40 ದಾಟಿದ ಮಹಿಳೆ ಪಾತ್ರದಲ್ಲಿ ರಚಿತಾ ರಾಮ್? ಗ್ಲಾಮರ್ ರೋಲ್‌ಗಳಿಗೆ ಬ್ರೇಕ್ ಹಾಕಿದ್ರಾ?
ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚೆಗೆ ಕಡಿಮೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಪ್ರತಿಯೊಂದು ಸಿನಿಮಾವನ್ನು ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಸುಮಾರು 10 ವರ್ಷಗಳ ಕಾಲ ಕನ್ನಡ ಚಿತ್ರರಂಗದ ಟಾಪ್ ನಟಿಯಾಗಿ ಗುರುತಿಸಿಕೊಂಡಿದ್ದ ರಚಿತಾ ಇದ್ದಕ್ಕಿದ್ದ ಹಾಗೆ ಸಿನಿಮಾಗಳನ್ನು ಕಡಿಮೆ ಮಾಡಿಕೊಂಡಿದ್ದೇಕೆ? ಅನ್ನೋ ಪ್ರಶ್ನೆಯಂತೂ ಅವರ ಅಭಿಮಾನಿಗಳಲ್ಲಿ ಇದ್ದೇ ಇದೆ.
ಇನ್ನೊಂದು ಕಡೆ ಸಿನಿಮಾಗಳಲ್ಲಿ ರಚಿತಾ ರಾಮ್ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಅದರಲ್ಲೂ ಬಬ್ಲಿ ಪಾತ್ರದಲ್ಲಿ ಗ್ಲಾಮರಸ್ ಆಗಿ ನೋಡುವುದಕ್ಕೆ ಇಷ್ಟ ಪಡುತ್ತಾರೆ. ಹೀಗಿರುವಾಗ ಕಳೆದ ಕೆಲವು ವರ್ಷಗಳಿಂದ ರಚಿತಾ ರಾಮ್ ವಿಭಿನ್ನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೊಂದು ದುನಿಯಾ ವಿಜಯ್ ಹಾಗೂ ಪುತ್ರಿ ರಿತಾನ್ಯಾ ನಟಿಸುತ್ತಿರುವ ಸಿನಿಮಾ.

ರಚಿತಾ ರಾಮ್ ಇತ್ತೀಚೆಗೆ ಸೈಲೆಂಟ್ ಆಗಿದ್ದಾರಾ? ಪ್ರತಿ ಸಿನಿಮಾದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಗೈರಾಗುತ್ತಿರುವುದು ಯಾಕೆ? ಅನ್ನೋ ಪ್ರಶ್ನೆ ಸಹಜವಾಗಿಯೇ ಹುಟ್ಟಿದೆ. ಇದೇ ಸಂದರ್ಭದಲ್ಲಿ 40 ದಾಟಿದ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಸದಾ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದ ರಚಿತಾ ಇಂತಹ ನಿರ್ಧಾರ ತೆಗೆದುಕೊಂಡಿದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ದುನಿಯಾ ವಿಜಯ್ ಸಿನಿಮಾದ ನಿರ್ದೇಶಕರು ಬಳಿಯಿದೆ.
ರಚಿತಾ ರಾಮ್ ಇತ್ತೀಚೆಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕಿಂತ ರಿಯಾಲಿಟಿ ಶೋಗಳಲ್ಲಿ ಕಂಡಿದ್ದೇ ಹೆಚ್ಚು. ಹೀಗಾಗಿ ಸಿನಿಮಾದಿಂದ ಏನಾದರೂ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದಾರಾ? ಅನ್ನೋ ಪ್ರಶ್ನೆ ಡಿಂಪಲ್ ಕ್ವೀನ್ ಅಭಿಮಾನಿಗಳನ್ನು ಕಾಡಿದ್ದು ಇದೆ. ಆದ್ರೀಗ ರಚಿತಾ ನಟಿಸುತ್ತಿರುವ ಎರಡು ಸಿನಿಮಾಗಳಿಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಒಂದು 'ಸಂಜು ವೆಡ್ಸ್ ಗೀತಾ 2' ಇನ್ನೊಂದು ದುನಿಯಾ ವಿಜಯ್ ಹಾಗೂ ಕಾಟೇರ ಕಥೆಗಾರ ಜಡೇಶ್ ಜೋಡಿಯ ಸಿನಿಮಾ.

