'ಗಾರ್ಗಿ'ಯನ್ನು ಪ್ರೆಸೆಂಟ್ ಮಾಡುವ ರಕ್ಷಿತ್ ಶೆಟ್ಟಿಯ ನಿರ್ಧಾರಕ್ಕೆ ಕಾರಣ ಸಾಯಿ ಪಲ್ಲವಿ ಹಾಗೂ ಆತ!

ಸಾಯಿ ಪಲ್ಲವಿ ಈಗ ದಕ್ಷಿಣ ಭಾರತ ಸಿನಿಮಾ ಪ್ರೇಮಿಗಳ ಕ್ರಷ್ ಆಗಿದ್ದಾರೆ. ಅದ್ಭುತ ನಟಿ, ನೃತ್ಯಗಾರ್ತಿ ಆಗಿರುವ ಸಾಯಿ ಪಲ್ಲವಿ ಭಿನ್ನ-ಭಿನ್ನ ಕತೆಗಳನ್ನು ಆಯ್ದುಕೊಂಡು ತಮ್ಮದೇ ಆದ ಭಿನ್ನ ಸಿನಿಮಾ ಹಾದಿ ನಿರ್ಮಿಸಿಕೊಳ್ಳುತ್ತಿದ್ದಾರೆ.

ಕೇವಲ ತೂಕವಿರುವ ಪಾತ್ರಗಳಲ್ಲಿ ಮಾತ್ರವೇ ನಟಿಸುವ ಸಾಯಿ ಪಲ್ಲವಿ, ಇದೀಗ ಮಹಿಳಾ ಪ್ರಧಾನ ಸಿನಿಮಾ ಒಂದರಲ್ಲಿ ನಟಿಸಿದ್ದು, ಮೊದಲ ಬಾರಿಗೆ ಮಹಿಳಾ ಪ್ರಧಾನ ಸಿನಿಮಾ ಒಂದನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಮಾಡಲು ಹೊರಟಿದ್ದಾರೆ.

ಸಾಯಿ ಪಲ್ಲವಿ 'ಗಾರ್ಗಿ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಈ ಸಿನಿಮಾವನ್ನು ಕನ್ನಡದಲ್ಲಿ ನಟ ರಕ್ಷಿತ್ ಶೆಟ್ಟಿ ತಮ್ಮ ಪರಮವ್ಹ ಸ್ಟುಡಿಯೋಸ್ ಮೂಲಕ ಪ್ರಸ್ತುತಿಪಡಿಸಲು ನಿರ್ಧರಿಸಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣವೇನು ಎಂಬುದನ್ನು ಸಹ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗ ಪಡಿಸಿದ್ದಾರೆ.

'ಗಾರ್ಗಿ' ಸಿನಿಮಾ ಪ್ರೆಸೆಂಟ್ ಮಾಡುತ್ತಿರುವುದು ಏಕೆ?

'ಗಾರ್ಗಿ' ಸಿನಿಮಾ ಪ್ರೆಸೆಂಟ್ ಮಾಡುತ್ತಿರುವುದು ಏಕೆ?

''ಗಾರ್ಗಿ' ಸಿನಿಮಾವನ್ನು ಕನ್ನಡದಲ್ಲಿ ಪ್ರಸ್ತುತಪಡಿಸಲು ಏಕೆ ಒಪ್ಪಿಕೊಂಡೆ ಎಂದರೆ, ಗೌತಮ್ (ಗಾರ್ಗಿ ನಿರ್ದೇಶಕ) ನನ್ನ ಒಳ್ಳೆಯ ಸ್ನೇಹಿತ. ನಾನು ಅವರು ಭೇಟಿಯಾದಾಗಲೆಲ್ಲ ಕತೆಗಳ ಬಗ್ಗೆ ಸಿನಿಮಾಗಳ ಬಗ್ಗೆಯೇ ಮಾತನಾಡುತ್ತಿದ್ದೆವು. ಗೌತಮ್‌ಗೆ ಸಿನಿಮಾದ ಬಗ್ಗೆ ಇರುವ ಪ್ರೇಮ ಮತ್ತು 'ಗಾರ್ಗಿ' ಸಿನಿಮಾ ಮೂಡಿಬಂದಿರುವ ರೀತಿ ಈ ಚಿತ್ರವನ್ನು ಕನ್ನಡದಲ್ಲಿ ಪ್ರಸ್ತುತಪಡಿಸುವ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತು. ಮತ್ತು ಸಾಯಿ ಪಲ್ಲವಿ ಈ ಸಿನಿಮಾದಲ್ಲಿ ನಟಿಸಿರುವುದು ಸಹ ಬಲವಾದ ಕಾರಣವೇ ಎನ್ನಬಹುದು. ಜೊತೆಗೆ ಸಿನಿಮಾವನ್ನು ವೀಕ್ಷಿಸಿದ ಬಳಿಕವಂತೂ ಈ ಸಿನಿಮಾವನ್ನು ಪ್ರಸ್ತುತ ಪಡಿಸಲು ನನಗೆ ಸಾವಿರ ಕಾರಣಗಳು ಸಿಕ್ಕವು'' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಹೃದಯ ಕದಲಿಸಿದ ಸಿನಿಮಾ ಇದು: ರಕ್ಷಿತ್ ಶೆಟ್ಟಿ

