For Quick Alerts
  ALLOW NOTIFICATIONS  
  For Daily Alerts

  ಕಣ್ಮುಂದೆ 'ಪುಷ್ಪ' ಇದ್ದರೂ 'ಕಾಂತಾರ' ಪ್ಯಾನ್ ಇಂಡಿಯಾ ಯಾಕೆ ಆಗಿಲ್ಲ?

  |

  ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ 'ಕಾಂತಾರ' ಸಿನಿಮಾದ ಹಾಡು ಸ್ವಾತಂತ್ರ್ಯ ದಿನದಂದೇ ಬಿಡುಗಡೆಯಾಗಿತ್ತು. ಈ ಹಾಡು ಕನ್ನಡಿಗರ ಮನ ಗೆಲ್ಲುವಲ್ಲಿ ಹೆಚ್ಚು ಸಮಯ ಹಿಡಿಯಲಿಲ್ಲ. ಸಿನಿಮಾ ಪ್ರಿಯರಿಗೆ 'ಕಾಂತಾರ' ಹಾಡು ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅಲ್ಲದೆ ಈ ಹಿಂದೆ ರಿಲೀಸ್ ಆಗಿದ್ದ ಟೀಸರ್ ಕೂಡ ಜನ ಮೆಚ್ಚುಗೆ ಗಳಿಸಿತ್ತು.

  ಕರಾವಳಿ ಭಾಗದ ಕಥೆಯನ್ನು ರಿಷಬ್ ಶೆಟ್ಟಿ ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದನ್ನು ಎಲ್ಲರೂ ಗೆಸ್ ಮಾಡಿದ್ದಾರೆ. ಆದರೆ, ಸಿನಿಮಾದೊಳಗೆ ಏನಿದೆ? 'ಕಾಂತಾರ' ಸಿನಿಮಾದ ಅಸಲಿ ಕಥೆಯೇನು? ಅನ್ನೋ ಸೀಕ್ರೆಟ್ ಇನ್ನೂ ರಿಷಬ್ ಶೆಟ್ಟಿ ಬಿಟ್ಟುಕೊಟ್ಟಿಲ್ಲ.

  'ಕೆಜಿಎಫ್ 2' ಅಂತಹ ಸಿನಿಮಾ ನಿರ್ಮಾಣ ಮಾಡಿರೋ ಹೊಂಬಾಳೆ ಫಿಲ್ಮ್ಸ್ 'ಕಾಂತಾರ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಹೀಗಾಗಿ ರಿಷಬ್ ಶೆಟ್ಟಿ ಸಿನಿಮಾ 'ಕಾಂತರ' ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ. ಆದರೆ, ಗಮನ ಸೆಳೆಯುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಬಹುದಿತ್ತಲ್ಲಾ? ಯಾಕೆ ಮಾಡಿಲ್ಲ. ಪ್ರಾದೇಶಿಕ ಹಿನ್ನೆಲೆಯುಳ್ಳ ಕಥೆಯನ್ನೇ ಇಟ್ಟುಕೊಂಡು 'ಪುಷ್ಪ' ಗೆದ್ದ ಮೇಲೆ 'ಕಾಂತಾರ' ಒಂದು ಪ್ರಯತ್ನಕ್ಕೆ ಕೈ ಹಾಕಬಹುದಿತ್ತಲ್ಲ ಅನ್ನೋ ಪ್ರಶ್ನೆಗೆ ರಿಷಬ್ ಶೆಟ್ಟಿ ಫಿಲ್ಮಿಬೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

  ಹಾಡಿನಿಂದಲೇ ಮನಗೆದ್ದ 'ಕಾಂತಾರ'

  ಹಾಡಿನಿಂದಲೇ ಮನಗೆದ್ದ 'ಕಾಂತಾರ'

  'ಕಾಂತಾರ' ಟೈಟಲ್‌ನಿಂದ ಕುತೂಹಲ ಕೆರಳಿಸಿತ್ತು. ಬಳಿಕ ರಿಷಬ್ ಶೆಟ್ಟಿ ನಿರ್ದೇಶನ ಅಂದಾಗ ಕುತೂಹಲ ದುಪ್ಪಟ್ಟಾಗಿತ್ತು. ಅದರಲ್ಲೂ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ ಅನ್ನುವಾಗ ನಿರೀಕ್ಷೆಗಳು ಮೂರು ಹೆಚ್ಚಾಗಿದ್ದು ಸುಳ್ಳಲ್ಲ. ಇನ್ನು ಟೀಸರ್ ಹಾಗೂ ಹಾಡು ನೋಡಿದ ಮೇಲೆ ಸಿನಿಮಾ ಮಂದಿ 'ಕಾಂತಾರ' ಬಗ್ಗೆ ಭವಿಷ್ಯ ನುಡಿದು ಬಿಟ್ಟದ್ದಾರೆ. ಇದು ಸ್ಯಾಂಡಲ್‌ವುಡ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸೋದು ಗ್ಯಾರಂಟಿ ಅಂತಿದ್ದಾರೆ. ಹೀಗಿರುವಾಗ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯಾಕೆ ಪ್ರಯತ್ನ ಪಟ್ಟಿಲ್ಲ ಅನ್ನೋ ಪ್ರಶ್ನೆ ಕಾಡದೆ ಇರೋದಿಲ್ಲ.