ವಿಜಯ್ ಹಾಗೂ ಜಡೇಶ್ ಕಾಂಬಿನೇಷನ್ ಸಿನಿಮಾದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ವಿಜಯ್ 50 ಆಸುಪಾಸಿನ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ವಿಜಯ್‌ಗೆ ಜೋಡಿಯಾಗಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ವಿಜಯ್ 50ರ ವಯಸ್ಸಿನ ಪಾತ್ರದಲ್ಲಿ ನಟಿಸುತ್ತಿರಬೇಕಾದರೆ, ರಚಿತಾ 40 ದಾಟಿದ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟಕ್ಕೂ ಇಂತಹ ಡಿ ಗ್ಲಾಮರ್ ಪಾತ್ರವನ್ನು ರಚಿತಾ ಒಪ್ಪಿದ್ದೇಕೆ? ಅನ್ನೋದನ್ನು ನಿರ್ದೇಶಕರೇ ರಿವೀಲ್ ಮಾಡಿದ್ದಾರೆ.
"ರಚಿತಾ ಮೇಡಂಗೆ ನಾನು ಕಥೆ ಹೇಳಿದಾಗ ತುಂಬಾನೇ ಇಷ್ಟ ಪಟ್ಟರು. ನನಗೆ ಮೊದಲು ಭಯವಿತ್ತು. ಹೀರೋ ಸರ್ 50 ವರ್ಷ ಆಗಿದೆ ಅಂದರೆ, ರಚಿತಾ ಮೇಡಂಗೆ 40 ಪ್ಲಸ್ ಇದ್ದೇ ಇರುತ್ತೆ. ಇಂತಹದ್ದೇ ಹಳ್ಳಿ, ಕಲ್ಟ್ ಪಾತ್ರವನ್ನು ಅವರು ಮಾಡಿಲ್ಲ ಅಂತ ನಾನು ಅಪ್ರೋಚ್ ಮಾಡಿದೆ. ಅವರೂ ಬೆಸ್ಟ್ ಕ್ಯಾರೆಕ್ಟರ್ ಇರುವಂತಹ ಪಾತ್ರ ಮಾಡಬೇಕು ಅನ್ನೋ ಆಲೋಚನೆಯಲ್ಲಿ ಇದ್ದರು. " ಎಂದು ರಚಿತಾ ರಾಮ್‌ಗೆ ಕಥೆ ಹೇಳಿದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ರಚಿತಾ ರಾಮ್‌ಗೆ ಈ ಡಿ ಗ್ಲಾಮರ್, ಕಲ್ಟ್ ರೋಲ್ ಇಷ್ಟ ಆಗಿದ್ಯಂತೆ. ಅದಕ್ಕಾಗಿಯೇ 40 ಪ್ಲಸ್ ಮಹಿಳೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾಗಿ ನಿರ್ದೇಶಕರು ಹೇಳಿಕೊಂಡಿದ್ದಾರೆ. "ಕ್ಯಾರೆಕ್ಟರ್ ಅಲ್ಟಿಮೇಟ್ ಆಗಿರಬೇಕು ಅನ್ನುವ ಆಲೋಚನೆಯಲ್ಲಿ ಇದ್ದರು. ನಾನು ಹೋಗಿ ಅಪ್ರೋಚ್ ಮಾಡಿದಾಗಿ ಅವರಿಗೆ ತುಂಬಾನೇ ಇಷ್ಟ ಆಯ್ತು. ನಾನು ಈ ಪಾತ್ರವನ್ನು ಮಾಡೇ ಮಾಡುತ್ತೇನೆ ಅಂತ ಮಾತು ಕೊಟ್ಟರು. ಆ ಮಾತಿನಂತೆ ಇದ್ದಾರೆ. " ಎಂದಿದ್ದಾರೆ. ಒಟ್ಟಿನಲ್ಲಿ ಗ್ಲಾಮರಸ್ ರೋಲ್ ಸಾಕು ಅನಿಸಿರಬಹುದೇ? ಕಲ್ಟ್ ರೋಲ್‌ಗಳ ಕಡೆಗೆ ಮನಸ್ಸಾಯ್ತಾ? ಸದ್ಯಕ್ಕಂತೂ ಈ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.


Click it and Unblock the Notifications











