»   » ಹೆಚ್ಚು-ಕಮ್ಮಿ ವರ್ಷ ಆಯ್ತು, ಇನ್ನೂ 'ಕೆ.ಜಿ.ಎಫ್' ಚಿತ್ರೀಕರಣ ಮುಗಿದಿಲ್ಲ.! ಯಾಕೆ.?

ಹೆಚ್ಚು-ಕಮ್ಮಿ ವರ್ಷ ಆಯ್ತು, ಇನ್ನೂ 'ಕೆ.ಜಿ.ಎಫ್' ಚಿತ್ರೀಕರಣ ಮುಗಿದಿಲ್ಲ.! ಯಾಕೆ.?

Posted By:
Subscribe to Filmibeat Kannada
ಇನ್ನೂ 'ಕೆ.ಜಿ.ಎಫ್' ಚಿತ್ರೀಕರಣ ಮುಗಿದಿಲ್ಲ.! ಯಾಕೆ.? | Filmibeat Kannada

ಹಾಗ್ನೋಡಿದ್ರೆ, ಇಷ್ಟೊತ್ತಿಗಾಗಲೇ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾ ಬಿಡುಗಡೆ ಆಗ್ಬೇಕಿತ್ತು. ಆದ್ರೆ, ಚಿತ್ರದ ಚಿತ್ರೀಕರಣ ಇನ್ನೂ ಕಂಪ್ಲೀಟ್ ಆಗಿಲ್ಲ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲೇ 'ಕೆ.ಜಿ.ಎಫ್' ತೆರೆಗೆ ಬರ್ಬೇಕಿತ್ತು ಎಂಬ ಆಸೆ ಯಶ್ ಅಭಿಮಾನಿಗಳಲ್ಲಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ.

ಹೇಳಿ ಕೇಳಿ 'ಕೆ.ಜಿ.ಎಫ್' ಬಹುಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾ. ಅಂದ್ಮೇಲೆ, ಚಿತ್ರದ ಮೇಕಿಂಗ್ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಎಚ್ಚರ ವಹಿಸಲೇಬೇಕು. ಈಗಾಗಲೇ 'ಕೆ.ಜಿ.ಎಫ್' ಚಿತ್ರದ ಮೇಕಿಂಗ್ ಇಂಟರ್ ನ್ಯಾಷನಲ್ ಸ್ಟಾಂಡರ್ಡ್ ನಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನ ನಿಧಾನವಾಗಿ ಮಾಡಿದರೂ, ನೀಟ್ ಆಗಿ ಮಾಡಬೇಕು ಎಂಬ ಪಾಲಿಸಿ ಪ್ರಶಾಂತ್ ನೀಲ್ ರವರದ್ದು. 'ಕೆ.ಜಿ.ಎಫ್' ಚಿತ್ರೀಕರಣ ನಿಧಾನಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸ್ವತಃ ಪ್ರಶಾಂತ್ ನೀಲ್ ಬಾಯ್ಬಿಟ್ಟಿದ್ದಾರೆ. ಮುಂದೆ ಓದಿರಿ...

ಎಲ್ಲವೂ ಅಚ್ಚುಕಟ್ಟಾಗಿ ಬರಬೇಕು

''ಅರ್ಜೆಂಟ್ ಬೇಡ, ಎಲ್ಲವೂ ಅಚ್ಚುಕಟ್ಟಾಗಿ ಬರಲಿ, ಕ್ವಾಲಿಟಿ ಮೇನ್ಟೇನ್ ಮಾಡಬೇಕು ಎಂಬ ಕಾರಣಕ್ಕೆ 'ಕೆ.ಜಿ.ಎಫ್' ಸ್ವಲ್ಪ ತಡವಾಗುತ್ತಿದೆ'' ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ನೀಲ್. ಗುಣಮಟ್ಟದ ಸಿನಿಮಾ ಕೊಡಬೇಕು ಅನ್ನೋದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಆಸೆ.

ಯಶ್ ಹುಟ್ಟುಹಬ್ಬದ ಕಾಣಿಕೆಯಾಗಿ ಬಂತು 'KGF' ಟೀಸರ್

ಸೆಟ್ ಗೆ ಹೆಚ್ಚು ಟೈಮ್ ಹಿಡಿದಿದೆ

''ಕತೆಗೆ ಪೂರಕವಾದ ಸಿದ್ಧತೆ ಮಾಡಿಕೊಂಡು ಚಿತ್ರೀಕರಣ ಮಾಡಲಾಗುತ್ತಿದೆ. ಸೆಟ್ ಹಾಕುವುದಕ್ಕಾಗಿಯೇ ಒಂದಷ್ಟು ಸಮಯ ಕಳೆದಿದೆ. ಜೊತೆಗೆ ಅದ್ಧೂರಿ ವೆಚ್ಚದ ಸಿನಿಮಾ. ನಿರ್ಮಾಪಕರ ನಿರೀಕ್ಷೆ ಹುಸಿಯಾಗದಂತೆ ಸಿನಿಮಾ ಮಾಡುವುದು ನಮ್ಮ ಕೆಲಸ'' ಅಂತಾರೆ ನಿರ್ದೇಶಕ ಪ್ರಶಾಂತ್ ನೀಲ್

ಚಿತ್ರೀಕರಣ ಇನ್ನೂ ಬಾಕಿ ಇದೆ

'ಕೆ.ಜಿ.ಎಫ್' ಚಿತ್ರದ ಶೇಕಡ 15 ರಷ್ಟು ಚಿತ್ರೀಕರಣ ಇನ್ನೂ ಬಾಕಿ ಇದೆ. ಮಾರ್ಚ್ ಮೊದಲ ವಾರದಲ್ಲಿ ಚಿತ್ರೀಕರಣ ಕಂಪ್ಲೀಟ್ ಆಗಲಿದೆ. ಆಮೇಲೆ ಪೋಸ್ಟ್ ಪ್ರೊಡಕ್ಷನ್ ಕೆಲಸ. ಎಲೆಕ್ಷನ್ ಮುಗಿದ ಮೇಲೆ ಸಿನಿಮಾ ಬಿಡುಗಡೆ ಆಗಲಿದೆ.

'ಕೆ.ಜಿ.ಎಫ್' ಚಿತ್ರದ ಕಥೆ ಏನು.?

'ಕೆ.ಜಿ.ಎಫ್' ಒಂದು ಪೀರಿಯಾಡಿಕ್ ಸಿನಿಮಾ. 70-80 ದಶಕದೊಳಗಿನ ಕತೆ. ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯಲ್ಲಿ ರೂಪು ತಾಳಿದ ಒಬ್ಬ ವ್ಯಕ್ತಿಯ ಕತೆಯೇ ಈ ಸಿನಿಮಾ. ಕ್ಲಾಸ್ ಮತ್ತು ಮಾಸ್... ಎರಡು ವರ್ಗಕ್ಕೂ ಇಷ್ಟ ಆಗುವ ಆಕ್ಷನ್, ರೋಮ್ಯಾನ್ಸ್, ತಾಯಿ-ಮಗನ ಸೆಂಟಿಮೆಂಟ್ ಸೇರಿದಂತೆ ಎಲ್ಲ ಕಮರ್ಶಿಯಲ್ ಅಂಶಗಳು ಚಿತ್ರದಲ್ಲಿವೆ.

English summary
Why Rocking Star Yash starrer KGF is getting delayed: Director Prashanth Neel reveals the reasons.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada