ಸುದೀಪ್ ತಮ್ಮ ಹೆಸರಿನ ಮುಂದೆ 'ಸ್ಟಾರ್' ಬಿರುದು ಸೇರಿಸಿಲ್ಲ ಯಾಕೆ ಗೊತ್ತಾ

Recommended Video

ಜನ ನೀಡಿದ ಹೆಸರನ್ನು ತೆಗೆದು ಹಾಕಲ್ವಂತೆ ಕಿಚ್ಚ ಸುದೀಪ್

ಸೂಪರ್ ಸ್ಟಾರ್, ಪವರ್ ಸ್ಟಾರ್, ರಾಕಿಂಗ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್, ಮೆಗಾ ಸ್ಟಾರ್, ಸುಪ್ರೀಮ್ ಸ್ಟಾರ್ ಹೀಗೆ ಸೌತ್ ನಟರ ಹೆಸರಿನ ಮುಂದೆ 'ಸ್ಟಾರ್' ಬಿರುದು ಇರುವುದು ಸಾಮಾನ್ಯ.

ಆದರೆ, ನಟ ಸುದೀಪ್ ಮಾತ್ರ 'ಕಿಚ್ಚ ಸುದೀಪ್' ಆಗಿಯೇ ಇದ್ದಾರೆ. ಅವರ ಹೆಸರಿನ ಮುಂದೆ ಯಾವುದೇ ಸ್ಟಾರ್ ಎಂದು ಬಿರುದು ಸೇರಿಸಿಕೊಂಡಿಲ್ಲ. ಎಷ್ಟೋ ವರ್ಷಗಳಿಂದ ಹೀಗೆಯೇ ಇದ್ದ ಸುದೀಪ್ ಕೆಲವು ವರ್ಷಗಳ ಹಿಂದೆ, ಅಭಿಮಾನಿಗಳ ಆಸೆಯಂತೆ ಅಭಿನಯ ಚಕ್ರವರ್ತಿಯಾದರು.

ಸುದೀಪ್ ಯಾಕೆ ಸ್ಟಾರ್ ಬಿರುದು ಸೇರಿಸಿಕೊಂಡಿಲ್ಲ ಎನ್ನುವುದಕ್ಕೆ ಒಂದು ಕಾರಣ ಇದೆ. ಅವರಿಗೆ ಸ್ಟಾರ್ ಎನ್ನುವ ಬಿರುದಿಗಿಂತ ಕಿಚ್ಚ ಸುದೀಪ್ ಎಂದರೆನೇ ಖುಷಿಯಂತೆ. 'ಹುಚ್ಚ' ಸಿನಿಮಾ ಬಿಡುಗಡೆಯಾದಾಗ ಫಸ್ಟ್ ಡೇ ಚಿತ್ರಮಂದಿರದ ಮುಂದೆ ಜನ ಅವರನ್ನು 'ಕಿಚ್ಚ' ಎಂದು ಕರೆದು ಜೈಹಾರ ಹಾಕಿದ್ದರಂತೆ.

Why Kiccha Sudeep Didnt Put Star Title With His Name?

ಆಗ ಸುದೀಪ್ ಹೆಸರು ಕೂಡ ಯಾರಿಗೂ ತಿಳಿದಿರಲಿಲ್ಲ. 'ಹುಚ್ಚ' ಸಿನಿಮಾದ ಪಾತ್ರದ ಹೆಸರನ್ನು ಜನ ಪ್ರೀತಿಯಿಂದ ಕರೆದರು. ಮೊದಲ ಬಾರಿಗೆ ಜನ ಈ ಹೆಸರು ನೀಡಿದ್ದು, ಅದರಲ್ಲಿ ಒಂದು ಮುಗ್ದತೆ ಇದೆ ಎನ್ನುತ್ತಾರೆ ಸುದೀಪ್. ಅದಕ್ಕೆ ಎಷ್ಟೇ ದೊಡ್ಡ ನಟನಾದರೂ, ಸುದೀಪ್ ಜನ ನೀಡಿದ 'ಕಿಚ್ಚ' ಹೆಸರನ್ನು ತೆಗದು ಹಾಕುವುದಿಲ್ಲವಂತೆ. ಭಾವನಾತ್ಮಕವಾಗಿ ಕಿಚ್ಚ ಎನ್ನುವ ಪದ ಸುದೀಪ್ ಗೆ ಬಹಳ ಹತ್ತಿರವಾಗಿದೆ.

ಸದ್ಯ, ಸುದೀಪ್ 'ದಬಾಂಗ್ 3' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಗೆ ಕಿಚ್ಚ ವಿಲನ್ ಆಗಿದ್ದಾರೆ. ಡಿಸೆಂಬರ್ 20 ರಂದು ಕನ್ನಡದಲ್ಲಿಯೂ ಸಿನಿಮಾ ಬಿಡುಗಡೆ ಆಗುತ್ತಿದೆ. ಪ್ರಭುದೇವ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

More from Filmibeat

English summary
Why actor Kiccha Sudeep didn't put star title with his name?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X