'ಕೆಜಿಎಫ್ ಚಾಪ್ಟರ್ 1' ನಲ್ಲಿ ತಮ್ಮ ಪಾತ್ರ ಇರದ ಬಗ್ಗೆ ರವೀನಾ ಟಂಡನ್ ಸ್ಪಷ್ಟನೆ

ಕೆಜಿಎಫ್ 2 ಜುಲೈ 16 ಕ್ಕೆ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಸಂಜಯ್ ದತ್ ಹಾಗೂ ರವೀನಾ ಟಂಡನ್ ಹೊಸ ಎಂಟ್ರಿ ಆಗಿದ್ದಾರೆ.

ಕೆಜಿಎಫ್ ಚಾಪ್ಟರ್ 1 ನ ಅಂತ್ಯದಲ್ಲಿ ಸಂಜಯ್ ದತ್ ನಿರ್ವಹಿಸುತ್ತಿರುವ 'ಅಧೀರ' ಪಾತ್ರವನ್ನು ತೋರಿಸಲಾಗಿತ್ತು, ಆದರೆ ರವೀನಾ ಟಂಡನ್ ಪಾತ್ರದ ಬಗ್ಗೆ ಯಾವುದೇ ಸುಳಿವು ನೀಡಿರಲಿಲ್ಲ. ಅದೇ ಸಿನಿಮಾದಲ್ಲಿ ರವೀನಾ ಪಾತ್ರದ ಪರಿಚಯ ಮಾಡಿಸುವ ಉಮೇದು ಪ್ರಶಾಂತ್ ನೀಲ್‌ಗೆ ಇತ್ತಂತೆ. ಆದರೆ ಅವರು ರವೀನಾ ಪಾತ್ರದ ಪರಿಚಯ ಮಾಡಿಸಲಿಲ್ಲ.

ಈ ಬಗ್ಗೆ ರವೀನಾ ಟಂಡನ್, ಬಾಲಿವುಡ್‌ನ ಮ್ಯಾಗಜಿನ್ ಗೆ ಕೊಟ್ಟಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಪಾತ್ರದ ಕೆಜಿಎಫ್ ಚಾಪ್ಟರ್‌ 1 ನಲ್ಲಿ ಉಲ್ಲೇಖವಿರಲಿಲ್ಲ ಏಕೆ ಎಂಬ ಬಗ್ಗೆ ರವೀನಾ ಹೇಳಿದ್ದಾರೆ.

'ಕೆಜಿಎಫ್ ಮೊದಲ ಸಿನಿಮಾದ ಅಂತ್ಯದಲ್ಲಿ ನನ್ನ ಪಾತ್ರದ ಪರಿಚಯ ಮಾಡಿಸಲು ಯೋಚಿಸಲಾಗಿತ್ತು. ಸಿನಿಮಾ ತಂಡದವರು ನನ್ನನ್ನು ಭೇಟಿ ಸಹ ಆಗಿದ್ದರು. ಡ್ಯೂಪ್ ಇಟ್ಟುಕೊಂಡು ನಿಮ್ಮ ಪಾತ್ರದ ಪರಿಚಯ ಮಾಡಿಸುತ್ತೇವೆ ಎಂದು ಹೇಳಿದ್ದರು, ನಟಿಸುವ ನಿರ್ಧಾರ ನಿಮ್ಮದು ಎಂದು ಆಯ್ಕೆ ನನಗೆ ಬಿಟ್ಟಿದ್ದರು' ಎಂದಿದ್ದಾರೆ ರವೀನಾ ಟಂಡನ್.

'ರಮಿಕಾ ಸೇನ್ ಪಾತ್ರ ಪೂರ್ಣ ಡೆವಲಪ್ ಆಗಿರಲಿಲ್ಲ'

'ರಮಿಕಾ ಸೇನ್ ಪಾತ್ರ ಪೂರ್ಣ ಡೆವಲಪ್ ಆಗಿರಲಿಲ್ಲ'

