ರಶ್ಮಿಕಾ ರಿಸೆಪ್ಷನ್ ಸೀರೆ ಬಗ್ಗೆ ಶುರುವಾಯ್ತು ಅಸಲಿ-ನಕಲಿ ಫೈಟ್; ಉಟ್ಟಿದ್ದ ಕೆಂಪು ಸೀರೆ ಅಪ್ಪಟ ರೇಷ್ಮೆಯದ್ದೇ?

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಂಭ್ರಮದ ಫೋಟೋಗಳು ಈಗಲೂ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿವೆ. ಕೊಡಗಿನ ಕುವರಿ ರಶ್ಮಿಕಾ ತಮ್ಮ ಮದುವೆಯ ಪ್ರತಿ ಸಮಾರಂಭದಲ್ಲೂ ಅತ್ಯಂತ ಸುಂದರವಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನ ಗೆದ್ದಿದ್ದಾರೆ.

ವಿಶೇಷವಾಗಿ ಹೈದರಾಬಾದ್‌ನಲ್ಲಿ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಎಲ್ಲರ ಗಮನ ಸೆಳೆಯಿತು. ಕಪ್ಪು ಬಣ್ಣದ ಬಾರ್ಡರ್ ಹೊಂದಿದ್ದ ಈ ಸೀರೆಯ ಲುಕ್ ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿಯನ್ನು ನೆನಪಿಸುವಂತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ಸೀರೆಯ ವಿನ್ಯಾಸದ ಬಗ್ಗೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಯಿತು.

Why Mysore Silk lovers are questioning Rashmika Mandanna s wedding Saree

ಆದರೆ, ಈ ಸೀರೆ ಕುರಿತು ಈಗ ಒಂದು ಹೊಸ ವಿವಾದ ಅಥವಾ ಚರ್ಚೆ ಶುರುವಾಗಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್ ಅಮಿ ಪಟೇಲ್ ಈ ಉಡುಗೆಯನ್ನು 'ಮೈಸೂರು ಸಿಲ್ಕ್' ಎಂದು ಕರೆದಿದ್ದಾರೆ. ಆದರೆ, ಮೈಸೂರು ರೇಷ್ಮೆಯ ಅಪ್ಪಟ ಪ್ರೇಮಿಗಳು ಮಾತ್ರ ಇದು ಅಸಲಿ ಮೈಸೂರು ರೇಷ್ಮೆ ಸೀರೆಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ರೇಷ್ಮೇ ಸೀರೆಯ ಬಗ್ಗೆ ಹರ್ಷವರ್ಧನ್ ರೈ ಎಂಬುವವರು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಶ್ಮಿಕಾ ಸೀರೆಯ ಬಗ್ಗೆ ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮೈಸೂರು ಸಿಲ್ಕ್ ಕರ್ನಾಟಕ ಸಿಲ್ಕ್ ಇಂಡಸ್ಟ್ರಿ ಕಾರ್ಪೊರೇಷನ್‌ಗೆ ಮೀಸಲಾಗಿದ್ದು, ಬೇರೆ ಯಾರೂ ಬಳಸುವಂತಿಲ್ಲ ಹಾಗೂ ಮಾರಾಟ ಮಾಡುವಂತಿಲ್ಲ. ಅದು ಕಾನೂನು ಬಾಹಿರ. ಅಲ್ಲದೆ ರಶ್ಮಿಕಾ ಉಟ್ಟ ಸೀರೆ ಮೈಸೂರು ಸಿಲ್ಕ್ ಅಲ್ಲ ಎಂದು ಹೇಳಿದ್ದಾರೆ.

