CCL 2026: ಮೈದಾನದಲ್ಲಿ ಕಿಚ್ಚ ತಾಳ್ಮೆ ಕಳೆದುಕೊಂಡಿದ್ಯಾಕೆ? ಕೆಟ್ಟದಾಗಿ ಅವಾಚ್ಯ ಶಬ್ದ ಬಳಸಿದ್ದು ಯಾರಿಗೆ?
ಈ ಬಾರಿ ಸಿಸಿಎಲ್ ಕ್ರಿಕೆಟ್ ಟೂರ್ನಿ ಬಹಳ ಕುತೂಹಲ ಮೂಡಿಸಿದೆ. ಈಗಾಗಲೇ ಕರ್ನಾಟಕ ಬುಲ್ಡೋಜರ್ಸ್ ತಂಡ ಸೆಮಿಫೈನಲ್ ಹಂತ ತಲುಪಿದೆ. ಶನಿವಾರ(ಜನವರಿ 31) ಸಂಜೆ ಚೆನ್ನೈ ಕಿಂಗ್ಸ್ ವಿರುದ್ಧ ಕಿಚ್ಚನ ಪಡೆ ಗೆದ್ದು ಫೈನಲ್ ಪ್ರವೇಶಿಸುವ ಹುಮ್ಮಸ್ಸಿನಲ್ಲಿದೆ. ಇದೆಲ್ಲದರ ನಡುವೆ ಕಳೆದ ಪಂದ್ಯದಲ್ಲಿ ಕಿಚ್ಚ ಸುದೀಪ್ ಮೈದಾನದಲ್ಲೇ ಕೆಟ್ಟ ಪದ ಬಳಸಿ ಮಾತನಾಡಿದ್ದ ವೀಡಿಯೋ ವೈರಲ್ ಆಗಿತ್ತು.
ಆಡಿದ 3 ಪಂದ್ಯಗಳನ್ನು ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದಿದೆ. ಕಳೆದ ಭಾನುವಾರ ಭೋಜ್‌ಪುರಿ ದಬಾಂಗ್ಸ್ ವಿರುದ್ಧ 18 ರನ್‌ಗಳಿಂದ ಕಿಚ್ಚನ ಪಡೆ ಗೆದ್ದು ಬೀಗಿತ್ತು. ಮೊದಲ ಬ್ಯಾಟಿಂಗ್ ಮಾಡಿದ್ದ ಬುಲ್ಡೋಜರ್ಸ್ ತಂಡ 203 ರನ್ ಕಲೆ ಹಾಕಿತ್ತು. ಬಳಿಕ ಬ್ಯಾಟಿಂಗ್ ಮಾಡಿದ್ದ ದಬಾಂಗ್ಸ್ ತಂಡ 184 ರನ್‌ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತ್ತು. 2ನೇ ಇನ್ನಿಂಗ್ಸ್ 3ನೇ ಓವರ್‌ನಲ್ಲಿ ಸುದೀಪ್ ಹೀಗೆ ಸಹ ಆಟಗಾರನ ಮೇಲೆ ತಾಳ್ಮೆ ಕಳೆದುಕೊಂಡಿದ್ದರು.

ಸಿಸಿಎಲ್ ಪಂದ್ಯದಲ್ಲಿ ಹೀಗೆ ಅವಾಚ್ಯ ಶಬ್ದ ಬಳಕೆ ವಿವಾದಕ್ಕೆ ಸ್ವತಃ ಕಿಚ್ಚ ಸುದೀಪ್ ಸ್ಪಷ್ಟನೆ ನೀಡಿದ್ದಾರೆ. 'ರಕ್ಕಸಪುರದೊಳ್' ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಸುದೀಪ್ ಮಾತನಾಡಿದ್ದರು. ಮೊನ್ನೆ ಏನು ವೀಡಿಯೋ ವೈರಲ್ ಆಯ್ತಲ್ಲ. ಅದಕ್ಕೆ ಕಾರಣ ಗುರುಗಳು ಪ್ರೇಮ್. ಸೆಮಿಫೈನಲ್‌ನಲ್ಲಿ ಅದೇ ರೀತಿ ಮಾತನಾಡಿದರೆ ಅದಕ್ಕೂ ಪ್ರೇಮ್ ಕಾರಣ ಎಂದು ಸುದೀಪ್ ತಮಾಷೆ ಮಾಡಿದ್ದರು.
ಬಿಗ್‌ಬಾಸ್ ಮನೆಯಲ್ಲಿ ಮಾತನಾಡುವ ಪದಗಳ ಬಗ್ಗೆ ಸುದೀಪ್ ಪ್ರಶ್ನಿಸುತ್ತಾರೆ. ಅವರು ಹೀಗೆ ಮಾತನಾಡಬಹುದಾ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಬಿಗ್‌ಬಾಸ್ ಶೋನಲ್ಲಿ ಮಾತನಾಡುವುದಕ್ಕೂ, ಸ್ನೇಹಿತರ ಜೊತೆ ಆಟ ಆಡುವಾಗ ಮಾತನಾಡುವುದಕ್ಕೂ ವ್ಯತ್ಯಾಸ ಇದೆ ಎಂದು ಸಾಕಷ್ಟು ಜನ ಕಾಮೆಂಟ್ ಮಾಡಿದ್ದರು. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ ಸುದೀಪ್ ಯಾರ ಜೊತೆ ಮಾತನಾಡುವಾಗ ಆ ಪದ ಬಳಸಿದ್ರು, ಅಷ್ಟಕ್ಕೂ ಏನಾಯ್ತು ಎನ್ನುವುದು ಸಾಕಷ್ಟು ಜನರಿಗೆ ಗೊತ್ತಿಲ್ಲ.

