ಭಾರತೀಯ ಸಿನಿಮಾ ಮಂದಿ ಪಾಲಿಗೆ ಆಸ್ಕರ್ ಪ್ರಶಸ್ತಿ ಇಂದಿಗೂ ಗಗನ ಕುಸುಮವಾಗಿರುವುದೇಕೆ?

98ನೇ ಅಕಾಡೆಮಿ(ಆಸ್ಕರ್) ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಎಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಅದ್ದೂರಿಯಾಗಿ ನೆರವೇರಿದೆ. ಪ್ರಿಯಾಂಕ ಚೋಪ್ರಾ ಸೇರಿದಂತೆ ಹಾಲಿವುಡ್ ನಟ, ನಟಿಯರು, ತಂತ್ರಜ್ಞರು ಈ ರಂಗೀನ್ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದಾರೆ. ಒಟ್ಟು 16 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ 'ಸಿನ್ನರ್ಸ್' ಚಿತ್ರಕ್ಕೆ 4 ಆಸ್ಕರ್ ಸಿಕ್ಕಿದೆ. 'ಒನ್ ಬ್ಯಾಟಲ್ ಆಫ್ಟರ್ ಅನದರ್' ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಈ ಬಾರಿ ಕೂಡ ಆಸ್ಕರ್ ಪ್ರಶಸ್ತಿಗಳಲ್ಲಿ ಭಾರತಕ್ಕೆ ನಿರಾಸೆ ಎದುರಾಗಿದೆ. ಇದು ಭಾರತೀಯ ಸಿನಿರಸಿಕರಿಗೆ ಹೊಸದೇನು ಅಲ್ಲ. ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆ ಆಗುವಲ್ಲಿ ಭಾರತದ ಸಿನಿಮಾಗಳು ವಿಫಲವಾಗುತ್ತಲೇ ಇವೆ. ಈ ಬಾರಿ ಭಾರತದ 'ಹೋಮ್‌ ಬೌಂಡ್' ಸಿನಿಮಾ ವಿದೇಶಿ ಚಿತ್ರಗಳ ಪಟ್ಟಿಯಲ್ಲಿ ಅಂತಿಮ 15 ಚಿತ್ರಗಳಲ್ಲಿ ಸ್ಥಾನ ಪಡೆದುಕೊಂಡಿತ್ತು. ಆಸ್ಕರ್ ಸ್ಪರ್ಧೆಗೆ ಭಾರತದಿಂದ 'ಹೋಮ್‌ಬೌಂಡ್' ಸಿನಿಮಾ ಅಧಿಕೃತವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅಂತಿಮ ಸುತ್ತಿಗೆ ಆಯ್ಕೆ ಆಗಲು ವಿಫಲವಾಗಿ ಆಸ್ಕರ್‌ ರೇಸ್‌ನಿಂದ ಹೊರ ಬಿದ್ದಿತ್ತು.

Why Indian Films Still Struggle to Win at the Oscars Despite Global Success

ಭಾರತೀಯ ಫಿಲ್ಮ್ ಮೇಕರ್ಸ್ ಪಾಲಿಗೆ ಆಸ್ಕರ್ ಪ್ರಶಸ್ತಿ ಎನ್ನುವುದು ಇನ್ನು ಗಗನ ಕುಸುಮವೇ ಆಗಿದೆ. ಆಗೊಮ್ಮೆ ಈಗೊಮ್ಮೆ ಆಸೆ ಹುಟ್ಟಿದ್ದರೂ ಹೆಚ್ಚು ಕೈಗೂಡಲಿಲ್ಲ. 3 ವರ್ಷಗಳ ಹಿಂದೆ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಕ್ಕಿದ್ದೇ ಈವರೆಗಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿತ್ತು. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಹಾಗೂ ಗೀತ ಸಾಹಿತಿ ಚಂದ್ರಭೋಸ್ ವೇದಿಕೆ ಏರಿ ಪ್ರಶಸ್ತಿ ಸ್ವೀಕರಿಸಿದ್ದರು. ಆದರೆ ಈ ಹಾಡನ್ನು ಕೂಡ ಅಧಿಕೃತವಾಗಿ ಭಾರತದಿಂದ ಆಸ್ಕರ್ ಸ್ಪರ್ಧೆಗೆ ಆಯ್ಕೆ ಮಾಡಿರಲಿಲ್ಲ ಎನ್ನುವುದು ವಿಪರ್ಯಾಸ.