  'ಪುಷ್ಪ' ಓಕೆ 'ಕಾಂತಾರ' ಯಾಕಿಲ್ಲ?

  'ಪುಷ್ಪ' ಓಕೆ 'ಕಾಂತಾರ' ಯಾಕಿಲ್ಲ?

  'ಕೆಜಿಎಫ್ 2' ಅಂತ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಮಾಡಿರುವ ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡುತ್ತಿರುವುದರಿಂದ ಪ್ಯಾನ್ ಇಂಡಿಯಾ ರಿಲೀಸ್ ಕಷ್ಟ ಆಗುತ್ತಿರಲಿಲ್ಲ. ಅದರಲ್ಲೂ ಪ್ರಾದೇಶಿಕ ಕಥೆಯನ್ನೇ ಇಟ್ಟುಕೊಂಡು 'ಪುಷ್ಪ' ಸಿನಿಮಾ ಗೆದ್ದಿರ ಬೇಕಾದರೆ, 'ಕಾಂತಾರ' ಯಾಕೆ ಸಾಧ್ಯವಿಲ್ಲ? ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಇನ್ನೊಂದು ಬ್ಲಾಕ್‌ಬಸ್ಟರ್ ಸಿನಿಮಾ ನೀಡಬಹುದಿತ್ತಲ್ಲಾ? ಅಲ್ಲಿ ಅಲ್ಲು ಅರ್ಜುನ್ ಇದ್ದರೆ, ಇಲ್ಲಿ ಹೊಂಬಾಳೆ ಫಿಲ್ಮ್ಸ್ ಇದೆ. ಹಾಗಿದ್ದರೂ, 'ಕಾಂತಾರ' ಪ್ಯಾನ್ ಇಂಡಿಯಾ ಆಗಿಲ್ಲ ಅನ್ನೋ ಪ್ರಶ್ನೆ ಮೂಡಬಹುದು. ಅದಕ್ಕೆ ರಿಷಬ್ ಶೆಟ್ಟಿ ಬಳಿ ಅವರದ್ದೇ ಆದ ಉತ್ತರವಿದೆ.

  'ಕಾಂತಾರ' ಪ್ಯಾನ್ ಇಂಡಿಯ ಸಬ್ಜೆಕ್ಟ್ ಅಲ್ಲ'

  'ಕಾಂತಾರ' ಪ್ಯಾನ್ ಇಂಡಿಯ ಸಬ್ಜೆಕ್ಟ್ ಅಲ್ಲ'

  'ಕಾಂತಾರ' ಪ್ಯಾನ್ ಇಂಡಿಯಾ ಸಿನಿಮಾ ಯಾಕೆ ಆಗಿಲ್ಲ ಅನ್ನೋ ಬಗ್ಗೆ ರಿಷಬ್ ಶೆಟ್ಟಿ ಕೊಟ್ಟ ಉತ್ತರ ಹೀಗಿದೆ. " ಇದೊಂದು ಲೋಕಲ್ ಸಬ್ಜೆಕ್ಟ್. ಇದು ಪ್ಯಾನ್ ಇಂಡಿಯಾ ಸಬ್ಜೆಕ್ಟ್ ಅಲ್ಲ. ಹೀಗಾಗಿ ಸಿನಿಮಾ ಮಾಡುವ ಮೊದಲೇ ಇದನ್ನು ಕೇವಲ ಕನ್ನಡಕ್ಕಾಗಿಯೇ ಸಿನಿಮಾ ಮಾಡುತ್ತೇವೆ ಎಂದು ನಿರ್ಧಾರ ಮಾಡಿದ್ದೆವು. ಆ ಕಾರಣಕ್ಕೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಸಿನಿಮಾ ಮಾಡಿದ್ದೇವೆ." ಎನ್ನುತ್ತಾರೆ ರಿಷಬ್ ಶೆಟ್ಟಿ.

  ಇದು ಕನ್ನಡ ಬಿಗ್ ಬಜೆಟ್ ಚಿತ್ರ

  ಇದು ಕನ್ನಡ ಬಿಗ್ ಬಜೆಟ್ ಚಿತ್ರ

  "ಕನ್ನಡದಲ್ಲಿಯೇ ಕನ್ನಡಕ್ಕಾಗಿಯೇ ಒಂದು ಬಿಗ್ ಬಜೆಟ್ ಸಿನಿಮಾ ಮಾಡಬೇಕು ಅಂತಿತ್ತು. ಅದಕ್ಕಾಗಿಯೇ ದೊಡ್ಡ ಬಜೆಟ್‌ನಲ್ಲಿ ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡಿದ್ದೇವೆ. ಈಗಾಗಲೇ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ." ಎನ್ನುತ್ತಾರೆ ರಿಷಬ್ ಶೆಟ್ಟಿ. ಇನ್ನು 'ರಿಕ್ಕಿ', 'ಕಿರಿಕ್ ಪಾರ್ಟಿ', 'ಸ.ಹಿ.ಪ್ರಾ. ಶಾಲೆ ಕಾಸರಗೋಡು' ಬಳಿಕ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುತ್ತಾ ಎಂದು ಎದುರು ನೋಡುತ್ತಿದೆ ಸ್ಯಾಂಡಲ್‌ವುಡ್‌.

  English summary
  Why Rishab Shetty Kantara Film Only Made In Kannada not Pan India Movie, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X