ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ನಿರ್ಮಾಪಕ ಹೇಳಿದ್ದೇನು?
ಸಿನಿಮಾಗಳಲ್ಲಿ ಅವಕಾಶ ಕೊಡುವುದಾಗಿ ಮತ್ತು ಕೊಡಿಸುವುದಾಗಿ ನಂಬಿಸಿ ಹುಡುಗಿಯರಿಗೆ, ಮಹಿಳೆಯರಿಗೆ ವಂಚಿಸಲಾಗುತ್ತಿದೆ ಎಂಬ ಆರೋಪ ಸಿನಿಮಾ ಜಗತ್ತಿನಲ್ಲಿ ಬಹಳ ದೊಡ್ಡ ಚರ್ಚೆಯಾಗಿತ್ತು. ಈ ವಿಚಾರದಲ್ಲಿ ತೆಲುಗು ನಟಿ ಶ್ರೀರೆಡ್ಡಿ ರಸ್ತೆಗಳಿದು, ಅರೆ ನಗ್ನವಾಗಿ ಪ್ರತಿಭಟನೆ ಮಾಡಿ ಸಂಚಲನ ಸೃಷ್ಟಿಸಿದ್ದರು.
ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವ ಅನೇಕರು ಶ್ರೀರೆಡ್ಡಿ ಆರೋಪ ಸತ್ಯ, ಅಂತಹ ಘಟನೆಗಳು ನಡೆಯುತ್ತಿದೆ, ಹುಡುಗಿಯರಿಗೆ ಸಿನಿಮಾ ಹೆಸರಿನಲ್ಲಿ ಅನ್ಯಾಯ ಆಗ್ತಿದೆ ಎಂದು ಧ್ವನಿ ಎತ್ತಿದ್ದರು. ಇದರಿಂದ ಘಟಾನುಘಟಿ ನಿರ್ದೇಶಕ, ನಿರ್ಮಾಪಕ ಹೆಸರುಗಳು ಬಯಲಾಗಿತ್ತು.
ಇದೀಗ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ತೆಲುಗಿನ ಹಿರಿಯ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾರೆಡ್ಡಿ ಅಚ್ಚರಿ ಹೇಳಿಕೆಯನ್ನ ನೀಡಿದ್ದಾರೆ. ರಾತ್ರಿ ವೇಳೆ ಸಿನಿಮಾ ಆಫೀಸ್ ಗೆ ಹುಡುಗಿಯರು ಯಾಕೆ ಹೋಗ್ತಾರೆ? ಎಂಬ ವಿಷಯ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನಲ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಮುಂದೆ ಓದಿ....

ಯುವತಿಯರಿಗೆ ನ್ಯಾಯ ಸಿಗುತ್ತಿಲ್ಲ
'ಸಿನಿಮಾ ಇಂಡಸ್ಟ್ರಿಯಲ್ಲಿ ಯುವತಿಯರಿಗೆ ಅನ್ಯಾಯವಾಗುತ್ತಿರುವುದು ನಿಜಾ ಎಂದು ತೆಲುಗಿನ ಹಿರಿಯ ನಿರ್ದೇಶಕ ಹಾಗೂ ನಿರ್ಮಾಪಕ ತಮ್ಮಾರೆಡ್ಡಿ ಸಮರ್ಥಿಸಿಕೊಂಡಿದ್ದಾರೆ. ಇಂತಹ ಅನ್ಯಾಯಗಳನ್ನ ನಿಯಂತ್ರಿಸಲು ಸರ್ಕಾರ ಯಾವುದೇ ಕ್ರಮ ಹಾಗೂ ಪ್ರಯತ್ನ ಮಾಡಿದ್ರೂ ನ್ಯಾಯ ಸಿಗುತ್ತಿಲ್ಲ' ಎಂದು ಆರೋಪಿಸಿದ್ದಾರೆ.

