For Quick Alerts
  ALLOW NOTIFICATIONS  
  For Daily Alerts

  'ಸಲಾರ್' ಮುಹೂರ್ತ: ಪ್ರಭಾಸ್ ವಿರುದ್ಧ ಬೇಸರಗೊಂಡ ಯಶ್ ಅಭಿಮಾನಿಗಳು

  |

  ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಡಾರ್ಲಿಂಗ್ ಪ್ರಭಾಸ್ ನಟನೆಯ ಸಲಾರ್ ಚಿತ್ರದ ಮುಹೂರ್ತ ಹೈದರಾಬಾದ್‌ನಲ್ಲಿ ನಡೆದಿದೆ. ಕೆಜಿಎಫ್ ನಂತರ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಕೈ ಹಾಕಿದೆ. ಈ ಮುಹೂರ್ತಕ್ಕೆ ರಾಕಿಭಾಯ್ ಯಶ್ ಅತಿಥಿಯಾಗಿ ಆಗಮಿಸಿದ್ದರು.

  Salaar ಚಿತ್ರದ ಮುಹೂರ್ತದಲ್ಲಿ Yash ಗೆ ಅವಮಾನ | Filmibeat Kannada

  ಸಂಪ್ರದಾಯದಂತೆ ಪೂಜೆ ನೆರವೇರಿಸುವ ಮೂಲಕ ಸಲಾರ್ ಸಿನಿಮಾ ಆರಂಭವಾಗಿದೆ. ಸದ್ಯದಲ್ಲೇ ಶೂಟಿಂಗ್ ಸಹ ಶುರುವಾಗಲಿದೆ. ಸಲಾರ್ ಸಮಾರಂಭದಲ್ಲಿ ನಟ ಯಶ್ ಮತ್ತು ಪ್ರಭಾಸ್ ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಈ ಇಬ್ಬರು ನ್ಯಾಷನಲ್‌ ಸ್ಟಾರ್‌ಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿದ ಫ್ಯಾನ್ಸ್ ಒಂದೇ ಚಿತ್ರದಲ್ಲಿ ಯಾವಾಗ ನೋಡ್ತೀವೋ ಎಂದು ಕಾಯುತ್ತಿದ್ದಾರೆ. ಇಷ್ಟೆಲ್ಲ ನಿರೀಕ್ಷೆಯ ನಡುವೆ ಸಲಾರ್ ಮುಹೂರ್ತದ ಬಳಿಕ ನಡೆದಿರುವ ಘಟನೆಯೊಂದಕ್ಕೆ ಪ್ರಭಾಸ್ ವಿರುದ್ಧ ರಾಕಿಂಗ್ ಸ್ಟಾರ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ಏನದು? ಮುಂದೆ ಓದಿ...

  ಪ್ರಭಾಸ್ ಫೇಸ್‌ಬುಕ್ ಪೋಸ್ಟ್!

  ಪ್ರಭಾಸ್ ಫೇಸ್‌ಬುಕ್ ಪೋಸ್ಟ್!

  ಸಲಾರ್ ಚಿತ್ರದ ಮುಹೂರ್ತದ ಫೋಟೋಗಳನ್ನು ತೆಲುಗು ಪ್ರಭಾಸ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡು ಫೋಟೋಗಳನ್ನು ಪೋಸ್ಟ್ ಮಾಡಿರುವ ಪ್ರಭಾಸ್, ಒಂದರಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ತಾವು ಇರುವುದು, ಇನ್ನೊಂದರಲ್ಲಿ ಪ್ರಭಾಸ್, ಪ್ರಶಾಂತ್ ಹಾಗೂ ವಿಜಯ್ ಕಿರಗಂದೂರ್ ಇರುವ ಫೋಟೋ ಶೇರ್ ಮಾಡಿದ್ದಾರೆ. ಆದರೆ, ಸಮಾರಂಭದಲ್ಲಿ ಯಶ್ ಭಾಗಿಯಾಗಿದ್ದರು. ಯಶ್ ಅವರ ಜೊತೆಗೆ ಪ್ರಭಾಸ್ ಫೋಟೋಗಳು ಸಹ ವೈರಲ್ ಆಗಿತ್ತು. ಆದರೂ ಯಶ್ ಜೊತೆಗಿನ ಫೋಟೋವನ್ನು ಪ್ರಭಾಸ್ ಏಕೆ ಪೋಸ್ಟ್ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.

  'ಸಲಾರ್' ಮುಹೂರ್ತ; ಒಂದೇ ಫ್ರೇಮಿನಲ್ಲಿ ಸೆರೆಯಾದ ಯಶ್ ಮತ್ತು ಪ್ರಭಾಸ್ ಫೋಟೋ ವೈರಲ್'ಸಲಾರ್' ಮುಹೂರ್ತ; ಒಂದೇ ಫ್ರೇಮಿನಲ್ಲಿ ಸೆರೆಯಾದ ಯಶ್ ಮತ್ತು ಪ್ರಭಾಸ್ ಫೋಟೋ ವೈರಲ್

  ಹತ್ತೋಕು ಮೊದಲೇ ಏಣಿ ಒದ್ದಂತಾಯ್ತು

  ಹತ್ತೋಕು ಮೊದಲೇ ಏಣಿ ಒದ್ದಂತಾಯ್ತು

  ''ಬಾಹುಬಲಿ ಆದಮೇಲೆ ಒಂದು ಯಶಸ್ಸು ಕಾಣದೆ ಕಂಗೆಟ್ಟು ನಿಂತಿದ್ದ ಪ್ರಭಾಸ್, ಈಗ ಪ್ರಶಾಂತ್ ನೀಲ್‌ರ ಮಾರ್ಗದರ್ಶನದಲ್ಲಿ ಒಂದು ಚಿತ್ರ ಮಾಡೋಕೆ ತಯಾರಾಗಿದ್ದಾರೆ.‌ ಇದಕ್ಕೆ ನೇರವಾಗಿಯೋ ಪರೋಕ್ಷವಾಗಿಯೋ ಯಶ್ ಕಾರಣವಾಗಿದ್ದಿ, ಈ ಹೊಸ ಚಿತ್ರದ ಮುಹೂರ್ತಕ್ಕೆ ಯಶ್ ಸಹ ಆಗಮಿಸಿ ಶುಭಾಶಯ ಕೋರಿದ್ದರು.‌ ಆದರೆ ಪಾಪ ಪ್ರಭಾಸ್‌ರವರಿಗೆ ಯಶ್ ಜೊತೆಗಿದ್ದ ಫೋಟೊವನ್ನು ಹಂಚಿಕೊಳ್ಳಲಿಕ್ಕೆ ಮುಜುಗರವಾದಂತಿದೆ. ಅವರಿಲ್ಲದ ಚಿತ್ರಗಳನ್ನಷ್ಟೇ ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಹತ್ತೋಕು ಮೊದಲೇ ಏಣಿ ಒದ್ದಂತಾಯ್ತೊ?'' ಎಂದು ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

  ಯಶ್ ಫೋಟೋ ಏಕೆ ಹಾಕಿಲ್ಲ?

  ಯಶ್ ಫೋಟೋ ಏಕೆ ಹಾಕಿಲ್ಲ?

