For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದಲ್ಲಿ ನಟರನ್ನು ಬಂಧಿಸಿಲ್ಲ ಏಕೆ: ಇಂದ್ರಜಿತ್ ಲಂಕೇಶ್ ಪ್ರಶ್ನೆ

  |

  ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಪ್ರಕರಣ ದೊಡ್ಡ ಮಟ್ಟಕ್ಕೆ ಸದ್ದು ಮಾಡುವಲ್ಲಿ, ತನಿಖೆ ಹೆಚ್ಚು ತೀವ್ರವಾಗುವಲ್ಲಿ ನಿರ್ದೇಶಕ ಇಂದ್ರಜಿತ್ ಪಾತ್ರ ಮಹತ್ವದ್ದು.

  Recommended Video

  ಡ್ರಗ್ಸ್ ಪ್ರಕರಣದ ಬಗ್ಗೆ ಮತ್ತೆ ಮಾತನಾಡಿದ ಇಂದ್ರಜಿತ್ ಲಂಕೇಶ್ | Fillmibeat Kannada

  ಚಿರಂಜೀವಿ ಸರ್ಜಾ ಸಾವು ಸಂಭವಿಸಿದಾಗಲೇ, ಇಂದ್ರಜಿತ್ ಲಂಕೇಶ್, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಚಟವುಳ್ಳ ನಟ-ನಟಿಯರಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದರು. ಚಿರಂಜೀವಿ ಸರ್ಜಾ ಸಾವು ಡ್ರಗ್ಸ್‌ ನಿಂದ ಆಗಿದೆ ಎಂದು ಆರೋಪಿಸಿದ್ದರು. ಆದರೆ ನಂತರ ತಮ್ಮ ಆರೋಪಕ್ಕೆ ಕ್ಷಮೆ ಕೇಳಿ, ಹೇಳಿಕೆ ಹಿಂಪಡೆದರು.

  ಡ್ರಗ್ಸ್‌ ಚಟವುಳ್ಳ ಸ್ಯಾಂಡಲ್‌ವುಡ್ ನಟ-ನಟಿಯರ ಪಟ್ಟಿ ತಮ್ಮ ಬಳಿ ಇದೆ ಎಂದಿದ್ದ ಇಂದ್ರಜಿತ್, ಸಿಸಿಬಿ ಗೆ ಆ ಬಗ್ಗೆ ಮಾಹಿತಿಯನ್ನೂ ಕೊಟ್ಟರು. ಆ ನಂತರ ಕೆಲವು ಸ್ಟಾರ್ ನಟಿಯರ ಬಂಧನವಾಯಿತು. ಹಲವು ನಟ-ನಟಿಯರ ವಿಚಾರಣೆ ಸಹ ಮಾಡಲಾಯಿತು.

  ಆದರೆ ಡ್ರಗ್ಸ್‌ ಪ್ರಕರಣದ ತನಿಖೆ ಬಗ್ಗೆ ಇಂದ್ರಜಿತ್ ಲಂಕೇಶ್‌ ಗೆ ತೃಪ್ತಿ ಇಲ್ಲ. ತಮ್ಮ ಸಿನಿಮಾ 'ಶಕೀಲಾ' ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಇಂದ್ರಜಿತ್ ಲಂಕೇಶ್, 'ಡ್ರಗ್ಸ್ ಪ್ರಕರಣದಲ್ಲಿ ಕೆಲವು ನಟರ ಹೆಸರೂ ಸಹ ಬಂದಿತ್ತು, ಆದರೆ ನಟಿಯರನ್ನಷ್ಟೆ ಬಂಧಿಸಲಾಗಿದೆ. ನಟರನ್ನು ಏಕೆ ಬಂಧಿಸಿಲ್ಲ?' ಎಂದು ಪ್ರಶ್ನಿಸಿದ್ದಾರೆ.

  'ನಾನು ಮೊದಲಿಗೆ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಚಟವುಳ್ಳವರು ಇದ್ದಾರೆ ಎಂದಾಗ ಎಲ್ಲರೂ ನನ್ನನ್ನು ಕೆಟ್ಟವನಂತೆ ಕಂಡರು. ಆದರೆ ತನಿಖೆ ನಡೆದು ನಿಜ ವಿಷಯ ಹೊರಗೆ ಬಂದಾಗ ಎಲ್ಲರಿಗೂ ಆಶ್ಚರ್ಯವಾಯಿತು. ಇಬ್ಬರು ನಟಿಯರು ಈಗ ಆರೋಪ ಎದುರಿಸುತ್ತಿದ್ದಾರೆ, ಡ್ರಗ್ಸ್ ಚಟವುಳ್ಳ ನಟರೂ ಇದ್ದಾರೆ. ಆದರೆ ಅವರು ತಮ್ಮ ರಾಜಕೀಯ ಪ್ರಭಾವ ಬಳಸಿ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ' ಎಂದರು ಇಂದ್ರಜಿತ್ ಲಂಕೇಶ್.

  'ಈ ಪ್ರಕರಣದಿಂದ ಕರ್ನಾಟಕ ಜನರಿಗೆ ಒಂದು ಸಂದೇಶ ದೊರೆತಿದೆ. ಸ್ಯಾಂಡಲ್‌ವುಡ್‌ನ ಕೆಲವರ ಬಣ್ಣ ಬಯಲಾಗಿದೆ. ನಟಿಯರು ಮಾತ್ರವೇ ಡ್ರಗ್ಸ್ ತೆಗೆದುಕೊಂಡಿರುವುದಾ? ನಟರು ತೆಗೆದುಕೊಂಡಿಲ್ಲವಾ? ಎಂದು ಜನರೇ ಪ್ರಶ್ನೆ ಕೇಳುತ್ತಿದ್ದಾರೆ' ಎಂದರು ಇಂದ್ರಜಿತ್ ಲಂಕೇಶ್.

  English summary
  Indrajit Lankesh questions why no actor was arrested in Drugs case. Why only actresses were arrested.
  Friday, December 18, 2020, 22:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X