ಆದರೆ ಕೆಜಿಎಫ್ ಚಾಪ್ಟರ್ 1 ಮುಗಿಯುವ ವೇಳೆಗೆ ನಾನು ನಿರ್ವಿಸುತ್ತಿರುವ ರಮೀಕಾ ಸೇನ್ ಪಾತ್ರ ಪೂರ್ಣವಾಗಿ ಡೆವೆಲಪ್ ಆಗಿರಲಿಲ್ಲ. ಹಾಗಾಗಿ ನಾನು ಕೆಜಿಎಫ್ 1 ನಲ್ಲಿ ಕಾಣಿಸಿಕೊಳ್ಳಲಿಲ್ಲ. ಆದರೆ ಕೆಜಿಎಫ್ ಸಿನಿಮಾ ಮುಗಿದ ನಂತರ ಅದನ್ನು ನೋಡಿದಾಗ, ಕೆಜಿಎಫ್ 2 ಸಿನಿಮಾದಲ್ಲಿ ನಟಿಸಲೇ ಬೇಕು ಎಂದು ನನಗೆ ಎನಿಸಿತು' ಎಂದಿದ್ದಾರೆ ರವೀನಾ ಟಂಡನ್.

ಹೀರೋ-ವಿಲನ್ ಎರಡೂ ನಾನೇ: ರವೀನಾ ಟಂಡನ್

ಹೀರೋ-ವಿಲನ್ ಎರಡೂ ನಾನೇ: ರವೀನಾ ಟಂಡನ್

ಕೆಲವು ತಿಂಗಳ ಹಿಂದೆ ಮತ್ತೊಂದು ಸಂದರ್ಶನದಲ್ಲಿ ಕೆಜಿಎಫ್ 2 ಸಿನಿಮಾದ ಬಗ್ಗೆ ಮಾತನಾಡಿದ್ದ ರವೀನಾ ಟಂಡನ್, 'ಕೆಜಿಎಫ್ 2 ಸಿನಿಮಾದಲ್ಲಿ ರಮಿಕಾ ಸೇನ್ ಹೆಸರಿನ ಗಟ್ಟಿ ರಾಜಕಾರಣಿ ಮಹಿಳೆಯ ಪಾತ್ರದಲ್ಲಿ ನಾನು ನಟಿಸುತ್ತಿದ್ದೇನೆ. ಈ ಸಿನಿಮಾದಲ್ಲಿ ರಮೀಕಾ ಸೇನ್ ಹೀರೋ ಹಾಗೂ ವಿಲನ್ ಎರಡೂ ಹೌದು' ಎಂದಿದ್ದರು.

ಅಧೀರನ ಪಾತ್ರದ ಪರಿಚಯ ನೀಡಲಾಗಿತ್ತು

ಅಧೀರನ ಪಾತ್ರದ ಪರಿಚಯ ನೀಡಲಾಗಿತ್ತು

ಕೆಜಿಎಫ್ ಚಾಪ್ಟರ್‌ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ವಿಲನ್ ಗರುಡ ಸತ್ತ ನಂತರ ಅಧೀರನ ಪಾತ್ರದ ಪರಿಚಯವಾಗುತ್ತದೆ. ಜೊತೆಗೆ ಮಹಿಳಾ ರಾಜಕಾರಣಿಯೊಬ್ಬರು ಕೆಜಿಎಫ್‌ ಗೆ ಮಿಲಿಟರಿ ನುಗ್ಗಿಸುವಂತೆ ಆದೇಶ ನೀಡುವ ದೃಶ್ಯವೂ ಇದೆ. ಇದನ್ನೇ ರವೀನಾ ಟಂಡನ್ ಪಾತ್ರ ಎನ್ನಲಾಗಿತ್ತು.

Recommended Video

ಅಭಿಮಾನಿಯ ಅಂತ್ಯಕ್ರಿಯೆಗೆ ಹೋಗ್ತಾರಾ ರಾಕಿಂಗ್ ಸ್ಟಾರ್ ಯಶ್ | Siddaramaiah | Filmibeat Kannada
ಜುಲೈ 16 ರಂದು ಸಿನಿಮಾ ಬಿಡುಗಡೆ

ಜುಲೈ 16 ರಂದು ಸಿನಿಮಾ ಬಿಡುಗಡೆ

ಕೆಜಿಎಫ್ 2 ಸಿನಿಮಾವು ಜುಲೈ 16 ರಂದು ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಯಶ್, ಆಶಾ ಭಟ್ ಜೊತೆಗೆ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ ಅವರುಗಳು ಸಿನಿಮಾಕ್ಕೆ ಸೇರ್ಪಡೆ ಆಗಿದ್ದಾರೆ.

More from Filmibeat

English summary
Raveena Tandon talks about why she is not in KGF chapter 01 and why she choose to act in KGF 2.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X