'ಕಾಂತಾರ- 1' ಹಾಗೂ 'ಮಹಾವತಾರ್ ನರಸಿಂಹ' ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಆಸ್ಕರ್ ಸ್ಪರ್ಧೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತ್ತು. ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗದಿದ್ದರೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆದಿತ್ತು. ಫೈನಲ್ ನಾಮಿನೇಷನ್ಸ್ ಲಿಸ್ಟ್ ಹೊರಬಿದ್ದಾಗ ಎರಡೂ ಚಿತ್ರತಂಡಗಳಿಗೆ ನಿರಾಸೆ ಆಗಿತ್ತು. ಅಷ್ಟಕ್ಕೂ ಭಾರತದ ಸಿನಿಮಾಗಳು ಯಾಕೆ ಆಸ್ಕರ್ ಪ್ರಶಸ್ತಿ ಪಡೆಯುವಲ್ಲಿ ಹಿಂದೆ ಬಿದ್ದಿವೆ? ಅದಕ್ಕೆ ಕಾರಣಗಳೇನು? ಮುಂದೆ ಓದಿ.

Why Indian Films Still Struggle to Win at the Oscars Despite Global Success

'ಮದರ್ ಇಂಡಿಯಾ' (1957), 'ಸಲಾಮ್ ಬಾಂಬೆ' (1988) ಹಾಗೂ 'ಲಗಾನ್' (2001) ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ನಾಮಿನೇಷನ್ ಪಡೆದಿದ್ದೇ ಅಕಾಡೆಮಿ ಪ್ರಶಸ್ತಿ ವೇದಿಕೆಯಲ್ಲಿ ಅತ್ಯುತ್ತಮ ಸಾಧನೆ ಎನ್ನಬಹುದು. ಈ ಬಾರಿ 'ಹೋಮ್‌ಬೌಂಡ್' ಸಿನಿಮಾ ಪ್ರಶಸ್ತಿಗೆ ಪಡೆಯುತ್ತದೆ ಎನ್ನುವ ನಿರೀಕ್ಷೆ ಇತ್ತು. ಕೇನ್ಸ್ ಸೇರಿ ಕೆಲ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಭಾರೀ ಮೆಚ್ಚುಗೆ ಪಡೆದಿತ್ತು. ಆದರೆ ಅತಿಯಾದ ಪೈಪೋಟಿಯಿಂದ ಸಿನಿಮಾ ನಾಮಿನೇಟ್ ಆಗಲಿಲ್ಲ.

ಭಾರತೀಯ ಸಿನಿಮಾಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತದೆ. ಬಹಳ ಹಳೆಯ ಸಿನಿಉದ್ಯಮಗಳಲ್ಲಿ ಒಂದಾಗಿರುವ ಬಾಲಿವುಡ್ ಸೇರಿ ಹಲವು ಭಾಷೆಗಳಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ನಿರ್ಮಾಣವಾಗುತ್ತದೆ. ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತವೆ. ಕೆಲವೊಮ್ಮೆ ಹಾಲಿವುಡ್ ಮಂದಿ ಗಮನ ಸೆಳೆಯುತ್ತವೆ. ಆದರೂ ಆಸ್ಕರ್ ಪ್ರಶಸ್ತಿ ವಿಚಾರದಲ್ಲಿ ಮಾತ್ರ ಭಾರತದ ಸಿನಿಮಾಗಳು ಬಹಳ ಹಿಂದೆ ಉಳಿದುಬಿಟ್ಟಿವೆ.

