ಸಿನಿಮಾರಂಗದ ರಾಜಕೀಯ: ರಕ್ಷಿತ್ ಶೆಟ್ಟಿಗೆ ಆಫರ್ ಬರಲ್ಲ ಯಾಕೆ?

ನಟ ರಕ್ಷಿತ್ ಶೆಟ್ಟಿ ಸದ್ಯ 777 ಚಾರ್ಲಿ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಚಾರ್ಲಿ ಟ್ರೈಲರ್ ಕೂಡ ರಿಲೀಸ್ ಆಗಿದ್ದು, ಭಾರಿ ಪ್ರಶಂಸೆ ಪಡೆದುಕೊಂಡಿದೆ. ಇನ್ನು ಸಿನಿಮಾ ರಿಲೀಸ್ ಗೆ ಸಜ್ಜಾಗಿದ್ದು, ಜೂನ್‌ 10ರಂದು‌ ಸಿನಿಮಾ ಗ್ರ್ಯಾಂಡ್ ಎಂಟ್ರಿ ಕೊಡಲಿದೆ.‌

ರಕ್ಷಿತ್ ಶೆಟ್ಟಿ ಉತ್ತಮ ನಟ.‌ ಅಭಿನಯದಲ್ಲಿ ‌ಸೈ ಎನಿಸಿಕೊಂಡಿದ್ದಾರೆ.‌ ಆದರೆ ಅವರ ಸಿನಿಮಾ ಜರ್ನಿಯನ್ನು ನೋಡಿದರೆ, ಅವರ ಸಿನಿಮಾಗಳನ್ನು ಅವರೇ ನಿರ್ಮಿಸಿ, ನಿರ್ಮಾಣ ಮಾಡಿದ್ದು ಹೆಚ್ಚು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರಿಕ್ ಪಾರ್ಟಿ ನಂತರ ರಕ್ಷಿತ್ ಶೆಟ್ಟಿ ಲಕ್ ಬದಲಾಯಿತು.‌ ಈ‌ ಚಿತ್ರದ ನಂತರ ರಕ್ಷಿತ್ ಸ್ಟಾರ್ ಹೀರೋ ರೀತಿ ಸಿನಿಮಾರಂಗದಲ್ಲಿ ಮಿಂಚಿದರು. ಇನ್ನು 'ಅವನೇ ಶ್ರೀಮನ್ನಾರಾಯಣ' ಸೇರಿದಂತೆ ಹಲವು ಸಿನಿಮಾಗಳಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ.

ಈಗ ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಲು ಎರಡು ಕಾರಣ ಇವೆ. ಒಂದು ರಕ್ಷಿತ್ ಅಭಿನಯದ ಮುಂದಿನ ಸಿನಿಮಾ‌ '777 ಚಾರ್ಲಿ' ರಿಲೀಸ್ ಗೆ ರೆಡಿಯಾಗಿದೆ. ಇನ್ನೊಂದು ರಕ್ಷಿತ್ ಶೆಟ್ಟಿ ಸಿನಿಮಾರಂಗದಲ್ಲಿ ಅವರಿಗೆ ಸಿಗುವ ಅವಕಾಶಗಳ ಬಗ್ಗೆ ಮಾತನಾಡಿದ್ದು.‌

Why Rakshith Shetty Says He Never Get Offers From Other Films

ನಟ ರಕ್ಷಿತ್ ಶೆಟ್ಟಿಗೆ ಬೇರೆ ಯಾರೂ ಆಫರ್ ಮಾಡುತ್ತಿಲ್ಲವಂತೆ. ಅಂದರೆ, ಬೇರೆ ನಿರ್ಮಾಪಕರು ರಕ್ಷಿತ್ ಶೆಟ್ಟಿ ಸಿನಿಮಾಗೆ ದುಡ್ಡು ಹಾಕಿ ನಿರ್ಮಾಣ ಮಾಡುವುದಿಲ್ಲ ಎಂದು ಎಂದು ಹೇಳಿಕೊಂಡಿದ್ದಾರೆ. ಇದನ್ನು ‌ಸುದ್ದಿಗೋಷ್ಠಿಯಲ್ಲಿ ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. 'ನನಗೆ ಬೇರೆ ಸಿನಿಮಾದ ಆಫರ್ ಬಂದಿಲ್ಲ. ನನ್ನ ಸಿನಿಮಾ ನಾನೇ ಮಾಡಬೇಕು' ಎಂದಿದ್ದಾರೆ. ಈ ಮೂಲಕ ರಕ್ಷಿತ್ ಶೆಟ್ಟಿ ಸಿನಿಮಾರಂಗದ ಒಳಗೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಹೇಳಿದಂತಿದೆ.

Why Rakshith Shetty Says He Never Get Offers From Other Films

ಅದೇನೇ ಇದ್ರು, ಸದ್ಯ '777 ಚಾರ್ಲಿ' ಸಿನಿಮಾ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ರಕ್ಷಿತ್ ಸಜ್ಜಾಗಿದ್ದಾರೆ. ಜೂನ್ 10 ರಂದು ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಪರಮಂವ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಕಿರಣ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಹಲವು ಕಲಾವಿದರು ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಶಾರ್ವರಿ, ರಾಜ್ ಬಿ ಶೆಟ್ಟಿ, ದಾನೀಶ್ ಸೇಠ್, ಸಂಗೀತ ಶೃಂಗೇರಿ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ.

More from Filmibeat

English summary
Rakshith Shetty Says He Never Get Offers From Other Films, He Have To Do His Movies, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X