twitter
    For Quick Alerts
    ALLOW NOTIFICATIONS  
    For Daily Alerts

    ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?

    |

    ದೆಹಲಿಯಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಗಣರಾಜ್ಯೋತ್ಸವ ದಿನಾಚರಣೆ ಕರಾಳ ದಿನವಾಗಿ ಮಾರ್ಪಟ್ಟಿತು. ಟ್ರ್ಯಾಕ್ಟರ್ ಪರೇಡ್ ಹಮ್ಮಿಕೊಂಡಿದ್ದ ರೈತರು ಕೆಂಪುಕೋಟೆಗೆ ಲಗ್ಗೆಯಿಟ್ಟು ನಿಶಾನ್ ಸಾಹೇಬ್ ಧ್ವಜರೋಹಣ ಮಾಡಿದ್ದರು. ಇದು ದೇಶದ ಐತಿಹಾಸಿಕ ದುರಂತ ಎಂದು ಅನೇಕರು ಟೀಕಿಸಿದ್ದಾರೆ.

    ದೆಹಲಿಯಲ್ಲಿ ರೈತರ ಪ್ರತಿಭಟನೆ ದಿಕ್ಕು ತಪ್ಪಲು ಕೆಲವು ದುಷ್ಕರ್ಮಿಗಳು ಕಾರಣ ಎಂದು ರೈತ ಸಂಘಟನೆಗಳು ಆರೋಪಿಸಿದೆ. ಇನ್ನು ಕೆಂಪುಕೋಟೆ ಮೇಲೆ ನಿಶಾನ್ ಸಾಹೇಬ್ ಹಾರಿಸಿದ ಯುವಕರ ಮೇಲೆ ಕ್ರಮ ಜರುಗಿಸಿ ಎಂಬ ಒತ್ತಾಯ ಕೇಳಿ ಬರ್ತಿದೆ.

    ರೈತರ ಪ್ರತಿಭಟನೆ ವೇಳೆ ಹಿಂಸಾಚಾರ: ಪೊಲೀಸರು ನೀಡಿದ ಹೇಳಿಕೆಯಲ್ಲೇನಿದೆ?

    ಅಂದ್ಹಾಗೆ, ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ಕೆಂಪುಕೋಟೆ ಮೇಲೆ ಬೇರೆ ಬಾವುಟ ಹಾರಿಸಿದ್ದು ನಟ ದೀಪ್ ಸಿಧು ಮತ್ತು ಬೆಂಬಲಿಗರು ಎಂದು ತಿಳಿದು ಬಂದಿದೆ. ಇದನ್ನು ಸ್ವತಃ ದೀಪ್ ಸಿಧು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ, ರೈತರ ಹೋರಾಟದಲ್ಲಿ ಸಿನಿಮಾ ನಟ ದೀಪ್ ಸಿಧುಗೆ ಏನು ಕೆಲಸ? ಯಾರು ಈ ದೀಪ್ ಸಿಧು? ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ? ಮುಂದೆ ಓದಿ...

    ಮೂಲತಃ ಪಂಜಾಬಿ ಯುವಕ

    ಮೂಲತಃ ಪಂಜಾಬಿ ಯುವಕ

    ದೀಪ್ ಸಿಧು ಮೂಲತಃ ಪಂಜಾಬಿಯವರು. 1984ರಲ್ಲಿ ಪಂಜಾಬ್ ರಾಜ್ಯದ ಮಕ್ತ್ ಸರ್ ಜಿಲ್ಲೆಯಲಿ ಜನಿಸಿದ ದೀಪ್ ಸಿಧು ಕಾನೂನು ಪದವಿಧರರಾಗಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಮಾಡೆಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಕಿಂಗ್ ಫಿಷರ್ ಮಾಡೆಲ್ ಹಂಟ್ ಪ್ರಶಸ್ತಿ ಗೆದ್ದಿದ್ದಾರೆ. ಖಾಸಗಿ ಕಂಪನಿಯಲ್ಲಿ ಕಾನೂನು ಸಲಹೆಗಾರರನಾಗಿ ಕೆಲಸ ಸಹ ಮಾಡಿದ್ದಾರೆ. ಹಾಲಿವುಡ್ ಸ್ಟುಡಿಯೋ, ಬಾಲಾಜಿ ಟೆಲಿಫಿಲಂಸ್, ಡಿಸ್ನಿ, ಸೋನಿ ಪಿಕ್ಚರ್ಸ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.