1. ಅತಿಯಾದ ಪೈಪೋಟಿ

ಪ್ರಪಂಚದ ನೂರಾರು ದೇಶಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತದೆ. ಸಾಕಷ್ಟು ದೇಶಗಳಿಂದ ಆಸ್ಕರ್ ಪ್ರಶಸ್ತಿಗಾಗಿ ಅಧಿಕೃತವಾಗಿ ಸಿನಿಮಾಗಳನ್ನು ಸ್ಪರ್ಧೆಗೆ ಕಳುಹಿಸಲಾಗುತ್ತದೆ. ಅಷ್ಟು ಸಿನಿಮಾಗಳಲ್ಲಿ ಅಂತಿಮವಾಗಿ 5 ನಾಮಿನೇಷನ್ಸ್ ಪಟ್ಟಿಯಲ್ಲಿ ಜಾಗ ಪಡೆಯುವುದು ನಿಜಕ್ಕೂ ಸವಾಲಿನ ಕೆಲಸ. ಅತ್ಯುತ್ತಮ ಅಂತರರಾಷ್ಟ್ರೀಯ ಫೀಚರ್ ಫಿಲ್ಮ್ ವಿಭಾಗದಲ್ಲಿ ಬರೋಬ್ಬರು 80 ಕ್ಕೂ ಹೆಚ್ಚು ದೇಶಗಳ ಚಿತ್ರಗಳಿದ್ದವು. ಅಷ್ಟು ಸಿನಿಮಾಗಳನ್ನು ಮೀರಿ ಅಂತಿಮ ಹಂತಕ್ಕೆ ಏರುವುದು ಅಷ್ಟು ಸುಲಭವಲ್ಲ.

2. ಆಯ್ಕೆಯಲ್ಲಿ ಲಾಬಿ

ಪ್ರತಿವರ್ಷ ನೂರಾರು ಸಿನಿಮಾಗಳು ಭಾರತದಲ್ಲಿ ನಿರ್ಮಾಣವಾಗುತ್ತವೆ. ಆದರೆ ಅಧಿಕೃತವಾಗಿ ಒಂದು ಚಿತ್ರವನ್ನು ಸ್ಪರ್ಧೆಗೆ ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಹೀಗೆ ಆಯ್ಕೆ ಪ್ರಕ್ರಿಯೆಯಲ್ಲಿ ಲಾಬಿ ನಡೆಯುತ್ತದೆ ಎನ್ನುವುದು ಕೆಲವರ ಆರೋಪ. ಅಧಿಕೃತ ಎಂಟ್ರಿಯಾಗಿ ಒಳ್ಳೆ ಸಿನಿಮಾವನ್ನು ಆಯ್ಕೆ ಮಾಡಿ ಕಳುಹಿಸುವುದಿಲ್ಲ, ಅದರಲ್ಲಿ ಕೂಡ ಪಕ್ಷಪಾತ ಮಾಡುತ್ತಾರೆ ಎನ್ನುವುದು ಕೆಲವರ ಆಂಬೋಣ.

3. ಪ್ರಚಾರದ ಕೊರತೆ

ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಬೇಕು ಅಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾ ಹೆಚ್ಚು ಸದ್ದು ಮಾಡಬೇಕು. ಮುಖ್ಯವಾಗಿ ಅಮೆರಿಕಾ ಸುತ್ತಾಮುತ್ತಾ ಸಿನಿಮಾ ಹೆಚ್ಚು ಕ್ರೇಜ್ ಸಂಪಾದಿಸಬೇಕು. ಅದಕ್ಕಾಗಿ ಅಲ್ಲಿ ದೊಡ್ಡಮಟ್ಟದ ಪ್ರಚಾರ ಬೇಕು, ಅದಕ್ಕಾಗಿ ಹೆಚ್ಚು ಹಣ ಖರ್ಚು ಮಾಡಬೇಕು. ಸಿನಿಮಾದಲ್ಲಿ ಧಮ್ ಇದ್ದು ಪ್ರಚಾರ ಮಾಡಿದಾಗ ಮಾತ್ರ ಅದು ಹೆಚ್ಚು ಜನರಿಗೆ ತಲುಪುತ್ತದೆ. ಅಲ್ಲಿನ ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಆಸ್ಕರ್ ಪ್ರಶಸ್ತಿ ಕ್ರೇಜ್ ಸಂಪಾದಿಸಿಕೊಳ್ಳುತ್ತದೆ.

