ದ್ವಾರಕೀಶ್ ಅವರಿಂದ ಖರೀದಿಸಿದ ಮನೆಗೆ ಒಮ್ಮೆಯೂ ಕಾಲಿಡದ ರಿಷಬ್ ಶೆಟ್ಟಿ..!

ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಕನ್ನಡದ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಎಂಬ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಬಂದ ರಿಷಬ್ ಇವತ್ತು ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ. ಆದರೆ .. ಈ ಹೆಸರು ಏಕಾಏಕಿ ಬಂದಿದ್ದಲ್ಲ. ಹಗಲಿರುಳು ಎನ್ನದೇ ಸಿನಿಮಾವನ್ನೇ ಧ್ಯಾನಿಸಿ ಬೆವರು ಸುರಿಸಿದ ಪರಿಣಾಮ ರಿಷಬ್ ಇವತ್ತು ಈ ಸ್ಥಾನದಲ್ಲಿ ಇದ್ದಾರೆ.

ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ ಕೇವಲ ನಾಯಕ, ನಿರ್ದೇಶಕ ಮಾತ್ರ ಅಲ್ಲ ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿ, ಆರೇಳು ಕಿರುಚಿತ್ರಗಳನ್ನು ಜೋಡಿಸಿಟ್ಟು ಕಥಾ ಸಂಗಮವಾಗಿಸಿ ವ್ಯಾಪಾರವನ್ನೂ ಕುದುರಿಸಿದವರು. ಇನ್ನೂ ಲಾಕ್‌ ಡೌನ್‌ ಸಂದರ್ಭದಲ್ಲಿ ಇಪ್ಪತ್ನಾಲ್ಕು ಜನರನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ʻಹೀರೋʼ ಸಿನಿಮಾ ಮಾಡಿ ಸೈ ಅನಿಸಿಕೊಂಡ ಈ ಅಸಾಧಾರಣ ಪ್ರತಿಭಾವಂತರು ಇವರು.

why-hasn-t-rishab-shetty-visited-the-house-he-bought-from-dwarakish-yet

ಇಂಥಾ ರಿಷಬ್ ಶೆಟ್ಟಿ ನಾಲ್ಕು ವರ್ಷದ ಹಿಂದೆ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಅವರ ಮನೆಯನ್ನು ಖರೀದಿಸಿದ್ದರು. ಬೆಂಗಳೂರಿನ ಎಚ್.ಎಸ್.ಆರ್.‌ ಲೇಔಟಿನ ಈ ಬಂಗಲೆಗೆ ಬರೋಬ್ಬರಿ ಹತ್ತೂವರೆ ಕೋಟಿ ರೂಪಾಯಿಗಳನ್ನೂ ರಿಷಬ್ ಶೆಟ್ಟಿ ನೀಡಿದ್ದಾರೆ ಎಂದು ಆಗ ಗಾಂಧಿನಗರದವರು ಕೂಡ ಮಾತನಾಡಿಕೊಂಡಿದ್ದರು. ಆದರೆ ಇಷ್ಟೊಂದು ಹಣ ನೀಡಿ ಆ ಮನೆಯನ್ನು ಖರೀದಿಸಿದ ಮೇಲೆ ಕೂಡ ಆ ಮನೆಗೆ ರಿಷಬ್ ಶೆಟ್ಟಿ ಇನ್ನೂ ಕಾಲೇ ಇಟ್ಟಿಲ್ಲ. ಒಂದು ದಿನಾನೂ ವಾಸ ಮಾಡಿಲ್ಲ. ಈ ವಿಚಾರವನ್ನು ರಿಷಬ್ ಶೆಟ್ಟಿ ಅವರ ಅತ್ಯಾಪ್ತ ಪ್ರಮೋದ್ ಶೆಟ್ಟಿ ಖುದ್ದು ರಿವೀಲ್ ಮಾಡಿದ್ದಾರೆ.

ಹೌದು, ನ್ಯಾಷನಲ್‌ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಮೋದ್‌ ಶೆಟ್ಟಿ, 'ಅವನೆಲ್ಲಿಯೂ ಹೇಳಿಕೊಳಲ್ಲ ಆದರೆ ರಿಷಬ್‌ ಶೆಟ್ಟಿ ಬೆಂಗಳೂರಿನಲ್ಲಿ ಇನ್ನೂ ಬಾಡಿಗೆ ಮನೆಯಲ್ಲೇ ಇದ್ದಾನೆ ಅಂದಿದ್ದಾರೆ. ದುಡ್ಡು ಇಲ್ಲ ಅಂತಲ್ಲ. ಆದರೆ.. ನಮಗೆ ನಾವೇನು ಗಳಿಸುತ್ತೇವೆ, ವಾಪಸ್‌ ಅದನ್ನು ಅದಕ್ಕೆ ಹಾಕುತ್ತೇವೆ. ಮತ್ತೆ ಅದರಿಂದನೇ ವಾಪಸ್‌ ತೆಗೆಯಬೇಕು ಎನ್ನುವ ಹುಚ್ಚಿದೆ ಎಂದಿರುವ ಪ್ರಮೋದ್ ಬಂದಿರುವ ದುಡ್ಡನ್ನೆಲ್ಲ ಅವನು ವಾಪಸ್‌ ಸಿನಿಮಾಗೆ ಹಾಕಿದ್ದಾನೆ ಎಂದಿದ್ದಾರೆ.

