'ಮಾಸ್ಟರ್ ಪೀಸ್' ಹಿಟ್ ಆದ್ರೂ ಮಂಜು ಮಾಂಡವ್ಯ 4 ವರ್ಷ ಸಿನಿಮಾ ಮಾಡಲಿಲ್ಲ ಏಕೆ?

ನಿರ್ದೇಶಕ ಮಂಜು ಮಾಂಡವ್ಯ 'ಮಾಸ್ಟರ್ ಪೀಸ್' ನಂತಹ ಹಿಟ್ ಸಿನಿಮಾ ನೀಡಿದ್ದರು. ಯಶ್ ರೊಂದಿಗೆ ಮಾಡಿದ ಈ ಸಿನಿಮಾದ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಗಳಿಕೆ ಮಾಡಿತ್ತು. ಆದರೂ ಈ ಸಿನಿಮಾದ ನಂತರ 4 ವರ್ಷ ಅವರ ಬೇರೆ ಯಾವ ಸಿನಿಮಾವೂ ಶುರು ಆಗಲಿಲ್ಲ.

ಹೀಗಾಗಿ ಮಂಜು ಮಾಂಡವ್ಯಗೆ 'ಮಾಸ್ಟರ್ ಪೀಸ್' ನಂತರ ಅವಕಾಶಗಳು ಸಿಗಲಿಲ್ಲ ಎನ್ನುವ ಮಾತು ಇತ್ತು. ಆದರೆ, ಈ ಬಗ್ಗೆ ಸ್ವತಃ ಮಂಜು ಮಾಂಡವ್ಯ ಸ್ಪಷ್ಟನೆ ನೀಡಿದ್ದಾರೆ. 'ಶ್ರೀ ಭರತ ಬಾಹುಬಲಿ' ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ಈ ಸಂಗತಿ ಹಂಚಿಕೊಂಡಿದ್ದಾರೆ.

Why Manju Mandavya Took A Break After Masterpiece Movie

'ಮಾಸ್ಟರ್ ಪೀಸ್'ಗೆ ವಿಜಯ ಕಿರಗಂದೂರು ನಿರ್ಮಾಪಕರಾಗಿದ್ದರು. ಸಿನಿಮಾ ಬಗ್ಗೆ ಪ್ರೀತಿ ಇದ್ದ ಅವರು ಏನು ಕೇಳಿದರೂ ನೀಡುತ್ತಿದ್ದರು. ಆ ಚಿತ್ರದ ನಂತರ ನಾನು ಅದೇ ರೀತಿಯ ನಿರ್ಮಾಪಕರನ್ನು ನೋಡುತ್ತಿದ್ದೆ. ಆದರೆ, ನನ್ನ ಬಳಿ ಬರುವ ನಿರ್ಮಾಪಕರನ್ನು ಗಮನಿಸಿದರೆ, ಸಿನಿಮಾ ಮಾಡುವ ನಂಬಿಕೆ ಬರಲಿಲ್ಲ.

''ಮೈ ತುಂಬ ಚಿನ್ನ ಹಾಕಿಕೊಂಡು ಬರುತ್ತಿದ್ದರು. ಈ ಕಾರ್ ನಿಮ್ಮದೆ ಎನ್ನುತ್ತಿದ್ದರೂ ನನಗೆ ಅದನ್ನು ನೋಡಿದಾಗ ಇವರು ಸಿನಿಮಾ ಮಾಡಲು ಬಂದಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತಿತ್ತು. ಹಾಗಾಗಿ, ನನ್ನ ಸಿನಿಮಾ ತಡ ಆಯಿತು.'' ಎಂದು ಮಂಜು ಹೇಳಿದ್ದಾರೆ.

ಅದರೊಂದಿಗೆ, ಉಪೇಂದ್ರರಿಗೆ ಒಂದು ಸಿನಿಮಾ ಮಾಡುವ ಪ್ಲಾನ್ ಇತ್ತು. ಆದರೆ, ನೋಟ್ ಬ್ಯಾನ್ ನಿಂದ ಆ ಸಿನಿಮಾ ನಿಂತು ಹೋಯ್ತು. ಈ ಕಾರಣಗಳಿಂದ ನಾನು 4 ವರ್ಷ ಸಿನಿಮಾ ಮಾಡಲಿಲ್ಲ ಎಂದು ಮಂಜು ಮಾಂಡವ್ಯ ತಿಳಿಸಿದ್ದಾರೆ.

'ಶ್ರೀ ಭರತ ಬಾಹುಬಲಿ' ಮಂಜು ಮಾಂಡವ್ಯ ನಿರ್ದೇಶನದ ಹಾಗೂ ನಟನೆಯ ಸಿನಿಮಾವಾಗಿದೆ. ಈ ಸಿನಿಮಾ ಜನವರಿ 17 ರಂದು ಬಿಡುಗಡೆ ಆಗಲಿದೆ.

More from Filmibeat

English summary
Why Manju Mandavya took a break after 'Masterpiece' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X