ಮೈಸೂರು ರೇಷ್ಮೆಯ ಪರಂಪರೆ ಮತ್ತು ಜಿಐ ಟ್ಯಾಗ್ ಗದ್ದಲ

ಮೈಸೂರು ರೇಷ್ಮೆ ಎನ್ನುವುದು ಕೇವಲ ಒಂದು ಬಟ್ಟೆಯಲ್ಲ, ಅದು ಕನ್ನಡಿಗರ ಹೆಮ್ಮೆ ಮತ್ತು ಅಸ್ಮಿತೆ. ನ್ಯೂಸ್ 18 ವರದಿಯಂತೆ ಈ ಸೀರೆಗೆ 'ಭೌಗೋಳಿಕ ಗುರುತು' ಅಥವಾ GI ಟ್ಯಾಗ್ ಎನ್ನುವ ವಿಶೇಷ ಮಾನ್ಯತೆ ಇದೆ. ಇದರರ್ಥ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (KSIC) ಸಂಸ್ಥೆ ಮಾತ್ರ ಅಧಿಕೃತವಾಗಿ 'ಮೈಸೂರು ಸಿಲ್ಕ್' ಹೆಸರಿನಲ್ಲಿ ಸೀರೆಗಳನ್ನು ತಯಾರಿಸಿ ಮಾರಾಟ ಮಾಡಬಹುದು. ಬೇರೆ ಯಾವುದೇ ಖಾಸಗಿ ವಿನ್ಯಾಸಕರು ಅಥವಾ ಬ್ರ್ಯಾಂಡ್‌ಗಳು ಈ ಹೆಸರನ್ನು ಬಳಸಿ ಸೀರೆ ಮಾರಾಟ ಮಾಡುವುದು ಕಾನೂನುಬಾಹಿರ. ರಶ್ಮಿಕಾ ಧರಿಸಿದ ಸೀರೆ ಡಿಸೈನರ್ ಬ್ರ್ಯಾಂಡ್‌ನದ್ದಾಗಿದ್ದರಿಂದ ಈ ಚರ್ಚೆ ಮುನ್ನೆಲೆಗೆ ಬಂದಿದೆ.

ಇತಿಹಾಸದ ಪುಟಗಳಲ್ಲಿ ಮೈಸೂರು ರೇಷ್ಮೆ

ಈ ರೇಷ್ಮೆಯ ಕಥೆ ಶತಮಾನಗಳಷ್ಟು ಹಳೆಯದು. 18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್, ರೇಷ್ಮೆ ಉದ್ಯಮಕ್ಕೆ ಭದ್ರ ಬುನಾದಿ ಹಾಕಿದ್ದರು. ನಂತರ 1912ರಲ್ಲಿ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಿಜರ್ಲೆಂಡ್‌ನಿಂದ ಯಂತ್ರಗಳನ್ನು ತರಿಸಿ ರೇಷ್ಮೆ ಕಾರ್ಖಾನೆಯನ್ನು ಸ್ಥಾಪಿಸಿದರು. ಅಂದು ಕೇವಲ ರಾಜಮನೆತನದವರಿಗಾಗಿ ಮೀಸಲಾಗಿದ್ದ ಈ ರಾಜ ವೈಭೋಗದ ಸೀರೆಗಳು, ಇಂದು ಪ್ರತಿಯೊಬ್ಬ ಕನ್ನಡಿಗ ಮಹಿಳೆಯ ವಾರ್ಡ್ರೋಬ್ ಸೇರಿವೆ. ಈ ಸೀರೆಗಳ ಮೆರುಗು ದಶಕಗಳು ಕಳೆದರೂ ಮಾಸುವುದಿಲ್ಲ ಎನ್ನುವುದೇ ಇದರ ವಿಶೇಷತೆ.

ಅಸಲಿ ಸೀರೆಯನ್ನು ಗುರುತಿಸುವುದು ಹೇಗೆ?

ಮೈಸೂರು ರೇಷ್ಮೆ ಸೀರೆ ಯಾಕಿಷ್ಟು ದುಬಾರಿ ಮತ್ತು ವಿಶೇಷ ಎನ್ನುವುದಕ್ಕೆ ಅದರ ತಯಾರಿಕೆಯೇ ಕಾರಣ. ಕೆಎಸ್ಐಸಿ (KSIC) ತಯಾರಿಸುವ ಪ್ರತಿ ಸೀರೆಯಲ್ಲೂ ಈ ಕೆಳಗಿನ ಅಂಶಗಳಿರುತ್ತವೆ:
-ಶುದ್ಧ ಚಿನ್ನ ಮತ್ತು ಬೆಳ್ಳಿ: ಇಲ್ಲಿ ಬಳಸುವ ಜರಿಯಲ್ಲಿ ಶೇ.65ರಷ್ಟು ಬೆಳ್ಳಿ ಮತ್ತು ಶೇ. 0.65ರಷ್ಟು ಅಪ್ಪಟ ಚಿನ್ನದ ಲೇಪನವಿರುತ್ತದೆ.

-ವಿಶಿಷ್ಟ ಐಡಿ ನಂಬರ್: ಪ್ರತಿ ಸೀರೆಯ ಸೆರಗಿನ ಭಾಗದಲ್ಲಿ ನೇಯಲಾದ ಬಾರ್ಕೋಡ್, ವಿಶಿಷ್ಟ ಸಂಖ್ಯೆ ಮತ್ತು ಹೊಲೊಗ್ರಾಮ್ ಇರುತ್ತದೆ.