ಹೃದಯ ಕದಲಿಸಿದ ಸಿನಿಮಾ ಇದು: ರಕ್ಷಿತ್ ಶೆಟ್ಟಿ

''ಗರುಡ ಗಮನ ವೃಷಭ ವಾಹನ' ಚಿತ್ರದ ಬಳಿಕ, ಹೃದಯ ಕದಲಿಸಿದ ಸಿನಿಮಾ ಎಂದರೆ 'ಗಾರ್ಗಿ' ಎಂದರೆ ತಪ್ಪಾಗಲಾರದು. ಈ ಸಿನಿಮಾವು ನಿಮ್ಮನ್ನು 'ಗಾರ್ಗಿ'ಯ ಪ್ರಪಂಚೊದಳಕ್ಕೆ ಸೆಳೆದು, ಅವಳ ಧೈರ್ಯ ಮತ್ತು ಹೋರಾಟದ ನಡುವೆ ಮನಕಲಕುವ ದೃಶ್ಯಗಳು ಮತ್ತು ಅವನ್ನು ಗೌತಮ್ ನಿರೂಪಿಸಿರುವ ರೀತಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ಸಾಯಿ ಪಲ್ಲವಿ 'ಗಾರ್ಗಿ' ಪಾತ್ರವನ್ನು ಜೀವಿಸಿ ನಿಜ ಜೀವನಕ್ಕೆ ಹತ್ತಿರವಾಗಿರುವಂತೆ ಮಾಡಿದ್ದಾರೆ. ಕಾಳಿ ವೆಂಕಟ್ ಇಂದ್ರ ಪಾತ್ರವನ್ನು ಅವರು ಅದ್ಭುತವಾಗಿ ನಿರ್ವಹಿಸಿದ್ದಾರೆ'' ಎಂದು ಹೊಗಳಿದ್ದಾರೆ ರಕ್ಷಿತ್.

ನಿರ್ದೇಶಕ ಗೌತಮ್ ಬೆಂಗಳೂರಿನವರು

ನಿರ್ದೇಶಕ ಗೌತಮ್ ಬೆಂಗಳೂರಿನವರು

ನಮ್ಮ ಸಿನಿಮಾಗಳನ್ನು ನಾವು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿರುವಾಗ ಬೇರೆ ಭಾಷೆಯ ಸಿನಿಮಾಗಳನ್ನು ಇಲ್ಲಿಗೆ ತರುವುದು ನಮ್ಮ ಜವಾಬ್ದಾರಿ. ಗೌತಮ್ ನಮ್ಮ ಬೆಂಗಳೂರಿನವರೇ ಹಾಗೂ ಸಾಯಿ ಪಲ್ಲವಿ 'ಗಾರ್ಗಿ' ಸಿನಿಮಾಕ್ಕೆ ಸ್ವತಃ ತಾವೇ ಧ್ವನಿ ನೀಡಿದ್ದಾರೆ. ಡಬ್ಬಿಂಗ್ ವಿಚಾರದಲ್ಲಿ ಸಂಪೂರ್ಣ ಬೆಂಬಲ ನೀಡಿರುವ ಶೀಥಲ್ ಶೆಟ್ಟಿ ಹಾಗೂ ಅವರ ತಂಡಕ್ಕೆ ಧನ್ಯವಾದ'' ಎಂದಿದ್ದಾರೆ ನಟ ರಕ್ಷಿತ್. ಅಂತಿಮವಾಗಿ 'ಪರಮವ್ಹ ಹೆಮ್ಮೆಯಿಂದ 'ಗಾರ್ಗಿ'ಯನ್ನು ಪ್ರಸ್ತುತಪಡಿಸಲಿದೆ'' ಎಂದಿದ್ದಾರೆ.

 ಜುಲೈ 15 ರಂದು ಬಿಡುಗಡೆ ಆಗಲಿದೆ ಸಿನಿಮಾ

ಜುಲೈ 15 ರಂದು ಬಿಡುಗಡೆ ಆಗಲಿದೆ ಸಿನಿಮಾ

ರಕ್ಷಿತ್ ಶೆಟ್ಟಿ ಈ ಸಿನಿಮಾದ ಕನ್ನಡ ಆವೃತ್ತಿಯನ್ನು ಪ್ರೆಸೆಂಟ್ ಮಾಡಿದ್ದರೆ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡುತ್ತಿರುವುದು ಕೆಆರ್‌ಜಿ ಸ್ಟುಡಿಯೋಸ್. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಯುವತಿಯೊಬ್ಬಾಕೆ ಕಾನೂನು ಹೋರಾಟ ಮಾಡುವ ಕತೆಯನ್ನು ಸಿನಿಮಾ ಒಳಗೊಂಡಿದೆ. ಈ ಸಿನಿಮಾವು ಜುಲೈ 15 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಸಿನಿಮಾದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆಯನ್ನು ಸಾಯಿ ಪಲ್ಲವಿ ಇರಿಸಿಕೊಂಡಿದ್ದಾರೆ.

More from Filmibeat

English summary
Rakshit Shetty presenting Gargi movie in Kannada. He gave reason. He said Gargi movie moved him very much.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X