For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಮಂದಿ ನೀ ತೂ... ಅಂದಿದ್ಯಾಕೆ...

  By ಜೀವನರಸಿಕ
  |

  ಆಕೆ ಮೊದಲ ಸಿನಿಮಾಗೇನೇ ಅತ್ಯುತ್ತಮ ನಟಿ ರಾಜ್ಯಪ್ರಶಸ್ತಿ ಪಡ್ಕೊಂಡು ನಿರೀಕ್ಷೆ ಮೂಡಿಸಿದ ಚೆಲುವೆ. ನೋಡೋಕು ಬ್ಯೂಟಿ. ಕರಾವಳಿಯ ಈ ಸುಂದರಿಯ ಲಕ್ಕಿಗೆ ಅದೆಲ್ಲಿ ಲತ್ತೆ ಹೊಡೀತೋ ಗೊತ್ತಿಲ್ಲ. ಇನ್ನು ಸಿನಿಪಂಡಿತರನ್ನ ಕೇಳಿದರೆ ಅವರೂ ಅದನ್ನೇ ಹೇಳ್ತಾರೆ.

  ಸಿನಿಮಾದಲ್ಲಿ ಗೆಲ್ಲೋಕೆ ಟ್ಯಾಲೆಂಟ್ ಇದ್ದರೆ ಸಾಲದು ಅದೃಷ್ಟ ಅನ್ನೋದು ಅನಿವಾರ್ಯ ಅಂತ. 'ಗಾಳಿಪಟ' ಸಿನಿಮಾದಲ್ಲಿ ದಿಗಂತ್ ಗೆ ಜೋಡಿಯಾಗಿದ್ದ ಈ ಚೆಲುವೆ ನೀತೂ ಸಿನಿಮಾದುದ್ದಕ್ಕೂ ಗಂಡುಬೀರಿಯಾಗಿ ಕಾಣಿಸ್ಕೋತಾರೆ. ಥೂ ಥೂ ಅಂತ ಉಗೀತಾ ಮನಮೆಚ್ಚೋ ಅಭಿನಯ ನೀಡಿದರು.

  ಮೊದಲ ಸಿನಿಮಾದ ನಂತರ ಎಲ್ಲಿಯೂ ಮಿಂಚಲಿಲ್ಲ.ಆದರೆ ಈಗ್ಯಾಕೋ ಕನ್ನಡ ಚಿತ್ರರಂಗ ಈ ಹೀರೋಯಿನ್ ಗೆ ಹಾಗೇನೇ ಮಾಡ್ತಿದೆ ಅನ್ನಿಸ್ತಿದೆ. ಮೊದಲ ಸಿನಿಮಾದ ನಂತರ ನೀತೂ ಎಲ್ಲಿಯೂ ಸೈ ಅನ್ನಿಸಿಕೊಳ್ಳಲಿಲ್ಲ. ಒಟ್ಟಾರೆ ನೀತೂ ಅನ್ನೋ ನಟಿಗೆ ಅದೃಷ್ಟ ಕೈಕೊಟ್ಟಿದೆ. ಆದರೆ ನೀತೂ ಟ್ಯಾಲೆಂಟೆಡ್ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ.

  ನೀತೂ ಒಳ್ಳೆಯ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ.

  ನೀತೂ ಒಳ್ಳೆಯ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ.

  ಒಳ್ಳೆಯ ನಟಿಯನ್ನ ಕನ್ನಡ ಚಿತ್ರರಂಗ ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ವಾ ಅನ್ನೋ ಅನುಮಾನ ಚಿತ್ರಪಂಡಿತರದ್ದು. ಒಳ್ಳೆಯ ಪಾತ್ರಗಳು ನೀತೂಗೇ ಸಿಗಲೇ ಇಲ್ಲ.

  ಪಾತ್ರಗಳ ಆಯ್ಕೆಯಲ್ಲಿ ನೀತೂ ಸೋತರಾ?