-ತೂಕ ಮತ್ತು ದಪ್ಪ: ಈ ಸೀರೆಗಳು 120 GSM ತೂಕವನ್ನು ಹೊಂದಿರುತ್ತವೆ, ಇದು ಸೀರೆಗೆ ಒಂದು ವಿಶಿಷ್ಟವಾದ ರೇಷ್ಮೆಯ ನಯ ಹಾಗೂ ಶಕ್ತಿಯನ್ನು ನೀಡುತ್ತದೆ.

-ಬಣ್ಣದ ಗ್ಯಾರಂಟಿ: ನೀವು ಎಷ್ಟೇ ವರ್ಷ ಬಳಸಿದರೂ ಈ ಸೀರೆಯ ಹೊಳಪು ಕುಂದುವುದಿಲ್ಲ.

Why Mysore Silk lovers are questioning Rashmika Mandanna s wedding Saree


ರಶ್ಮಿಕಾ ಸೀರೆ ಅಸಲಿ ಮೈಸೂರು ರೇಷ್ಮೆಯೇ?

ರಶ್ಮಿಕಾ ಮಂದಣ್ಣ ಅವರ ಸೀರೆಯನ್ನು ಮಾರಾಟ ಮಾಡಿದ ಬ್ರ್ಯಾಂ ವೆಬ್‌ಸೈಟ್ ಪ್ರಕಾರ, ಅದನ್ನು 'ಮೈಸೂರು ಕ್ರೇಪ್ ಸಿಲ್ಕ್' ಎಂದು ವಿವರಿಸಲಾಗಿದೆ. ಅಂದರೆ, ಇದು ಅಪ್ಪಟ ಕೆಎಸ್ಐಸಿ ಸಂಸ್ಥೆಯ ಮೈಸೂರು ರೇಷ್ಮೆಯಲ್ಲ, ಬದಲಾಗಿ ಮೈಸೂರು ಸಿಲ್ಕ್ ಮಾದರಿಯಲ್ಲೇ ಸಿದ್ಧಪಡಿಸಿದ ಶುದ್ಧ ಕ್ರೇಪ್ ರೇಷ್ಮೆ ಸೀರೆ. ಕೊಡಗಿನ ಮೂಲದವರಾದ ರಶ್ಮಿಕಾ ಅವರು ಮೈಸೂರು ರೇಷ್ಮೆಯನ್ನೇ ಆರಿಸಿಕೊಳ್ಳಬೇಕಿತ್ತು ಎಂಬುದು ಸೀರೆ ಪ್ರಿಯರ ಆಶಯವಾಗಿತ್ತು. ಆದರೆ ಬ್ರ್ಯಾಂಡ್ ಹೆಸರಿನ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

ಏನೇ ಇರಲಿ, ಕೊಡಗಿನ ಕುವರಿ ಸಖತ್ ಹಾಟ್

ಬಟ್ಟೆಯ ತಾಂತ್ರಿಕತೆ ಮತ್ತು ಕಾನೂನು ಚರ್ಚೆಗಳು ಒಂದು ಕಡೆಯಾದರೆ, ರಶ್ಮಿಕಾ ಮಂದಣ್ಣ ಅವರ ಲುಕ್ ಮಾತ್ರ ಅದ್ಭುತವಾಗಿತ್ತು. ಆ ಗಾಢ ಕೆಂಪು ಬಣ್ಣದ ಸೀರೆಯಲ್ಲಿ ರಶ್ಮಿಕಾ ಅಪ್ಪಟ ದಕ್ಷಿಣ ಭಾರತದ ವಧುವಿನಂತೆ ಕಂಗೊಳಿಸುತ್ತಿದ್ದರು. ಸಾಂಪ್ರದಾಯಿಕ ಆಭರಣಗಳು ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು. ಅಭಿಮಾನಿಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ನೋಡಿ ಫಿದಾ ಆಗಿದ್ದಾರೆ. ವಿವಾದಗಳ ಏನೇ ಇದ್ದರೂ, ರಶ್ಮಿಕಾ ಅವರ ಈ ವೆಡ್ಡಿಂಗ್ ರಿಸೆಪ್ಷನ್ ಲುಕ್ ಮಾತ್ರ ಸದಾ ನೆನಪಿನಲ್ಲಿ ಉಳಿಯುವಂತಿದೆ.

More from Filmibeat

English summary
Why Mysore Silk lovers are questioning Rashmika Mandanna's wedding Saree.
Read more about: rashmika mandanna saree
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X