ದರ್ಶನ್, ಶಿವಣ್ಣ, ಯಶ್ ಯಾಕೆ ಈ ನಿರ್ಲಕ್ಷ್ಯ? ಕಣ್ಣೀರಿಟ್ಟು ಅಂಗಲಾಚಿದ ವಿಜಯಲಕ್ಷ್ಮಿ

ನಾಗಮಂಡಲ, ಜೋಡಿಹಕ್ಕಿ, ಸೂರ್ಯವಂಶ, ಸ್ವಸ್ತಿಕ್, ಹಬ್ಬ ಅಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡಿಗರ ಪ್ರೀತಿ ಪಡೆದುಕೊಂಡಿದ್ದ ನಟಿ ವಿಜಯಲಕ್ಷ್ಮಿ ಇಂದು ತೀರಾ ಕಷ್ಟದ ಸ್ಥಿತಿಯಲ್ಲಿದ್ದಾರೆ. ವಿಜಯಲಕ್ಷ್ಮಿ ಈ ಸ್ಥಿತಿ ನೋಡಿದ ಸಾಮಾನ್ಯ ಜನಕ್ಕೆ ನಂಬಲು ಸಾಧ್ಯವೇ ಆಗುತ್ತಿಲ್ಲ.

ಬಹಿರಂಗವಾಗಿ ತನ್ನ ಕಷ್ಟ ಹೇಳಿಕೊಳ್ಳುತ್ತಿದ್ದರೂ ಇಂಡಸ್ಟ್ರಿಯಿಂದ ಯಾರೊಬ್ಬರು ನೆರವು ನೀಡದೇ ಇರುವುದು ದುರ್ದೈವ. ಇತ್ತೀಚಿಗಷ್ಟೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ವಿಜಯಲಕ್ಷ್ಮಿ ಚಿಕಿತ್ಸೆಗೆ, ಔಷಧಿಗೂ ದುಡ್ಡಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಈಗಲೂ ಆಸ್ಪತ್ರೆಯಿಂದಲೇ ಇಂಡಸ್ಟ್ರಿಯವರನ್ನ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದಾರೆ. ದರ್ಶನ್, ಶಿವಣ್ಣ, ಪುನೀತ್, ಯಶ್, ರಾಘಣ್ಣ ಅಂತಹ ನಟರಿದ್ದರೂ ಯಾಕೆ ನನಗೆ ಸಹಾಯ ಮಾಡ್ತಿಲ್ಲ ಎಂದು ಅಳುತ್ತಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನ ಮಾಡಿ ಮನವಿ ಮಾಡಿರುವುದು ಈಗ ಮನ ಕುಲುಕುತ್ತಿದೆ. ಮುಂದೆ ಓದಿ.....

ಇರಲು ಮನೆ ಇಲ್ಲ

ಇರಲು ಮನೆ ಇಲ್ಲ

''ನನಗೆ ಇರೋದಕ್ಕೆ ಮನೆ ಇಲ್ಲ. ಮನೆ ಬೇಕು ಅಂದ್ರೆ ಅಡ್ವಾನ್ಸ್ ಕೊಡೋಕೆ ಹಣ ಬೇಕು. ಅಷ್ಟು ಹಣ ಎಲ್ಲಿಂದ ಕೊಡಲಿ. ಈಗ ನಾನು ಕೆಲಸಕ್ಕೆ ಹೋಗಬೇಕಾದರೂ ನನಗೆ ಸಮಯ ಬೇಕು. ನನ್ನ ಆರೋಗ್ಯ ಸರಿಯಿಲ್ಲ. ಇಷ್ಟೆಲ್ಲಾ ಕಷ್ಟಗಳನ್ನ ನಾನಾಗೇ ಹೇಳಿಕೊಳ್ಳುತ್ತಿದ್ದರೂ ಯಾರೊಬ್ಬರು ಕೂಡ ನನ್ನ ಬಗ್ಗೆ ಕಾಳಜಿ ತೋರುತ್ತಿಲ್ಲ'' ಎಂದು ಅಂಗಲಾಚಿದ್ದಾರೆ.

ಡಾ ರಾಜ್-ಪಾರ್ವತಮ್ಮ ಇದ್ದಿದ್ರೆ ಈ ಸ್ಥಿತಿ ಬರ್ತಿರಲಿಲ್ಲ

ಡಾ ರಾಜ್-ಪಾರ್ವತಮ್ಮ ಇದ್ದಿದ್ರೆ ಈ ಸ್ಥಿತಿ ಬರ್ತಿರಲಿಲ್ಲ

ಇಂತಹ ಸಮಯದಲ್ಲಿ ನನಗೆ ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರನ್ನ ತುಂಬಾ ಮಿಸ್ ಮಾಡಿಕೊಳ್ತೀನಿ. ಅವರು ಇದ್ದಿದ್ರೆ ನನಗೆ ಇಂತಹ ಸ್ಥಿತಿ ಬರೋಕೆ ಬಿಡ್ತಿರಲಿಲ್ಲ. ಸುದೀಪ್ ಅವರು ಬಿಟ್ಟರೇ ಬೇರೆ ಯಾರೂ ನನ್ನ ಬಗ್ಗೆ ವಿಚಾರಿಸುತ್ತಿಲ್ಲ ಯಾಕೆ?