  ಕನ್ನಡದ ಸೂಪರ್ ಸ್ಟಾರ್ ನಟ ಯಶ್ ಅವರು ಸಲಾರ್ ಚಿತ್ರದ ಮುಹೂರ್ತಕ್ಕೆ ಬಂದಿದ್ದಾರೆ ಎನ್ನುವುದು ದೊಡ್ಡ ಸುದ್ದಿಯೇ. ಯಶ್ ಜೊತೆಗೆ ಇರುವ ಸೋಲೋ ಫೋಟೋ ಮಾತ್ರವಲ್ಲ, ಗ್ರೂಫ್ ಫೋಟೋ ಆದರೂ ಹಾಕಬಹುದಿತ್ತು. ಆದರೆ, ಪ್ರಭಾಸ್ ನಿರ್ಲಕ್ಷ್ಯ ಮಾಡಿದ್ರಾ ಅಥವಾ ಆ ಬಗ್ಗೆ ಯೋಚನೆ ಮಾಡೇ ಇಲ್ವೋ. ಪ್ರಭಾಸ್ ಅವರ ಈ ನಡೆ ಮಾತ್ರ ಯಶ್ ಫ್ಯಾನ್ಸ್ ಗೆ ನಿರಾಸೆ ಮಾಡಿರುವುದಂತೂ ಸುಳ್ಳಾಲ್ಲ.

  ಕೆಜಿಎಫ್ 2 ಮತ್ತು ಸಲಾರ್ ಚಿತ್ರಕ್ಕೆ ಆನೆಬಲ: ಯಶ್-ಪ್ರಭಾಸ್ ಲೆಕ್ಕಾಚಾರ ಏನು?ಕೆಜಿಎಫ್ 2 ಮತ್ತು ಸಲಾರ್ ಚಿತ್ರಕ್ಕೆ ಆನೆಬಲ: ಯಶ್-ಪ್ರಭಾಸ್ ಲೆಕ್ಕಾಚಾರ ಏನು?

  ಯಶ್ ಸಹ ಸಲಾರ್ ಫೋಟೋ ಪೋಸ್ಟ್ ಮಾಡಿಲ್ಲ

  ಯಶ್ ಸಹ ಸಲಾರ್ ಫೋಟೋ ಪೋಸ್ಟ್ ಮಾಡಿಲ್ಲ

  ಪ್ರಭಾಸ್ ಆ ಕಡೆ ಯಶ್ ಜೊತೆಗಿದ್ದ ಫೋಟೋ ಹಾಕಿಲ್ಲ. ಈ ಕಡೆ ರಾಕಿಂಗ್ ಸ್ಟಾರ್ ಯಶ್ ಸಹ ತಮ್ಮ ಫೇಸ್‌ಬುಕ್ ಹಾಗೂ ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಸಲಾರ್ ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಫೋಟೋಗಳನ್ನು ಶೇರ್ ಮಾಡಿಲ್ಲ.

  ಯಾವ ಭಾಷೆಯಲ್ಲಿ ಸಲಾರ್ ಮೊದಲು ತಯಾರಾಗುತ್ತೆ?

  ಯಾವ ಭಾಷೆಯಲ್ಲಿ ಸಲಾರ್ ಮೊದಲು ತಯಾರಾಗುತ್ತೆ?

  ಸಲಾರ್ ಸಿನಿಮಾ ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ. ಆದರೆ, ಮೂಲ ಭಾಷೆ ಯಾವುದು, ಯಾವ ಭಾಷೆಯಲ್ಲಿ ಮೊದಲು ಸಿನಿಮಾ ತಯಾರಾಗುತ್ತದೆ ಎನ್ನುವುದು ಸದ್ಯಕ್ಕೆ ಗೊಂದಲವಾಗಿದೆ. ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲಂಸ್ ಕಾಂಬಿನೇಷನ್ ನೋಡಿದ್ರೆ ಇದು ಕನ್ನಡ ಸಿನಿಮಾ ಎನ್ನಬಹುದು. ಆದರೆ, ಇದು ತೆಲುಗಿನಲ್ಲಿ ತಯಾರಾಗಲಿದೆ ಎಂದು ಹೇಳಲಾಗುತ್ತಿದೆ.

  English summary
  Telugu actor Prabhas shared Salaar movie muhurtha photos in Facebook. but, why he did not post yash photos in her FB Wall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X