    ಪಂಜಾಬಿ ಸಿನಿಮಾಗಳಲ್ಲಿ ನಟನೆ

    ಪಂಜಾಬಿ ಸಿನಿಮಾಗಳಲ್ಲಿ ನಟನೆ

    2015ರಲ್ಲಿ ತೆರೆಕಂಡ ಪಂಜಾಬಿ ಚಿತ್ರ ರಮ್ತಾ ಜೋಗಿ ಚಿತ್ರದ ಮೂಲಕ ದೀಪ್ ಸಿಧು ಸಿನಿಮಾ ಜೀವನ ಆರಂಭಿಸಿದರು. ಈ ಚಿತ್ರವನ್ನು ಧರ್ಮೆಂದ್ರ ಮಾಲೀಕತ್ವಸ ವಿಕ್ಯಾತ್ ಸಂಸ್ಥೆ ನಿರ್ಮಾಣ ಮಾಡಿತ್ತು. ನಂತರ 2017ರಲ್ಲಿ ಬಿಡುಗಡೆಯಾದ 'ಜೋರಾ ದಸ್ ನಂಬರಿಯಾ' ಚಿತ್ರದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಮಿಂಚಿದ್ದರು. ಇದಾದ ಬಳಿಕ ರಂಗ್ ಪಂಜಾಬ್, ಸಾಡೇ ಆಲೆ ಎಂಬ ಸಿನಿಮಾದಲ್ಲು ಕಾಣಿಸಿಕೊಂಡರು. ಸದ್ಯ ದೀಪ್ ಸಿಧು ನಟನೆಯ ದೇಸಿ, ಜೋರ್ ಚಾಪ್ಟರ್ 2 ಚಿತ್ರಗಳು ತಯಾರಾಗುತ್ತಿದೆ.

    ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಖವಾಡ ಕಳಚಿತು

    ಸನ್ನಿ ಡಿಯೋಲ್ ಪರ ಪ್ರಚಾರ

    ಸನ್ನಿ ಡಿಯೋಲ್ ಪರ ಪ್ರಚಾರ

    2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಟ ಸನ್ನಿ ಡಿಯೋಲ್ ಪರ ಪ್ರಚಾರ ಮಾಡಿದ್ದರು. ಸನ್ನಿ ಡಿಯೋಲ್ ಗೆದ್ದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರಿಗೆ ದೀಪ್ ಸಿಧು ಅವರನ್ನು ಭೇಟಿ ಮಾಡಿಸಿದ್ದು ಸಹ ಸನ್ನಿ ಡಿಯೋಲ್. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    Recommended Video

    ಮಾಡಿದ ತಪ್ಪನ್ನೆಲ್ಲ ಡೈರಿಯಲ್ಲಿ ಬರೆದು ಕ್ಷಮೆ ಕೇಳಿ ಪಶ್ಚಾತಾಪ ಪಟ್ಟಿದ್ದ ಜಯಶ್ರೀ | Filmibeat Kannada
    ನಿಷೇಧಿತ ಸಂಘಟನೆಯ ಸದಸ್ಯ

    ನಿಷೇಧಿತ ಸಂಘಟನೆಯ ಸದಸ್ಯ

    ಪಂಜಾಬ್‌ನ ನಿಷೇಧಿತ ಸಂಘಟನೆ 'ಸಿಖ್ ಫಾರ್ ಜಸ್ಟಿಸ್' ಸದಸ್ಯರಾಗಿದ್ದ ದೀಪ್ ಸಿಧು ಈಗ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ ಫೋಟೋಗಳು ಸಹ ವೈರಲ್ ಆಗಿದೆ. ಶಾಂತಿಯುತವಾಗಿ ನಡೆಯಬೇಕಿದ್ದ ರೈತರ ಹೋರಾಟವನ್ನು ದಿಕ್ಕು ತಪ್ಪಿಸಿ ಹಿಂಸಾಚಾರಕ್ಕೆ ತೆಗೆದುಕೊಂಡಿದ್ದರ ಹಿಂದೆ ನಟ, ಪ್ರತಿಭಟನಕಾರ ದೀಪ್ ಸಿಧು ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ.

    English summary
    Why Punjabi actor deep sidhu participated in delhi farmers protest on republic day 2021?.
    Wednesday, January 27, 2021, 11:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X