ಬುಲ್ಡೋಜರ್ಸ್ ನೀಡಿದ 203 ರನ್ ಗುರಿ ತಲುಪಲು ಭೋಜ್‌ಪುರಿ ದಬಾಂಗ್ಸ್ ಆಟಗಾರರು ಮುಂದಾಗಿದ್ದರು. ಆರಂಭದಲ್ಲಿ ಉತ್ತಮ ರೀತಿಯಲ್ಲೇ ಬ್ಯಾಟಿಂಗ್ ಮಾಡುತ್ತಿದ್ದರು. ಬುಲ್ಡೋಜರ್ಸ್ ಪರ ಮಂಜುನಾಥ್ 15ನೇ ಓವರ್ ಬೌಲಿಂಗ್ ಮಾಡುತ್ತಿದ್ದರು. ಮೊದಲ ಎಸೆತದಲ್ಲಿ ದಬಾಂಗ್ಸ್ ತಂಡದ ಬ್ಯಾಟ್ಸ್‌ಮನ್ ರಾಜೀವ್ ರಿಷಿ ಸಿಕ್ಸರ್ ಬಾರಿಸಿದ್ದರು. 2ನೇ ಎಸೆದ ವೈಡ್ ಎಸೆದಾಗ ಸುದೀಪ್ ಗರಂ ಆಗಿದ್ದರು.
ಜೋರಾಗಿ ಚೆಂಡು ಎಸೆಯಲು ಪ್ರಯತ್ನಿಸಿ ಮಂಜುನಾಥ್ ವೈಡ್ ಹಾಕಿದ್ದರು. ಇದು ಸುದೀಪ್ ಆಕ್ರೋಶಕ್ಕೆ ಕಾರಣವಾಗಿತ್ತು. ಅದು ಜೋರಾಗಿ ಚೆಂಡು ಎಸೆಯಲು ಯಾಕೆ ಯತ್ನಿಸುತ್ತಿದ್ದೀಯಾ, ಹೀಗೆ ಆದ್ರೆ ಪಂದ್ಯ ಸೋಲಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಪ್ರಯತ್ನ ಮಾಡಿದ್ದರು. ಅದೇ ಸಮಯದಲ್ಲಿ ಆ ಕೆಟ್ಟ ಪದ ಬಳಸಿದ್ದರು. ಪ್ರತಿ ರನ್ ಅನ್ನು ತಡೆಯುವುದು ಆಗ ಅವಶ್ಯಕವಾಗಿತ್ತು. ಹಾಗಾಗಿ ತಪ್ಪುಗಳಾದ ಸುದೀಪ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಂಜಾಬ್ ದೆ ಶೇರ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ತಂಡ ಗೆದ್ದಿತ್ತು. 2ನೇ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಕಿಚ್ಚನ ಪಡೆ ಬಗ್ಗು ಬಡಿದಿತ್ತು. ದಂಬಾಗ್ಸ್ ವಿರುದ್ಧ ಕೂಡ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿತ್ತು. ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಚೆನ್ನೈ ಕಿಂಗ್ಸ್ ವಿರುದ್ಧ ಸೆಮಿಫೈನಲ್ ಪಂದ್ಯ ಎದುರಿಸಲಿದೆ.
ಕೇವಲ ಒಂದು ಪಂದ್ಯ ಮಾತ್ರ ಗೆದ್ದು ರನ್‌ರೇಟ್ ಮೂಲಕ ಸೆಮಿಫೈನಲ್ ಹಂತಕ್ಕೆ ಚೆನ್ನೈ ತಂಡ ಬಂದಿದೆ. ಕಳೆದ ಬಾರಿ ಮೈಸೂರಿನಲ್ಲಿ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಚೆನ್ನೈ ವಿರುದ್ಧ ಕಿಚ್ಚನ ಪಡೆ ಸೋತಿತ್ತು. ಕೋಯಂಬತ್ತೂರಿನಲ್ಲಿ ಆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.


Click it and Unblock the Notifications