  ಪಾತ್ರಗಳ ಆಯ್ಕೆಯಲ್ಲಿ ನೀತೂ ಸೋತರಾ?

  2007ರಲ್ಲಿ ಬಂದ 'ಗಾಳಿಪಟ'ದಲ್ಲಿ ಗಮ್ಮತ್ತು ಮಾಡಿದ್ದ ಚೆಲುವೆ. ಆದರೆ ನಂತರ 'ಬಿಂದಾಸ್' ಅನ್ನಿಸೋ ಪಾತ್ರಗಳಲ್ಲಿ ಮಿಂಚಲಿಲ್ಲ. ಆಮೇಲೆ ನಾಲ್ಕಾರು ಸಿನಿಮಾದಲ್ಲಿ ಗಮನ ಸೆಳೆಯೋ ಪಾತ್ರಗಳೇ ಬರಲಿಲ್ಲ.

  ಚಿಟ್ಟೆಸ್ವಾಮಿಯಾಗಿ ಚಿಂದಿ ಉಡಾಯಿಸಲಿಲ್ಲ

  ಚಿಟ್ಟೆಸ್ವಾಮಿಯಾಗಿ ಚಿಂದಿ ಉಡಾಯಿಸಲಿಲ್ಲ

  ಸ್ಟಾರ್ ಹೀರೋಯಿನ್ ಗಳ ಸಾಲಲ್ಲಿ ನಿಲ್ಲೋಕೆ ಹಿಂದೆ ಬಿದ್ದ ನೀತೂ ಆ ನಂತರ ಕಾಮಿಡಿ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಆ ಸಿನಿಮಾಗಳೂ ಕೂಡ ಅದೃಷ್ಟವನ್ನ ತರಲಿಲ್ಲ.

  ಐಟಂ ಸಾಂಗ್ ಗಳೂ ಕೈ ಹಿಡೀತಾ ಇಲ್ಲ

  ಐಟಂ ಸಾಂಗ್ ಗಳೂ ಕೈ ಹಿಡೀತಾ ಇಲ್ಲ

  ಇತ್ತೀಚೆಗೆ ಜೀತು ಸೀನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ ನೀತೂ. ಜೀತು ಸಿನಿಮಾ ಕೂಡ ಹೆಸರು ಮಾಡಲಿಲ್ಲ. ಇನ್ನು ಬೆಂಗಳೂರು ಮೆಟ್ರೋ ಅನ್ನೋ ಸಿನಿಮಾದ ಐಟಂ ಸಾಂಗ್ ಮಾಡಿದರು ನೀತೂ. ಆದರೆ ಆ ಸಿನಿಮಾನೇ ಕಂಪ್ಲಿಟ್ ಆಗಲಿಲ್ಲ.

  ನೀತು ಜಾಸ್ತಿ ದಪ್ಪ ಆಗಿದ್ದಾರೆ

  ನೀತು ಜಾಸ್ತಿ ದಪ್ಪ ಆಗಿದ್ದಾರೆ

  ಇದೆಲ್ಲದ್ರ ನಡುವೆ ನೀತು ಜಾಸ್ತಿ ದಪ್ಪ ಆಗಿರೋದು ಕೂಡ ಅವಕಾಶಗಳನ್ನ ಕಡಿಮೆ ಮಾಡಿದೆ. ನೀತೂ ಕೂಡ ಸ್ವಲ್ಪ ಸ್ಲಿಮ್ ಆದರೆ ಸಿನಿಮಾಗಳು ಸಿಗ್ಬಹುದೋ ಏನೋ.

  English summary
  Why Kannada actress Neethu missing lot of offers in Kannada films. The actress is became unlucky girl. She started her Career by acting in a Kannada TV serial Titled Punya Directed by Nagathihalli Chandrashekhar and Later became a Lead Actress in various Kannada films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X