ಶಿವಣ್ಣ, ದರ್ಶನ್, ಪುನೀತ್, ಯಶ್ ಏನ್ಮಾಡ್ತಿದ್ದಾರೆ?

ಶಿವಣ್ಣ, ದರ್ಶನ್, ಪುನೀತ್, ಯಶ್ ಏನ್ಮಾಡ್ತಿದ್ದಾರೆ?

''ಇಂಡಸ್ಟ್ರಿಯಲ್ಲಿ ಬಹುತೇಕ ಎಲ್ಲ ಸಿನಿಮಾಗಳಲ್ಲೂ ನಟಿಸಿದ್ದೇನೆ. ಸುದೀಪ್ ಅವರು ಬಿಟ್ಟರೇ ಬೇರೆ ಯಾಕೆ ನನ್ನ ಬಗ್ಗೆ ವಿಚಾರಿಸುತ್ತಿಲ್ಲ. ಶಿವಣ್ಣ, ರಾಘಣ್ಣ, ದರ್ಶನ್, ಪುನೀತ್, ಯಶ್ ಯಾಕೆ ಸಹಾಯ ಮಾಡ್ತಿಲ್ಲ'' ಎಂದು ಕೇಳಿಕೊಂಡಿದ್ದಾರೆ.

ನನ್ನನ್ನು ಒಬ್ಬಂಟಿ ಯಾಕೆ ಮಾಡಿದ್ರಿ?

ನನ್ನನ್ನು ಒಬ್ಬಂಟಿ ಯಾಕೆ ಮಾಡಿದ್ರಿ?

''ನಾನು ಪ್ರತಿಯೊಂದು ಸಲನೂ ವಿಡಿಯೋ ಮಾಡ್ಬೇಕಾದರೇ ಅಳುತ್ತಿದ್ದೇನೆ. ಯಾರೂ ನನ್ನ ಬಗ್ಗೆ ಕೇರ್ ಮಾಡ್ತಿಲ್ಲ. ನಾನು ಅಂತಹ ತಪ್ಪು ಏನು ಮಾಡಿದ್ದೇನೆ. ಯಾಕೆ ನನ್ನ ಬಗ್ಗೆ ಇಷ್ಟು ಅಸಡ್ಡೆ ನಿಮಗೆ. ನನ್ನ ಪ್ರಶ್ನಿಗಳಿಗೆ ಉತ್ತರ ಕೊಡಿ. ನಾನು ಈಗ ಸಿನಿಮಾಗಳನ್ನ ಮಾಡೋದಕ್ಕೂ ಆಗಲ್ಲ. ನನಗೆ ವಿಶ್ರಾಂತಿ ಬೇಕು. ನಾನು ಮಾನಸಿಕವಾಗಿ ನೊಂದಿದ್ದೇನೆ. ಅದರಿಂದ ಹೊರಬರಬೇಕು''

ಒಂದು ಲಕ್ಷ ಸಹಾಯ ಮಾಡಿದ ಸುದೀಪ್

ಒಂದು ಲಕ್ಷ ಸಹಾಯ ಮಾಡಿದ ಸುದೀಪ್

ವಿಜಯಲಕ್ಷ್ಮಿ ಅವರು ಆಸ್ಪತ್ರೆಯಲ್ಲಿದ್ದಾರೆ ಎಂಬ ಸುದ್ದಿ ತಿಳಿದ ಕಿಚ್ಚ ಸುದೀಪ್, ಒಂದು ಲಕ್ಷ ಧನ ಸಹಾಯ ಮಾಡಿ, ಮಾನವೀಯತೆ ಮೆರೆದಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವಿಜಯಲಕ್ಷ್ಮಿ, ಸುದೀಪ್ ಬಿಟ್ಟರೇ ಬೇರೆಯವರಿಗೆ ನನ್ನ ಬಗ್ಗೆ ಕಾಳಜಿ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ.

More from Filmibeat

English summary
Why film industry are not helping to Kannada actress Vijayalakshmi? she has been suffering from several health problems from last few days. vijayalakshmi, known for her acting in Nagamandala, Jodi Hakki, Habba etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X