twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರ ನಿರ್ದೇಶಿಸಲು ಪಿ.ವಾಸು 15ವರ್ಷ ಗ್ಯಾಪ್ ತೆಗೆದುಕೊಂಡಿದ್ದೇಕೆ?

    |

    ಪಿ.ವಾಸು ಎಂದಾಗ ಪ್ರೇಕ್ಷಕರ ಕಣ್ಣೆದುರಿಗೆ ಬರುವುದು ವಿಷ್ಣುವರ್ಧನ್ ಅಭಿನಯದ ಆಪ್ತಮಿತ್ರ ಚಿತ್ರ. ಆ ಚಿತ್ರದ ನಿರ್ದೇಶಕರಾಗಿದ್ದ ಪಿ.ವಾಸು, ಇದಕ್ಕಿಂತ ಮುನ್ನವೂ, ಕನ್ನಡ ಸಿನಿಮಾ ನಿರ್ದೇಶಿಸಿದ್ದರೂ, ಹೆಸರು ಬಂದಿದ್ದು ಅವರಿಗೆ ಆಪ್ತಮಿತ್ರ ಚಿತ್ರದ ಮೂಲಕವೇ..

    ಪಿ.ವಾಸು ಮೂಲ ಮಲಯಾಳಂನವರು (ನಾಯರ್). ಅವರ ತಂದೆ, ಎಂ.ಜಿ.ಆರ್ ಮತ್ತು NTR ಸಿನಿಮಾದಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿಕೊಂಡಿದ್ದವರು.

    ಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಾಣದ ಸೂಪರ್ ಹಿಟ್ ಚಿತ್ರಗಳುಪ್ರಚಂಡ ಕುಳ್ಳ ದ್ವಾರಕೀಶ್ ನಿರ್ಮಾಣದ ಸೂಪರ್ ಹಿಟ್ ಚಿತ್ರಗಳು

    1981ರಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಾಸು, ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಕೆಲಸ ಮಾಡಿದ್ದು ಕನ್ನಡ ಸಿನಿಮಾಗೆ. ಅದೂ, ರಾಜಕುಮಾರ್ ಚಿತ್ರಕ್ಕೆ.

    ಸಂತೋಷ್ ಚಿತ್ರಮಂದಿರಲ್ಲಿ ನಡೆಯಲಿದೆ 'ಆಯುಷ್ಮಾನ್ ಭವ' ಪ್ರೀ ರಿಲೀಸ್ ಕಾರ್ಯಕ್ರಮಸಂತೋಷ್ ಚಿತ್ರಮಂದಿರಲ್ಲಿ ನಡೆಯಲಿದೆ 'ಆಯುಷ್ಮಾನ್ ಭವ' ಪ್ರೀ ರಿಲೀಸ್ ಕಾರ್ಯಕ್ರಮ

    ವಾಸು, ಮಲಯಾಳಂ ಮೂಲದವರಾಗಿದ್ದವರೂ, ಮಾಲಿವುಡ್ ಸಿನಿಮಾಗೆ ಅವರು ನಿರ್ದೇಶಿಸಿದ್ದು ಒಂದೇ ಸಿನಿಮಾವನ್ನು. 1988 ರಿಂದ 2003ರ ಅವಧಿಯಲ್ಲಿ ವಾಸು ಯಾವುದೇ ಕನ್ನಡ ಸಿನಿಮಾವನ್ನು ನಿರ್ದೇಶಿರಲಿಲ್ಲ. ಅದಕ್ಕೆ ಕಾರಣ ಸಾಲುಸಾಲು ಸೋಲು..

    ಡಾ.ರಾಜಕುಮಾರ್ ಅಭಿನಯದ 'ಗುರಿ' ಚಿತ್ರ

    ಡಾ.ರಾಜಕುಮಾರ್ ಅಭಿನಯದ 'ಗುರಿ' ಚಿತ್ರ

    ಪಿ.ವಾಸು 1983ರಲ್ಲಿ, ಡಾ.ರಾಜಕುಮಾರ್ ಅಭಿನಯದ 'ಗುರಿ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾದರು. ಅದಕ್ಕೂ ಮುನ್ನ, ಮೂರು ತಮಿಳು ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ವಾಸು ದುಡಿದಿದ್ದರು. ರಾಜ್ ಸಿನಿಮಾಗಳು ಉಚ್ಚ್ರಾಯ ಸ್ಥಿತಿಯಲ್ಲಿದ್ದ ಕಾಲವದು. ಆದರೂ, ಗುರಿ ಚಿತ್ರ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸನ್ನು ಕಂಡಿರಲಿಲ್ಲ.

