'ಆಯುಷ್ಮಾನ್ ಭವ' ಪ್ರಚಾರಕ್ಕೆ ರಚಿತಾ ರಾಮ್ ಬರುತ್ತಿಲ್ಲ ಏಕೆ?

'ಆಯುಷ್ಮಾನ್ ಭವ' ಸಿನಿಮಾ ಇದೇ ಶುಕ್ರವಾರ ಅಂದ್ರೆ, ನವೆಂಬರ್ 15 ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಶಿವರಾಜ್ ಕುಮಾರ್ ಮತ್ತು ತಂಡ ಬ್ಯುಸಿ ಇದೆ. ಆದರೆ, ರಚಿತಾ ರಾಮ್ ಮಾತ್ರ ಕಾಣುತ್ತಿಲ್ಲ.

ಮೊದಲ ಬಾರಿಗೆ ಶಿವರಾಜ್ ಕುಮಾರ್ ಜೊತೆಗೆ ರಚಿತಾ ರಾಮ್ ಸಿನಿಮಾದಲ್ಲಿ ನಟಿಸಿದ್ದಾರೆ. ಪಿ ವಾಸುರಂತಹ ದೊಡ್ಡ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಅಭಿನಯಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾದಲ್ಲಿ ಒಂದು ಒಳ್ಳೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಹೀಗಿದ್ದರೂ, ರಚಿತಾ ರಾಮ್ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿಲ್ಲ. ಸತತ ಮೂರು ಪ್ರೆಸ್ ಮೀಟ್ ಗೆ ರಚಿತಾ ರಾಮ್ ಬಂದಿಲ್ಲ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬಿಟ್ಟರೆ, ಯಾವುದೇ ಕಾರ್ಯಕ್ರಮದಲ್ಲಿ ಸಿನಿಮಾದ ಬಗ್ಗೆ ಮಾತನಾಡುತ್ತಿಲ್ಲ. ಏಕೆ? ಏನಿದು ಕಥೆ ಗೊತ್ತಿಲ್ಲ...

ಪಿ ವಾಸು ಜೊತೆಗೆ ಮನಸ್ತಾಪ?

ಪಿ ವಾಸು ಜೊತೆಗೆ ಮನಸ್ತಾಪ?

ಈ ಹಿಂದೆ 'ಆಯುಷ್ಮಾನ್ ಭವ' ಚಿತ್ರದ ಒಂದೇ ಒಂದು ಪ್ರೆಸ್ ಮೀಟ್ ನಲ್ಲಿ ರಚಿತಾ ರಾಮ್ ಭಾಗಿಯಾಗಿದ್ದರು. ಆ ಕಾರ್ಯಕ್ರಮದಲ್ಲಿ ಮಾತನಾಡುವಾಗ ''ನೀವು (ಪಿ ವಾಸು) ಏನು ಹೇಳುತ್ತಿರೋ ಅದನ್ನು ಮಾಡುತ್ತೇನೆ. ನಾನು ತಪ್ಪು ಮಾಡಿದ್ದರೆ, ವಾಸು ಸರ್ ಗೆ ಸೇರುತ್ತದೆ. ಸಖತ್ ಆಗಿ ಮಾಡಿದ್ದರೂ ಅದು ವಾಸು ಸರ್ ಗೆ ಸೇರುತ್ತದೆ.'' ಎಂದು ಹೇಳಿದ್ದರು. ಈ ಹೇಳಿಕೆಯಿಂದ ಪಿ ವಾಸು ಬೇಸರಗೊಂಡಿದ್ದರು.

ರಚಿತಾ ಚಕ್ಕರ್ ಗೆ ಇದೇ ಕಾರಣನಾ?

ರಚಿತಾ ಚಕ್ಕರ್ ಗೆ ಇದೇ ಕಾರಣನಾ?

