ವಿಜಯಲಕ್ಷ್ಮಿ ಹಾಕಿದ ಒಂದು ಫೋಟೊ ನೋಡಿ ಬಾಂಬ್ ಸಿಡಿಸಿದ ಪವಿತ್ರಾ ಗೌಡ: ಅಷ್ಟಕ್ಕೂ ರಾತ್ರಿ ಏನಾಯ್ತು?

ಮತ್ತೊಮ್ಮೆ ನಟ ದರ್ಶನ್ ವೈಯಕ್ತಿಕ ಜೀವನದ ವಿಚಾರದ ಸುದ್ದಿಗೆ ಗ್ರಾಸವಾಗಿದೆ. ನಟಿ ಪವಿತ್ರಾ ಗೌಡ ತಮ್ಮ ಹಾಗೂ ದರ್ಶನ್ ಜೊತೆಗಿನ 10 ವರ್ಷಗಳ ರಿಲೇಷನ್‌ಶಿಪ್ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಒಂದಷ್ಟು ಫೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆಕೆಗೆ ವಿಜಯಲಕ್ಷ್ಮಿ ದರ್ಶನ್ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

ಬಹಳ ದಿನಗಳಿಂದ ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿತ್ತು. ಅದನ್ನು ಈಗ ಸ್ವತಃ ಪವಿತ್ರಾ ಗೌಡ ಜಗಜ್ಜಾಹೀತು ಮಾಡಿದ್ದಾರೆ. ಇಷ್ಟು ದಿನ ರಿಲೇಷನ್‌ಶಿಪ್ ಬಗ್ಗೆ ಯಾರು ಕೇಳಬಾರದು, ನಾವು ಹೇಳಬಾರದು ಎನ್ನುವಂತಿದ್ದ ಪವಿತ್ರಾ ಗೌಡ ದಿಢೀರನೆ ಪೋಸ್ಟ್ ಮಾಡಿದ್ಯಾಕೆ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.

Why Pavithra gowda suddenly opens up on her relationship with Actor Darshan

ರಾತ್ರಿ 11 ಗಂಟೆ ಸುಮಾರಿಗೆ ವಿಜಯಲಕ್ಷ್ಮಿ ದರ್ಶನ್ ಇನ್‌ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಪತಿ ದರ್ಶನ್ ಹಾಗೂ ಪುತ್ರಿ ವಿನೀಶ್ ಜೊತೆಗಿನ ಫೋಟೊ ಹಂಚಿಕೊಂಡು "ಇದು ನಾವು, ನಮ್ಮ ಪ್ರೀತಿ ಪಾತ್ರರ ಜೊತೆ. ನಮ್ಮವರ ಫ್ಯಾಮಿಲಿ ಎಲ್ಲದಕ್ಕಿಂತ ಹೆಚ್ಚು" ಎಂದು ಫೋಟೊಗೆ ಕ್ಯಾಪ್ಷನ್ ಕೊಟ್ಟಿದ್ದರು. ಈ ಪೋಸ್ಟ್‌ಗೆ ಪ್ರತಿಯಾಗಿ ಪವಿತ್ರಾ ಗೌಡ ಪೋಸ್ಟ್ ಮಾಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ತಮ್ಮ ಹಾಗೂ ದರ್ಶನ್ ಜೊತೆಗಿನ ಫೋಟೊಗಳನ್ನು ಕೊಲಾಜ್ ಮಾಡಿ ಹಂಚಿಕೊಂಡಿರುವ ಪವಿತ್ರಾ ಗೌಡ, "ಒಂದು ದಶಕ ಕಳೆಯಿತು. ಇದು ಹೀಗೆ ಮುಂದುವರೆಯುತ್ತದೆ. ನಮ್ಮ ಸಂಬಂಧಕ್ಕೆ ಈಗ 10 ವರ್ಷಗಳಾಗಿವೆ" ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ದರ್ಶನ್ ಜೊತೆಗೆ ಪೂಜೆಗೆ ಕುಳಿತಿರುವ ಫೋಟೊಗಳ ಜೊತೆ ಸಾಕಷ್ಟು ಸಂದರ್ಭಗಳಲ್ಲಿ ಇಬ್ಬರು ಒಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಆ ವಿಡಿಯೋದಲ್ಲಿದೆ.

Why Pavithra gowda suddenly opens up on her relationship with Actor Darshan

'ಪ್ರೀತಿ ಕಿತಾಬು' ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಪವಿತ್ರಾ ಗೌಡ ದಿಢೀರನೆ ತಮ್ಮ ರಿಲೇಷನ್‌ಶಿಪ್ ವಿಚಾರವನ್ನು ಬಹಿರಂಗವಾಗಿ ಹೇಳಿದ್ದು ಯಾಕೆ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಈ ಹಿಂದೆ ಕೂಡ ದರ್ಶನ್ ಜೊತೆಗಿನ ಫೋಟೊಗಳನ್ನು ಪವಿತ್ರಾ ಗೌಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತೇಲಿಬಿಟ್ಟಿದ್ದರು.

ದರ್ಶನ್ ತಾಯಿ ಹಾಗೂ ಸಹೋದರಿ ಜೊತೆಗಿನ ಫೋಟೊಗಳು ಸಹ ರಿವೀಲ್ ಆಗಿತ್ತು. ಇನ್ನು ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ನಟಿ ಮೇಘಾ ಶೆಟ್ಟಿ ಪೋಸ್ಟ್‌ ಬಗ್ಗೆ ವಿಜಯಲಕ್ಷ್ಮಿ ಗರಂ ಆಗಿದ್ದರು. ಪವಿತ್ರಾ ಗೌಡ, ಸೋನಲ್ ಮಂಥೆರೋ ಹಾಗೂ ಮೇಘಾ ಶೆಟ್ಟಿ ಸೇರಿ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದರು. ಆ ವಿಡಿಯೋವನ್ನು ಮೇಘಾ ಹಂಚಿಕೊಂಡಿದ್ದರು. ಅದಕ್ಕೆ ವಿಜಯಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಸಹ ಪವಿತ್ರಾ ಗೌಡ ಸುಮ್ಮನಿದ್ದರು. ಬಳಿಕ ವಿಜಯಲಕ್ಷ್ಮಿ ಹಾಗೂ ಮೇಘಾ ಶೆಟ್ಟಿ ಇಬ್ಬರೂ ತಮ್ಮ ತಮ್ಮ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ಅದಕ್ಕೆ ಅಂತ್ಯ ಹಾಡಿದ್ದರು.

ದರ್ಶನ್ ಜೊತೆಗಿನ ಫೋಟೊಗಳನ್ನು ಪವಿತ್ರಾ ಗೌಡ ಹಂಚಿಕೊಂಡು ರಿಲೇಷನ್‌ಶಿಪ್ ಬಗ್ಗೆ ಹೇಳುತ್ತಿದ್ದಂತೆ ವಿಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ವ್ಯಕ್ತಿಯೊಬ್ಬ ವಿವಾಹಿತನೆಂದು ತಿಳಿದಿದ್ದರೂ ಕೂಡ ಈಕೆ ತನ್ನ ವೈಯಕ್ತಿಕ ಅಗತ್ಯಗಳಿಗಾಗಿ ಹಾಗೂ ಲಾಭಕ್ಕಾಗಿ ಆತನಿಗೆ ಹತ್ತಿರವಾಗುತ್ತಾಳೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ.

More from Filmibeat

English summary
what triggered to Pavithra gowda for her relationship post;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X