4. ಯೂನಿವರ್ಸಲ್ ಕಥೆ

ಭಾರತೀಯ ಸಿನಿಮಾಗಳಲ್ಲಿ ನಮ್ಮ ಸಂಸ್ಕೃತಿ, ಭಾವೋದ್ವೇಗ ಆಧರಿಸಿರುತ್ತದೆ. ಮೆಲೊಡ್ರಾಮಾ ಜಾಸ್ತಿ. ಆಕ್ಷನ್, ಮಸಾಲ ಕಮರ್ಷಿಯಲ್ ಅಂಶಗಳು. ಹೆಚ್ಚು ಹಾಡುಗಳು. ಇದೆಲ್ಲವೂ ಜಾಗತಿಕ ಮಾನದಂಡಗಳಿಗೆ ಹೊಂದಿಕೆಯಾಗಲ್ಲ. ಭಾರತದ ಸಿನಿಮಾಗಳಲ್ಲಿ ಪಾಶ್ಚಾತ್ಯ ಪ್ರೇಕ್ಷಕರಿಗೆ ಅರ್ಥವಾಗುವಂತಹ ಅಂಶಗಳು ಕಮ್ಮಿ ಇರುತ್ತದೆ. ಯೂನಿವರ್ಸಲ್ ಕಥೆ, ಟ್ರೀಟ್‌ಮೆಂಟ್ ಇರಲ್ಲ. ಹಾಗಾಗಿ ನಮ್ಮ ಸಿನಿಮಾಗಳು ಅಲ್ಲಿನವರಿಗೆ ವಿಶೇಷ ಎನಿಸುವುದೇ ಇಲ್ಲ.

5. ಸಮಯದ ಅಭಾವ

ಸೆಪ್ಟೆಂಬರ್ ವೇಳೆಗೆ ಆಸ್ಕರ್ ಪ್ರಶಸ್ತಿ ಸ್ಪರ್ಧೆ ಶುರುವಾಗಿ ಹಾಲಿವುಡ್‌ನಲ್ಲಿ ಪ್ರಚಾರ ಆರಂಭವಾಗಿರುತ್ತದೆ. ಹಿಂದಿನ ವರ್ಷದಿಂದಲೇ ಆಸ್ಕರ್ ಮೇಲೆ ಕಣ್ಣಿಟ್ಟು ಕ್ಯಾಂಪೇನ್ ಆರಂಭಿಸುತ್ತಾರೆ. ಆದರೆ ಸ್ಪರ್ಧೆಗೆ ಯಾವ ಸಿನಿಮಾವನ್ನು ಅಧಿಕೃವಾಗಿ ಆಯ್ಕೆ ಮಾಡಿ ಕಳುಹಿಸಬೇಕು ಎನ್ನುವುದೇ ಭಾರತದಲ್ಲಿ ಕೊನೆ ಹಂತದಲ್ಲಿ ನಿರ್ಧಾರವಾಗುತ್ತದೆ. ಬಳಿಕ ಅಲ್ಲಿ ಪ್ರಚಾರ ಮಾಡಿ ಚಿತ್ರವನ್ನು ಸ್ಪರ್ಧೆಯಲ್ಲಿ ಗೆಲ್ಲಿಸುವುದು ಕಷ್ಟವಾಗುತ್ತದೆ. 2022ರ ಮಾರ್ಚ್ 25ಕ್ಕೆ 'RRR' ಸಿನಿಮಾ ತೆರೆಗೆ ಬಂದಿತ್ತು. ಬಹಳ ಬೇಗ ಓಟಿಟಿ ಮೂಲಕ ಹಾಲಿವುಡ್ ಮಂದಿ ಗಮನ ಸೆಳೆದಿತ್ತು. ಬಳಿಕ 'ನಾಟು ನಾಟು' ಗೀತೆಯನ್ನು ಆಸ್ಕರ್ ಸ್ಪರ್ಧೆಗೆ ಕಳುಹಿಸಿ, ಅಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಇದೆಲ್ಲವೂ ಪ್ರಶಸ್ತಿ ಸಿಗಲು ಸಹಕಾರಿ ಆಗಿತ್ತು.

More from Filmibeat

Read more about: oscars award hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X