ಸಿನಿಮಾ ಪ್ರಚಾರಗಳಿಗೆ ನಟಿ ನಯನತಾರ ಬರಲ್ಲ ಯಾಕೆ?
'ಲೇಡಿ ಸೂಪರ್ ಸ್ಟಾರ್' ಅಂತಾನೆ ಗುರುತಿಸಿಕೊಂಡಿರುವ ನಯನತಾರ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ಸ್ಟಾರ್ ನಟರ ಚಿತ್ರಗಳನ್ನ ಪಕ್ಕಕ್ಕೆ ಇಟ್ಟರೂ ನಯನತಾರ ಅಭಿನಯದ ಸೋಲೋ ಚಿತ್ರಗಳು ಕೂಡ ಹಿಟ್ ಆಗಿರುವ ಉದಾಹರಣೆಗಳಿವೆ.
ಅದ್ಯಾಕೋ, ನಯನತಾರ ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾದ ಪ್ರಚಾರಕ್ಕೂ ಬರುತ್ತಿಲ್ಲ. ಅದು ಚಿರಂಜೀವಿ ನಟಿಸಿದರೂ ಸರಿ, ರಜನಿಕಾಂತ್ ನಟಿಸಿದರೂ ಸರಿ, ವಿಜಯ್ ನಟಿಸಿದರೂ ಸರಿ.
ಸೂಪರ್ ಸ್ಟಾರ್ ನಟರ ಚಿತ್ರಗಳ ಪ್ರಚಾರಕ್ಕೂ ನಯನತಾರ ಬರಲ್ಲ ಅಂದ್ರೆ ಈ ನಿರ್ಧಾರದ ಹಿಂದೆ ಬೇರೆ ಏನೋ ಇದೆ ಎಂಬುದನ್ನ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಸ್ವತಃ ನಯನತಾರ ಅವರೇ ಮಾತನಾಡಿದ್ದಾರೆ. ಯಾಕೆ ಸಿನಿಮಾಗಳ ಪ್ರಚಾರಕ್ಕೆ ಬರಲ್ಲ ಎಂದು ಬಹಿರಂಗಪಡಿಸಿದ್ದಾರೆ. ಕಾರಣವೇನು? ಮುಂದೆ ಓದಿ...

ಸಿನಿಮಾ ಮಾಡ್ತೀನಿ, ಪ್ರಚಾರ ಮಾಡಲ್ಲ
''ಸಿನಿಮಾ ಮಾಡುವುದು ಮಾತ್ರ ನನ್ನ ಕೆಲಸ, ಪ್ರಚಾರ ಮಾಡುವುದು ನನ್ನ ಕೆಲಸವಲ್ಲ. ಸಿನಿಮಾ ಮಾತನಾಡಬೇಕೆ ಹೊರತು, ಪ್ರಚಾರವಲ್ಲ'' ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ನಯನತಾರ ಅವರ ಈ ನಿರ್ಧಾರ ಈಗ ಚರ್ಚೆಗೆ ಕಾರಣವಾಗಿದೆ.

ತಪ್ಪಾಗಿ ಅರ್ಥೈಸಲಾಗಿದೆ
''ನಾನು ಬಹಳ ಖಾಸಗಿ ವ್ಯಕ್ತಿ. ಹೆಚ್ಚು ಜನರು ಸೇರುವ ಕಡೆ ನಾನು ಹೋಗಲು ಇಷ್ಟಪಡುವುದಿಲ್ಲ. ನನ್ನನ್ನು ಸಾಕಷ್ಟು ಬಾರಿ ತಪ್ಪಾಗಿ ಉಲ್ಲೇಖಿಸಲಾಗಿದೆ ಮತ್ತು ಅರ್ಥೈಸಲಾಗಿದೆ. ಹಾಗಾಗಿ, ನಾನು ಜನದಟ್ಟಣೆ ಇರುವ ಸ್ಥಳದಿಂದ ಹಿಂದೆ ಇರುತ್ತೇನೆ'' ಎಂದು ನಯನತಾರ ಸ್ಪಷ್ಟಪಡಿಸಿದ್ದಾರೆ.

ಸೈರಾ ಪ್ರಚಾರದಲ್ಲಿ ಇರಲಿಲ್ಲ ನಯನ
ಮೆಗಾಸ್ಟಾರ್ ಚಿರಂಜೀವಿ, ಅಮಿತಾಭ್ ಬಚ್ಚನ್, ವಿಜಯ್ ಸೇತುಪತಿ, ಸುದೀಪ್, ತಮನ್ನಾ, ಜಗಪತಿ ಬಾಬು ಅಂತಹ ಹಿರಿಯ ಕಲಾವಿದರು ಖುದ್ದು ವೇದಿಕೆಗಳಲ್ಲಿ, ವಾಹಿನಿಗಳಲ್ಲಿ ಸೈರಾ ಸಿನಿಮಾದ ಪ್ರಚಾರ ಮಾಡಿದ್ರು. ಆದರೆ, ನಯನತಾರ ಮಾತ್ರ ಯಾವ ವೇದಿಕೆಯಲ್ಲೂ ಕಾಣಿಸಿಕೊಂಡಿಲ್ಲ. ಎಲ್ಲಾ ಕಡೆಯೂ ತಮನ್ನಾ ಮಾತ್ರ ಇದ್ದರು.

'ಬಿಗಿಲ್' ಚಿತ್ರಕ್ಕೂ ಹೋಗಲ್ಲವಂತೆ
ತಮಿಳು ನಟ ವಿಜಯ್ ನಟಿಸುತ್ತಿರುವ ಬಿಗಿಲ್ ಚಿತ್ರದಲ್ಲಿ ನಯನತಾರ ನಟಿಸಿದ್ದು, ಆ ಚಿತ್ರದ ಪ್ರಚಾರಕ್ಕೂ ಹೋಗಲ್ಲ ಎನ್ನಲಾಗಿದೆ. ಈಗಾಗಲೇ ಬಿಗಿಲ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಆ ಶೋಗೆ ನಯನತಾರ ಗೈರಾಗಿದ್ದರು. ಬಹುಶಃ ಮುಂದಿನ ದಿನದಲ್ಲೂ ನಯನತಾರ ಅಲಭ್ಯವಾಗ್ತಾರಾ ಗೊತ್ತಿಲ್ಲ.

'ದರ್ಬಾರ್' ಕಥೆ ಏನು?
ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ ದರ್ಬಾರ್ ಸಿನಿಮಾದಲ್ಲೂ ನಯನತಾರ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿರಂಜೀವಿ, ವಿಜಯ್ ಅಂತವರ ದೊಡ್ಡ ಸಿನಿಮಾಗಳಿಂದಲೇ ಹಿಂದೆ ಸರಿದಿರುವ ನಯನತಾರ, ರಜನಿಕಾಂತ್ ಚಿತ್ರದ ಪ್ರಚಾರಕ್ಕೆ ಭಾಗಿಯಾಗ್ತಾರಾ ಅಥವಾ ಇಲ್ಲವಾ ಎನ್ನುವುದು ಕುತೂಹಲ ಮೂಡಿಸಿದೆ.


Click it and Unblock the Notifications











