ಸುದೀಪ್ 'ಕನ್ವರ್ ಲಾಲ್' ಸಿನಿಮಾ ನಿಂತಿದ್ಯಾಕೆ?

ಕಿಚ್ಚ ಸುದೀಪ್ ಅವರು 'ಕನ್ವರ್ ಲಾಲ್' ಹೆಸರಿನಲ್ಲಿ ಸಿನಿಮಾ ಮಾಡಲು ಯೋಜಿಸಿದ್ದರು. ಅದಕ್ಕೆ ಬೇಕಾದ ತಯಾರಿ ಕೂಡ ನಡೆಸಿದ್ದರು. ದುರಾದೃಷ್ಟವಶಾತ್ ಆ ಪ್ರಾಜೆಕ್ಟ್ ಆರಂಭವಾಗಲಿಲ್ಲ. ಇದ್ದಕ್ಕಿದ್ದಂತೆ ಈ ಸಿನಿಮಾ ನಿಂತಿದ್ಯಾಕೆ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೂಪರ್ ಹಿಟ್ 'ಅಂತ' ಚಿತ್ರದ ಕನ್ವರ್ ಲಾಲ್ ಪಾತ್ರವನ್ನಿಟ್ಟು, ಸುದೀಪ್ ಸ್ಕ್ರಿಪ್ಟ್ ಮಾಡಿದ್ದರಂತೆ. ಈ ಸಿನಿಮಾ ಮಾಡೋಣ ಎಂದು ನಿರ್ಧರಿಸಿದಾಗ ಅಲ್ಲೊಂದು ಸಮಸ್ಯೆ ಎದುರಾಯಿತಂತೆ. ಆ ಕಾರಣಕ್ಕಾಗಿ ಈ ಚಿತ್ರವನ್ನ ನಿಲ್ಲಿಸಬೇಕಾಯಿತಂತೆ. ಆದರೆ, ಆ ಸಮಸ್ಯೆ ಏನು ಎಂಬುದನ್ನ ಸುದೀಪ್ ಹೇಳಲಿಲ್ಲ.

Why Kanwarlal Movie Stopped?

ಆ ಚಿತ್ರಕ್ಕೆ ಬಂಡವಾಳ ಹಾಕಿದ್ದ ನಿರ್ಮಾಪಕರಿಗೆ ಮೋಸ ಆಗಬಾರದು ಎಂಬ ಕಾರಣಕ್ಕೆ, ಸೂರಪ್ಪಬಾಬು ಅವರ ಬಳಿಯಿದ್ದ 'ಸಿಂಗಂ' ಚಿತ್ರದ ಹಕ್ಕನ್ನು ಖರೀದಿ ಮಾಡಿ, ಕೆಂಪೇಗೌಡ ಸಿನಿಮಾ ಮಾಡಲಾಯಿತಂತೆ.

ಕನ್ವರ್ ಲಾಲ್ ಚಿತ್ರಕ್ಕೆ ಸ್ವತಃ ಸುದೀಪ್ ಚಿತ್ರಕಥೆ ಬರೆದಿದ್ದರು. ಬಹುಶಃ ಆ ಸ್ಕ್ರಿಪ್ಟ್ ಇನ್ನು ಸುದೀಪ್ ಅವರ ಬಳಿಯೇ ಉಳಿಸಿಕೊಂಡಿರಬೇಕು. ಕಿಚ್ಚನ ಮನಸ್ಸು ಮಾಡಿದ್ರೆ ಮತ್ತೆ ಈ ಚಿತ್ರಕ್ಕೆ ಜೀವ ನೀಡಬಹುದು.

ಸದ್ಯ ಸುದೀಪ್ ಅವರು ನಿರ್ದೇಶನ ಮಾಡುವ ಕಡೆ ಒಲವು ಹೊಂದಿಲ್ಲ. ಯಾಕಂದ್ರೆ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಕಾರಣ, ಬೇರೆ ನಿರ್ದೇಶಕರಿಗೆ ಕಾಲ್ ಶೀಟ್ ಕೊಡಬೇಕಿರುವ ಒತ್ತಡದಲ್ಲಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ಇನ್ನು ಮುಗಿದಿಲ್ಲ. ಅದಾದ ಬಳಿಕ ಅನೂಪ್ ಭಂಡಾರಿ ಜೊತೆ ಸಿನಿಮಾ ಆರಂಭಿಸಬೇಕಿದೆ.

More from Filmibeat

English summary
Earlier Kiccha Sudeep Planned to do Kanwarlal movie. unfortunately he dropped this project. why sudeep stopped Kanwarlal?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X