಿದ್ದ ವೆಸ್ಟ್ ಎಂಡ್ ಬಳಿಯ ಮನೆ ಮಾಲೀಕರು 'ಯಶ್ ಗೆ ಬಾಡಿಗೆ ಮನೆ ಕೊಡಲ್ಲ' ಅಂದುಬಿಟ್ಟರಂತೆ.! ಈ ಮಾತನ್ನ ಕೇಳಿಸಿಕೊಂಡು ಹಠಕ್ಕೆ ಬಿದ್ದ ಯಶ್ ಈಗ ಪ್ರತಿಷ್ಟಿತ ಅಪಾರ್ಟ್ ಮೆಂಟ್ ಒಂದರ ಪೆಂಟ್ ಹೌಸ್ ಮಾಲೀಕರಾಗಿದ್ದಾರೆ.

ಘಟನೆ ಬಗ್ಗೆ ವಿವರಣೆ ನೀಡಿದ ಯಶ್

ಘಟನೆ ಬಗ್ಗೆ ವಿವರಣೆ ನೀಡಿದ ಯಶ್

ಈ ಘಟನೆ ಕುರಿತು ಫೇಸ್ ಬುಕ್ ಲೈವ್ ನಲ್ಲಿ ವಿವರಣೆ ನೀಡಿದ್ದಾರೆ ನಟ ಯಶ್. ಅವರು ಏನು ಹೇಳಿದ್ದಾರೆ ಅಂತ ಮುಂದೆ ಓದಿರಿ...

ಯಶ್ ಆಫೀಸ್ ಇರುವುದು ವೆಸ್ಟ್ ಎಂಡ್ ನಲ್ಲಿ.!

ಯಶ್ ಆಫೀಸ್ ಇರುವುದು ವೆಸ್ಟ್ ಎಂಡ್ ನಲ್ಲಿ.!

''ನಾನು-ರಾಧಿಕಾ ಮದುವೆ ಆದ್ಮೇಲೆ ಒಂದು ಬಾಡಿಗೆ ಮನೆ ಹುಡುಕುತ್ತಿದ್ವಿ. ನನ್ನ ಆಫೀಸ್ ಇರುವುದು ವೆಸ್ಟ್ ಎಂಡ್ ನಲ್ಲಿ. ಅದಕ್ಕೆ ಹತ್ತಿರದಲ್ಲಿ ಮನೆ ಮಾಡಬೇಕು ಅಂತ ನಾನು, ನನ್ನ ತಾಯಿ ಮನೆ ಹುಡುಕುತ್ತಿದ್ವಿ. ಯಾವುದೋ ಒಂದು ಮನೆ ಓಕೆ ಆಯ್ತು. ಇನ್ನೇನು ಎಲ್ಲವೂ ಕ್ಲಿಯರ್ ಆಯ್ತು ಅನ್ನೋಷ್ಟರಲ್ಲಿ ನನಗೆ ಬಾಡಿಗೆ ಮನೆ ಕೊಡಲ್ಲ ಅಂದರು'' - ನಟ ಯಶ್

ನನಗೆ ನನ್ನ ರಾಜ್ಯದಲ್ಲೇ ಬಾಡಿಗೆ ಮನೆ ಸಿಗುತ್ತಿಲ್ಲ.!

ನನಗೆ ನನ್ನ ರಾಜ್ಯದಲ್ಲೇ ಬಾಡಿಗೆ ಮನೆ ಸಿಗುತ್ತಿಲ್ಲ.!

''ಯಾವುದೇ ಕಾರಣಕ್ಕೂ ನನ್ನ ಸೊಸೆಯನ್ನ ಬಾಡಿಗೆ ಮನೆಗೆ ಕರ್ಕೊಂಡು ಹೋಗಬೇಡ, ನಮಗೆ ಆಗಿರುವ ನೋವು ಆಕೆಗೆ ಆಗಬಾರದು ಅಂತ ನನ್ನ ತಾಯಿ ಹೇಳಿದರು. ಆದ್ರೆ, ನಾನು ಮನೆ ಕಟ್ಟುವ ಯೋಜನೆಯಲ್ಲಿದ್ದೆ. ಬಾಡಿಗೆ ಮನೆ ವಿವಾದದಿಂದಾಗಿ ನನಗೆ ನನ್ನ ರಾಜ್ಯದಲ್ಲಿ, ನಾನು ಇಷ್ಟು ಪ್ರೀತಿ ಗಳಿಸಿರುವ ಜಾಗದಲ್ಲಿ ಬಾಡಿಗೆ ಮನೆ ಕೊಡಲ್ಲ ಅಂತ ಹೇಳಿದರು'' - ನಟ ಯಶ್

ಪೆಂಟ್ ಹೌಸ್ ಖರೀದಿಸಿದೆ

ಪೆಂಟ್ ಹೌಸ್ ಖರೀದಿಸಿದೆ

''ಅದೇ ಹಠಕ್ಕೆ ಮೂರೇ ತಿಂಗಳಲ್ಲಿ ಗಾಲ್ಫ್ ಕೋರ್ಸ್ ಎದುರುಗಡೆ ನಾನು ಒಂದು ಪೆಂಟ್ ಹೌಸ್ ಖರೀದಿಸಿದೆ. ನನಗೆ ಬಾಡಿಗೆ ಮನೆ ಕೊಡಲ್ಲ ಅಂದವರಿಗೆ ನಾನು ಥ್ಯಾಂಕ್ಸ್ ಹೇಳಲು ಇಷ್ಟ ಪಡುತ್ತೇನೆ'' - ನಟ ಯಶ್

More from Filmibeat

English summary
Why did Yash buy pent house near Golf Course, Bengaluru? Here is an answer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X