    ವಿಷ್ಣು ಅಭಿನಯದ 'ಜಯಸಿಂಹ' ಚಿತ್ರ

    ವಿಷ್ಣು ಅಭಿನಯದ 'ಜಯಸಿಂಹ' ಚಿತ್ರ

    1985ರಲ್ಲಿ ವಿಷ್ಣುವರ್ಧನ್ ಅಭಿನಯದ 'ಕಥಾನಾಯಕ' ಸಿನಿಮಾವನ್ನು ಪಿ.ವಾಸು ನಿರ್ದೇಶಿಸಿದ್ದರು. ಸುಮಲತಾ, ವಜ್ರಮುನಿ, ಲೀಲಾವತಿ ಪ್ರಮುಖ ತಾರಾಗಣದಲ್ಲಿದ್ದ ಚಿತ್ರವದು. ಅದೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸನ್ನು ಪಡೆದಿರಲಿಲ್ಲ. ಇದಾದ ನಂತರ, ವಿಷ್ಣು ಅಭಿನಯದ 'ಜಯಸಿಂಹ' ಚಿತ್ರವನ್ನೂ ವಾಸು ನಿರ್ದೇಶಿಸಿದ್ದರು. ಅದೂ, ಭಾರೀ ಸದ್ದು ಮಾಡಿದ ಚಿತ್ರವಲ್ಲ.

    ವಿಷ್ಣುವರ್ಧನ್ ಅಭಿನಯದ ದಾದಾ ಚಿತ್ರ

    ವಿಷ್ಣುವರ್ಧನ್ ಅಭಿನಯದ ದಾದಾ ಚಿತ್ರ

    1985ರಲ್ಲಿ ಅವರ ನಿರ್ದೇಶನದ ಮತ್ತೊಂದು ಚಿತ್ರ, ವಿಷ್ಣುವರ್ಧನ್, ಅಂಬಿಕಾ ಅಭಿನಯದ 'ಜೀವನ ಜ್ಯೋತಿ' ಸಿನಿಮಾ ಕೂಡಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವಲ್ಲಿ ವಿಫಲವಾಯಿತು. 1988ರಲ್ಲಿ ಮತ್ತೊಂದು ವಿಷ್ಣುವರ್ಧನ್ ಚಿತ್ರವನ್ನು ವಾಸು ನಿರ್ದೇಶಿಸಿದರು. 'ದಾದಾ' ಚಿತ್ರ, ತಕ್ಕಮಟ್ಟಿಗೆ ಯಶಸ್ಸನ್ನು ಕಂಡಿತು.

    ವಿಷ್ಣುವರ್ಧನ್ ಜೊತೆ, 'ಹೃದಯವಂತ' ಸಿನಿಮಾ

    ವಿಷ್ಣುವರ್ಧನ್ ಜೊತೆ, 'ಹೃದಯವಂತ' ಸಿನಿಮಾ

    1988ರ ನಂತರ ಪಿ.ವಾಸು 2003ರವರೆಗೆ ಯಾವುದೇ ಸಿನಿಮಾವನ್ನು ಕನ್ನಡದಲ್ಲಿ ಮಾಡಲಿಲ್ಲ. ಯಾಕೆಂದರೆ, ಅದುವರೆಗೆ ಅವರು ನಿರ್ದೇಶಿಸಿದ್ದ ಐದು ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ನಿರ್ಮಾಪಕರಿಗೆ ಲಾಭ ತಂದುಕೊಟ್ಟಿರಲಿಲ್ಲ. 2003ರಲ್ಲಿ ಮತ್ತೆ ವಿಷ್ಣುವರ್ಧನ್ ಜೊತೆ, 'ಹೃದಯವಂತ' ಸಿನಿಮಾವನ್ನು ವಾಸು ಮಾಡಿದರು. ಅದು ಕೂಡಾ ತೀರಾ ಯಶಸ್ಸು ಪಡೆದ ಸಿನಿಮಾವಲ್ಲ.

    ದೃಶ್ಯ, ಶಿವಲಿಂಗ ಚಿತ್ರ, ವಾಸುಗೆ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತು

    ದೃಶ್ಯ, ಶಿವಲಿಂಗ ಚಿತ್ರ, ವಾಸುಗೆ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತು

    ಅದಾದ ನಂತರ ಬಂದಿದ್ದು ಆಪ್ತಮಿತ್ರ ಚಿತ್ರ, 2004ರಲ್ಲಿ. ಅದೇ ಚಿತ್ರವನ್ನು ವಾಸು, ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ನಿರ್ದೇಶಿಸಿದರು. ಒಂದು ರೀತಿಯಲ್ಲಿ ಕನ್ನಡದಲ್ಲಿ ವಾಸುಗೆ ಬ್ರೇಕ್ ಕೊಟ್ಟಿದ್ದೇ ಆಪ್ತಮಿತ್ರ ಚಿತ್ರ. ಇದಾದ ನಂತರ ಬಂದ, ಆಪ್ತರಕ್ಷಕ, ದೃಶ್ಯ, ಶಿವಲಿಂಗ ಚಿತ್ರ, ವಾಸುಗೆ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತು.

    English summary
    Why Noted Director P Vasu Took 15 Years To Direct Back Another Kannada Movie. From 1988 To 2003, He Is Not Directed Any Kannada Movie.
    Thursday, October 24, 2019, 10:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X