ರಾತ್ರಿ ಸಮಯ ಯಾಕೆ ಆಫೀಸ್ ಗೆ ಹೋಗ್ಬೇಕು?
ಈ ಸಂಬಂಧ ಮಾತನಾಡುತ್ತಿದ್ದ ತಮ್ಮಾರೆಡ್ಡಿ ಯುವತಿಯರ ಬಗ್ಗೆಯೂ ಪ್ರಶ್ನಿಸಿದ್ದಾರೆ. ''ಕಾಸ್ಟಿಂಗ್ ಕಾಲ್ ಆಹ್ವಾನ ಇಲ್ಲದೇ ಯಾಕೆ ಸಿನಿಮಾ ಆಫೀಸ್ ಗಳಿಗೆ ಭೇಟಿ ಕೊಡ್ತೀರಾ'' ಎಂದು ತಿಮ್ಮಾರೆಡ್ಡಿ ಪ್ರಶ್ನಿಸಿದ್ದಾರೆ. 'ರಾತ್ರಿ ಸಮಯದಲ್ಲಿ ಸಿನಿಮಾ ಕಚೇರಿಗಳಿಗೆ ಹೋಗುವ ಅವಶ್ಯಕತೆ ಏನಿದೆ? ಈ ಬಗ್ಗೆ ಕೇಳಿದ್ರೆ, ನಮಗೆ ಇದು ಅಭ್ಯಾಸ ಆಗಿದೆ. ನಾವು ಯಾವಾಗ ಬೇಕಾದರೂ ಹೋಗಿ ಚಾನ್ಸ್ ಕೇಳ್ತೀವಿ. ಆ ಸಮಯದಲ್ಲಿ ಹೋಗಿ ಕೇಳಿದ್ರೆ ಅವಕಾಶ ಕೊಡ್ತಾರೆ. ಅದಕ್ಕೆ ಹೋಗ್ತೀವಿ ಎಂದು ಕೆಲವರು ಹೇಳಿದ್ದಾರೆ'' ಎಂದು ತಮ್ಮಾರೆಡ್ಡಿ ಬಹಿರಂಗಪಡಿಸಿದ್ದಾರೆ.

ಹೀಗೆ ಮಾಡುವುದು ತಪ್ಪು
''ಸಿನಿಮಾ ಕಾಸ್ಟಿಂಗ್ ಕಾಲ್ ಇಲ್ಲದೇ ಅವರ ಆಫೀಸ್ ಗಳಿಗೆ ಹೋಗುವುದು ತಪ್ಪು. ಅವಕಾಶ ಕೊಡ್ತಾರೋ ಇಲ್ವೋ ಎಂಬ ನಂಬಿಕೆ ಇಲ್ಲದೇ ಮೇಲೆ ಕಚೇರಿಗೆ ಹೋಗಬಾರದು. ಅವರು ಸಿನಿಮಾ ಮಾಡುವುದರ ಬಗ್ಗೆ ಖಚಿತ ಮಾಹಿತಿ ಇಲ್ಲದ ಸಂದರ್ಭದಲ್ಲಿ ಅವಕಾಶ ಕೇಳುವುದು ತಪ್ಪು. ಸರಿ ಪರಿಚಯ ಇರುವವರ ಬಳಿ ಹೋಗಿ ಕೇಳಿದ್ರೂ ಪರವಾಗಿಲ್ಲ. ಆದರೂ ರಾತ್ರಿ ಸಮಯ ಹೋಗುವುದು ತಪ್ಪು'' ಎಂದು ತಮ್ಮಾರೆಡ್ಡಿ ಪ್ರಶ್ನಿಸಿದ್ದಾರೆ.

ನಿಮಗೇಕೆ ಅವಕಾಶ ಕೊಡಬೇಕು?
''ಸಿನಿಮಾಗಳಲ್ಲಿ ಅವಕಾಶ ಕೇಳುವುದು ನಿಮ್ಮ ಹಕ್ಕು. ಆದರೆ ನಿಮಗೆ ಅವಕಾಶ ಕೊಡಬೇಕಾ ಅಥವಾ ಬೇಡವಾ ಎನ್ನುವುದು ಅವರಿಗೆ ಬಿಟ್ಟಿದ್ದು. ಆದರೂ, ಕೆಲವರು ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿಕೊಂಡು ಆಫೀಸ್ ಇಟ್ಟು ಯುವತಿಯರಿಗೆ ಮೋಸ ಮಾಡ್ತಾರೆ. ಅವರನ್ನ ಗುರುತಿಸಿ ಶಿಕ್ಷಿಸಬೇಕು'' ಎಂದು ತಮ್ಮಾರೆಡ್ಡಿ ಹೇಳಿದ್ದಾರೆ.


Click it and Unblock the Notifications