ರಚಿತಾ ರಾಮ್ ಹೇಳಿಕೆ ನೀಡಿದ್ದ ನಂತರ ಮತ್ತೊಂದು ಪ್ರೆಸ್ ಮೀಟ್ ಮಾಡಲಾಗಿತ್ತು. ಆ ಕಾರ್ಯಕ್ರಮಕ್ಕೆ ರಚಿತಾ ಚಕ್ಕರ್ ಹಾಕಿದ್ದರು. ಈ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ಪಿ ವಾಸು ರಚಿತಾ ಹೇಳಿಕೆಯನ್ನು ಪ್ರಸ್ತಾಪ ಮಾಡಿ ''ಆಕೆ ಹಾಗೆ ಹೇಳಲು ಹೇಗೆ ಸಾಧ್ಯ'' ಎಂದಿದ್ದರು. ಈ ಮಾತುಗಳ ನಂತರ ಇಬ್ಬರ ನಡುವೆ ಮನಸ್ತಾಪ ಆಗಿರಬಹುದು ಎನ್ನುವ ಗುಸು ಗುಸು ಇದೆ.

ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ

ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ

ಮತ್ತೊಂದು ಕಡೆ ಸಾಲು ಸಾಲು ಸಿನಿಮಾಗಳನ್ನು ರಚಿತಾ ರಾಮ್ ಒಪ್ಪಿಕೊಂಡಿದ್ದಾರೆ. ಏಕ್ ಲವ್ ಯಾ, ನಟ ವಸಿಷ್ಟ, ಚಿರಂಜೀವಿ ಸರ್ಜಾ, ಧನಂಜಯ್ ಜೊತೆಗೆ ಒಂದೊಂದು ಸಿನಿಮಾಗಳಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ. ತೆಲುಗಿನ ಒಂದು ಸಿನಿಮಾಗೆ ಸಹ ಆಯ್ಕೆ ಆಗಿದ್ದಾರೆ. ಈ ಕೆಲಸಗಳ ನಡುವೆ ಚಿತ್ರದ ಪ್ರೆಸ್ ಮೀಟ್ ಗಳಲ್ಲಿ ಭಾಗಿಯಾಗಲು ಆಗದೆ ಇರಬಹುದು.

'ಐ ಲವ್ ಯೂ' ಚಿತ್ರದ ಬಗ್ಗೆಯೂ ಬೇಸರಗೊಂಡಿದ್ದರು

'ಐ ಲವ್ ಯೂ' ಚಿತ್ರದ ಬಗ್ಗೆಯೂ ಬೇಸರಗೊಂಡಿದ್ದರು

ಈ ಹಿಂದೆ 'ಐ ಲವ್ ಯೂ' ಸಿನಿಮಾದ ಪ್ರಚಾರಕ್ಕೆ ಕೂಡ ರಚಿತಾ ರಾಮ್ ಬರಲಿಲ್ಲ. ಒಂದೇ ಒಂದು ಪ್ರೆಸ್ ಮೀಟ್ ನಲ್ಲಿ ಮಾತ್ರ ಮುಖ ತೋರಿಸಿದ್ದರು. ಸಿನಿಮಾದ ಹಾಡಿನ ಬಗ್ಗೆ ಬೇಸರ ಹೊಂದಿದ್ದ ಅವರು ಪ್ರಚಾರದಲ್ಲಿ ಭಾಗಿಯಾಗಲಿಲ್ಲ. ಆದರೆ, ಅವರ ಮುನಿಸು ಸಿನಿಮಾಗೆ ಮತ್ತೊಂದು ರೀತಿಯಲ್ಲಿ ಪ್ರಚಾರ ನೀಡಿದ್ದು, ಸುಳ್ಳಲ್ಲ. ಇದೀಗ ಮತ್ತೆ 'ಆಯುಷ್ಮಾನ್ ಭವ' ಪ್ರಮೋಷನ್ ನಲ್ಲಿ ರಚಿತಾ ಯಾಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು.

More from Filmibeat

English summary
Why Rachita Ram not attending Ayushman Bhava movie press meets?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X