why-hasn-t-rishab-shetty-visited-the-house-he-bought-from-dwarakish-yet

ಇನ್ನೂ ಅವನಿಗೆ ಬೇರೆ ಯಾವುದೇ ಚಟ ಇಲ್ಲ. ಖರ್ಚುಗಳಿಲ್ಲ ಹೀಗಾಗಿ ಸಿನಿಮಾದಿಂದ ಬಂದಿರುವ ಅಷ್ಟು ಹಣವನ್ನು ಸಿನಿಮಾಗೆ ಹಾಕಿದ್ದಾನೆ, ನಾಲ್ಕು ಸಿನಿಮಾಗಳು ಈಗಾಗಲೇ ಬ್ಯಾನರ್‌ನಲ್ಲಿ ರೆಡಿ ಇದೆ ಎಂದು ಕೂಡ ಹೇಳಿರುವ ಪ್ರಮೋದ್ ಶೆಟ್ಟಿ,ಬೇರೆ ನಿರ್ಮಾಪಕರನ್ನು ಹುಡುಕಿಕೊಂಡು ಹೋಗಿ, ಅವರಿಗೆ ಕಥೆ ಹೇಳಿ ಅವರನ್ನು ಒಪ್ಪಿಸಿ, ಹಣ ಹಾಕಿಸುವುದಕ್ಕಿಂತ, ಕಥೆ ತುಂಬಾ ಚೆನ್ನಾಗಿದೆ ನಾನೇ ಮಾಡುತ್ತೇನೆ ಬಾ ಅಂತಾ ಹೇಳಿ, ಈಗ ಎಲ್ಲಾ ದುಡ್ಡು ಅಲ್ಲೇ ಇದೆ. ಸಿನಿಮಾದೊಳಗೆ ಇದೆ. ಅದು ಮುಂದೆ ವಾಪಸ್ ಬರುತ್ತದೆ ಎಂದು ಹೇಳಿದ್ದಾರೆ

ಇನ್ನೂ ಕಳೆದುಕೊಂಡ ಜಾಗದಲ್ಲೇ ಪಡೆದುಕೊಂಡು ಆ ನಂತರ ಮತ್ತೆ ಕಳೆದುಕೊಂಡು ಬದುಕಿನ ಯಾತ್ರೆ ಮುಗಿಸಿದ ದ್ವಾರಕೀಶ್ ಅವರಿಂದ ಮನೆ ಖರೀದಿಸಿದ ವಿಚಾರದ ಬಗ್ಗೆಯೂ ಮಾತನಾಡಿರುವ ಪ್ರಮೋದ್ ಶೆಟ್ಟಿ, ಮನೆಯನ್ನೇ ಕೊಂಡುಕೊಂಡಾಗ ಅದು ಸ್ವಂತದ್ದು ಆಗುವುದಿಲ್ಲ. ಬೇರೆಯವರು ಇದ್ದಂತಹ ಮನೆ ಅದು. ಅಲ್ಲಿ ಉಳಿದುಕೊಳ್ಳಬೇಕು ಅಂತಾ ತೆಗೆದುಕೊಂಡಿರಲಿಲ್ಲ. ಅವನು ಆ ಮನೆ ತೆಗೆದುಕೊಂಡಿದ್ದೇ ಅನಿವಾರ್ಯ ಕಾರಣಕ್ಕೆ ಎಂದಿದ್ದಾರೆ. ಆ ಸಮಯದಲ್ಲಿ ಒಂದಿಷ್ಟು ಗೆಳೆತನ ಅದರಲ್ಲಿ ಯಾರಿಗೋ ಅನಿವಾರ್ಯತೆ. ಆ ಕಮಿಟ್‌ಮೆಂಟ್‌ಗೋಸ್ಕರ ತೆಗೆದುಕೊಂಡ ಮನೆ ಅದು ಎಂದು ಕೂಡ ಹೇಳಿದ್ದಾರೆ ಪ್ರಮೋದ್ ಶೆಟ್ಟಿ.

why-hasn-t-rishab-shetty-visited-the-house-he-bought-from-dwarakish-yet

ಮುಂದುವರೆದು ಮಾತನಾಡಿರುವ ಪ್ರಮೋದ್ ಶೆಟ್ಟಿ ಆ ಮನೆಗೆ ಇವತ್ತಿನವರೆಗೂ ಅವನು ಹೋಗಿಲ್ಲ. ಅಲ್ಲಿ ಒಂದು ರಾತ್ರಿನೂ ಉಳಿದುಕೊಂಡಿಲ್ಲ ಅಂದಿದ್ದಾರೆ. ಆ ಮನೆ ಇವತ್ತಿನ ವರೆಗೂ ಹಾಗೇ ಖಾಲಿ ಇದೆ. ಅವನು ಆ ಮನೆಯನ್ನು ಉಳಿದುಕೊಳ್ಳಲು ತೆಗೆದುಕೊಂಡಿಲ್ಲ ಎಂದಿರುವ ಪ್ರಮೋದ್, ಅವನು ಬೆಂಗಳೂರಿನಲ್ಲಿ ಇಂದಿಗೂ ಜಾಗನೂ ತೆಗೆದುಕೊಂಡಿಲ್ಲ. ಮನೆಯನ್ನೂ ಕಟ್ಟಿಲ್ಲ. ಸದ್ಯಕ್ಕೆ ಬಾಡಿಗೆ ಮನೆಯಲ್ಲೇ ಇದ್ದಾನೆ. ಇಷ್ಟು ವರ್ಷನೂ ಬಾಡಿಗೆ ಮನೆಯಲ್ಲೇ ಇದ್ದ. ಈಗ ಸದ್ಯಕ್ಕೆ ಕಾಂತಾರ ಕೆಲಸ ನಡೆಯುತ್ತಿರುವುದರಿಂದ ಕುಂದಾಪುರಕ್ಕೆ ಶಿಫ್ಟ್‌ ಆಗಿದ್ದಾನೆ ಎಂದು ಹೇಳಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X